ಸಾರ್ವಜನಿಕರ ಬೇಡಿಕೆಗಳನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸಿ: ಸುಷಮಾ ಗೋಡಬೋಲೆ

ಸಾರ್ವಜನಿಕರ ಬೇಡಿಕೆಗಳನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸಿ: ಸುಷಮಾ ಗೋಡಬೋಲೆ

KARWAR ZP MEETING; ಕಾರವಾರ; ಜಿಲ್ಲಾ ಪಂಚಾಯತ್ ವತಿಯಿಂದ ರೂಪಿಸುವ ವಾರ್ಷಿಕ ಕ್ರಿಯಾ ಯೋಜನೆಯ ಸಂದರ್ಭದಲ್ಲಿ ಅಧಿಕಾರಿಗಳು ಸಾರ್ವಜನಿಕರಿಂದ ಸಲ್ಲಿಕೆಯಾಗುವ ಬೇಡಿಕೆಗಳ ಕುರಿತ ಕಾಮಗಾರಿಗಳನ್ನು ಅಳವಡಿಸಿ, ಅವುಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಆಡಳಿತ ವ್ಯವಸ್ಥೆಯನ್ನು ಸಾರ್ವಜನಿಕ ಸ್ನೇಹಿಯನ್ನಾಗಿ ಮಾಡಬೇಕು ಎಂದು ಜಿಲ್ಲಾ ಪಂಚಾಯತ್‌ನ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷಮಾ ಗೋಡಬೋಲೆ ನಿರ್ದೇಶನ ನೀಡಿದರು. ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ಅಧಿಕಾರಿಗಳು ನಿಗಧಿತವಾಗಿ ತಮ್ಮ ವ್ಯಾಪ್ತಿಯ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಬೇಕು ಅಲ್ಲಿನ ತಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಗತಿಯನ್ನು ಪರಿಶೀಲಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿ ಅಗತ್ಯ ನೆರವು ಒದಗಿಸಬೇಕು, ವಾರ್ಷಿಕ ಕ್ರಿಯಾ ಯೋಜನೆ ರೂಪಿಸುವಾಗ ಸಾರ್ವಜನಿಕರಿಂದ ಸ್ವೀಕೃತವಾಗಿರುವ ಬೇಡಿಕೆಗಳನ್ನು ಇದರಲ್ಲಿ ಅಳವಡಿಸಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಉತ್ತಮ ಆಡಳಿತ ಸೇವೆ ಒದಗಿಸಬೇಕು ಎಂದರು. KARWAR ZP MEETING; ಪ್ರಸ್ತುತ ಜಿಲ್ಲೆಯಲ್ಲಿನ 59 ಅಪೌಷ್ಠಿಕ ಮಕ್ಕಳಿಗೆ ಸೂಕ್ತ...

Rain forecast; ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡಕ್ಕೆ ಮುಂದಿನ 3 ಗಂಟೆಗಳಲ್ಲಿ ಮಳೆ, ಗಾಳಿಯ ಮುನ್ಸೂಚನೆ..!

Rain forecast; ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡಕ್ಕೆ ಮುಂದಿನ 3 ಗಂಟೆಗಳಲ್ಲಿ ಮಳೆ, ಗಾಳಿಯ ಮುನ್ಸೂಚನೆ..!

Rain forecast; ಬೆಂಗಳೂರು: ಮುಂದಿನ 3 ಗಂಟೆಗಳಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಉಡುಪಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಕಡೆ ಸಿಡಿಲು ಸಹಿತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಅಂತಾ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. Rain forecast; ಸಂಜೆ 4 ಗಂಟೆಗೆ ಅಲರ್ಟ್ ನೀಡಿರೊ ಹವಾಮಾನ ಇಲಾಖೆ, ಮುಂದಿನ 3 ಗಂಟೆಯಲ್ಲಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಿದೆ.

ಇಬ್ಬರ ಮೇಲೆ ಹರಿದ ಟ್ರ್ಯಾಕ್ಟರ್ ಚಕ್ರ, ಆದ್ರೂ ಬಚಾವಾದ್ರು, ಕಲಘಟಗಿಯಲ್ಲಿ ಅಚ್ಚರಿಯ ಘಟನೆ..!

ಇಬ್ಬರ ಮೇಲೆ ಹರಿದ ಟ್ರ್ಯಾಕ್ಟರ್ ಚಕ್ರ, ಆದ್ರೂ ಬಚಾವಾದ್ರು, ಕಲಘಟಗಿಯಲ್ಲಿ ಅಚ್ಚರಿಯ ಘಟನೆ..!

Accident News; ಕಲಘಟಗಿ; ಟ್ರ್ಯಾಕ್ಟರ್ ಚಕ್ರದಲ್ಲಿ ಸಿಲುಕಿ ಇಬ್ಬರು ಒದ್ದಾಡಿದ ಘಟನೆ, ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ನಲ್ಲಿ ನಿನ್ನೆ ಸಂಜೆ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರ್ಯಾಕ್ಟರ್ ಹಾಗೂ ಗೂಡ್ಸ್ ವಾಹನ ಚಾಲಕರ ನಡುವೆ ಜಗಳ ನಡೆದಿತ್ತು, ಎರಡು ವಾಹನಗಳ ನಡುವೆ ಸಣ್ಣ ಅಪಘಾತವಾಗಿತ್ತು, ಆಗ ಇಬ್ಬರು ಚಾಲಕರ ಮಧ್ಯೆ ಮಾತಿನ ವಾಗ್ವಾದ ನಡೆದಿತ್ತು, ಗೂಡ್ಸ್ ವಾಹನ ಚಾಲಕ ಟ್ರ್ಯಾಕ್ಟರ್ ಹತ್ತಿ ವಾಗ್ವಾದ ನಡೆಸುತ್ತಿದ್ದ. ಆಗ ಟ್ರ್ಯಾಕ್ಟರ್ ಚಾಲಕ ಗಾಡಿ ಚಾಲಾಯಿಸಿದ್ದಾನೆ. ಹೀಗಾಗಿ, ಇಬ್ಬರೂ ಆಯ ತಪ್ಪಿ ಬಿದ್ದಿದ್ದು ಟ್ರ್ಯಾಕ್ಟರ್ ಚಕ್ರದ ಕೆಳಗೆ ಸಿಲುಕಿದ್ದಾರೆ. ಈ ವೇಳೆ ಇಬ್ಬರ ಮೇಲೂ ಟ್ರ್ಯಾಕ್ಟರ್ ಚಕ್ರ ಹತ್ತಿ ಇಳದಿದೆ. ಆದರೂ ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳು ಕಲಘಟಗಿ ಮತ್ತು ಬೆಲವಂತರ ಗ್ರಾಮ ನಿವಾಸಿಗಳು ಎನ್ನಲಾಗಿದೆ. ಗಾಯಾಳುಗಳಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಾಜ್ಯವನ್ನೇ ಬೆಚ್ಚಿ...

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೆನರಾ ಬ್ಯಾಂಕ್ ದರೋಡೆ ಕೇಸ್ ಬೇಧಿಸಿದ ಪೊಲೀಸರು, 58 ಕೆಜಿ ಬಂಗಾರ ದೋಚಿದ್ದವರು ಅಂದರ್..!

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೆನರಾ ಬ್ಯಾಂಕ್ ದರೋಡೆ ಕೇಸ್ ಬೇಧಿಸಿದ ಪೊಲೀಸರು, 58 ಕೆಜಿ ಬಂಗಾರ ದೋಚಿದ್ದವರು ಅಂದರ್..!

Robbery Case; ವಿಜಯಪುರ ಜಿಲ್ಲೆಯ ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ ದರೋಡೆ ಪ್ರಕರಣ ಬೇಧಿಸಲಾಗಿದೆ. ಮೇ 23 ರಂದು ನಡೆದಿದ್ದ ದರೋಡೆ ಕೇಸಿನಲ್ಲಿ ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನುಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಹುಬ್ಬಳ್ಳಿಯ ಕೊಠಾರಿ ನಗರದ ನಿವಾಸಿ, ಇದೇ ಕೆನರಾ ಬ್ಯಾಂಕಿನಲ್ಲೇ ಸಿನಿಯರ್ ಮ್ಯಾನೇಜರ್ ಆಗಿ ಕೆಲಸ‌ನಿರ್ವಹಿಸಿದ್ದ. ಸದ್ಯ ನಿವೃತ್ತಿಯಾಗಿರೋ ವಿಜಯಕುಮಾರ್ ಮೋಹನರಾವ್ ಮಿರಿಯಾಲ (41), ಹುಬ್ಬಳ್ಳಿ ಗದಗ ರಸ್ತೆಯ ಜನತಾ ಕಾಲೋನಿಯ ಚಂದ್ರಶೇಖರ ಕೊಟಿಲಿಂಗಮ್ ನೆರೆಲ್ಲಾ (38) ಹಾಗೂ ಹುಬ್ಬಳ್ಳಿಯ ಚಾಲುಕ್ಯ ನಗರದ ಸುನೀಲ ತಂದೆ ನಂರಸಿಂಹಲು ಮೋಕಾ(40) ಎಂಬುವ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. Robbery Case;ಆರೋಪಿತರಿಂದ ಕೃತ್ಯಕ್ಕೆ ಬಳಸಿದ 02 ಕಾರುಗಳು ಹಾಗೂ ಕಾರುಗಳಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು 10 ಕೋಟಿ 75 ಲಕ್ಷ ರೂ. ಮೌಲ್ಯದ 10.5 ಕೆ.ಜಿ ಬಂಗಾರದ ಆಭರಣ ಹಾಗೂ ಆಭರಣ ಕರಗಿಸಿದ ಬಂಗಾರದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂದಹಾಗೆ, ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಈ...

ಗೊಬ್ಬರದ ಗುಂಡಿಗೆ ಬಿದ್ದು ದಾರುಣ ಸಾವು ಕಂಡ ಪುಟ್ಟ ಮಗು..!

ಗೊಬ್ಬರದ ಗುಂಡಿಗೆ ಬಿದ್ದು ದಾರುಣ ಸಾವು ಕಂಡ ಪುಟ್ಟ ಮಗು..!

Ankola Crime News; ಅಂಕೋಲಾ: ಗೊಬ್ಬರದ ಗುಂಡಿಗೆ ಬಿದ್ದು ಪುಟ್ಟ ಮಗು ದಾರುಣ ಸಾವು ಕಂಡಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಡೊಂಗ್ರಿ ಗ್ರಾಪಂ ವ್ಯಾಪ್ತಿಯ ಹಳವಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ ಸಾದ್ವಿ ಶ್ರೀಕಾಂತ್ ಹೆಬ್ಬಾರ್ (2.3) ವರ್ಷ ಸಾವನ್ನಪ್ಪಿದ ಮಗುವಾಗಿದ್ದಾಳೆ. ಈಕೆ ಹಳವಳ್ಳಿ ಗ್ರಾಮದ ಮೂಲೆಮನೆಯ ಶ್ರೀಕಾಂತ್ ಹೆಬ್ಬಾರ್ ಮತ್ತು ರೂಪಾ ದಂಪತಿಯ ದ್ವಿತೀಯ ಪುತ್ರಿಯಾಗಿದ್ದಳು. Ankola Crime News; ನಿನ್ನೆ ಬೆಳಿಗ್ಗೆ ಎಂದಿನಂತೆ ಸಾದ್ವಿ ಅಪ್ಪನೊಂದಿಗೆ ದನದ ಕೊಟ್ಟಿಗೆ ಬಳಿ ತೆರಳಿದ್ದಾಳೆ, ತಂದೆ ಕೊಟ್ಟಿಗೆಯ ಕೆಲಸದಲ್ಲಿ ಮಗ್ನರಾಗಿದ್ದರು. ಹೀಗಾಗಿ ಮಗಳ ಚಲನವಲನವನ್ನು ಗಮನಿಸಿರಲಿಲ್ಲ,ಕೆಲ ಸಮಯದ ಬಳಿಕ ಮಗಳ ಸದ್ದು ಕೇಳಿಸದೆ ಇದ್ದುದರಿಂದ ಸುತ್ತ ಮುತ್ತ ಹುಡುಕಾಟ ನಡೆಸಿದ್ದಾನೆ.ಕೊನೆಗೆ ಮಗು ಸಾದ್ವಿ ಗೊಬ್ಬರ ಗುಂಡಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಗುಂಡಿಯಿಂದ ಮಗುವನ್ನು ಮೇಲಕೆತ್ತಿ ತಾಲೂಕಾಸ್ಪತ್ರೆ ಕರೆತಂದಿದ್ದಾರೆ,ವೈದ್ಯರು ಪರೀಕ್ಷಿಸಿದಾಗ ಮಗು ಸಾವನ್ನಪ್ಪಿರುವ ಬಗ್ಗೆ ದೃಢಪಡಿಸಿದ್ದಾರೆ.ಪುಟ್ಟ ಕಂದಮ್ಮನ ಸಾವಿನಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಇದನ್ನೂ ಓದಿ ಶಿಗ್ಗಾವಿಯ ಭೀಕರ ಮರ್ಡರ್ ಕೇಸ್ ಹಾಗೂ...

ಶಿಗ್ಗಾವಿಯ ಭೀಕರ ಮರ್ಡರ್ ಕೇಸ್ ಹಾಗೂ ಫೈರಿಂಗ್ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಹಾವೇರಿ ಎಸ್ಪಿ..!

ಶಿಗ್ಗಾವಿಯ ಭೀಕರ ಮರ್ಡರ್ ಕೇಸ್ ಹಾಗೂ ಫೈರಿಂಗ್ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಹಾವೇರಿ ಎಸ್ಪಿ..!

Shiggaon Murder Case; ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣವನ್ನೇ ಬೆಚ್ಚಿ ಬೀಳಿಸಿದ್ದ ಶಿವಾನಂದ್ ಕುನ್ನೂರ್ ಎಂಬಾತನ ಮರ್ಡರ್ ಕೇಸಿನಲ್ಲಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಹೆಡೆಮುರಿ ಕಟ್ಟಿದ್ದಾರೆ ಪೊಲೀಸ್ರು. ಹಾವೇರಿ ಎಸ್ಪಿ ಅಂಶುಕುಮಾರ್, ಘಟನೆಯ ಕುರಿತು ಮಾದ್ಯಮಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇಬ್ಬರು ಆರೋಪಿಗಳ ಕಾಲಿಗೆ ಗುಂಡು..! ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ಗುತ್ತಿಗೆದಾರ ಶಿವಾನಂದ ಕುನ್ನೂರು (40) ಅವರ ಕೊಲೆ ಪ್ರಕರಣದ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಅಶ್ರಫ್ ಮತ್ತು ನಾಗರಾಜ್‌ ಕಾಲಿಗೆ ಫೈರಿಂಗ್ ಮಾಡಲಾಗಿದೆ. ಮೊದಲು ಆರೋಪಿಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚುವರಿ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್​​ಗೆ ಕಳುಹಿಸಿ ಕೊಡಲಾಗಿದೆ ಅಂತಾ ಎಸ್ಪಿ ತಿಳಿಸಿದ್ರು. ಅದು ಹಾನಗಲ್‌ ನ ಕೊಂಡೊಜಿ ಕ್ರಾಸ್..! ಈ ಆರೋಪಿಗಳು ಗುತ್ತಿಗೆದಾರ ಶಿವಾನಂದ ಅವರನ್ನು ಹಾಡಹಗಲೇ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ನಾಲ್ಕು ತಂಡಗಳನ್ನು ರಚಿಸಿ ಶೋಧ ನಡೆಸಲಾಗುತ್ತಿತ್ತು. ಹಾನಗಲ್ ತಾಲೂಕಿನ ಕೊಂಡೊಜಿ ಕ್ರಾಸ್ ಬಳಿ ಆರೋಪಿಗಳು...

ಉತ್ತರ ಕನ್ನಡ ಸೇರಿ ರಾಜ್ಯದ ಹಲವೆಡೆ ಮತ್ತೆ ಭಾರಿ‌ಮಳೆ ಮುನ್ಸೂಚನೆ..! ಎಲ್ಲೇಲ್ಲಿ..?

ಉತ್ತರ ಕನ್ನಡ ಸೇರಿ ರಾಜ್ಯದ ಹಲವೆಡೆ ಮತ್ತೆ ಭಾರಿ‌ಮಳೆ ಮುನ್ಸೂಚನೆ..! ಎಲ್ಲೇಲ್ಲಿ..?

Heavy Rains Forecast; ಬೆಂಗಳೂರು: ಉತ್ತ ಕನ್ನಡ ಜಿಲ್ಲೆ, ಕರಾವಳಿ ಮತ್ತು ಮಲೆನಾಡು ಭಾಗ ಸೇರಿದಂತೆ ಕರ್ನಾಟಕದಾದ್ಯಂತ ಭಾರೀ ಮಳೆ ಮುಂದುವರೆದಿದೆ. ಕೊಡಗಿನಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಇನ್ನುಳಿದಂತೆ, ಉತ್ತರ ಕನ್ನಡ ಜಿಲ್ಲೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿರುವ ಇಲಾಖೆ ಉತ್ತರ ಕನ್ನಡ, ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಮಂಡ್ಯ, ಮೈಸೂರು ಹಾಗೂ ಧಾರವಾಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಎಲ್ಲೇಲ್ಲಿ ಮಳೆ..? ಯಲ್ಲಾಪುರ, ಖಾನಾಪುರ, ಕ್ಯಾಸಲ್​ರಾಕ್, ಕಿತ್ತೂರು, ಸಕಲೇಶಪುರ, ಕಮ್ಮರಡಿ, ಆಗುಂಬೆ, ಶೃಂಗೇರಿ, ಕಳಸ, ಸೋಮವಾರಪೇಟೆ, ಕೊಪ್ಪ, ನಾಪೋಕ್ಲುವಿನಲ್ಲಿ ಅತ್ಯಧಿಕ ಮಳೆಯಾಗಿದೆ. ಬೆಳ್ತಂಗಡಿ, ಮೂಡುಬಿದಿರೆ, ಧರ್ಮಸ್ಥಳ, ಸುಳ್ಯ, ಬಂಟ್ವಾಳ, ಮಂಗಳೂರು, ಹಳಿಯಾಳ, ಪೊನ್ನಂಪೇಟೆ, ಪಣಂಬೂರು, ಜೋಯ್ಡಾ, ಎನ್.​ಆರ್.​ಪುರ್, ಪುತ್ತೂರು, ನಿಪ್ಪಾಣಿ, ಹಿಡಕಲ್, ಕುಂದಾಪುರ, ಹುಬ್ಬಳ್ಳಿ, ಮಹಾಲಿಂಗಪುರ, ಭದ್ರಾವತಿ,...

ಶಿಗ್ಗಾವಿ ಶಿವಾನಂದ್ ಕುನ್ನೂರ ಭೀಕರ ಹತ್ಯೆ ಪ್ರಕರಣ, ಆರೋಪಿಗಳ ಕಾಲಿಗೆ ಪೊಲೀಸರಿಂದ ಫೈರಿಂಗ್..! ಕಿಮ್ಸ್ ನಲ್ಲಿ ಚಿಕಿತ್ಸೆ..!

ಶಿಗ್ಗಾವಿ ಶಿವಾನಂದ್ ಕುನ್ನೂರ ಭೀಕರ ಹತ್ಯೆ ಪ್ರಕರಣ, ಆರೋಪಿಗಳ ಕಾಲಿಗೆ ಪೊಲೀಸರಿಂದ ಫೈರಿಂಗ್..! ಕಿಮ್ಸ್ ನಲ್ಲಿ ಚಿಕಿತ್ಸೆ..!

Police Firing Accused; ಶಿಗ್ಗಾವಿಯಲ್ಲಿ ಗುತ್ತಿಗೆದಾರನ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಹತ್ಯೆ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಹೀಗಾಗಿ, ಗಾಯಾಳು ಆರೋಪಿಗಳನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲು ಮಾಡಲಾಗಿದೆ. ಹಾವೇರಿಯ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕೊಂಡೋಜಿ ಕ್ರಾಸ್ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು. ಪರಿಣಾಮ, ಆರೋಪಿಗಳಾದ ಅಶ್ರಫ್ ಮತ್ತು ನಾಗರಾಜ ಕಾಲಿಗೆ ಗುಂಡೇಟು ಬಿದ್ದಿತ್ತು, ಗಾಯಳು ಆರೋಪಿಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪೊಲೀಸ್ ಪೈರಿಂಗ್ ಘಟನೆಯಲ್ಲಿ, ಹಾವೇರಿ ಎಸ್ಪಿ ಅಂಶುಕುಮಾರ ನೇತ್ರತ್ವದಲ್ಲಿ ಗಾಯಾಳುಗಳಿಗೆ ಹುಬ್ಬಳ್ಳಿ ಕಿಮ್ಸ್ ಗೆ ರವಾನೆ ಮಾಡಲಾಗಿದೆ. ನಿರಂತರ ಸುದ್ದಿಗಾಗಿ, ನಮ್ಮ ವಾಟ್ಸಾಪ್ ಚಾನಲ್ ಸೇರಿಕೊಳ್ಳಲು ಈ ಕೆಂಪು ಅಕ್ಷರಗಳ ಮೇಲೆ ಕ್ಲಿಕ್ ಮಾಡಿ, ಫಾಲೋ ಮಾಡಿ

ನಿರಂತರ ಮಳೆ; ಜಿಲ್ಲೆಯ 2 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ  ಶಾಲೆಗಳಿಗೆ ನಾಳೆ ರಜೆ..!

ನಿರಂತರ ಮಳೆ; ಜಿಲ್ಲೆಯ 2 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ನಾಳೆ ರಜೆ..!

School Holiday News; ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ, ಹೀಗಾಗಿ, ನಾಳೆ ಜೂನ್ 26 ರಂದು ಉತ್ತರ ಕನ್ನಡ ಜಿಲ್ಲೆಯ 2 ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಹಾಗೂ ಜೋಯಿಡಾ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ.

ಬೆಡಸಗಾಂವನಲ್ಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ಬಿದ್ದ ಮರ..!

ಬೆಡಸಗಾಂವನಲ್ಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ಬಿದ್ದ ಮರ..!

Tree Fell on a Vehicle; ಮುಂಡಗೋಡ ತಾಲೂಕಿನ ಬೆಡಸಗಾಂವ್ ನಲ್ಲಿ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನದ ಮೇಲಿನ ಮರ ಬಿದ್ದಿದೆ. ವಾಹನದಲ್ಲಿ ಹತ್ತಕ್ಕೂ ಹೆಚ್ಚು ಕಾರ್ಮಿಕರು ಇದ್ದರೂ ಅದೃಷ್ಟವಶಾತ್ ಯಾರಿಗೂ ಅನಾಹುತ ಸಂಭವಿಸಿಲ್ಲ. ಬೆಡಸಗಾಂವನ ವಿಜಯ ನಾಯ್ಕ್ ಎಂಬುವವರು ಮರ ಮುರಿದು ಬಿಳುವ ಅನುಮಾನದಿಂದ, ಮೊದಲೇ ವಿದ್ಯುತ್ ಸಂಪರ್ಕ್ ಕಡಿತಗೊಳಿಸಿದ್ದರು‌. ಹೀಗಾಗಿ, ಮರದ ಜೊತೆ ವಿದ್ಯುತ್ ತಂತಿಯೂ ಬಿದ್ದರೂ ಏನೂ ಅನಾಹುತ ಸಂಭವಿಸಿಲ್ಲ. ಇದನ್ನೂ ಓದಿ👉ಮುಂಡಗೋಡ ಠಾಣೆಯಲ್ಲಿ ಏಜೇಂಟರುಗಳ ಹಾವಳಿ ಇಲ್ಲ, ನಿಮಗೆ ಕಂಡುಬಂದ್ರೆ ಅಂತವರ ಮಾಹಿತಿ ನೀಡಿ- ಎಲ್ಟಿ ಆರೋಪಕ್ಕೆ ಪಿಐ ರಂಗನಾಥ ಸ್ಪಷ್ಟನೆ..! ಹೀಗಾಗಿ,ವಾಹನದಲ್ಲಿ ರಾಮಾಪುರದಿಂದ ಹುಲೆಕಲ್ ಗೆ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಿದಂತಾಗಿದೆ.

error: Content is protected !!