Home uttara kannada news

Tag: uttara kannada news

Post
ರೈಲಿನಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ವ್ಯಕ್ತಿ ಬಂಧನ, ಕಾರವಾರ ರೈಲ್ವೆ ಪೊಲೀಸರ ಭರ್ಜರಿ ಕಾರ್ಯಾಚರಣೆ..!

ರೈಲಿನಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ವ್ಯಕ್ತಿ ಬಂಧನ, ಕಾರವಾರ ರೈಲ್ವೆ ಪೊಲೀಸರ ಭರ್ಜರಿ ಕಾರ್ಯಾಚರಣೆ..!

ಕಾರವಾರ: ಕೇರಳಕ್ಕೆ ಅಕ್ರಮವಾಗಿ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಕಾರವಾರ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ, ಮಂಗಳ ಎಕ್ಸ್ ಪ್ರೆಸ್ ರೈಲಿನಲ್ಲಿ ದಾಖಲೆ ರಹಿತ ಹಣ ಸಾಗಿಸುತ್ತಿದ್ದ ವೇಳೆ ಬಂಧಿಸಲಾಗಿದೆ. ಮಹಾರಾಷ್ಟ್ರ ಮೂಲದ ವಿಕಾಸ್ ರಮೇಶ್ ದೋಕಲೆ ಬಂಧಿತ ವ್ಯಕ್ತಿಯಾಗಿದ್ದು, ಬಂಧಿತನಿಂದ ದಾಖಲೆ ರಹಿತ ರೂ.20,09,720 ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರ ದಿಂದ ಕೇರಳಕ್ಕೆ ಹಣ ಕೊಂಡೊಯ್ಯುತಿದ್ದನು ಎನ್ನಲಾಗಿದ್ದು, ರೈಲ್ವೆ ಪೊಲೀಸರಿಂದ ಕಾರವಾರ ನಗರ ಠಾಣೆ ಪೊಲೀಸರಿಗೆ ಪ್ರಕರಣ ಹಸ್ತಾಂತರವಾಗಿದೆ.

Post
8 ವರ್ಷದ ಹಿಂದೆ ಅಪಘಾತಪಡಿಸಿ ಎಸ್ಕೇಪ್ ಆಗಿದ್ದ ಆರೋಪಿ ಆರೆಸ್ಟ್, ತಲೆನೋವಾಗಿದ್ದ ಕೇಸ್ ಬೇಧಿಸಿದ ಹಳಿಯಾಳ ಪೊಲೀಸ್ರು..!

8 ವರ್ಷದ ಹಿಂದೆ ಅಪಘಾತಪಡಿಸಿ ಎಸ್ಕೇಪ್ ಆಗಿದ್ದ ಆರೋಪಿ ಆರೆಸ್ಟ್, ತಲೆನೋವಾಗಿದ್ದ ಕೇಸ್ ಬೇಧಿಸಿದ ಹಳಿಯಾಳ ಪೊಲೀಸ್ರು..!

ಹಳಿಯಾಳ: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಅಪಘಾತ ಪಡಿಸಿ ಓರ್ವನ ಸಾವಿಗೆ ಕಾರಣನಾಗಿದ್ದ ಆರೋಪಿ ಚಾಲಾಕಿ ಚಾಲಕನೊಬ್ಬ ಬರೋಬ್ಬರಿ ಎಂಟು ವರ್ಷಗಳ ನಂತ್ರ ಅರೆಸ್ಟ್ ಆಗಿದ್ದಾನೆ. ಭರ್ಜರಿ ಕಾರ್ಯಾಚರಣೆ ನಡೆಸಿರೊ ಹಳಿಯಾಳ ಪೊಲೀಸರು ಆರೋಪಿಯನ್ನು ಬೆಳಗಾವಿಯ ಸವದತ್ತಿಯಲ್ಲಿ ಪತ್ತೆ ಮಾಡಿ ಎತ್ತಾಕೊಂಡು ಬಂದಿದ್ದಾರೆ. ಹೀಗಾಗಿ, ಹಳಿಯಾಳ ಪೊಲೀಸರಿಗೆ ತಲೆನೋವಾಗಿದ್ದ ಪ್ರಕರಣವೊಂದು ಇದೀಗ ಬಯಲಾಗಿದೆ. ಪಂಚಪ್ಪ ಅಯ್ಯಪ್ಪ ಪವಾಡಿ ಎಂಬುವವನನ್ನ ಎಳೆದು ತರಲಾಗಿದೆ. 2014 ರಲ್ಲಿ..! ಅಂದಹಾಗೆ, 31.10.2014 ರಲ್ಲಿ, ಅಂದ್ರೆ ಎಂಟು ವರ್ಷಗಳ ಹಿಂದೆ, ಹಳಿಯಾಳದ ಯಲ್ಲಾಪುರ...

Post
ಶಿರಸಿ ಸಬ್ ಜೈಲಿನಿಂದ ಎಸ್ಕೇಪ್ ಆಗಿದ್ದವ ಮತ್ತೆ ಸಿಕ್ಕಿಬಿದ್ದ, ಅಷ್ಟಕ್ಕೂ ಆ ನಟೋರಿಯಸ್ ಪಡೆಯ ಸದಸ್ಯ ಸಿಕ್ಕಿದ್ದಾದ್ರೂ ಹೇಗೆ ಗೊತ್ತಾ..?

ಶಿರಸಿ ಸಬ್ ಜೈಲಿನಿಂದ ಎಸ್ಕೇಪ್ ಆಗಿದ್ದವ ಮತ್ತೆ ಸಿಕ್ಕಿಬಿದ್ದ, ಅಷ್ಟಕ್ಕೂ ಆ ನಟೋರಿಯಸ್ ಪಡೆಯ ಸದಸ್ಯ ಸಿಕ್ಕಿದ್ದಾದ್ರೂ ಹೇಗೆ ಗೊತ್ತಾ..?

ಶಿರಸಿ ಸಬ್ ಜೈಲಿನಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ ರಾಬರಿ ಗ್ಯಾಂಗ್ ನ ಸದಸ್ಯ ಆರೋಪಿ, ಪ್ರಕಾಶ್ ಸಿದ್ದಿ ಮತ್ತೆ ತಗಲಾಕ್ಕೊಂಡಿದ್ದಾನೆ. ಇನ್ನೇನು ದಟ್ಟ ಕಾಡಿನಲ್ಲಿ ಲೀ‌ನವಾಗಲು ಹೊಂಚು ಹಾಕಿದ್ದ ರಾಬರಿ ಪಡೆಯ ವಾರಸುದಾರನನ್ನು ಬಲೆಗೆ ಕೆಡವಿದ್ದಾರೆ. ಶಿರಸಿ ಗ್ರಾಮೀಣ ಠಾಣೆಯ ದಕ್ಷ ಪಿಎಸ್ಐ ಸೀತಾರಾಮ್ ಮತ್ತವರ ಟೀಂ, ಆರೋಪಿ ಪ್ರಕಾಶನ ರೆಕ್ಕೆ ಪುಕ್ಕಗಳನ್ನೇಲ್ಲ ಕಟ್ ಮಾಡಿ ಎತ್ತಾಕೊಂಡು ಬಂದಿದ್ದಾರೆ. ಶಿರಸಿ ತಾಲೂಕಿನ ಜಡ್ಡಿಮನೆ ಹರೆಪಾಲ್ ಗ್ರಾಮದ ಅಂಚಿನಲ್ಲಿ ಆರೋಪಿ ಮತ್ತೆ ಸಿಕ್ಕಿ ಬಿದ್ದಿದ್ದಾನೆ. ಈ‌ ಮೂಲಕ ಆತಂಕಕ್ಕೆ...

Post
ಶಿರಸಿ ಸಬ್ ಜೈಲಿನಿಂದ ರಾಬರಿ ಗ್ಯಾಂಗ್ ನ ಆರೋಪಿ ಗ್ರೇಟ್ ಎಸ್ಕೇಪ್..! ಜೈಲಾಧಿಕಾರಿಯ “ಕಡ್ಲೆ” ಪುರಾಣವಾ ಇದು..?

ಶಿರಸಿ ಸಬ್ ಜೈಲಿನಿಂದ ರಾಬರಿ ಗ್ಯಾಂಗ್ ನ ಆರೋಪಿ ಗ್ರೇಟ್ ಎಸ್ಕೇಪ್..! ಜೈಲಾಧಿಕಾರಿಯ “ಕಡ್ಲೆ” ಪುರಾಣವಾ ಇದು..?

ಯಲ್ಲಾಪುರ ಪೊಲೀಸರು ಬಂಧಿಸಿದ್ದ ರಾಬರಿ ಗ್ಯಾಂಗ್ ನ ಆರೋಪಿಯೊಬ್ಬ ಜೈಲಿನಿಂದಲೇ ಎಸ್ಕೇಪ್ ಆಗಿದ್ದಾನೆ. ಶಿರಸಿ ಸಬ್ ಜೈಲಿನ ಅಧಿಕಾರಿಗಳ ನಿರ್ಲಕ್ಷದಿಂದ ಇವತ್ತು ಬೆಳ್ಳಂ ಬೆಳಿಗ್ಗೆ ಜೈಲಿನಿಂದಲೇ ಕಾಲ್ಕಿತ್ತಿದ್ದಾನೆ. ಅಂದಹಾಗೆ, ಶಿರಸಿ ಸಬ್ ಜೈಲಿನ ಅಧಿಕಾರಿಗಳು ಅದೇನು ಕಡೆದು ಗುಡ್ಡೆ ಹಾಕ್ತಿದ್ರೋ ಏನೋ ಗೊತ್ತಿಲ್ಲ. ಯಲ್ಲಾಪುರ ಪೊಲೀಸರ ಶ್ರಮವನ್ನೇಲ್ಲ ನೀರಲ್ಲಿ ಹೋಮ ಹಾಕಿದಂತೆ ಮಾಡಿದ್ದಾರೆ. ಆತ ಪ್ರಕಾಶ್ ಸಿದ್ದಿ..! 24 ವರ್ಷ ವಯಸ್ಸಿನ ಪ್ರಕಾಶ್ ಕ್ರಷ್ಣಾ ಸಿದ್ದಿ ಎಂಬುವ ಆರೋಪಿ ಇವತ್ತು ಬೆಳಿಗ್ಗೆ 8.45 ರ ಸುಮಾರಿಗೆ ಜೈಲಿನಿಂದಲೇ...

Post
ಬಸವೇಶ್ವರಿ ಮಾತೆಯವರ ಬಗ್ಗೆ ಸಚಿವ್ರು ಹಗುರವಾಗಿ‌ ಮಾತಾಡಿಲ್ಲ- ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ ಮುಖಂಡರು..!

ಬಸವೇಶ್ವರಿ ಮಾತೆಯವರ ಬಗ್ಗೆ ಸಚಿವ್ರು ಹಗುರವಾಗಿ‌ ಮಾತಾಡಿಲ್ಲ- ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ ಮುಖಂಡರು..!

  ಬಸವೇಶ್ವರಿ ಮಾತೆಯವರಿಗೆ, ಸಚಿವ ಶಿವರಾಮ್ ಹೆಬ್ಬಾರ್ ನಿಂದನೆ ಮಾಡಿದ್ದಾರೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ, ಇವತ್ತು ಮುಂಡಗೋಡಿನಲ್ಲಿ ಮತ್ತೊಂದು ಪತ್ರಿಕಾಗೋಷ್ಟಿ ನಡೆದಿದೆ. ಬಿಜೆಪಿ ಮುಖಂಡರು ಹಾಗೂ ಉಗ್ನಿಕೇರಿ ಗ್ರಾಮದ ಹಲವರು ಪತ್ರಿಕಾಗೋಷ್ಟಿ ನಡೆಸಿದ್ದಾರೆ. ಮಾತೆ ಬಸವೇಶ್ವರಿಯವರಿಗೆ ಸಚಿವ್ರು ಏನಂದ್ರೆ ಏನೂ ಅಂದಿಲ್ಲ, ಯಾವುದೇ ರೀತಿ ಹಗುರವಾಗಿ ಮಾತನಾಡಿಲ್ಲ ಅಂತಾ ಈ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇನ್ನು, ಪತ್ರಿಕಾಗೋಷ್ಟಿಯಲ್ಲಿ ಭಾಗವಸಿದ್ದ ಬಿಜೆಪಿ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್, ಗುಡ್ಡಪ್ಪ ಕಾತೂರ್, ಉಮೇಶ್...

Post
ಅಯ್ಯೋ ದೇವ್ರೆ, ಅತ್ತಿವೇರಿ ಬಸವೇಶ್ವರಿ ಮಾತೆಗೆ ಏಕವಚನದಲ್ಲೇ ನಿಂದಿಸಿದ್ರಾ ಸಚಿವ್ರು..? ಅಷ್ಟಕ್ಕೂ, ಪತ್ರಿಕಾಗೋಷ್ಟಿಯಲ್ಲಿ ಮಾತೆಯ ಭಕ್ತರ ಆಕ್ರೋಶ ಎಂತಾದ್ದು..?

ಅಯ್ಯೋ ದೇವ್ರೆ, ಅತ್ತಿವೇರಿ ಬಸವೇಶ್ವರಿ ಮಾತೆಗೆ ಏಕವಚನದಲ್ಲೇ ನಿಂದಿಸಿದ್ರಾ ಸಚಿವ್ರು..? ಅಷ್ಟಕ್ಕೂ, ಪತ್ರಿಕಾಗೋಷ್ಟಿಯಲ್ಲಿ ಮಾತೆಯ ಭಕ್ತರ ಆಕ್ರೋಶ ಎಂತಾದ್ದು..?

 ಮುಂಡಗೋಡ ತಾಲೂಕಿನ ರಾಜಕೀಯ ಈ ಮಟ್ಟಿಗೆ ಹೀನ ಸ್ಥಿತಿಗೆ ತಲುಪಿತಾ..? ಅದ್ರಲ್ಲೂ ಈಗ ಬಂದಿರೋ ಆರೋಪ ನಿಜವೇ ಆಗಿದ್ದರೆ, ಮಾನ್ಯ ಸಚಿವ ಶಿವರಾಮ್ ಹೆಬ್ಬಾರ್ ಸಾಹೇಬ್ರು ಈ ಮಟ್ಟಕ್ಕೆ ರಾಜಕೀಯ ಮಗ್ಗುಲಿಗೆ ಅನಿವಾರ್ಯವಾಗಿ ಹೊರಳಿಕೊಂಡ್ರಾ..? ಹಾಗಾಗಿದ್ದರೆ ನಿಜಕ್ಕೂ ಇದು ಯಲ್ಲಾಪುರ ಕ್ಷೇತ್ರದ ಮಟ್ಟಿಗೆ ಬಹುದೊಡ್ಡ ದುರಂತ. ಅವ್ರು ಮಾತೆ ಬಸವೇಶ್ವರಿ..! ಮುಂಡಗೋಡ ತಾಲೂಕಿನಲ್ಲಿ ಮನೆ ಮನೆಗೂ ಪರಿಚಿತರಾಗಿ, ಗುರು ಸ್ಥಾನ ಪಡೆದುಕೊಂಡಿರೋ ಅತ್ತಿವೇರಿ ಬಸವಧಾಮದ ಶ್ರೀಮಾತೆ ಬಸವೇಶ್ವರಿಗೆ ಸಚಿವ ಶಿವರಾಮ್ ಹೆಬ್ಬಾರ್, ಏಕ ವಚನದಲ್ಲಿ ನಿಂದಿಸಿದ್ದಾರೆ...

Post
ಕತ್ತಲಲ್ಲಿ ಸುಸ್ಸು ಮಾಡೋಕೆ ಹೋಗಿದ್ದ ಪ್ರವಾಸಿಗ ಬಾವಿಯಲ್ಲಿ ಬಿದ್ದ..! ಮುಂದೇನಾಯ್ತು..?

ಕತ್ತಲಲ್ಲಿ ಸುಸ್ಸು ಮಾಡೋಕೆ ಹೋಗಿದ್ದ ಪ್ರವಾಸಿಗ ಬಾವಿಯಲ್ಲಿ ಬಿದ್ದ..! ಮುಂದೇನಾಯ್ತು..?

ಗೋಕರ್ಣ: ಮೂತ್ರ ವಿಸರ್ಜನೆಗೆ ಹೋಗಿ ಪ್ರವಾಸಿಗನೊಬ್ಬ ಬಾವಿಗೆ ಬಿದ್ದು ಕೆಲಹೊತ್ತು ಅಲ್ಲೇ ಪರದಾಡಿದ ವಿಚಿತ್ರ ಘಟನೆ ಕುಮಟಾ ತಾಲೂಕಿನ ಗೋಕರ್ಣದ ಮೇಲಿನಕೇರಿಯಲ್ಲಿ ನಡೆದಿದೆ. ದೆಹಲಿ ಮೂಲದ ರಾಮೇಶ್ವರ್ ಬಾವಿಗೆ ಬಿದ್ದ ಪ್ರವಾಸಿಗನಾಗಿದ್ದಾನೆ. ಯುವತಿಯೊಂದಿಗೆ ಗೋಕರ್ಣದ ಪ್ರವಾಸಕ್ಕೆ ಬಂದಿದ್ದ ಯುವಕ, ಮೂತ್ರವಿಸರ್ಜನೆಗೆ ಎಂದು ಕತ್ತಲಲ್ಲಿ ತೆರಳಿದ್ದಾಗ ತೆರದ ಬಾವಿಗೆ ಬಿದ್ದಿದ್ದ, ಹೀಗಾಗಿ, ಬಾವಿಯಲ್ಲಿ ಬಿದ್ದು ಹೊರಬರಲಾರದೇ ಕೆಲಹೊತ್ತು ಅಲ್ಲೇ ಪರದಾಡಿದ್ದ. ನಂತರ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರಿಂದ ರಕ್ಷಣೆ ಮಾಡಲಾಗಿದೆ. ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ, ಮೀನುಗಾರ ಸಾವು..!

ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ, ಮೀನುಗಾರ ಸಾವು..!

ಕುಮಟಾ: ತಾಲೂಕಿನ ಅಘನಾಶಿನಿ ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ದೋಳಿ ಮುಳುಗಡೆಯಾಗಿ ಮೀನುಗಾರ ಸಾವು ಕಂಡಿದ್ದಾನೆ. ಕುಮಟಾದ ಲುಕ್ಕೇರಿ ನಿವಾಸಿಯಾಗಿದ್ದ ವಿಘ್ನೇಶ್ವರ ಅಂಬಿಗ (24) ಮೃತ ದುರ್ದೈವಿಯಾಗಿದ್ದಾನೆ. ಮೀನುಗಾರಿಕೆಗೆ ತೆರಳಿದ್ದ ವೇಳೆ ಒಳನೀರಿನ ಹರಿವಿನಿಂದ ದೋಣಿ ಮುಳುಗಿದೆ. ಹೀಗಾಗಿ, ನೀರಲ್ಲಿ ಮುಳುಗಿ ತೀವ್ರ ಅಸ್ವಸ್ಥನಾಗಿದ್ದ ವಿಘ್ನೇಶ್ವರ ಆಸ್ಪತ್ರೆಗೆ ಸಾಗಿಸುವ ಸಾವು ಕಂಡಿದ್ದಾನೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post
ಈ ವರ್ಷ ಉಳವಿ ಜಾತ್ರೆಗೆ ಚಕ್ಕಡಿ, ಎತ್ತಿನ ಗಾಡಿ ಒಯ್ಯಂಗಿಲ್ಲ, ಜಿಲ್ಲಾಡಳಿತದಿಂದ ಎತ್ತಿನ ಬಂಡಿ ನಿಷೇಧ..!

ಈ ವರ್ಷ ಉಳವಿ ಜಾತ್ರೆಗೆ ಚಕ್ಕಡಿ, ಎತ್ತಿನ ಗಾಡಿ ಒಯ್ಯಂಗಿಲ್ಲ, ಜಿಲ್ಲಾಡಳಿತದಿಂದ ಎತ್ತಿನ ಬಂಡಿ ನಿಷೇಧ..!

ಉಳವಿ: ಇತಿಹಾಸ ಪ್ರಸಿದ್ಧ ಉಳವಿ ಚನ್ನಬಸವೇಶ್ವರ ಜಾತ್ರೆ ಇನ್ನೇನು ಶುರುವಾಗಲಿದೆ. ಆದ್ರೆ, ಉಳವಿ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದ ಎತ್ತಿನಬಂಡಿಗೆ ಉತ್ತರ ಕನ್ನಡ ಜಿಲ್ಲಾಡಳಿತ ನಿಷೇಧ ಹೇರಿರುವುದು ಭಕ್ತರ ಪಾಲಿಗೆ ನುಂಗಲಾರದ ತುತ್ತಾಗಿದೆ. ಯಾಕಂದ್ರೆ, ಪ್ರತಿ ವರ್ಷ ಉಳವಿ ಜಾತ್ರೆಗೆ ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಸೇರುತ್ತಿದ್ದರು. ಜಾತ್ರೆಗೆಂದು ಎತ್ತಿನಬಂಡಿಗಳನ್ನು ವಿಶೇಷ ರೀತಿಯಲ್ಲಿ ಸಿಂಗರಿಸುವುದು ಒಂದು ಪರಂಪರೆಯಾಗಿಯೇ ಬೆಳೆದುಬಂದಿದೆ. ಆದರೆ ಈ ಬಾರಿ ರಾಜ್ಯದಲ್ಲಿ ಜಾನುವಾರುಗಳಿಗೆ ಸಾಂಕ್ರಾಮಿಕ ಚರ್ಮಗಂಟು ರೋಗ...

Post
ಮುಂಡಗೋಡಿನಲ್ಲೊಂದು ಅಮಾನುಷ ಘಟನೆ..! ಹಸುಗೂಸನ್ನು ರಸ್ತೆಯಲ್ಲಿ ಎಸೆದು ಹೋದ್ಲಾ ಮಾಹಾತಾಯಿ?

ಮುಂಡಗೋಡಿನಲ್ಲೊಂದು ಅಮಾನುಷ ಘಟನೆ..! ಹಸುಗೂಸನ್ನು ರಸ್ತೆಯಲ್ಲಿ ಎಸೆದು ಹೋದ್ಲಾ ಮಾಹಾತಾಯಿ?

 ಮುಂಡಗೋಡ ಪಟ್ಟಣದ ಹೊರವಲಯದ ನೂರಾನಿ ಗಲ್ಲಿಯ ಹತ್ತಿರ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಯಾರೋ ಆಗಷ್ಟೇ ಹೆರಿಗೆ ಮಾಡಿಸಿ, ಅಥವಾ ಗರ್ಭಪಾತ ಮಾಡಿಸಿ ಬಾಕ್ಸ್ ನಲ್ಲಿ ಶಿಶುವನ್ನು ಎಸೆದು ಹೋಗಿದ್ದಾರೆ. ರಕ್ತಸಿಕ್ತವಾಗಿದ್ದ ಶಿಶುವನ್ನು ನಾಯಿಗಳು ಎಳೆದಾಡಿ ಕಚ್ಚಿ ಹಾಕಿವೆ. ಹೀಗಾಗಿ, ಶಿಶು ಮರಣಹೊ‌ಂದಿದ್ದು ರಸ್ತೆಯಲ್ಲಿ ಅನಾಥವಾಗಿ ಬಿದ್ದಿದೆ. ಅಬಾರ್ಷನ್ ಮಾಡಿದ್ರಾ..? ಅಸಲು, ರಸ್ತೆಯ ಮೇಲೆ ರಕ್ತಸಿಕ್ತವಾಗಿ ಬಿದ್ದಿದ್ದ ಶಿಶುವನ್ನು ನೋಡಿದ್ರೆ, ಅಬಾರ್ಷನ್ ಮಾಡಿಸಿರಬಹುದಾ ಅನ್ನೋ ಅನುಮಾನವಿದೆ. ಅಲ್ಲದೆ, ಅನೈತಿಕತೆಗೆ ಹುಟ್ಟಿದ ಬೇಡವಾದ ಕಂದಮ್ಮನನ್ನು ಹೀಗೆ ಅಮಾನುಷವಾಗಿ...

error: Content is protected !!