ಮುಂಡಗೋಡ- ಕಲಘಟಗಿ ರಸ್ತೆಯಲ್ಲಿ ಮತ್ತೊಂದು ಭಯಾನಕ ಅಪಘಾತವಾಗಿದೆ. ಕಲಘಟಗಿ ತಾಲೂಕಿನ ಬೆಲವಂತರ ಬಳಿ ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ಯುವಕ ಮೃತಪಟ್ಟಿದ್ದಾನೆ. ಮತ್ತಿಬ್ಬರಿಗೆ ಗಾಯವಾಗಿದೆ. ನಂದಿಕಟ್ಟಾ ಗ್ರಾಮದ ತುಕಾರಾಮ್ ಅರ್ಜುನ್ ಕಮ್ಮಾರ್ (26) ಬೈಕ್ ಅಪಘಾತದಲ್ಲಿ ಮೃತಪಟ್ಟ ಯುವಕನಾಗಿದ್ದಾನೆ. ಇನ್ನು ಮತ್ತೀರ್ವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಅಂದಹಾಗೆ, ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮಕ್ಕೆ ಬಹುಶಃ ಇವತ್ತು ಕರಾಳ ದಿನ. ಯಾಕಂದ್ರೆ ಒಂದೇ ದಿನ ಪ್ರತ್ಯೇಕ ಎರಡು ಅಪಘಾತದಲ್ಲಿ...
Top Stories
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಮತ್ತೊಮ್ಮೆ ರವಿಗೌಡ ಪಾಟೀಲರೇ ಕಿಂಗ್..!
ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಅಧ್ಯಕ್ಷರಾಗಿ ರವಿಗೌಡ ಪಾಟೀಲ್ ಅವಿರೋಧ ಆಯ್ಕೆ..? ಎರಡನೇ ಬಾರಿಗೆ ಪಟ್ಟಕ್ಕೇರ್ತಾರಾ ಗೌಡ್ರು..?
ಗದ್ದೆಯಲ್ಲಿ ಅಣ್ಣತಮ್ಮರ ಮೇಲೆ ಚಿರತೆಯ ಭಯಾನಕ ದಾಳಿ; ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯ..!
ಮುಂಡಗೋಡಿನಲ್ಲಿ ಅರ್ಥಪೂರ್ಣ “ವಾಲ್ಮೀಕಿ ಜಯಂತಿ”
ಬೋಧಕೇತರ ನೌಕರರು ಸಂಘಟಿತರಾಗಿರುವುದು ಖುಷಿ ತಂದಿದೆ”- ಡಿಡಿಪಿಐ ಎಂ ಎನ್ ದಂಡಿನ ಶ್ಲಾಘನೆ
ನಂದಿಪುರದಲ್ಲಿ ಗ್ರಾಮಸ್ಥರಿಂದ ಅಂಗನವಾಡಿಗೆ ಮಕ್ಕಳನ್ನು ಕಳಿಸದೇ ಬಹಿಷ್ಕಾರ
Tag: Publicfirstnewz
ಹುನಗುಂದ ಬಳಿ ಭೀಕರ ಅಪಘಾತ, ಬೈಕ್ ಓಮಿನಿ ನಡುವೆ ಡಿಕ್ಕಿ, ನಂದಿಕಟ್ಟಾದ ಬೈಕ್ ಸವಾರ ಸಾವು, ಮತ್ತೋರ್ವನಿಗೆ ಗಾಯ..!
ಮುಂಡಗೋಡ: ತಾಲೂಕಿನ ಹುನಗುಂದ ಹಾಗೂ ಟಿಬೇಟಿಯನ್ ಕ್ಯಾಂಪ್ ನಂ. 8 ರ ರಸ್ತೆ ಮದ್ಯೆ ಭೀಕರ ಅಪಘಾತವಾಗಿದೆ. ಓಮಿನಿ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಮತ್ತೋರ್ವನಿಗೆ ಗಾಯವಾಗಿದೆ. ನಂದಿಕಟ್ಟಾ ಗ್ರಾಮದ ಕೃಷ್ಣ ಸೋಮಣ್ಣ ಕಟಾವಕರ್ (54) ಎಂಬುವವನೇ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಇನ್ನು ಪ್ರಭು(36) ಎಂಬುವ ಬೈಕ್ ಹಿಂಬದಿಯ ಸವಾರ ಗಾಯಗೊಂಡಿದ್ದಾನೆ. ಬೈಕ್ ಸವಾರರು ಹುನಗುಂದ ಗ್ರಾಮಕ್ಕೆ ತೆರಳುತ್ತಿದ್ದರು. ಹಾಗೇನೆ ಹುನಗುಂದ ಕಡೆಯಿಂದ ವರುತ್ತಿದ್ದ ಓಮಿನಿ ನಡುವೆ ಡಿಕ್ಕಿಯಾಗಿದೆ. ಹೀಗಾಗಿ, ಗಂಭೀರವಾಗಿ ಗಾಯಗೊಂಡಿದ್ದ...
ರಾಜಕೀಯ ತೊಳಲಾಟಗಳ ನಡುವೆಯೂ ಕ್ಷೇತ್ರದ ಜನರ ಕಾಳಜಿ ಮೆರೆದ ಶಾಸಕ ಹೆಬ್ಬಾರ್..!
ಮುಂಡಗೋಡ: ತಮ್ಮ ಬಿಡುವಿಲ್ಲದ ರಾಜಕೀಯ ತೊಳಲಾಟಗಳ ನಡುವೆಯೂ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಕ್ಷೇತ್ರದ ಜನರ ದುಃಖ ದುಮ್ಮಾನಗಳನ್ನು ಮರೆತಿಲ್ಲ. ಬದಲಾಗಿ, ಕ್ಷೇತ್ರದ ಜನರ ನೋವಿನಲ್ಲಿ ಭಾಗಿಯಾಗಿದ್ದಾರೆ. ಅಂದಹಾಗೆ, ಇಂದಷ್ಟೇ ನಿಧನರಾದ ಮುಂಡಗೋಡ ತಾಲೂಕಿನ ಉಗ್ಗಿನಕೇರಿ ಗ್ರಾಮದ ಹಿರಿಯ ಸಹಕಾರಿ ಧುರೀಣ ಬಸಯ್ಯ ನಡುವಿನಮನಿ ಯವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದುಕೊಂಡ್ರು. ಅಲ್ದೆ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ್ದ ಶಾಸಕ ಶಿಚರಾಮ್ ಹೆಬ್ಬಾರ್, ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡದೇ...
ಮುಂಡಗೋಡ ಶಿಕ್ಷಕಿಯ ಚಿನ್ನ ದರೋಡೆ ಕೇಸ್, ಕೊನೆಗೂ ಸಿಕ್ಕಾಯ್ತಾ ಕಳ್ಳರ ಸುಳಿವು..? ಅಬ್ಬಾ “ಗುಂತಕಲ್” ಗುಮ್ಮಾಗಳು ಇಷ್ಟೊಂದು ಡೇಂಜರ್ರಾ..?
ಮುಂಡಗೋಡ: ಪ್ರಿಯ ಓದುಗರೇ, ತಮಗೆ ನಿನ್ನೆನೇ ಹೇಳಿದ್ವಿ ಅಲ್ವಾ..? ನಮ್ಮ ಮುಂಡಗೋಡ ಪೊಲೀಸ್ ಠಾಣೆಯಲ್ಲಿನ ಯುವ ಪೊಲೀಸರು ಅದೇಷ್ಟು ಸ್ಟ್ರಾಂಗ್ ಇದ್ದಾರೆ ಅಂತಾ.. ಅದು ಮತ್ತೊಮ್ಮೆ ಸಾಬೀತಾಗಿದೆ. ನಿನ್ನೆ ಶನಿವಾರ ಮುಂಡಗೋಡಿನಲ್ಲಿ ನಡೆದಿದ್ದ ಶಿಕ್ಷಕಿಯ ಮಾಂಗಲ್ಯ ಸರ ದೋಚಿದ್ದ ಕೇಸಿಗೆ ಸಂಬಂಧಿಸಿದಂತೆ ಖತರ್ನಾಕ ಖದೀಮರ ಸುಳಿವು ಬಹುತೇಕ ಸಿಕ್ಕಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಈ ಬಲಿಷ್ಟ ಟೀಂ ಒಂದು ಹಂತದಲ್ಲಿ ಮಹತ್ವದ ಸುಳಿವು ಹೆಕ್ಕಿ ತೆಗೆದಿದೆ. ಇನ್ನೇನು ಕನ್ಪರ್ಮ್ ಅಂತಾ ಆದರೇ ಆರೋಪಿಗಳನ್ನ ಹೆಡೆಮುರಿ ಕಟ್ಟೋದೊಂದೇ...
ಮುಂಡಗೋಡಿನಲ್ಲಿ ಹಾಡಹಗಲೇ ಶಿಕ್ಷಕಿಯ ಮಾಂಗಲ್ಯ ಸರ ದೋಚಿದ ಖದೀಮರು, ಏನಾಗ್ತಿದೆ ನಮ್ಮೂರಲ್ಲಿ..? ಪೊಲೀಸರ ಭಯವೇ ಹೋಯ್ತಾ..?
ಮುಂಡಗೋಡ ಪಟ್ಟಣದ ಸರ್ಕಾರಿ ಮಾದರಿ ಶಾಲೆಯ ಶಿಕ್ಷಕಿಯೋರ್ವರ ಬಂಗಾರದ ಚೈನ್ ಎಗರಿಸಿದ್ದಾರೆ ಕಳ್ಳರು. ಬೈಕ್ ಮೇಲೆ ಬಂದಿದ್ದ ಇಬ್ಬರು ಏಕಾಏಕಿ ಶಿಕ್ಷಕಿಯ ಕೊರಳಲ್ಲಿದ್ದ ಮಾಂಗಲ್ಯದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ನಡೆದು ಹೋದ ಘಟನೆಯಲ್ಲಿ, ಶಿಕ್ಷಕಿಯ ಮೂಕ ರೋಧನವಷ್ಟೇ ಬಾಕಿ ಉಳಿದಿದೆ. ಮಟ ಮಟ ಮದ್ಯಾಹ್ನವೇ..! ಅಂದಹಾಗೆ, ಶನಿವಾರ ಮದ್ಯಾಹ್ನ ಸರಿಸುಮಾರು 12- 40 ಗಂಟೆಯ ಹೊತ್ತಲ್ಲಿ, ಮಾದರಿ ಶಾಲೆಯ ದೈಹಿಕ ಶಿಕ್ಷಕಿ ಸರೋಜಾ ಮಹೇಶ್ ಬೈಂದೂರ್ ಶಾಲೆಯಿಂದ ಬಸ್ ನಿಲ್ದಾಣಕ್ಕೆ ಕಾಲ್ನಡಿಯಲ್ಲೇ ಹೊರಟಿದ್ದರು. ಈ...
ಮಳಗಿಯಲ್ಲಿ ಹುಣಸೇ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು..!
ಮುಂಡಗೋಡ ತಾಲೂಕಿನ ಧರ್ಮಾ ಕಾಲೋನಿಯಲ್ಲಿ 44 ವರ್ಷದ ವ್ಯಕ್ತಿಯೋರ್ವ ಹುಣಸೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಳಗಿ ಧರ್ಮಾ ಕಾಲೋನಿಯ ಉದಯ್ ಶೇಖಪ್ಪ ಹಸಲಾರ್ (44) ಎಂಬುವವನೇ ಹುಣಸೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ಮುಂಡಗೋಡ ಹೊರವಲಯದಲ್ಲಿ ಬೈಕ್ ಅಪಘಾತ, ನಂದಿಕಟ್ಟಾದ ಇಬ್ಬರಿಗೆ ಗಾಯ..!
ಮುಂಡಗೋಡ ಪಟ್ಟಣದ ಹೊರವಲಯದಲ್ಲಿ ಅಪಘಾತವಾಗಿದೆ. ಮುಂಡಗೋಡಿನಿಂದ ಕಲಘಟಗಿ ಮಾರ್ಗವಾಗಿ ನಂದಿಕಟ್ಟಾ ಹೋಗುತ್ತಿದ್ದ ಬೈಕ್ ಸವಾರರಿಬ್ಬರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಪರಿಣಾಮ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ನಂದಿಕಟ್ಟಾ ಗ್ರಾಮದ ಹನುಮಂತ ಭೋವಿ ಮತ್ತು ಬಸವರಾಜ ಎಂಬುವವರೇ ಗಾಯಗೊಂಡವರಾಗಿದ್ದು. 108 ಅಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಅಂಬ್ಯುಲೆನ್ಸ್ ಸಿಬ್ಬಂದಿಗಳಾದ ಧನರಾಜ್ ಮತ್ತು ಮಲ್ಲಪ್ಪ ಇವರು ಪ್ರಥಮ ಚಿಕಿತ್ಸೆ ನೀಡಿ ತಾಲ್ಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದಲೈ ಲಾಮಾರ ಹುಟ್ಟು ಹಬ್ಬ, ಟಿಬೇಟಿಯನ್ ಕಾಲೋನಿಗಳಲ್ಲಿ ಸಂಭ್ರಮವೋ ಸಂಭ್ರಮ..!
ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಇಂದು ಟಿಬೇಟಿಯನ್ ಧರ್ಮಗುರು ದಲೈ ಲಾಮಾರವರ 88 ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸಲಾಯಿತು. ಇಲ್ಲಿನ ಕ್ಯಾಂಪ್ ನಂಬರ್ ಒಂದರ ಬೌದ್ದ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಅಂದಹಾಗೆ, ಇಲ್ಲಿನ ಟಿಬೇಟಿಯನ್ ಕಾಲೋನಿಯಲ್ಲಿ ಟಿಬೇಟಿಗರು ದಲೈ ಲಾಮಾರ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಪ್ರತೀ ಮನೆ ಮನೆಗಳಲ್ಲೂ ದಲೈ ಲಾಮಾರವರ ಹುಟ್ಟುಹಬ್ಬದ ವಿಶೇಷ ಸಂಭ್ರಮಗಳು ನಡೆಯುತ್ತಿವೆ. ದೀರ್ಘಾಯುಷ್ಯ ಕೋರಿ ಪ್ರಾರ್ಥನೆಗಳು ನಡೆಯುತ್ತಿವೆ. ಅಲ್ಲದೇ, ಹಲವು ಸಾಮಾಜಿಕ, ಸಾಂಸ್ಕೃತಿಕ, ದಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
ಶಕ್ತಿ ಯೋಜನೆ ಎಫೆಕ್ಟ್; ವಾಯುವ್ಯ ಸಾರಿಗೆ ವಿಭಾಗದ ಬಸ್ಸುಗಳಲ್ಲಿ ಇದುವರೆಗೂ ಎಷ್ಟೇಲ್ಲ ಮಹಿಳೆಯರು ಪ್ರಯಾಣಿಸಿದ್ದಾರೆ ಗೊತ್ತಾ..?
ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯು ಒಂದಾಗಿದ್ದು, ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಇದೇ ತಿಂಗಳ 11 ರಂದು ಅಧಿಕೃತವಾಗಿ ಜಾರಿಗೊಳಿಸಿತು. ಅದರಂತೆ ಶಕ್ತಿ ಯೋಜನೆಯಡಿಯಲ್ಲಿ ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನಲೆ ಎಲ್ಲಾ ಬಸ್ಗಳು ಫುಲ್ ಆಗಿ ಸಂಚರಿಸುತ್ತಿವೆ. ಈ ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿದ್ದ ಮಹಿಳೆಯರು ದೇವಸ್ಥಾನ ಸೇರಿದಂತೆ ಪ್ರವಾಸಿ ಸ್ಥಳಗಳಿಗೆ ಸಂಚರಿಸಲು ಶುರು ಮಾಡಿದ್ದಾರೆ. ಅದರಂತೆ ವಾಯವ್ಯ ವಿಭಾಗಕ್ಕೆ...
ಗುಂಜಾವತಿ ಕಟ್ಟಿಗೆ ಕಳ್ಳತನ ಕೇಸ್, ಇಬ್ಬರು ಆರೋಪಿಗಳನ್ನು ಬಂಧಿಸಿದ ಅರಣ್ಯ ಅಧಿಕಾರಿಗಳು, ಅಷ್ಟಕ್ಕೂ ಶಿರಾಳಕೊಪ್ಪದ ಗ್ಯಾಂಗ್ ಆ್ಯಕ್ಟಿವ್ ಆಯ್ತಾ..?
ಮುಂಡಗೋಡ ತಾಲೂಕಿನ ಗುಂಜಾವತಿ ಬಳಿ ಕಳೆದ ಜೂನ್ 12 ರಂದು ಅರಣ್ಯಗಳ್ಳತನದ ವಿಫಲ ಯತ್ನ ಕೇಸ್ ಬಟಾ ಬಯಲಾಗಿದೆ. ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಕೇಸಿಗೆ ಸಂಭಂಧಿಸಿದಂತೆ ಸದ್ಯ ಇಬ್ಬರು ಆರೋಪಿಗಳನ್ನ ವಾಹನ ಸಮೇತ ಅರಣ್ಯ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ. ಹಾಗಂತ, ಯಲ್ಲಾಪುರ ವಿಭಾಗದ ಡಿಎಫ್ ಓ ಶಶಿಧರ್ ಹೆಗಡೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಶಿರಾಳಕೊಪ್ಪದ ಗ್ಯಾಂಗ್..? ಅಂದಹಾಗೆ, ಗುಂಜಾವತಿ ಅರಣ್ಯದಲ್ಲಿ ಕಟ್ಟಿಗೆ ಕಳ್ಳತನ ಪ್ರಕರಣದ ಮೂಲಕ, ಯಲ್ಲಾಪುರ ಅರಣ್ಯ ವಿಭಾಗದಲ್ಲಿ ಅದೊಂದು ಗ್ಯಾಂಗ್...









