Home uttara kannada news

Tag: uttara kannada news

Post
ವಿದ್ಯಾರ್ಥಿಗಳ ಮೇಲೆ ಬಿದ್ದ ಶಾಲಾ ಕೊಠಡಿ ಸ್ಲಾಬ್, ಐವರು ವಿದ್ಯಾರ್ಥಿಗಳಿಗೆ ಗಾಯ

ವಿದ್ಯಾರ್ಥಿಗಳ ಮೇಲೆ ಬಿದ್ದ ಶಾಲಾ ಕೊಠಡಿ ಸ್ಲಾಬ್, ಐವರು ವಿದ್ಯಾರ್ಥಿಗಳಿಗೆ ಗಾಯ

ಅಂಕೋಲಾ: ನಿರ್ಮಲಾ ಕಾನ್ವೆಂಟ್ ಶಾಲೆಯ ತರಗತಿ ಕೊಠಡಿಯಲ್ಲಿ ವಿದ್ಯಾರ್ಥಿಗಳು ಕುಳಿತಿದ್ದ ವೇಳೆ ಸ್ಲಾಬ್ ನ ಸಿಮೆಂಟ್ ಕುಸಿದು ಮಕ್ಕಳು ಗಾಯಗೊಂಡ ಘಟನೆ ಅಂಕೋಲಾದಲ್ಲಿ ನಡೆದಿದೆ‌. ಗಾಯಗೊಂಡ ಮಕ್ಕಳನ್ನು ತಾಲೂಕಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ನಾಲ್ಕನೇ ತರಗತಿಯ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಮಕ್ಕಳ ಊಟದ ಸಮಯದಲ್ಲಿ ಸ್ಲಾಬ್ ನಿಂದ ಸಿಮೆಂಟ್ ತುಂಡುಗಳು ಒಂದೇ ಸಮನೆ ಕುಸಿದು, ಅಡಿಯಲ್ಲಿ ಕುಳಿತಿದ್ದ ಮಕ್ಕಳ ಮೈಮೇಲೆ ಬಿದ್ದಿವೆ. ಹೀಗಾಗಿ, ನಾಲ್ಕನೇ ತರಗತಿಯ ಮಕ್ಕಳಿಗೆ ಗಾಯವಾಗಿದೆ. ಅಲ್ಲದೇ ಮಕ್ಕಳು ಗಾಬರಿಗೊಂಡಿವೆ. ಘಟನಾ ಸ್ಥಳಕ್ಕೆ ಶಿಕ್ಷಣ...

Post
ಹಡಪದ ಅಪ್ಪಣ್ಣ ಸಮಾಜದ ನೂತನ  ರಾಜ್ಯಾಧ್ಯಕ್ಷರಾಗಿ ಸಿದ್ದಪ್ಪ ಹಡಪದ ಪದಗ್ರಹಣ..!

ಹಡಪದ ಅಪ್ಪಣ್ಣ ಸಮಾಜದ ನೂತನ ರಾಜ್ಯಾಧ್ಯಕ್ಷರಾಗಿ ಸಿದ್ದಪ್ಪ ಹಡಪದ ಪದಗ್ರಹಣ..!

ಹಾವೇರಿ: ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ(ರಿ) ಬೆಂಗಳೂರು, ಇದರ ಮೂರು ವರ್ಷದ ಅವಧಿಗಾಗಿ ಸಿದ್ದಪ್ಪ ಹಡಪದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ಸಿದ್ದಪ್ಪ ಹಡಪದ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ್ದ ಯುವ ನಾಯಕರಾಗಿದ್ದಾರೆ. ಹೀಗಾಗಿ, ಹಾವೇರಿಯ ಗುರುಭವನದಲ್ಲಿ ಇಂದು ನಡೆದ ಚಿನಾವಣೆಯಲ್ಲಿ ಈ ನೂತನ ಅಧ್ಯಕ್ಷರು ಹಾಗೂ ಇನ್ನುಳಿದ ಪದಾಧಿಕಾರಿಗಳ ಆಯ್ಕೆಯಾಗಿದೆ. ಇನ್ನುಳಿದಂತೆ, ರಾಜ್ಯ ಉಪಾಧ್ಯಕ್ಷರಾಗಿ ಬೆಳಗಾವಿ ಜಿಲ್ಲೆ ಬೈಲಹೊಂಗಲದ, ಸಂತೋಷ ಹಡಪದ. ಪ್ರಧಾನ ಕಾರ್ಯದರ್ಶಿಯಾಗಿ ಬೆಂಗಳೂರು ಬಸರಕೋಡದ, ಚಿದಾನಂದ...

Post
ವಡಗಟ್ಟಾ ಚೆಕ್ ಪೊಸ್ಟ್ ನಲ್ಲಿ ಎತ್ತುವಳಿ ದಂಧೆ..? ಅರಣ್ಯ ಸಿಬ್ಬಂದಿಗಳೇ ಇಲ್ಲಿ ದಂಧೆಗೆ ಇಳಿದು ಬಿಟ್ರಾ..?

ವಡಗಟ್ಟಾ ಚೆಕ್ ಪೊಸ್ಟ್ ನಲ್ಲಿ ಎತ್ತುವಳಿ ದಂಧೆ..? ಅರಣ್ಯ ಸಿಬ್ಬಂದಿಗಳೇ ಇಲ್ಲಿ ದಂಧೆಗೆ ಇಳಿದು ಬಿಟ್ರಾ..?

ಮುಂಡಗೋಡ: ತಾಲೂಕಿನ ಗಡಿಭಾಗದ ವಡಗಟ್ಟಾ ಚೆಕ್ ಪೊಸ್ಟ್ ಅಂದ್ರೆ ಅರಣ್ಯ ಉತ್ಪನ್ನ ತನಿಖಾ ಠಾಣೆ ಅನ್ನೋದು ನಾಮಕೆವಾಸ್ತೆ ಅನ್ನುವಂತಾಗಿದೆ. ಉತ್ತರ ಕನ್ನಡದ ಅದ್ರಲ್ಲೂ ಮುಂಡಗೋಡ ತಾಲೂಕಿನ ಅಮೂಲ್ಯ ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಪ್ರತಿಷ್ಟಾಪಿಸಲ್ಪಟ್ಟಿರೋ ವಡಗಟ್ಟಾ ಅರಣ್ಯ ಉತ್ಪನ್ನಗಳ ತನಿಖಾ ಠಾಣೆ ಚೆಕ್ ಪೊಸ್ಟ್ ನಲ್ಲಿ ಕೆಲವು ಅರಣ್ಯ ಇಲಾಖೆ ಸಿಬ್ಬಂದಿಗಳೇ ಎತ್ತುವಳಿಗೆ ನಿಂತಿದ್ದಾರಾ..? ಈ ದೃಷ್ಯ ನೋಡಿದ್ರೆ ಹಾಗೆ ಅನ್ನಿಸತ್ತೆ. ದೃಷ್ಯ ನಂಬರ್ 1. ದಂಧೆ ಮಾಡಿಕೊಂಡ್ರಾ..? ಇದು ವಡಗಟ್ಟಾ ಅರಣ್ಯ ಚೆಕ್‌ಪೋಸ್ಟ್ ನಲ್ಲಿ ನಿತ್ಯವೂ ನಡೆಯುವ...

Post
ವಾಯುಭಾರ ಕುಸಿತ, ರಾಜ್ಯದಲ್ಲಿ ಮತ್ತೆ ಮಳೆಯ ಸಂಭವ..!

ವಾಯುಭಾರ ಕುಸಿತ, ರಾಜ್ಯದಲ್ಲಿ ಮತ್ತೆ ಮಳೆಯ ಸಂಭವ..!

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರೋ ಭಾರೀ ವಾಯುಭಾರ ಕುಸಿತದ ಕಾರಣ, ಮತ್ತೆ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ವಾಯುಭಾರ ಕುಸಿತದ ಕಾರಣ ಒಳನಾಡು ಮತ್ತು ಕರಾವಳಿಯ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಅಂತಾ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮಾರ್ಚ್ 7ರಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯಾಗುವ ಸಂಭವ ಇದೆ. ಮಾರ್ಚ್ 7ರಂದು ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮತ್ತು ಪಶ್ಚಿಮ ಘಟ್ಟದ ತಪ್ಪಲಿನ ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ....

Post
ಟಿಬೇಟಿಗರ ಲೋಸಾರ್ ಸಂಭ್ರಮಕ್ಕೆ ಬಗೆ ಬಗೆಯ ಖಾದ್ಯ..!

ಟಿಬೇಟಿಗರ ಲೋಸಾರ್ ಸಂಭ್ರಮಕ್ಕೆ ಬಗೆ ಬಗೆಯ ಖಾದ್ಯ..!

ಟಿಬೇಟಿಗರ ಲೋಸಾರ್ ಸಂಭ್ರಮಕ್ಕೆ ಬಗೆ ಬಗೆಯ ಖಾದ್ಯ..! ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಲೋಸಾರ್ ಸಂಭ್ರಮ ಜೋರಾಗಿದೆ. ಇಡೀ ಟಿಬೇಟಿಯನ್ ಕಾಲೋನಿಗಳಲ್ಲಿ ಈಗ ಲೋಸಾರ್ ಹಿನ್ನೆಲೆ ಬಗೆ ಬಗೆಯ ತಿಂಡಿ ತಿನಿಸುಗಳದ್ದೇ ಹಬ್ಬ. ಅದ್ರಲ್ಲೂ ಟಿಬೇಟಿಯನ್ ಬೌದ್ದ ಸನ್ಯಾಸಿಗಳು ಸಾಮೂಹಿಕವಾಗಿ ಮಾಡುವ ವಿವಿಧ ಖಾದ್ಯಗಳ ಘಮ ಘಮ ಇಡೀ ಕಾಲೋನಿಗಳಲ್ಲಿ ಪಸರಿಸಿದೆ‌. ಸಾಮೂಹಿಕವಾಗಿ ಬಗೆ ಬಗೆಯ ತಿನಿಸುಗಳನ್ನು ತಯಾರಿಸೋ ಸನ್ಯಾಸಿಗಳು ಸಂಭ್ರಮಿಸುತ್ತಾರೆ. ಬಗೆ ಬಗೆ ಖಾದ್ಯಗಳನ್ನು ತಯಾರಿಸಲು ಜೊತೆ ಜೊತೆಯಾಗೇ ಸಾಂಘಿಕವಾಗಿ ಸೇರುವ ಸನ್ಯಾಸಿಗಳು ಖುಶಿಯಿಂದಲೇ ಬಂದು...

Post
ಟಿಬೇಟಿಯನ್ನರ ಲೋಸಾರ್ ಸಂಭ್ರಮದಲ್ಲಿ ಆಟಗಳ ಮೆರಗು.!

ಟಿಬೇಟಿಯನ್ನರ ಲೋಸಾರ್ ಸಂಭ್ರಮದಲ್ಲಿ ಆಟಗಳ ಮೆರಗು.!

ಟಿಬೇಟಿಯನ್ನರ ಲೋಸಾರ್ ಸಂಭ್ರಮದಲ್ಲಿ ಆಟಗಳ ಮೆರಗು.! ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಈಗ ಸಂಭ್ರಮದ ವಾತಾವರಣ ಮನೆ ಮಾಡಿದೆ. ಲೋಸಾರ್ ಹಬ್ಬದ ಸಂಭ್ರಮದಲ್ಲಿ ಕ್ಯಾಂಪ್ ನಂಬರ್ 3 ರ ಮೈದಾನದಲ್ಲಿ ವಿಶೇಷ ಸ್ಪರ್ಧೆಗಳನ್ನ ಆಯೋಜನೆ ಮಾಡಲಾಗಿತ್ತು. ಟಿಬೇಟಿಯನ್ನರ ತಂಡಗಳ ನಡುವೆ ವಿವಿಧ ಸ್ಪರ್ಧೆಗಳು ಏರ್ಪಟ್ಟವು.. ಇಂದು ಟಿಬೇಟಿಯನ್ ಮಹಿಳೆಯರಿಗೆಂದೇ ವಿಶೇಷ ಹಗ್ಗ ಜಗ್ಗಾಟದ ಸ್ಪರ್ದೆ ನಿಜಕ್ಕೂ ರೋಮಾಂಚಕ ಅನುಭವ ನೀಡಿತು.. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರು ಹಗ್ಗಜಗ್ಗಾಟದ ರಣರೋಚಕ ಸ್ಪರ್ಧೆಯನ್ನ ನೋಡಿ ಸಂಭ್ರಮಿಸಿದ್ರು. ಗೆದ್ದ ತಂಡಗಳಿಗೆ ಆಕರ್ಶಕ...

Post
ಹುಲಿಹೊಂಡದಲ್ಲಿ ಆಕಸ್ಮಿಕ ಬೆಂಕಿಗೆ ಕಬ್ಬು ಭಸ್ಮ..!

ಹುಲಿಹೊಂಡದಲ್ಲಿ ಆಕಸ್ಮಿಕ ಬೆಂಕಿಗೆ ಕಬ್ಬು ಭಸ್ಮ..!

ಹುಲಿಹೊಂಡದಲ್ಲಿ ಆಕಸ್ಮಿಕ ಬೆಂಕಿಗೆ ಕಬ್ಬು ಭಸ್ಮ..! ಮುಂಡಗೋಡ: ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಕಬ್ಬು ಸುಟ್ಟು ಕರಕಲಾದ ಘಟನೆ ನಡೆದಿದೆ. ಆಕಸ್ಮಿವಾಗಿ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆ ಪಕ್ಕದ ಗದ್ದೆಗೂ ಹರಡುವ ಸಾಧ್ಯತೆ ಇದ್ದ ಕಾರಣಕ್ಕೆ ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸ ಪಟ್ಟರು, ನಂತರ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಿದ್ರು‌. ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ಕಬ್ಬು ಸುಟ್ಟು ಕರಕಲಾಗಿದ್ದು ರೈತನ ಬದುಕು ಮೂರಾಬಟ್ಟೆಯಾಗಿದೆ‌ ಹೀಗಾಗಿ ರೈತನಿಗೆ ಪರಿಹಾರ...

Post
108 ಅಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ..!

108 ಅಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ..!

108 ಅಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ..! ಮುಂಡಗೋಡ : ತಾಲೂಕಿನ ಇಂದೂರಿನ ಗ್ರಾಮದ ಗರ್ಭಿಣಿಯೊಬ್ಬಳಿಗೆ 108 ಆಂಬ್ಯುಲೆನ್ಸನಲ್ಲಿ ಹೆರಿಗೆಯಾದ ಘಟನೆ ನಡೆದಿದೆ. 19 ವರ್ಷ ವಯಸ್ಸಿನ ದಾವಲಬಿ ಮಾಬೂಷಾ ಹನಕನಹಳ್ಳಿ ಎಂಬುವ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮುಂಡಗೋಡ ತಾಲೂಕಾ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದ ಗರ್ಭಿಣಿಗೆ ಮೊದಲ ಹೆರಿಗೆ ಆಗಿರೋ ಕಾರಣಕ್ಕೆ ಹುಬ್ಬಳ್ಳಿಯ ಕಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಲಾಗಿತ್ತು. ಆಂಬ್ಯುಲೆನ್ಸನಲ್ಲಿ ಕರೆ ತರುತ್ತಿರುವಾಗ ವರೂರು ಬಳಿ ಮಹಿಳೆಗೆ ಹೆರಿಗೆ ನೋವು...

Post
ಹಳ್ಳಿ ಹಳ್ಳಿಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟ, ಕಾತೂರಿನಲ್ಲಿ ಸಿಡಿದೆದ್ದ ಮಹಿಳೆಯರು, ಅಬಕಾರಿಗಳೇ ಎಲ್ಲಿದ್ದಿರಿ..?

ಹಳ್ಳಿ ಹಳ್ಳಿಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟ, ಕಾತೂರಿನಲ್ಲಿ ಸಿಡಿದೆದ್ದ ಮಹಿಳೆಯರು, ಅಬಕಾರಿಗಳೇ ಎಲ್ಲಿದ್ದಿರಿ..?

ಮುಂಡಗೋಡ: ತಾಲೂಕಿನ ಕಾತೂರಿನಲ್ಲಿ ಮಹಿಳೆಯರು ಸಿಡಿದೆದ್ದಿದ್ದಾರೆ. ತಾಲೂಕಿನಲ್ಲಿ ಅಕ್ರಮವಾಗಿ ಹಳ್ಳಿ ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರೋ ದಂಧೆಗೆ ಕಡಿವಾಣ ಹಾಕಿ ನಮ್ಮನ್ನ ರಕ್ಷಿಸಿ ಅಂತಾ ಅಧಿಕಾರಿಗಳಿಗೆ, ಸರ್ಕಾರಕ್ಕೆ ಹಿಡಿಶಾಪ ಹಾಕ್ತಿದಾರೆ‌. ಕಿರಾಣಿ ಅಂಗಡಿಯಲ್ಲೂ ಮದ್ಯ..? ನಿಜ, ಮುಂಡಗೋಡ ತಾಲೂಕಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಅದೇಷ್ಟರ ಮಟ್ಟಿಗೆ ತನ್ನ ಕಬಂದಬಾಹು ಚಾಚಿಕೊಂಡಿದೆ ಅಂದ್ರೆ, ತಾಲೂಕಿನ ಹಳ್ಳಿಗಳಲ್ಲಿ ಕಿರಾಣಿ ಅಂಗಡಿಗಳಲ್ಲೂ ಮದ್ಯ ಸಿಗತ್ತೆ. ಅಧಿಕೃತವಾಗಿ ಮಾರಾಟ ಮಾಡೋ ಕೆಲವೇ ಕೆಲವು ಅಂಗಡಿಗಳು ತಮ್ಮ ವೈನ್ ಶಾಪ್ ಗಳಲ್ಲಿ ಕುಳಿತು ಅಧಿಕೃತವಾಗಿ...

Post
ಇಂದೂರಿನಲ್ಲಿ ಆಕಸ್ಮಿಕ ಬೆಂಕಿಗೆ ಭಸ್ಮವಾದ ಮೇವಿನ ಬಣಿವೆಗಳು..!

ಇಂದೂರಿನಲ್ಲಿ ಆಕಸ್ಮಿಕ ಬೆಂಕಿಗೆ ಭಸ್ಮವಾದ ಮೇವಿನ ಬಣಿವೆಗಳು..!

ಮುಂಡಗೋಡ: ತಾಲೂಕಿನ ಇಂದೂರು ಗ್ರಾಮದ ಪ್ರೌಢಶಾಲೆಯ ಬಳಿ ಮೇವಿನ ಬಣಿವೆಗೆ ಬೆಂಕಿ ತಗುಲಿದೆ. ಮದ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ. ಬೆಂಕಿ ತಗುಲಿದ ತಕ್ಷಣವೇ ಬೆಂಕಿ ನಂದಿಸಲು ಗ್ರಾಮಸ್ಥರು ಹರಸಾಹಸ ಪಟ್ಟರು. ಇಂದೂರು ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ರಾಯ್ಕರ್ ರವರಿಗೆ ಸೇರಿದ ಮೇವಿನ ಬಣವಿ ಇದಾಗಿದ್ದು, ಜಾನುವಾರುಗಳ ಪಾಲನೆಯಲ್ಲಿ ತೊಡಗಿರುವ ನಿವೃತ್ತ ಶಿಕ್ಷಕರಿಗೆ ಭಾರೀ ನಷ್ಟವಾಗಿದೆ. ಮದ್ಯಾಹ್ನದ ಸಮಯದಲ್ಲಿ ಬೆಂಕಿಯು ಕೆನ್ನಾಲಿಗೆ ಚಾಚಿದ್ದು, ಅಕ್ಕಪಕ್ಕದ ಮನೆಗಳಿಗೂ ಹರಡುವ ಸಾಧ್ಯತೆ ಇತ್ತು, ಆದ್ರೆ ಅದೃಷ್ಟವಶಾತ್ ಬೆಂಕಿ ಹತೋಟಿಗೆ...

error: Content is protected !!