Home uttara kannada news

Tag: uttara kannada news

Post
ಇಂದು ಮತ್ತೆ ಭಾರೀ ಮಳೆಯಾಗುವ ಸಂಭವ, ಎಲ್ಲೇಲ್ಲಿ ಮಳೆಯಾಗತ್ತೆ ಗೊತ್ತಾ..?

ಇಂದು ಮತ್ತೆ ಭಾರೀ ಮಳೆಯಾಗುವ ಸಂಭವ, ಎಲ್ಲೇಲ್ಲಿ ಮಳೆಯಾಗತ್ತೆ ಗೊತ್ತಾ..?

ಬೆಂಗಳೂರು: ತಮಿಳುನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಇ‌‌ದು ರಾಜ್ಯದಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಸೇರಿ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇದ್ರಂತೆ ದಾವಣಗೇರೆಯಲ್ಲಿ ಹೆಚ್ಚು ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ. ಕೊಡಗು,ಹಾಸನ, ಚಿಕ್ಕಮಗಳೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಅಂತಾ ಮುನ್ಸೂಚನೆ ನೀಡಲಾಗಿದೆ.

Post
ಮುಂಡಗೋಡಿನ ಮೈನಳ್ಳಿ ಬಳಿ ಮಾರುತಿ ಇಕೊ ವಾಹನ ಪಲ್ಟಿ, ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು..!

ಮುಂಡಗೋಡಿನ ಮೈನಳ್ಳಿ ಬಳಿ ಮಾರುತಿ ಇಕೊ ವಾಹನ ಪಲ್ಟಿ, ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು..!

ಮುಂಡಗೋಡ: ತಾಲೂಕಿನ ಯಲ್ಲಾಪುರ ರಸ್ತೆಯ ಮೈನಳ್ಳಿ ಹಾಗೂ ಗುಂಜಾವತಿ ನಡುವೆ ಅಪಘಾತವಾಗಿದೆ. ಮಾರುತಿ ಇಕೋ ಸ್ಕಿಡ್ ಆಗಿ ಬಿದ್ದ ಪರಿಣಾಮ ಮೂವರಿಗೆ ಗಾಯವಾಗಿದೆ. ದಾವಣಗೇರೆಯ ಪರಶುರಾಮ R ಆಲದಕಟ್ಟಿ (53), ಬಾಪೂಜಿ N ಕಾಳೆ (42), ಗುರುರಾಜ್ ಸಾಳಂಕಿ (35) ಗಾಯಗೊಂಡವರು. ದಾವಣಗೆರೆಯಿಂದ ಕಾರವಾರಗೆ ಮದುವೆಗೆಂದು ಹೋಗುತ್ತಿದ್ದ ದಾವಣಗೆರೆ ಮೂಲದ ಇಕೋ ವಾಹನ, ಗುಂಜಾವತಿ ಮೈನಳ್ಳಿ ಮದ್ಯೆ ಸ್ಕಿಡ್ ಆಗಿ ಅಪಘಾತವಾಗಿದೆ.‌ ಘಟನೆಯಲ್ಲಿ ಒಬ್ಬರ ಬಲಗಾಲಿಗೆ ಗಾಯವಾಗಿದೆ. ಒಬ್ಬರಿಗೆ ಬಲಗೈಗೆ ಗಾಯ ಆಗಿದೆ. ಇನ್ನೊಬ್ಬರಿಗೆ ಮೈಮೇಲೆ ಅಲ್ಲಲ್ಲಿ...

Post
ನಂದಿಕಟ್ಟಾದ ಈ ಆರೋಗ್ಯ ಕೇಂದ್ರದ “ನರ್ಸಮ್ಮ” ಬರೋದು ಲೇಟಾದ್ರೂ, ಹೋಗೋದು ಮಾತ್ರ ಫಸ್ಟೇ..!

ನಂದಿಕಟ್ಟಾದ ಈ ಆರೋಗ್ಯ ಕೇಂದ್ರದ “ನರ್ಸಮ್ಮ” ಬರೋದು ಲೇಟಾದ್ರೂ, ಹೋಗೋದು ಮಾತ್ರ ಫಸ್ಟೇ..!

ಮುಂಡಗೋಡ:ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಡಿ ಅನುಷ್ಟಾನಗೊಂಡಿರೋ “ಆರೋಗ್ಯ ಮತ್ತು ಕ್ಷೇಮ ಕೇಂದ್ರ” ಇದ್ದೂ ಇಲ್ಲದಂತಾಗಿದೆ. ಇಲ್ಲಿ ನೇಮಕಗೊಂಡಿರೋ ಸ್ಟಾಪ್ ನರ್ಸ್ ಮೇಡಂ ಈ ಆರೋಗ್ಯ ಕೇಂದ್ರದ ಆರೋಗ್ಯವನ್ನೇ ಹಾಳು ಮಾಡಿದ್ದಾರೆ ಅಂತಿದಾರೆ ಇಲ್ಲಿನ ಜನ. ಯಾಕಂದ್ರೆ, “ತಮಗಿಷ್ಟ ಬಂದಾಗ ಬರೋದು, ಬೇಕಾದಾಗ ಹೋಗೋದು” ಅನ್ನೋ ರೂಢಿ ಇಟ್ಕೊಂಡಿರೋ ನರ್ಸಮ್ಮ ಇಲ್ಲಿನ ಜನ್ರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬರೋದು ಮದ್ಯಾಹ್ನ..! ಅಂದಹಾಗೆ, ನಂದಿಕಟ್ಟಾ ಗ್ರಾಮಸ್ಥರ ಆರೋಗ್ಯ ಕಾಪಾಡಲು ಸ್ಥಾಪನೆಗೊಂಡಿರೋ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಓರ್ವ ಅಟೆಂಡರ್...

Post
ಸತತ ಮಳೆಯಿಂದ ಗೋವಿನಜೋಳ ಬೆಳೆದ ರೈತನ ಗೋಳು..!

ಸತತ ಮಳೆಯಿಂದ ಗೋವಿನಜೋಳ ಬೆಳೆದ ರೈತನ ಗೋಳು..!

ಮುಂಡಗೋಡ: ತಾಲೂಕಿನ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಬೇಸಿಗೆ ಹಂಗಾಮಿನಲ್ಲಿ ಬೆಳೆದ ಗೋವಿನಜೋಳ ಕಳೆದ ನಾಲ್ಕು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರೋ ಕಾರಣಕ್ಕೆ ಮೊಳಕೆಯೊಡೆದು ಸಂಪೂರ್ಣ ಹಾಳಾಗಿದೆ. ಲಕ್ಷಾಂತರ ಮೌಲ್ಯದ ಗೋವಿನ ಜೋಳದ ಬೆಳೆ ನೀರಲ್ಲಿ ಹಾಕಿದಂತಾಗಿದೆ. ಬಿಟ್ಟೂ ಬಿಡದೇ ಸುರಿಯುತ್ತಿರೋ ಮಳೆಯ ಕಾರಣಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.. ಹೀಗಾಗಿ ರಸ್ತೆ ಮೇಲೇಲ್ಲ ಗೊವಿನಜೋಳ ಹರಡಿಕೊಂಡು ಒಣಹಾಕಲು ಹರಸಾಹಸ ಪಡ್ತಿದಾನೆ ರೈತ. ಅಲ್ಲದೇ ಸ್ವಲ್ಪ ಹೊತ್ತು ಬಿಡುವು ಕೊಟ್ಟ ಮಳೆ ಮತ್ತೆ ಕೆಲವೇ ಹೊತ್ತಲ್ಲಿ ಸುರಿಯಲು...

Post
ಪಾಳಾ ಮಾವು ಬೆಳೆಗಾರರ ಮಾರುಕಟ್ಟೆಗೆ ನೂತನ ಐಡಿಯಾ..!

ಪಾಳಾ ಮಾವು ಬೆಳೆಗಾರರ ಮಾರುಕಟ್ಟೆಗೆ ನೂತನ ಐಡಿಯಾ..!

ಮುಂಡಗೋಡ: ತಾಲೂಕಿನ ಪಾಳಾದ ಆಪೂಸ್ ಮಾವಿನ ಹಣ್ಣು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಪಡೆದುಕೊಂಡಿದೆ‌. ಆದ್ರೆ ಪ್ರಸಕ್ತ ವರ್ಷದ ನಿರಂತರ ಮಳೆಯಿಂದ ಮಾವಿನ ಬೆಳೆಗಾರ ಸಂಕಷ್ಟದಲ್ಲಿದ್ದಾನೆ. ಮಾವಿಗೆ ಬೇಡಿಕೆ ಕಡಿಮೆಯಾಗಿದೆ. ಅಲ್ಲದೇ ಮಳೆಯಿಂದ ಮಾವು ಕೊಳೆತು ಹೋಗುತ್ತಿದೆ. ಹೀಗಾಗಿ ಇಲ್ಲಿನ ಮಾವು ಬೆಳೆಗಾರರು ಒಗ್ಗಟ್ಟಾಗಿ ಮಾವು ಬೆಳೆಗಾರರೇ ಖುದ್ದಾಗಿ ಸಂಘವೊಂದನ್ನ ಕಟ್ಟಿಕೊಂಡಿದ್ದಾರೆ. ಈ ಮೂಲಕ ತಾವು ಬೆಳೆದ ಮಾವುಗಳನ್ನು ಯಾವುದೇ ರಾಸಾಯನಿಕ ಬಳಸದೇ ಹಣ್ಣುಗಳನ್ನು ದಾಸ್ತಾನು ಮಾಡಿ, ಅದಕ್ಕಾಗೇ ರಕ್ಷಣಾ ವಿಧಾನಗಳನ್ನು ಅನುಸರಿಸಿ, ತಮ್ಮ ಮಾವುಗಳನ್ನು...

Post
ಸಾಲಗಾಂವಿಯಲ್ಲಿ ಮಹಾಮಳೆಗೆ ಕೊಚ್ಚಿ ಹೋಯ್ತು ಭತ್ತದ ಬಣಿವೆ..!

ಸಾಲಗಾಂವಿಯಲ್ಲಿ ಮಹಾಮಳೆಗೆ ಕೊಚ್ಚಿ ಹೋಯ್ತು ಭತ್ತದ ಬಣಿವೆ..!

ಮುಂಡಗೋಡ: ತಾಲೂಕಿನ ಸಾಲಗಾಂವ್ ಗ್ರಾಮದಲ್ಲಿ ಸತತ ಸುರಿಯುತ್ತಿರೋ ಮಳೆಯ ಕಾರಣಕ್ಕೆ ರೈತನೋರ್ವ ಭತ್ತ ಕಟಾವು ಮಾಡಿ ಇಟ್ಟಿದ್ದ ಬಣಿವೆ ನೀರಲ್ಲಿ ಮುಳುಗಿದೆ. ಗ್ರಾಮದ ಸರ್ವೆ ನಂ.212 ರಲ್ಲಿ ಸರ್ಕಾರಿ ಕೆರೆಯಲ್ಲಿ ಬಡ ರೈತ ಮಂಜುನಾಥ್ ಬಸವಣ್ಣೆಪ್ಪ ಮೂಲಿಮನಿ, ಭತ್ತದ ಬಣಿವೆ ಒಕ್ಕಿದ್ದ. ತನ್ನ ಗದ್ದೆಯಲ್ಲಿ ಜಾಗ ಇಲ್ಲದ ಸಲುವಾಗಿ ಖಾಲಿಯಾಗಿದ್ದ ಕೆರೆಯಲ್ಲಿ ಭತ್ತದ ಬಣಿವೆ ಒಕ್ಕಿದ್ದ ಹೀಗಾಗಿ, ಕಳೆದ ನಾಲ್ಕೈದು ದಿನದಿಂದ ಸುರಿಯುತ್ತಿರೋ ಭಾರಿ ಮಳೆಯಿಂದ ಕೆರೆ ತುಂಬಿ ಭತ್ತದ ಬಣಿವೆ ನೀರಲ್ಲಿ ಮುಳುಗಿ ಸಂಪೂರ್ಣ ನಾಶವಾಗಿದೆ....

Post
ಕೊಪ್ಪದ ರಸ್ತೆಯಲ್ಲೇ ನರಳಾಡುತ್ತಿದೆ ಅಪರೂಪದ ಕಾಡು ಪ್ರಾಣಿ, ಬೇಕಿದೆ ರಕ್ಷಣೆ..!

ಕೊಪ್ಪದ ರಸ್ತೆಯಲ್ಲೇ ನರಳಾಡುತ್ತಿದೆ ಅಪರೂಪದ ಕಾಡು ಪ್ರಾಣಿ, ಬೇಕಿದೆ ರಕ್ಷಣೆ..!

ಮುಂಡಗೋಡ: ತಾಲೂಕಿನಲ್ಲಿ ಸತತ ಮಳೆ ಬೀಳುತ್ತಿರೋ ಕಾರಣಕ್ಕೆ ಮನುಷ್ಯರಷ್ಟೇ ತೊಂದರೆ ಅನುಭವಿಸುತ್ತಿಲ್ಲ. ಬದಲಾಗಿ ಕಾಡು ಪ್ರಾಣಿಗಳಿಗೂ ಸಂಕಷ್ಟ ಎದುರಾಗಿದೆ. ತಾಲೂಕಿನ ಕೊಪ್ಪ ಗ್ರಾಮದ ಹತ್ತಿರ ರಸ್ತೆಯ ಮದ್ಯೆ ಕಾಡು ಮರ ನಾಯಿ ಅಂತ ಕರಿಯುವ ಅಪರೂಪದ ಪ್ರಾಣಿ ಅನಾರೋಗ್ಯದಿಂದ ಬಳಲುತ್ತಿದೆ. ತೀವ್ರ ನಿಶ್ಯಕ್ತಿಯಿಂದ ಬಳಲುತ್ತಿರೋ ಅಪರೂಪದ ಪ್ರಾಣಿ ರಸ್ತೆ ದಾಟಲು ಸಹ ಪರದಾಡುತ್ತಿದೆ. ರಸ್ತೆಯಲ್ಲಿ ಒದ್ದಾಡುತ್ತಿದ್ದ ಪ್ರಾಣಿಯನ್ನು ದಾರಿಹೋಕರು ರಸ್ತೆಯ ಪಕ್ಕದಲ್ಲಿ ಇಟ್ಟು ರಕ್ಷಿಸಿದ್ದಾರೆ. ಆದ್ರೆ ಈ ಅಪರೂಪದ ಪ್ರಾಣಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದೆ. ಹೀಗಾಗಿ ಅರಣ್ಯ...

Post
ಮುಂಡಗೋಡ ತಾಲೂಕಿನಲ್ಲಿ ಸತತ ಮಳೆಯಿಂದ ಕಂಗಾಲಾದ ಜನ, ಎಲ್ಲೇಲ್ಲಿ ಹಾನಿ..?

ಮುಂಡಗೋಡ ತಾಲೂಕಿನಲ್ಲಿ ಸತತ ಮಳೆಯಿಂದ ಕಂಗಾಲಾದ ಜನ, ಎಲ್ಲೇಲ್ಲಿ ಹಾನಿ..?

ಮುಂಡಗೋಡ: ತಾಲೂಕಿನಾಧ್ಯಂತ ಕಳೆದ ಮೂರು ದಿನಗಳಿಂದ ಬಿಟ್ಟೂ ಬಿಡದೇ ಸುರಿಯುತ್ತಿರೋ ಮಳೆಗೆ ತಾಲೂಕಿನ ಜನ ಹೈರಾಣಾಗಿದ್ದಾರೆ. ಹಗಲೂ ರಾತ್ರಿ ಸುರಿದ ಸತತ ಮಳೆಯಿಂದ ಅನ್ನದಾತನ ಬದುಕೆ ಅತಂತ್ರವಾಗಿದೆ. ಹಲವು ಕಡೆ ಮನೆಗಳು ಕುಸಿದು ಬಿದ್ದಿವೆ. ಬೆಳೆ ಹಾನಿಯಾಗಿದೆ. ಹಾಗಿದ್ರೆ ಎಲ್ಲೇಲ್ಲಿ ಏನೇನು ಹಾನಿಯಾಗಿದೆ..? ಇಲ್ಲಿದೆ ರಿಪೋರ್ಟ್ ಬಸಾಪುರದಲ್ಲಿ ಮನೆ ಕುಸಿತ..! ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸಾಪುರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆ ಕುಸಿದು ಬಿದ್ದಿದೆ. ಇಲ್ಲಿನ ಕಲ್ಲಯ್ಯ ಕರ್ಪೂರಮಠ್ ಎಂಬುವವರ ಮನೆ ಸಂಪೂರ್ಣ ಬಿದ್ದಿದೆ....

Post
ಕುಟುಂಬಕ್ಕೊಂದೇ ಟಿಕೆಟ್, ಕೈ ಪಡೆಯಲ್ಲಿ ಕೊಲಾಹಲ, ಆರ್ವಿಡಿ ಕನಸಿಗೆ ಕತ್ತರಿಯಾಗತ್ತಾ ತೀರ್ಮಾನ..?

ಕುಟುಂಬಕ್ಕೊಂದೇ ಟಿಕೆಟ್, ಕೈ ಪಡೆಯಲ್ಲಿ ಕೊಲಾಹಲ, ಆರ್ವಿಡಿ ಕನಸಿಗೆ ಕತ್ತರಿಯಾಗತ್ತಾ ತೀರ್ಮಾನ..?

ರಾಷ್ಟ್ರ ಮಟ್ಟದಲ್ಲಿ ಕೈ ಪಡೆ ಸಾಲು ಸಾಲು ಸೋಲುಗಳಿಂದ ಕಂಗೆಟ್ಟು ಹೊಸತನಗಳ ಅನ್ವೇಷಣೆಗೆ ಹೊರಟಿದೆ‌. ಉದಯಪುರದಲ್ಲಿ ಸದ್ಯ ನಡೆಯುತ್ತಿರೊ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಹೊಸತನಗಳಿಗೆ ಒಗ್ಗಬೇಕಾದ ಅನಿವಾರ್ಯತೆಗಳ ಬಗ್ಗೆ ಚರ್ಚೆ ನಡೆಸುತ್ತಿದೆ ಕಾಂಗ್ರೆಸ್. ಕುಟುಂಬ ರಾಜಕಾರಣಕ್ಕೆ ತೀಲಾಂಜಲಿ ಇಟ್ಟು, ಹೊಸ ಮುಖಗಳಿಗೆ ಅವಕಾಶ ಕೊಡುವ ಬಗ್ಗೆ ಚಿಂತನಾ ಶಿಬಿರದಲ್ಲಿ ಗಂಭೀರ ಚಿಂತನೆ ನಡೆದಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಮತ್ತೆ ಟಿಕೆಟ್ ಕೊಡಲ್ಲ ಅಂತಾ ಕಡ್ಡಿ ಮುರಿದಂತೆ ಹೇಳಿಬಿಡುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗ್ತಿದೆ. ಹೀಗಾಗಿ, ರಾಜ್ಯದಲ್ಲಿ...

Post
ಕಾತೂರಿನಲ್ಲಿ ಮಟ್ಕಾ ಅಡ್ಡೆಯ ಮೇಲೆ ಪೊಲೀಸರ ದಾಳಿ, ಮೂವರ ಮೇಲೆ ಕೇಸ್..!

ಕಾತೂರಿನಲ್ಲಿ ಮಟ್ಕಾ ಅಡ್ಡೆಯ ಮೇಲೆ ಪೊಲೀಸರ ದಾಳಿ, ಮೂವರ ಮೇಲೆ ಕೇಸ್..!

ಮುಂಡಗೋಡ: ತಾಲೂಕಿನ ಕಾತೂರಿನಲ್ಲಿ ಮಟ್ಕಾ ಅಡ್ಡೆಯ ಮೇಲೆ ಮುಂಡಗೋಡ ಪೊಲೀಸರು ದಾಳಿ ಮಾಡಿ ಮೂವರನ್ನ ವಶಕ್ಕೆ ಪಡೆದಿದ್ದಾರೆ. ಹಿರೇಕೆರೂರಿನಿಂದ ಬಂದು ಮಟ್ಕಾ ಆಡಿಸುತ್ತಿದ್ದ ಬುಕ್ಕಿ ಸೇರಿದಂತೆ ಮೂವರ ಮೇಲೆ ಕೇಸು ದಾಖಲಾಗಿದೆ. ಕಾತೂರಿನಲ್ಲಿ ಟೀ ಅಂಗಡಿ ನಡೆಸುತ್ತಿರೊ ಮಹಮ್ಮದ್ ಜಾಫರ್ ಮಹಮ್ಮದ ಹುಸೇನ ಮರಗಡಿ (48) ಎಂಬುವವನು ಮುಂಡಗೋಡ ತಾಲೂಕಿನ ಕಾತೂರ ಗ್ರಾಮದ ಆಲಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಮೀನು ಮಾರ್ಕೆಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು, ಮಟ್ಕಾ ಬರೆಯುತ್ತಿದ್ದ. ಈ ವೇಳೆ ಮುಂಡಗೋಡ ಪಿಎಸ್ಐ ಬಸವರಾಜ್...

error: Content is protected !!