Gold Price Today : ಬೆಂಗಳೂರು/ ಹೈದರಾಬಾದ್: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ರೂ. ಭಾನುವಾರ 1,02,098 ರೂ. ಇತ್ತು. ಸೋಮವಾರ ಅದು ಸುಮಾರು 22ರೂ ಹೆಚ್ಚಾಗಿದ್ದು, 1,02,120 ರೂಗಳಿಗೆ ಏರಿಕೆ ಕಂಡಿದೆ. ಇನ್ನು ಬೆಳ್ಳಿ ಬೆಲೆ ಪ್ರತಿ ಕೆಜಿಗೆ ರೂ. ಶನಿವಾರ 1,09,815 ರೂ.ಗಳಷ್ಟಿತ್ತು. ಅದು ಸೋಮವಾರ 383 ಹೆಚ್ಚಳವಾಗುವ ಮೂಲಕ 1,10,198 ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ ಎಷ್ಟಿದೆ ಬಂಗಾರದ ಬೆಲೆ?:
99.9 ಫ್ಯೂರಿಟಿಯ 10 ಗ್ರಾಂ ಚಿನ್ನದ ನಾಣ್ಯದ ಬೆಲೆ 1,02,323 ರೂ ಇದೆ. ಇನ್ನು ಕೆ ಜಿ ಬೆಳ್ಳಿಯ ಬೆಲೆ 1,08,260 ರೂ ಇದೆ.
24 ಕ್ಯಾರೆಟ್ ( 99.5) ನ 10 ಗ್ರಾಂ ಚಿನ್ನದ ಬೆಲೆ 60 ರೂ ಕಡಿಮೆ ಆಗುವ ಮೂಲಕ 1,00,690 ರೂ ಇತ್ತು.
22 ಕ್ಯಾರೆಟ್ನ 10 ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ 50 ಕಡಿಮೆ ಆಗಿ 92,300 ರೂ ಇದೆ.
ಹೈದರಾಬಾದ್ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ರೂ. 1,02,120 ಇದ್ದು, ಬೆಳ್ಳಿ ಪ್ರತಿ ಕೇಜಿಗೆ 1,10,198 ರೂ.
ಸ್ಪಾಟ್ ಚಿನ್ನದ ಬೆಲೆ?:
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ಭಾನುವಾರ ಒಂದು ಔನ್ಸ್ ಚಿನ್ನದ ಬೆಲೆ 3,368 ಡಾಲರ್ ಇತ್ತು, ಆದರೆ, ಸೋಮವಾರ 5 ಡಾಲರ್ ಇಳಿಕೆಯಾಗಿ 3,364 ಡಾಲರ್ ತಲುಪಿದೆ. ಒಂದು ಔನ್ಸ್ ಬೆಳ್ಳಿಯ ಪ್ರಸ್ತುತ ಬೆಲೆ $36.11 ಆಗಿದೆ.
ಷೇರು ಮಾರುಕಟ್ಟೆ ಸುದ್ದಿ:
ದೇಶೀಯ ಷೇರು ಮಾರುಕಟ್ಟೆಗಳು ಸೋಮವಾರ ನಷ್ಟದೊಂದಿಗೆ ತೆರೆದವು. ನಷ್ಟದಲ್ಲೇ ಮುಕ್ತಾಯ ಕಂಡಿವೆ. ಇರಾನ್-ಇಸ್ರೇಲ್ ಯುದ್ಧದಲ್ಲಿ ಅಮೆರಿಕದ ಪ್ರವೇಶವು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಿತು.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ದಿನದಂತ್ಯದ ವಹಿವಾಟಿನಲ್ಲಿ 511 ಅಂಕಗಳ ಕುಸಿತ ಕಂಡು 81,896 ಅಂಶಗಳಿಗೆ ಕುಸಿತ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 140 ಅಂಕಗಳನ್ನು ಕಳೆದುಕೊಂಡು 24,971 ಕ್ಕೆ ವಹಿವಾಟನ್ನು ಅಂತ್ಯಗೊಳಿಸಿಕೊಂಡಿವೆ.
ರೂಪಾಯಿ ಮೌಲ್ಯ:
ಸೋಮವಾರ ರೂಪಾಯಿ ಮೌಲ್ಯ 14 ಪೈಸೆಯಷ್ಟು ಕಡಿಮೆಯಾಗಿದೆ. ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿಯ ಪ್ರಸ್ತುತ ವಿನಿಮಯ ದರ ರೂ.86.69 ಆಗಿದೆ.