ಮುಂಡಗೋಡ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. ಇಲ್ಲಿನ NMD ಜಮೀರ್ ಅಹ್ಮದ್ ದರ್ಗಾವಾಲೆಯನ್ನ ದುಷ್ಕರ್ಮಿಗಳು ಕೊಚ್ಚಿ ಭೀಕರ ಹತ್ಯೆ ಮಾಡಿದ್ದಾರೆ. ಮುಂಡಗೋಡ ಬಸ್ ನಿಲ್ದಾಣದ ಎದುರಿನ ಅಂಬಿಕಾ ಹೊಟೆಲ್ ನಲ್ಲಿ ಘಟನೆ ನಡೆದಿದೆ. ಹಲವು ದುಷ್ಕರ್ಮಿಗಳ ತಂಡ ಹೊಟೇಲ್ ನಲ್ಲಿ ಕುಳಿತಿದ್ದ ಜಮೀರ್ ಗೆ ಮೊದಲು ಗುಂಡು ಹಾರಿಸಿದೆ. ನಂತರ ಕುತ್ತಿಗೆ ಸೀಳಿ ಭೀಕರವಾಗಿ ಹತ್ಯೆ ಮಾಡಿ ಹೋಗಿದ ಅನ್ನೋ ಅನುಮಾನ ವ್ಯಕ್ತವಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Top Stories
ಮುಂಡಗೋಡ ಪೊಲೀಸ್ರ ಕಾರ್ಯಾಚರಣೆ, ಬ್ಲೂಹಿಲ್ ಹೊಟೇಲ್ ಬಳಿ ಗಾಂಜಾ ದಂಧೆ ಮಾಡುತ್ತಿದ್ದ ವ್ಯಕ್ತಿಯ ಬಂಧನ..!
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ..!
ಅಳ್ವೇಕೋಡಿ ಕಡಲ ತೀರದಲ್ಲಿ ಭೀಕರ ದುರಂತ: ಚಿಪ್ಪೆಕಲ್ಲು ತರಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ಬಲಿ, ಮೂವರು ನಾಪತ್ತೆ
ವಡಗಟ್ಟಾ ಗಾವಠಾಣ ಒತ್ತುವರಿ ತೆರವು ಕಾರ್ಯ ಶುರು..! ಬೇಕಾಬಿಟ್ಟಿ ಜಾಗ ಒತ್ತುವರಿ ಮಾಡಿಕೊಂಡಿದ್ದವರಿಗೆ ಶಾಕ್
ಪಿಐ ರಂಗನಾಥ್ ನೀಲಮ್ಮನವರ್ ಟ್ರಾನ್ಸಫರ್, ರಮೇಶ್ ಹನಾಪುರ ಮುಂಡಗೋಡಿನ ನೂತನ ಪಿಐ..!
ಹುನಗುಂದದಲ್ಲಿ ಮಳೆಗಾಳಿಗೆ ಹಾರಿಹೋದ ಮನೆಯ ಮೇಲ್ಚಾವಣಿಗಳು..! ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು..!
ಧರ್ಮಾ ಜಲಾಶಯದ ಕಾಲುವೆಯಲ್ಲಿ ಇಬ್ಬರು ಸಹೋದರ ಬಾಲಕರು ನೀರುಪಾಲು..! ರಜೆಗೆ ಬಂದಿದ್ದವರು ಹೆಣವಾದರು..!
NMD ಹತ್ಯೆ ಕೇಸ್| ಯುಪಿಗೆ ಹೋಗಿ ಪಿಸ್ತೂಲ್ ತಂದಿದ್ದ ಆರೋಪಿಗಳ ಮನೆಗಳ ಮೇಲೆ ಪೊಲೀಸ್ರ ದಾಳಿ..! 7 ತಂಡಗಳಲ್ಲಿ ಪೊಲೀಸ್ರ ಖಡಕ್ ಸರ್ಚಿಂಗ್..!
NMD ಜಮೀರ್ ಹತ್ಯೆ ಕೇಸ್, ಮತ್ತೆ ನಾಲ್ವರು ಆರೋಪಿಗಳು ಅಂದರ್..! 11 ಕ್ಕೆ ಏರಿದ ಆರೋಪಿಗಳ ಸಂಖ್ಯೆ..!
ಮುಂಡಗೋಡಿನ ಯರೈಬೈಲ್ DyRFO, ಉಗ್ನಿಕೇರಿ ಬೀಟ್ ಫಾರೇಸ್ಟ್ ಗಾರ್ಡ್ ವಿರುದ್ಧ ಲೋಕಾಯುಕ್ತ ಕೇಸ್, FIR ದಾಖಲು..! ಅನ್ನದಾತನ ಹತ್ರ ಲಂಚ ಕೇಳಿದ್ನಾ ಆ ಅರಣ್ಯ ಅಧಿಕಾರಿ..?
ಟಿಬೇಟಿಗ ಲಾಮಾನ ಹತ್ಯೆ ಕೇಸ್, ಮೂವರು ಆರೋಪಿಗಳು ಅಂದರ್..! ಕಬ್ಬು ಕಟಾವ್ ಮಾಡೋ ಗ್ಯಾಂಗ್ ಈ ಹತ್ಯೆ ಮಾಡಿದ್ದು ಯಾಕೆ..?
ಕೇರಳಂ ಹಾಗೂ ರಾಜ್ಯದ 2 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಹಿನ್ನೆಲೆ..! ಮುಂಡಗೋಡ ಕೈ ಕಾರ್ಯಕರ್ತರ ಸಂಭ್ರಮ..!
ಪಂಚರಾಜ್ಯ ಚುನಾವಣೆ; 3 ರಾಜ್ಯಗಳಲ್ಲಿ ಬಿಜೆಪಿ ಗೆಲುವು, ಮುಂಡಗೋಡಿನಲ್ಲಿ ಸಂಭ್ರಮಾಚರಣೆ..!
ಹುನಗುಂದದ ಮಹಿಳೆ ಹರಿಹರದಲ್ಲಿ ನಾಪತ್ತೆ, ಇವ್ರು ಕಂಡಲ್ಲಿ ಮಾಹಿತಿ ನೀಡಲು ಮನವಿ..!
ಧಾರವಾಡದಲ್ಲಿ ಮುಂಡಗೋಡ ಟಿಬೇಟಿಗ ಲಾಮಾನ ಭೀಕರ ಹತ್ಯೆ..? ಕಾಲು ಕಟ್ಟಿ ಭೀಕರವಾಗಿ ಕೊಂದು ಬೀಸಾಕಿದ್ರಾ ಹಂತಕರು..?
ಮುಂಡಗೋಡಿನಲ್ಲಿ ಸಿಲಿಂಡರಿಗಾಗಿ ಪ್ರತಿಭಟನೆ, ಬೆಳ್ಳಂ ಬೆಳಿಗ್ಗೆ HP ಗ್ಯಾಸ್ ಗೋಡೌನ ಎದುರು ಸಾರ್ವಜನಿಕರ ಆಕ್ರೋಶ..!
ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಜಿಪಂ ಸಿಇಓ ಡಾ.ದಿಲೀಷ್ ಶಶಿ
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, NMD ಜಮೀರ್ ದರ್ಗಾವಾಲೆ ಭೀಕರ ಹತ್ಯೆ ಕೇಸ್, ಐವರು ಆರೋಪಿಗಳ ಬಂಧನ..!
ಮುಂಡಗೋಡಿನಲ್ಲಿ NMD ಜಮೀರನ ಭೀಕರ ಹತ್ಯೆ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವದ ದೃಷ್ಯಗಳಿವು
SSLC ಫಲಿತಾಂಶ..! ಹುನಗುಂದದ ಭಾಗ್ಯಲಕ್ಷ್ಮೀ ಪ್ರಥಮ, ರಿಷಿಕ್ ದ್ವಿತೀಯ, ಸಿಂಚನಾ ತೃತೀಯ..!
SSLC ಫಲಿತಾಂಶ ಪ್ರಕಟವಾಗಿದೆ. ಹುನಗುಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಭಾಗ್ಯಲಕ್ಷ್ಮಿ ಬಸವರಾಜ್ ಬಿಸನಳ್ಳಿ 616 ಅಂಕ ಪಡೆಯುವ ಮೂಲಕ ಮುಂಡಗೋಡ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಅದ್ರಂತೆ ಮುಂಡಗೋಡಿನ ಬ್ಲೂಮಿಂಗ್ ಬಡ್ಸ್ ಶಾಲೆತ ವಿದ್ಯಾರ್ಥಿ ರಿಷಿಕ್ ರಮೇಶ್ ಭೋವಿ 607 ಅಂಕ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಇನ್ನು ಕರಗಿನಕೊಪ್ಪ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಸಿಂಚನಾ ನಿಂಗಪ್ಪ ಬಾರ್ಕರ 606 ಅಂಕ ಪಡೆದು ತಾಲೂಕಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ.
ಇಂದಿನಿಂದ ಜಿಲ್ಲೆಯಲ್ಲಿ ಮನೆಗಳ ಗಣತಿ ಕಾರ್ಯ ಶುರು; ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ
ಕಾರವಾರ; ಭಾರತೀಯ ಜನಗಣತಿ ಪ್ರಯುಕ್ತ ಮನೆಗಳ ಪಟ್ಟಿ ಮತ್ತು ಮನೆಗಳ ಗಣತಿ ಕಾರ್ಯವು ಏ.16 ರಿಂದ ಮೇ.15 ರವರೆಗೆ ನಡೆಯಲಿದ್ದು, ಸದ್ರಿ ಕಾರ್ಯಕ್ಕೆ ಗಣತಿದಾರರು ಮನೆ-ಮನೆಗೆ ಭೇಟಿ ನೀಡಲಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 3216 ಮನೆಯ ಪಟ್ಟಿಯ ಬ್ಲಾಕ್‌ಗಳಿದ್ದು, ಈ ಬ್ಲಾಕ್‌ಗಳಿಗೆ 3255 ಗಣತಿದಾರರು ಹಾಗೂ 586 ಮೇಲ್ವಿಚಾರಕರಿಗೆ ಗಣತಿ ಕಾರ್ಯವನ್ನು ನಿರ್ವಹಿಸಿಲು ನೇಮಕ ಮಾಡಲಾಗಿದೆ. ಸದ್ರಿಯವರು ಮನೆಗಳಿಗೆ ಭೇಟಿ ನೀಡಿದಾಗ ಸಾರ್ವಜನಿಕರು ಮಾಹಿತಿಯನ್ನುಯ ಒದಗಿಸಿ ಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ತಿಳಿಸಿದೆ. ಸಾರ್ವಜನಿಕರು ನೀಡಿದ ಮಾಹಿತಿಯು ಸುರಕ್ಷಿತ ಹಾಗೂ ಗೌಪ್ಯವಾಗಿ ಉಳಿಯುತ್ತದೆ. ಈ ಗಣತಿಯ ಮಾಹಿತಿಯನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಮಾತ್ರ ಬಳಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಪ್ರಧಾನ ಗಣತಿ ಅಧಿಕಾರಿ ಕೆ. ಲಕ್ಷ್ಮೀಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದೂರಿನಲ್ಲಿ ಘೋರ ಕೃತ್ಯ, ಆಕಳ ಕರುವಿನ ಕರುಳನ್ನೇ ಕತ್ತರಿಸಿ ಹೋದ ದುಷ್ಕರ್ಮಿಗಳು..!
ಮುಂಡಗೋಡ ತಾಲೂಕಿನ ಇಂದೂರಿನಲ್ಲಿ ಅಮಾನವೀಯ ಘಟನೆ ನಡೆದಿದೆ. ಪುಟ್ಟ ಆಕಳ ಕರುವೊಂದನ್ನು ದುಷ್ಕರ್ಮಿಗಳು ಭಯಾನಕವಾಗಿ ಕೊಚ್ಚಿ ಹಾಕಿದ್ರಾ ಅನ್ನೋ ಅನುಮಾನ ಶುರುವಾಗಿದೆ. ಅಥವಾ ಕಾಡುಪ್ರಾಣಿಗಳ ದಾಳಿ ಮಾಡಿದ್ವಾ..? ಒಟ್ನಲ್ಲಿ ಪುಟ್ಟ ಆಕಳ ಕರುವಿನ ಹೊಟ್ಟೆಯ ಕರುಳುಗಳು ಹೊರ ಬಂದಿವೆ. ಕರು ಜೀವನ್ಮರಣದ ನಡುವೆ ಒದ್ದಾಡುತ್ತಿದೆ. ಅಂದಹಾಗೆ, ಇಂದೂರು ಗ್ರಾಮದ ದೇವಮ್ಮ ಯಲ್ಲಪ್ಪ ಬೂಚಳ್ಳಿ ಎಂಬುವವರ ಗದ್ದೆಯ ಮನೆಯಲ್ಲಿ ಕೃತ್ಯ ನಡೆದಿದೆ. ಎಂದಿನಂತೆ, ಇಂದು ಮುಂಜಾನೆ ಮನೆಯಲ್ಲಿ ಆಕಳು ಮತ್ತು ಕರುವನ್ನು ಕಟ್ಟಿ ಕೆಲಸಕ್ಕೆ ಹೋದಾಗ ಕೃತ್ಯ ನಡೆದಿದೆ. ಹಾಗಂತ ಕುಟುಂಬಸ್ಥರು ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದು ಮೊದಲಲ್ಲ..! ಅಸಲು, ಈ ಕುಟುಂಬದ ಮೇಲೆ, ಈ ಕುಟುಂಬದ ಮೂಕ ಪ್ರಾಣಿಗಳ ಮೇಲೆ ಅದ್ಯಾವ ಕ್ರೂರ ಮನುಷ್ಯರ ದೃಷ್ಟಿ ಬಿದ್ದಿದೆಯೋ ಗೊತ್ತಿಲ್ಲ. ಹೀಗೆ ಆಕಳ ಕರುವನ್ನು ಕೊಂದು ಹಾಕಿದ್ದು ಇದು ಮೂರನೇ ಬಾರಿಯಂತೆ. ಎರಡು ತಿಂಗಳ ಹಿಂದೆ ಇದೇ ರೀತಿ ಒಂದು ಆಕಳ ಕರು ಸತ್ತಿದೆ. ಮತ್ತೆ 4 ತಿಂಗಳ ಹಿಂದೆ...
ಕಬ್ಬು ಬೆಳೆಗಾರರಿಗೆ ವಿಶೇಷ ಪ್ರೋತ್ಸಾಹ ಧನ, ಜಮೆಯಾದ ಬಗ್ಗೆ ಖಚಿತಪಡಿಸಿಕೊಳ್ಳಿ : ಡಿಸಿ ಲಕ್ಷ್ಮೀಪ್ರಿಯ
ಕಾರವಾರ; ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಪ್ರತಿ ಮೆಟ್ರಿಕ್ ಟನ್ ಗೆ ರೂ.50 ರಂತೆ ಪ್ರೋತ್ಸಾಹ ಧನವನ್ನು ನೀಡಲು ಹಾಗೂ ನಿಗಧಿ ಪಡಿಸಿದ ಕಾರ್ಖಾನೆಯವರು ರೈತರಿಗೆ ಪ್ರತಿ ಮೆಟ್ರಿಕ್ ಟನ್‌ಗೆ ರೂ.50 ರಂತೆ ಹೆಚ್ಚುವರಿ ಒಟ್ಟು ರೂ.100 ರಂತೆ ಮೊತ್ತವನ್ನು ಪಾವತಿಸಲು ಆದೇಶಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಗೆ ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ಕರ್ನಾಟಕ ರಾಜ್ಯ ರೈತರಿಗೆ ದಿ.15-2-2026 ರಲ್ಲಿ ಅರೆದಿರುವ ಕಬ್ಬಿನ ಪ್ರಮಾಣಕ್ಕೆ ಉತ್ತರ ಕನ್ನಡ ಜಿಲ್ಲೆಯ ಇ.ಐ.ಡಿ ಪ್ಯಾರಿ ಸಕ್ಕರೆ ಕಾರ್ಖಾನೆ ರವರಿಗೆ ನೇರವಾಗಿ ಪಾವತಿಸುವಂತೆ ರೂ.5,57,39,531 ಹಾಗೂ ಫೆ.15 ರ ನಂತರ ಅವಧಿಗೆ ಅರೆದಿರುವ ಕಬ್ಬಿನ ಪ್ರಮಾಣಕ್ಕೆ ರೂ.59055 ಗಳನ್ನು ಬಿಡುಗಡೆ ಮಾಡಿರುತ್ತಾರೆ. ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಅರೆದಿರುವ ಒಟ್ಟು 11,15,971.72 ಮೆಟ್ರಿಕ್ ಟನ್‌ಗೆ ಒಟ್ಟು 14,082 ಕರ್ನಾಟಕ ರಾಜ್ಯ ರೈತರಿಗೆ ಪ್ರತಿ ಮೆಟ್ರಿಕ್ ಟನ್ ಗೆ ರೂ.50 ರಂತೆ ಒಟ್ಟು ರೂ.5,57,98,586...
ಅಳಿಯನ ಕೊಂದ ಮಾವನಿಗೆ ಜೀವಾವಧಿ ಶಿಕ್ಷೆ, ಕೋರ್ಟ್ ತೀರ್ಪು ಪ್ರಕಟ..!
ಶಿರಸಿ ತಾಲೂಕಿನ ಮಳಲಿ ಗ್ರಾಮದಲ್ಲಿ 2024 ರಲ್ಲಿ ನಡೆದಿದ್ದ ಅಳಿಯನ ಹತ್ಯೆ ಪ್ರಕರಣದಲ್ಲಿ, ಅಳಿಯನ ಕೊಂದ ಮಾವನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಅಂದಹಾಗೆ, ಶಿರಸಿ ತಾಲೂಕಿನ ಮಳಲಿ ನಿವಾಸಿಯಾದ ವೆಂಕಟ್ರಮಣ ಗಣಪಾ ಗೌಡ ತನ್ನ ಮನೆ ಅಳಿಯನಾದ ಮಂಜುನಾಥ ರಾಮಾ ಗೌಡ (40), ಕೂಲಿ ಕಾರ್ಮಿಕನನ್ನು ವೈಮನಸ್ಯದಿಂದ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ. ಸರಾಯಿ ಕುಡಿಯಲು ಹಣ ನೀಡುವುದಿಲ್ಲ ಎಂಬ ಕಾರಣಕ್ಕೆ ಅಳಿಯನೊಂದಿಗೆ ಜಗಳ ಮಾಡಿಕೊಂಡಿದ್ದ ಆರೋಪಿ, 02/05/2024 ರಂದು ಮಧ್ಯಾಹ್ನ 1.10 ರಿಂದ 1.30 ಗಂಟೆಯ ನಡುವೆ ಮನೆಯವರು ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಸಮಯದಲ್ಲಿ, ಯಾರು ಇಲ್ಲದ ವೇಳೆ ಕಟ್ಟಿಗೆಯ ಬಡಿಗೆಯಿಂದ ತಲೆಗೆ ಬಲವಾಗಿ ಹೊಡೆದು ಹತ್ಯೆ ಎಸಗಿದ್ದನು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಾರತ ದಂಡ ಸಂಹಿತೆ ಕಲಂ 302 ಅಡಿಯಲ್ಲಿ ದೋಷಾರೋಪಣಾ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರೋಸಿಕ್ಯೂಟರ್ ರಾಜೇಶ್ ಎಂ. ಮಳಗಿಕರ್ ನ್ಯಾಯಾಲಯದಲ್ಲಿ...
ಮುಂಡಗೋಡಿನ ನಕಲಿ “ಮೂಲವ್ಯಾಧಿ” ಡಾಕ್ಟರ್ ನ ಕ್ಲಿನಿಕ್ ಮೇಲೆ ಅಧಿಕಾರಿಗಳ ದಾಳಿ, ಕ್ಲಿನಿಕ್ ಕ್ಲೋಸ್..! ತಾಲೂಕಿನ ಇನ್ನುಳಿದ “ಫೇಕು” ಡಾಕ್ಟರುಗಳ ಮೇಲೆ ದಾಳಿ ಯಾಕಿಲ್ಲ..?
ಮುಂಡಗೋಡಿನಲ್ಲಿ ಬಡವರ ರಕ್ತ ಹೀರುವ, ಬಡವರ ಜೀವದ ಜೊತೆ ಚೆಲ್ಲಾಟವಾಡುವ ನಕಲಿ ಡಾಕ್ಟರುಗಳ ನಕಲಿ ಕ್ಲಿನಿಕ್ ಗಳ ಮೇಲೆ ಆರೋಗ್ಯ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಪರಿಣಾಮ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರೋ “ಮೂಲವ್ಯಾಧಿ” ಡಾಕ್ಟರ್ ನ ನಕಲಿ ಕ್ಲಿನಿಕ್ ಗೆ ಬೀಗ ಜಡೆದಿದೆ. ಲೋಕನಾಥನ ನಕಲಿ ಲೋಕವನ್ನು ಬಂದ್ ಮಾಡಲಾಗಿದೆ. ಆದ್ರೇ ಇದು ಇವತ್ತಿಗೆ ಮಾತ್ರ ಅನ್ನೋದು ಬೇರೆ ಮಾತು..! ಯಾಕಂದ್ರೆ, ಇದೇಲ್ಲ ನಾಮಕೆ ವಾಸ್ತೆ ಸರ್..! ಇನ್ನು, ಬಂಕಾಪುರ ರಸ್ತೆಯಲ್ಲಿ ತನ್ನ ಹೆಂಡತಿಯ ಲೈಸೆನ್ಸ್ ನೊಂದಿಗೆ ದೊಡ್ಡದೊಂದು ಕ್ಲಿನಿಕ್ ತೆರೆದುಕೊಂಡು, ಉದ್ದುದ್ದ ಇಂಜೆಕ್ಷನ್ ಕೊಟ್ಟು ಪ್ಯಾರಾಲಿಸಿಸ್ ಕಾಯಿಲೆಯನ್ನೇ ಬಂಡವಾಳ ಮಾಡಿಕೊಂಡು ಬಡರೋಗಿಗಳಿಗೆ ಉಂಡೆ ತಿನ್ನಿಸುತ್ತಿರೋ ನಕಲಿ ಡಾಕ್ಟರ್ ನ ಬಂಡವಾಳ ಬಯಲು ಮಾಡಲು ಹೋಗಿದ್ದ ವೈದ್ಯಾಧಿಕಾರಿಗಳು ಬರಿಗೈಯಲ್ಲಿ ವಾಪಸ್ ಬಂದಿದ್ದಾರೆ. ಅದ್ಯಾವ “ನಾಲಾಯಕ” ಆ ಫೇಕು ಡಾಕ್ಟರನಿಗೆ ಮೊದಲೇ ಬಾತ್ಮಿ ಕೊಟ್ಟಿದ್ದನೋ ಗೊತ್ತಿಲ್ಲ. ದಾಳಿ ನಡೀತಿದೆ ಅಂತ ಮೊದಲೇ ತಿಳಿದುಕೊಂಡ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಹೀಗಾಗಿ, ಅಲ್ಲಿಯೂ ಕೂಡ ಆ...
ಮುಂಡಗೋಡ ತಾಲೂಕಾ ಕ್ಷತ್ರೀಯ ಮರಾಠ ಮಂಡಳದ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ..!
ಮುಂಡಗೋಡ ತಾಲೂಕ ಕ್ಷತ್ರೀಯ ಮರಾಠ ಮಂಡಳದ ಅಧ್ಯಕ್ಷರಾಗಿ ನಾಗರಾಜ್ ಸಂಕನಾಳ, ಉಪಾಧ್ಯಕ್ಷರಾಗಿ ಜ್ಞಾನದೇವ ಗುಡಿಯಾಳ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರ ಆಯ್ಕೆ ನಡೆಯಿತು. ಮುಂಡಗೋಡಿನ ಮರಾಠಾ ಸಭಾಭವನದಲ್ಲಿ ರವಿವಾರ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ಇನ್ನು ಕಾರ್ಯದರ್ಶಿಯಾಗಿ ಸಣ್ಣಪ್ಪ ಕಾಶಿಬಾನವರ ಆಯ್ಕೆಯಾದರು. ಅದ್ರಂತೆ, ಸದಸ್ಯರುಗಳಾಗಿ ವಿಠ್ಠಲ ಬಾಳಂಬೀಡ, ಸಂಪತ್ ಕುಮಾರ್ ಕ್ಯಾಮಣಕೇರಿ, ಅಶೋಕ್ ಕೀರ್ತಪ್ಪನವರ್, ನಾರಾಯಣ ಗುರಪ್ಪನವರ್, ಮಾರುತಿ ಚೌಹಾಣ್, ಗಿರೀಶ್ ಓಣಿಕೇರಿ, ಪರಶುರಾಮ್ ತಹಶೀಲ್ದಾರ್, ಶ್ರೀಮತಿ ನಾಗವೇಣಿ ಮುರುಳಿಧರ್ ರಾಣೋಜಿ ಹಾಗೂ ಶ್ರೀಮತಿ ಶಶಿಕಲಾ ದಶರಥ ಸಾಳೊಂಕಿ ಆಯ್ಕೆಯಾಗಿದ್ದಾರೆ.
ಹುನಗುಂದದ ಶ್ರೀಮತಿ ನಿಂಗವ್ವ ಆಸ್ತಕಟ್ಟಿ (76) ವಿಧಿವಶ..!
ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ಶ್ರೀಮತಿ ನಿಂಗವ್ವ ಹನ್ಮಂತಪ್ಪ ಆಸ್ತಕಟ್ಟಿ (76) ವಿಧಿವಶರಾಗಿದ್ದಾರೆ. ಮೃತರು ನಾಲ್ಕು ಜನ ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಇನ್ನು ಮೃತರ ಅಂತ್ಯಕ್ರಿಯೆಯನ್ನು ಶುಕ್ರವಾರ ದಿನಾಂಕ 27 ರಂದು ಹುನಗುಂದ ಗ್ರಾಮದಲ್ಲಿ ನೆರವೇರಿಸಲಾಗುವುದು ಅಂತಾ ಮೃತರ ಪುತ್ರ ಕಾಂಗ್ರೆಸ್ ಯುವ ಮುಖಂಡ ಬಸವರಾಜ್ ಆಸ್ತಕಟ್ಟಿ ತಿಳಿಸಿದ್ದಾರೆ.
ಹುನಗುಂದದಲ್ಲಿ CBDRCT ಸಂಸ್ಥೆಯಿಂದ ಮಹತ್ಕಾರ್ಯ, ತಿಂಗಳಿಂದ ನಡೆದ ಹೊಲಿಗೆ ತರಬೇತಿ ಶಿಬಿರದ ಸಮಾರೋಪ..!
ಮುಂಡಗೋಡ: ಟೇಲರಿಂಗ್ ಉದ್ಯೋಗವನ್ನು ಆರ್ಥಿಕ ಚಟುವಟಿಕೆಯನ್ನಾಗಿ ಮಾಡಿಕೊಳ್ಳುವಂತೆ CBDRCT ಸಂಸ್ಥೆ ನಿರ್ದೇಶಕ, ಪ್ರಶಾಂತ ಬಡ್ಡಿ ಟೇಲರಿಂಗ್ ಶಿಬಿರಾರ್ಥಿಗಳಿಗೆ ಕರೆ ನೀಡಿದ್ರು. ಅವ್ರು ತಾಲೂಕಿನ ಹುನಗುಂದದ ವಿರಕ್ತಮಠದಲ್ಲಿ ದೇಶಪಾಂಡೆ ಆರ್ ಶೆಟಿ ಸಂಸ್ಥೆಯ ನೇತೃತ್ವದಲ್ಲಿ ಆಯೋಜಿಸಿದ್ದ, ಒಂದು ತಿಂಗಳಿನ ಟೇಲರಿಂಗ್ ತರಬೇತಿ ಶಿಬಿರದ, ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಹೊಲಿಗೆ ತರಬೇತಿ ಪಡೆದ ಮಹಿಳೆಯರು, ಯುವತಿಯರು, ಹೊಸ ಹೊಸ ಕೌಶಲ್ಯಗಳನ್ನು ಅಳವಡಿಸಿಕೊಂಡು, ಸ್ವಂತ ಉದ್ಯೋಗದ ರೂಪದಲ್ಲೇ ಹೊಲಿಗೆ ಕೆಲಸ ಮಾಡಿ ಸಬಲರಾಗಬೇಕು. ನಿಮ್ಮ ಜೊತೆ ಸಂಸ್ಥೆ ಯಾವಾಗಲೂ ಜೊತೆಯಾಗಿದ್ದು, ಬೇಕಾದ ಸವಲತ್ತು ಹಾಗೂ ಮಾರ್ಗದರ್ಶನ ನೀಡುತ್ತದೆ ಅಂತಾ ಇದೇ ವೇಳೆ ಪ್ರಶಾಂತ್ ಬಡ್ಡಿ ಭರವಸೆ ನೀಡಿದ್ರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅಮರಯ್ಯ ಸ್ವಾಮಿ ಇಲ್ಲಾಳಮಠ, ಮಹಿಳೆಯರು ಅಬಲೆಯರಲ್ಲ ಅನ್ನೋದನ್ನು ಇಂತಹ ತರಬೇತಿ ಪಡೆದು, ಉದ್ಯೋಗ ಮಾಡಿ, ಸಬಲರಾಗುವ ಮೂಲಕ ಸಾಬೀತು ಪಡಿಸುತ್ತಿದ್ದಾರೆ ಅಂತಾ ಹೇಳಿದ್ರು. ಇನ್ನು ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ, ಬಸವರಾಜ್ ಆಸ್ತಕಟ್ಟಿ ಮಾತನಾಡಿ, ದೇಶಪಾಂಡೆಯವರ ಕನಸಿನ ಕೂಸಾದ ರೂಡಸೆಟಿಯಿಂದ ಇಂತಹ...









