Accident News : ಸರೈಕೇಲಾ(ಜಾರ್ಖಂಡ್): ಟ್ರಕ್ ಮತ್ತು ಬೊಲೆರೊ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಂಬತ್ತು ಮಂದಿ ಮೃತಪಟ್ಟಿರುವ ಘಟನೆ ಜಾರ್ಖಂಡ್ನ ನಮ್ಶೋಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 18ರಲ್ಲಿ ಇಂದು ಬೆಳಗ್ಗೆ ನಡೆಯಿತು.
ತಿಲೈತಾರ್ ನಿವಾಸಿಗಳಾದ ವಿಜಯ್ ಮಹಾತೋ, ಸ್ವಪನ್ ಮಹಾತೋ, ಅಜಯ್ ಮಹಾತೋ, ಬೃಹಸ್ಪತಿ ಮಹಾತೋ, ಗುರುಪಾದ ಮಹಾತೋ, ಶಶಾಂಕ್ ಮಹಾತೋ, ಕೃಷ್ಣ ಮಹಾತೋ, ಚಂದ್ರಮೋಹನ್ ಮಹಾತೋ ಮತ್ತು ಚಾಲಕ ಚಿತ್ತರಂಜನ್ ಮಹಾತೋ ಮೃತರೆಂದು ಗುರುತಿಸಲಾಗಿದೆ.
ಗುರುವಾರ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಬಲರಾಂಪುರದ ಅದಾಬ್ನಾ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ಬೊಲೆರೊನಲ್ಲಿ ಹಿಂತಿರುಗುತ್ತಿದ್ದಾಗ, ಇಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ಜಾರ್ಖಂಡ್-ಪಶ್ಚಿಮ ಬಂಗಾಳ ಗಡಿಯ ನಮ್ಶೋಲ್ ಸಮೀಪ ಬೊಲೆರೊ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ರಕ್ ಭತ್ತದ ಗದ್ದೆಗೆ ನುಗ್ಗಿ ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಒಂಬತ್ತೂ ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಎಲ್ಲರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಪುರುಲಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಕಾರು-ಆಟೋ ಡಿಕ್ಕಿಯಾಗಿ ಐವರು ಸಾವು:
ಕೆಲವು ದಿನಗಳ ಹಿಂದೆ, ಜಾರ್ಖಂಡ್ನ ಪುರ್ಬಾ ಮೇದಿನಿಪುರ ಜಿಲ್ಲೆಯ ಹೆರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಇರಿಂಚಿ ಸೇತುವೆಯ ಬಳಿ ಕಾರು ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿ ಐವರು ಮೃತಪಟ್ಟಿದ್ದರು. ಈದ್ ಆಚರಣೆಗೆ ದೆಹಲಿಯಿಂದ ಮನೆಗೆ ಹೋಗುತ್ತಿದ್ದಾಗ ದುರ್ಘಟನೆ ನಡೆದಿತ್ತು.