ಇನಸ್ಟಾಗ್ರಾಂ ಜ್ಯೋತಿಷಿಗಳಿಂದ ಹಾವೇರಿಯ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿಗೆ 15 ಲಕ್ಷರೂ ವಂಚನೆ..!

Cheated Astrologers; ಹಾವೇರಿ: ಜಾಲತಾಣವಾದ ಇನಸ್ಟಾಗ್ರಾಂ ನಲ್ಲಿ ಬಂದ ಆ್ಯಪ್ ನ್ನು ನಂಬಿ ಜ್ಯೋತಿಷಿಗಳ ಭಯಾನಕ ಮೂಢ ನಂಬಿಕೆಗಳಿಗೆ ಹೆದರಿ, ಹಾವೇರಿಯ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿ 15 ಲಕ್ಷರೂ ಮೌಲ್ಯದ 165 ಗ್ರಾಂ ಬಂಗಾರವನ್ನು ನೀಡಿ ಮೋಸ ಹೋಗಿದ್ದಾಳೆ.

ಈ ವಂಚನೆಯ ಬಗ್ಗೆ ಹಾವೇರಿ ಯ ಸಿಇಎನ್ ಪೊಲೀಸ್ ಠಾಣೆ ಯಲ್ಲಿ ಜೂ.28ರಂದು‌ ದೂರು ದಾಖಲಾಗಿದೆ. ಹಾವೇರಿಯ ವೈಷ್ಣವಿ ಹೂವನಗೌಡ ದ್ಯಾವಣ್ಣನವರ ಇನಸ್ಟಾಗ್ರಾಮನಲ್ಲಿ ಗಣೇಶ ಶಾಸ್ತ್ರಿ,‌‌ ಚಂದನ ಹಾಗೂ ಗುರು ಎನ್ನುವವರು ದಿನಾಂಕ 23-03-2025 ರಂದ ಇನಸ್ಟಾಗ್ರಾಮನಲ್ಲಿ ಆ್ಯಪ್‌ನ ಮೂಲಕ ಪರಿಚಯಿಸಿಕೊಂಡು ಬೇರೆ ರೀತಿಯ ಕುಂಕುಮ, ಬಂಡಾರ, ತಾಯತಾ, ಕುಬೇರ ಯಂತ್ರ ಪೂಜೆಯ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತೇವೆ , ಇಲ್ಲದಿದ್ದರೆ ನಿಮ್ಮ ಜೀವಕ್ಕೆ ಅಪಾಯವಿದೆ ಎಂದು‌ನಂಬಿಸಿದ್ದಾರೆ.

ವಂಚಕರ ಮಾತುಗಳನ್ನು ನಂಬಿ, ಅವರ ಹೆದರಿಕೆಗೆ ಬೆದರಿ ಮೂವರು ಜ್ಯೋತಿಷಿಗಳಿಗೆ ಒಟ್ಟು ರೂ 15 ಲಕ್ಷ ಮೌಲ್ಯದ 165 ಗ್ರಾಂ ಬಂಗಾರವನ್ನು ನೀಡಿದ್ದಾರೆ, ವಂಚಕರು ಸಿಕ್ಕಿತಲೇ ಚಾನ್ಸ್ ಎಂದು ಸುಳ್ಳು, ಪೊಳ್ಳ‌ ಹೇಳಿ ಬಂಗಾರವನ್ನು ಪಡೆದುಕೊಂಡು, ಹೊಡೆದುಕೊಂಡ ಹೋಗಿದ್ದಾರೆ. ಆನಂತರ ಅರಿವಿಗೆ ಬಂದು, ವಂಚಕರ ಬಗ್ಗೆ ಪೊಲೀಸರಿಗೆ ವೈಷ್ಣವಿ ದೂರು ನೀಡಿದ್ದಾರೆ.