Unity Walk Thon;
ಮುಂಡಗೋಡ ಪೊಲೀಸ್ ಠಾಣಾ ವತಿಯಿಂದ ಸರ್ದಾರ ವಲ್ಲಭಾಯಿ ಪಟೇಲ್ ರವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸ ನಿಮಿತ್ತ ಏಕತಾ ವಾಕ್ ಥಾನ್ ಆಚರಿಸಲಾಯಿತು.

ಮುಂಡಗೋಡ ಪೊಲೀಸ್ ಠಾಣೆಯ ಪಿಐ ರಂಗನಾಥ್ ನೀಲಮ್ಮನವರ್ ನೇತೃತ್ವದಲ್ಲಿ ಸಿಬ್ಬಂದಿ ವರ್ಗ ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಭಾಗವಹಿಸಿದ್ದರು.

ರನ್ನ ಫಾರ್ ಯುನಿಟಿ ಎಂಬ ಘೋಷ ವಾಕ್ಯದಡಿ ಠಾಣೆಯಿಂದ ಬಂಕಾಪುರ ರಸ್ತೆ- ಕಂಬಾರಗಟ್ಟಿ ಪ್ಲಾಟ್- ಟಿ,ಡಿ,ಬಿ ರೋಡ-ಹುಬ್ಬಳ್ಳಿ ರಸ್ತೆ-ಬಸವನಬೀದಿ- ಬನ್ನಿಕಟ್ಟಾ-ಶಿವಾಜಿ ಸರ್ಕಲ್ ಮುಖಾಂತರ ಪೊಲೀಸ್ ಠಾಣೆಗೆ ಬಂದು ವಾಕ್ ಥಾನ್ ಸಂಪ್ಪನ್ನವಾಯ್ತು.

ಈ ವಾಕ್ ಥಾನ್ ನಲ್ಲಿ ದೇವು ಜೋರೆ ಪ್ರಥಮ ಬಹುಮಾನ ಪಡೆದ್ರು. ಶನ್ಸನ್ ಎಂಬುವರು ದ್ವಿತೀಯ ಹಾಗೂ ಮಾರುತಿ ಎಂಬುವವರು ತೃತೀಯ ಸ್ಥಾನ ಪಡೆದುಕೊಂಡರು.
 
