Home uttara kannada news

Tag: uttara kannada news

Post
ಅಗಡಿಯಲ್ಲಿ ವಿದ್ಯುತ್ ತಂತಿ ತುಳಿದು ಬಾಲಕ ದಾರುಣ ಸಾವು, ಅದೃಷ್ಟವಶಾತ್ ಬಚಾವಾದ ಮತ್ತೋರ್ವ ಬಾಲಕ..!

ಅಗಡಿಯಲ್ಲಿ ವಿದ್ಯುತ್ ತಂತಿ ತುಳಿದು ಬಾಲಕ ದಾರುಣ ಸಾವು, ಅದೃಷ್ಟವಶಾತ್ ಬಚಾವಾದ ಮತ್ತೋರ್ವ ಬಾಲಕ..!

ಮುಂಡಗೋಡ: ತಾಲೂಕಿನ ಅಗಡಿಯಲ್ಲಿ ಭಾರೀ ಮನಕಲುಕುವ ಘಟನೆ ನಡೆದಿದೆ. ಹರಿದು ಬಿದ್ದಿದ್ದ ವಿದ್ಯುತ್ ತಂತಿ ಹಿಡಿದ ಪರಿಣಾಮ 13 ವರ್ಷದ ಬಾಲಕನೋರ್ವ ಸ್ಥಳದಲ್ಲೇ‌ ಮೃತಪಟ್ಟಿದ್ದಾನೆ. ಮತ್ತೊರ್ವ ಸಹೋದರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಷ್ಪಕ್ ಮೊಹ್ಮದ್ ಷರೀಪ್ ಚಪಾತಿ (13) ಎಂಬ ಬಾಲಕನೇ ಸಾವನ್ನಪ್ಪಿದ ದುರ್ದೈವಿಯಾಗಿದ್ದಾ‌ನೆ. ಬೇಲಿಯ ಮೇಲೆ ವಿದ್ಯುತ್ ಲೈನ್ ಹರಿದು ಬಿದ್ದಿದೆ. ಇದೇ ವೇಳೆ ಅಷ್ಪಕ್ ಹಾಗೂ ಆತನ ಮತ್ತೊರ್ವ ಸಹೋದರ ಮಹ್ಮದ್ ಜಾಫರ್ ಚಪಾತಿ ಎನ್ನುವ ಬಾಲಕ ಅದೇ‌ ಮಾರ್ಗವಾಗಿ ಮನೆಗೆ ತೆರಳುತ್ತಿದ್ದಾಗ ಬಾಲಕ...

Post
ಸನವಳ್ಳಿಯಲ್ಲಿ ಗದ್ದೆಯ ಬೇಲಿಗೆ ಕೊಂಬು ಸಿಲುಕಿಸಿಕೊಂಡು ಅಪಾಯದಲ್ಲಿದ್ದ ಜಿಂಕೆಯ ರಕ್ಷಣೆ..!

ಸನವಳ್ಳಿಯಲ್ಲಿ ಗದ್ದೆಯ ಬೇಲಿಗೆ ಕೊಂಬು ಸಿಲುಕಿಸಿಕೊಂಡು ಅಪಾಯದಲ್ಲಿದ್ದ ಜಿಂಕೆಯ ರಕ್ಷಣೆ..!

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಗದ್ದೆಯಲ್ಲಿ ಬೇಲಿಗೆ ಸಿಲುಕಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಗಂಡು ಜಿಂಕೆಯನ್ನು ರಕ್ಷಣೆ ಮಾಡಲಾಗಿದೆ. ಸನವಳ್ಳಿ ಗ್ರಾಮದ ರೈತ ಕೃಷ್ಣಪ್ಪ ಎಲಿವಾಳ ಎಂಬುವವರ ಜಮೀನಿನ‌ ಬೇಲಿಗೆ ಜಿಂಕೆ ತನ್ನ ಕೊಂಬು ಸಿಲುಕಿಸಿಕೊಂಡು ಜೀವ ಕಳೆದುಕೊಳ್ಳುವ ಅಪಾಯದಲ್ಲಿತ್ತು. ಹೀಗಾಗಿ, ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅರಣ್ಯ ರಕ್ಷಕ ಶ್ರೀಧರ್ ಭಜಂತ್ರಿ ಸ್ಥಳಕ್ಕೆ ಆಗಮಿಸಿ ಅಪಾಯದಲ್ಲಿದ್ದ ಗಂಡು ಜಿಂಕೆಯ ರಕ್ಷಣೆ ಮಾಡಿದ್ದಾರೆ. ಬೇಲಿಯಿಂದ ಕೊಂಬು ಬಿಡಿಸಿದ ತಕ್ಷಣವೇ ಬದುಕಿದೆಯಾ ಬಡಜೀವ ಅಂತಾ ಜಿಂಕೆ ಅಲ್ಲಿಂದ...

Post
ಮುಂಡಗೋಡ ತಹಶೀಲ್ದಾರ್ ವಿರುದ್ಧ ದಲಿತರ ಅನಿರ್ಧಿಷ್ಟ ಧರಣಿ, ಸಾಹೇಬ್ರೇ ಇನ್ನೂ ಎಷ್ಟು ದಿನ..?

ಮುಂಡಗೋಡ ತಹಶೀಲ್ದಾರ್ ವಿರುದ್ಧ ದಲಿತರ ಅನಿರ್ಧಿಷ್ಟ ಧರಣಿ, ಸಾಹೇಬ್ರೇ ಇನ್ನೂ ಎಷ್ಟು ದಿನ..?

ನಿಜ, ಮುಂಡಗೋಡಿನ ಇತಿಹಾಸದಲ್ಲೇ ಇದು ಬಹುದೊಡ್ಡ ನಾಚಿಗ್ಗೇಡಿನ ಸಂಗತಿ ಅಂದ್ರೂ ತಪ್ಪಿಲ್ಲ ಅನಿಸತ್ತೆ. ತಾಲೂಕಿನ ದಂಡಾಧಿಕಾರಿಯೊಬ್ಬರ ವಿರುದ್ಧ ಈ ಪರಿಯ ಹೋರಾಟ ಬಹುಶಃ ಹಿಂದೆ ಎಂದೂ ನಡೆದಿರಲಿಲ್ಲವೆನೋ..? ಇಷ್ಟಾದ್ರೂ ಆ ಅಧಿಕಾರಿಯನ್ನ ಬಚಾವ್ ಮಾಡುವಲ್ಲಿ ತೆರೆ‌ಮರೆಯ ಕಸರತ್ತು ನಡೆಸ್ತಿರೋ “ದೊಡ್ಡ”ವರಿಗೆ ಏನೂ ಅನಿಸ್ತಾನೇ ಇಲ್ವಾ..? ಅದೂ ಹೋಗಲಿ, ತಮ್ಮ ಮೇಲೆ ಅಂತಹದ್ದೊಂದು ಭಯಂಕರ ಆರೋಪ ಬಂದು, ಪೊಲೀಸ್ ಠಾಣೆಯ ಮೆಟ್ಟಿಲೇರಿ ಜಗಜ್ಜಾಹೀರಾದಾಗಲೂ ಆ ಅಧಿಕಾರಿಗೆ ಮುಂಡಗೋಡಿಗರ ತಾಳ್ಮೆ ಅರ್ಥ ಆಗ್ತಿಲ್ವಾ..? ಇದು ಬಹುತೇಕ‌ ಮುಂಡಗೋಡಿನ ಪ್ರಜ್ಞಾವಂತರ ಪ್ರಶ್ನೆ..!...

Post
ಹನುಮಾಪುರದಲ್ಲಿ ಜಲಮಿಷನ್ ಕಾಮಗಾರಿ ಪೈಪು ಮೈಮೇಲೆ ಬಿದ್ದು ಕಾರ್ಮಿಕನ ದಾರುಣ ಸಾವು..!

ಹನುಮಾಪುರದಲ್ಲಿ ಜಲಮಿಷನ್ ಕಾಮಗಾರಿ ಪೈಪು ಮೈಮೇಲೆ ಬಿದ್ದು ಕಾರ್ಮಿಕನ ದಾರುಣ ಸಾವು..!

ಮುಂಡಗೋಡ: ತಾಲೂಕಿನ ಹನುಮಾಪುರದ ಬಳಿ ಭಾರೀ ದುರಂತವೊಂದು ಸಂಭವಿಸಿದೆ‌. ಜಲಮಿಷನ್ ಯೋಜನೆಯ ಕಾಮಗಾರಿ ವೇಳೆ ಬೃಹತ್ ಪೈಪು ಮೈಮೇಲೆ ಬಿದ್ದು ಬಿಹಾರ ಮೂಲದ ಕಾರ್ಮಿಕ ಮೃತಪಟ್ಟಿದ್ದಾನೆ. ಮೂಲತಃ ಬಿಹಾರದವನಾದ ರಾಜು ಯಾದವ್ (35) ಮೃತಪಟ್ಟ ದುರ್ಧೈವಿಯಾಗಿದ್ದು, ಇಂದು ಕಾರ್ಯನಿರ್ವಹಿಸುವ ವೇಳೆ ಆಕಸ್ಮಿಕವಾಗಿ ಬೃಹತ್ ಪೈಪ್ ಆಯತಪ್ಪಿ ಕಾರ್ಮಿಕನ ಮೈಮೇಲೆ ಬಿದ್ದಿದೆ. ಹೀಗಾಗಿ, ಕಾರ್ಮಿಕನ ದೇಹ ಚಿದ್ರಗೊಂಡಿದೆ. ಸದ್ಯ ಮುಂಡಗೋಡ ಪಿಎಸ್ ಐ ಬಸವರಾಜ್ ಮಬನೂರು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಮುಂದಿನ ಕ್ರಮ ಕೈಗೊಂಡಿದ್ದಾರೆ.

Post
ಮುಂಡಗೋಡ ತಾಲೂಕಿ‌ನ ಹಲವೆಡೆ ಆಲಿಕಲ್ಲು, ಗಾಳಿ ಸಮೇತ ಭಾರೀ ಮಳೆ..!

ಮುಂಡಗೋಡ ತಾಲೂಕಿ‌ನ ಹಲವೆಡೆ ಆಲಿಕಲ್ಲು, ಗಾಳಿ ಸಮೇತ ಭಾರೀ ಮಳೆ..!

ಮುಂಡಗೋಡ: ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ಮುಂಡಗೋಡ ಪಟ್ಟಣ ಸೇರಿದಂತೆ ಹಲವು ಕಡೆ ಗಾಳಿ, ಗುಡುಗು, ಮಿಂಚು ಆಲಿಕಲ್ಲು ಸಹಿತ ಭರ್ಜರಿ ಮಳೆಯಾಗಿದೆ. ಸುಮಾರು ಒಂದು ತಾಸಿಗೂ ಹೆಚ್ಚು ಸುರಿದ ಮಳೆಯ ಕಾರಣಕ್ಕೆ ಬಿಸಿಲ ಬೇಗೆಯಿಂದ ಬಸವಳಿದಿದ್ದ ತಾಲೂಕಿನ ಮಂದಿಗೆ ಮಳೆರಾಯ ಮತ್ತೆ ತಂಪೆರೆದಿದ್ದಾನೆ. ಮಳೆಯ ದೃಷ್ಯ ಕ್ಯಾಮೆರಾ ಕಣ್ಣಲ್ಲಿ.. ಅಲಿಕಲ್ಲು ಮಳೆ..! ಅಂದಹಾಗೆ, ಭರ್ಜರಿ ಮಳೆಗೂ ಮೊದಲು ಭಾರೀ ಗಾಳಿ ಬೀಸಿದೆ. ನಂತರ ಧಾರಾಕಾರ ಆಲಿಕಲ್ಲು ಬಿದ್ದಿವೆ. ಪರಿಣಾಮ ತಾಲೂಕಿನ ಮಾವು ಬೆಳೆಗಾರರಿಗೆ ತೀವ್ರ ಸಂಕಷ್ಟ ಎದುರಾದಂತೆ...

Post
ಕಾತೂರು ಬಳಿ ಉರುಳಿಗೆ ಸಿಕ್ಕು ಒದ್ದಾಡುತ್ತಿದ್ದ ಕರಡಿ, ಜೀವದ ಹಂಗು ತೊರೆದು ರಕ್ಷಿಸಿದ ಅರಣ್ಯ ಸಿಬ್ಬಂದಿ..!

ಕಾತೂರು ಬಳಿ ಉರುಳಿಗೆ ಸಿಕ್ಕು ಒದ್ದಾಡುತ್ತಿದ್ದ ಕರಡಿ, ಜೀವದ ಹಂಗು ತೊರೆದು ರಕ್ಷಿಸಿದ ಅರಣ್ಯ ಸಿಬ್ಬಂದಿ..!

ಮುಂಡಗೋಡ: ತಾಲೂಕಿನ ಕಾತೂರ ವಲಯದ, ಪಾಳಾ ಶಾಖೆಯ ಒರಲಗಿ ಕಾಡಿನಲ್ಲಿ ಉರುಳಿಗೆ ಸಿಕ್ಕು ಬಿದ್ದಿದ್ದ ಕರಡಿಯನ್ನು ಅರಣ್ಯ ಸಿಬ್ಬಂದಿಗಳು ಜೀವದ ಹಂಗು ತೊರೆದು ರಕ್ಷಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ. ಉರುಳಿಗೆ ಸಿಕ್ಕು ಪ್ರಾಣ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದ ಕರಡಿಯನ್ನು, ಒರಲಗಿ ಅರಣ್ಯದಲ್ಲಿ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗಳು ನೋಡಿದ್ದಾರೆ. ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ‌. ಹೀಗಾಗಿ, ಪಶುವೈದ್ಯ ಜಯಚಂದ್ರ ಹಾಗೂ ಅರಣ್ಯ ರಕ್ಷಕ ಶ್ರೀಧರ ಭಜoತ್ರಿ ಅವರನ್ನು ಕರೆಸಿ, ಕರಡಿಗೆ ಅರಿವಳಿಕೆ ಮದ್ದು ನೀಡಿ ಕರಡಿಯನ್ನು ಬಚಾವ್ ಮಾಡಲಾಗಿದೆ‌....

Post
ಕಾತೂರು, ಹಿರೇಹಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ ನುಜ್ಜುಗುಜ್ಜು, ಚಾಲಕನಿಗೆ ಗಂಭೀರ ಗಾಯ..!

ಕಾತೂರು, ಹಿರೇಹಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ ನುಜ್ಜುಗುಜ್ಜು, ಚಾಲಕನಿಗೆ ಗಂಭೀರ ಗಾಯ..!

ಮುಂಡಗೋಡ ತಾಲೂಕಿನ ಕಾತೂರು ಹಾಗೂ ಹಿರೇಹಳ್ಳಿ ಮದ್ಯದ ಬ್ರಿಡ್ಜ್ ಬಳಿ ಪೈಪು ತುಂಬಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರೀ ಚಾಲಕನಿಗೆ ಗಂಭೀರ ಗಾಯವಾಗಿದ್ದು ತಾಲುಕಾಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಹೊರಟಿದ್ದ ಪೈಪು ತುಂಬಿದ ಲಾರಿ ನಿಯಂತ್ರಣ ತಪ್ಪಿದೆ. ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಲಾರಿ ನುಜ್ಜು ಗುಜ್ಜಾಗಿದೆ. ಅಲ್ದೇ ರಸ್ತೆಯ ಪಕ್ಕದಲ್ಲಿದ್ದ ಮರಕ್ಕೂ ಡಿಕ್ಕಿಯಾಗಿ ಡಿಕ್ಕಿಯ ರಭಸಕ್ಕೆ ಮರ ತುಂಡಾಗಿದೆ. ಸಧ್ಯ ಚಾಲಕ...

Post
ತಹಶೀಲ್ದಾರ್ ಶ್ರೀಧರ್ ಮುಂದಲಮನಿ ವಿರುದ್ಧ ಸಿಡಿದೆದ್ದ ದಲಿತ ಸಂಘಟನೆಗಳು..! ಅಂದಹಾಗೆ, ಕಾರವಾರದಲ್ಲಿ ಏನಾಯ್ತು ಗೊತ್ತಾ..!

ತಹಶೀಲ್ದಾರ್ ಶ್ರೀಧರ್ ಮುಂದಲಮನಿ ವಿರುದ್ಧ ಸಿಡಿದೆದ್ದ ದಲಿತ ಸಂಘಟನೆಗಳು..! ಅಂದಹಾಗೆ, ಕಾರವಾರದಲ್ಲಿ ಏನಾಯ್ತು ಗೊತ್ತಾ..!

ಕಾರವಾರ: ನಕಲಿ ಜಾತಿ ಪ್ರಮಾಣಪತ್ರ ಪಡೆದು ಸರ್ಕಾರಿ ಹುದ್ದೆಯಲ್ಲಿರೋ ಆರೋಪ ಹೊತ್ತಿರೊ, ಮುಂಡಗೋಡ ತಹಶೀಲ್ದಾರ್ ಶ್ರೀಧರ ಮುಂದಲಮನಿ ವಿರುದ್ಧ ತನಿಖೆ ನಡೆಸಿ, ಆರೋಪದಿಂದ ಮುಕ್ತವಾಗುವವರೆಗೆ ಹುದ್ದೆಯಲ್ಲಿ ಮುಂದುವರಿಯದಂತೆ ಆದೇಶಿಸಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಚಿದಾನಂದ ಹರಿಜನ ಅವರು ಕಾರವಾರದ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಜಿಲ್ಲಾಡಳಿತದ ಮೂಲಕ ಪತ್ರ..! ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿರುವ ಅವರು, ಮುಂಡಗೋಡ ತಾಲೂಕು ತಹಶೀಲ್ದಾರ ಶ್ರೀಧರ್ ಮುಂದಲಮನಿಯವರು ನಕಲಿ...

Post
ಅಸ್ಪಷ್ಟವಾಯ್ತು ಅಗಡಿ ಮೈಲಾರಲಿಂಗ ಕಾರಣೀಕ..! ಅಷ್ಟಕ್ಕೂ ಏನದು..?

ಅಸ್ಪಷ್ಟವಾಯ್ತು ಅಗಡಿ ಮೈಲಾರಲಿಂಗ ಕಾರಣೀಕ..! ಅಷ್ಟಕ್ಕೂ ಏನದು..?

ಮುಂಡಗೋಡ: ತಾಲೂಕಿನ ಅಗಡಿ ಶ್ರೀ ಮೈಲಾರಲಿಂಗ ಸ್ವಾಮಿಯ ಎಂಟನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಕಾರಣೀಕ ಉತ್ಸವ ನಡೆಯಿತು‌. ಆದ್ರೆ ಈ ವರ್ಷದ ಕಾರಣೀಕ ಅಸ್ಪಷ್ಟವಾಗಿ ಕೇಳಿತು. ಕಾರಣೀಕದ ನುಡಿಗಳು ಯಾರಿಗೂ ಸ್ಪಷ್ಟವಾಗಿ ಕೇಳಲೇ ಇಲ್ಲದಿರುವುದು ಭಕ್ತರಿಗೆ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯ ತಂಪಾಯಿತಲೇ ಪರಾಕ್..? “ರಾಜ್ಯ ತಂಪಾಯಿತಲೇ ಪರಾಕ್” ಇದು ಅಗಡಿಯಲ್ಲಿ ಇಂದು ಅಸ್ಪಷ್ಟವಾಗಿ ಕೇಳಿ ಬಂದ ಕಾರಣೀಕ ನುಡಿ. ಒಂದುವೇಳೆ ಇದೇ ಮೈಲಾರಲಿಂಗ ಸ್ವಾಮಿಯ ಕಾರಣೀಕವಾಗಿದ್ದರೆ, ಪ್ರಸಕ್ತ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ, ಅಲ್ಲದೆ, ರಾಜ್ಯದಲ್ಲಿ ಶಾಂತಿ...

Post
ಮುಂಡಗೋಡ ತಾಲೂಕಾಡಳಿತ, ಅಧಿಕಾರಿಗಳ ವಿರುದ್ಧ ರಿಂಚನ್ ಲಾಮೊ ಭಾರೀ ಆಕ್ರೋಶ..!

ಮುಂಡಗೋಡ ತಾಲೂಕಾಡಳಿತ, ಅಧಿಕಾರಿಗಳ ವಿರುದ್ಧ ರಿಂಚನ್ ಲಾಮೊ ಭಾರೀ ಆಕ್ರೋಶ..!

ಮುಂಡಗೋಡ: ಟಿಬೇಟಿಯನ್ ಕಾಲೋನಿಗಳ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಪೂರೈಸುವಲ್ಲಿ ಇಲ್ಲಿನ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತಗಳು ಕಾಳಜಿ ತೋರಿಸಿಲ್ಲ ಅಂತಾ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ರಿಂಚನ್ ಲಾಮೊ ಅಸಮಾಧಾನ ಹೊರಹಾಕಿದ್ದಾರೆ.. ಮೂರು ದಿನಗಳ‌ ಕಾಲ ಮುಂಡಗೋಡ ಟಿಬೇಟಿಯನ್ ಕಾಲೋನಿಗಳ ಪ್ರವಾಸದಲ್ಲಿರೋ ರಿಂಚನ್ ಲಾಮೊ, ಟಿಬೇಟಿಯನ ಕ್ಯಾಂಪ್ ನಂಬರ್ 6 ರ ಸೈನ್ಸ್ ಭವನದಲ್ಲಿ ನಡೆದ, ಅಲ್ಪಸಂಖ್ಯಾತ ಧಾರ್ಮಿಕ ಮುಖಂಡರ ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ರು‌. ಬೌದ್ಧ ಸನ್ಯಾಸಿಗಳು ಅಹಿಂಸಾವಾದಿಗಳು, ಯಾರ ಹತ್ತಿರವೂ ನಿರ್ಭಿಡೆಯಿಂದ ಮಾತನಾಡುವವರಲ್ಲ. ಇವ್ರಿಗೆ ಸಿಗಬೇಕಿದ್ದ...

error: Content is protected !!