ಮಳಗಿ ಸಮೀಪದ ಕೊಳಗಿ ಅರಣ್ಯದಲ್ಲಿ ಅಪರಿಚಿತ ಮಹಿಳೆಯ ಬೆತ್ತಲೆ ಶವ ಪತ್ತೆ..! ಭೀಕರ ಹತ್ಯೆ ಮಾಡಿ ಬೀಸಾಕಿ ಹೋದ್ರಾ ಹಂತಕರು..?

ಮುಂಡಗೋಡ ತಾಲೂಕಿನ ಮಳಗಿ ಸಮೀಪದ ಕೊಳಗಿ ಅರಣ್ಯ ಪ್ರದೇಶದಲ್ಲಿ ಅಪರಿಚಿತ ಮಹಿಳೆಯ ಶವ ಸಿಕ್ಕಿದೆ. ಅದ್ಯಾರೋ ದುಷ್ಕರ್ಮಿಗಳು ಹತ್ಯೆ ಮಾಡಿ ಶವವನ್ನು ಇಲ್ಲಿ ಬೀಸಾಡಿ ಹೋಗಿರೋ ಸಂಶಯ ವ್ಯಕ್ತವಾಗಿದೆ‌. ಅಸಲು, ಮಹಿಳೆಯ ಶವ ಅಕ್ಷರಶಃ ಬೆತ್ತಲೆಯಾಗಿದೆ. ಈ ಶವದ ಹಿಂದೆ ಹಲವು ಭೀಕರತೆಯ ಅನುಮಾನಗಳು ಗರಿಗೆದರಿಕೊಂಡಿವೆ.

ಏನಿಲ್ಲವೆಂದರೂ 35 ರಿಂದ 40 ವರ್ಷ ವಯಸ್ಸಿನ ಮಹಿಳೆಯ ಶವ ಇದಾಗಿದ್ದು, ಅದೆಲ್ಲೊ ಕೊಲೆ ಮಾಡಿ ಇಲ್ಲಿ ಶವ ಬಿಸಾಕಿ ಹೋಗಿರೋ ಅನುಮಾನ ಇದೆ. ಅಥವಾ ಅದೆ ಸ್ಥಳದಲ್ಲೇ ಮಹಿಳೆಯ ಜೀವ ತೆಗದಿರಬಹುದಾದ ಅನುಮಾನವೂ ಇದೆ. ಸದ್ಯ ಮುಂಡಗೋಡ ಪೊಲೀಸರು ಸದ್ಯ ಸ್ಥಳಕ್ಕೆ ಭೇಟಿ‌ಜನನ ನೀಡಿ ಪರೀಶೀಲನೆ ನಡೆಸಿದ್ದಾರೆ‌. ಶವ ಯಾರದ್ದು..? ಇಲ್ಲಿಗೆ ಹೇಗೆ ಬಂತು..? ಈ ಸಾವಿನ ಅಸಲೀ ಕಾರಣ ಏನು..? ಎಂಬಿತ್ಯಾದಿ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ತನಿಖೆಗೆ ಇಳಿದಿದ್ದಾರೆ. ಸ್ಥಳದಲ್ಲಿ ಕತ್ತಲೆ ಆವರಿಸಿದ್ದು ಬೆಳಕಿನ ವ್ಯವಸ್ಥೆ ಮಾಡಿಕೊಳ್ಳುತ್ತಿರೊ ಪೊಲೀಸ್ರು ಮುಂದಿನ ಕ್ರಮ ಕೈಗೊಂಡಿದ್ದಾರೆ.