Home Publicfirstnewz

Tag: Publicfirstnewz

Post
ನಂದಿಕಟ್ಟಾದಲ್ಲಿ ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹ, ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ..!

ನಂದಿಕಟ್ಟಾದಲ್ಲಿ ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹ, ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ..!

 ಮುಂಡಗೋಡ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆದ್ಯಕ್ಷ ವಿ.ಎಸ್. ಪಾಟೀಲರ ತವರಲ್ಲಿ ನಿತ್ಯವೂ ವಿದ್ಯಾರ್ಥಿಗಳು ಗೋಳು ಅನುಭವಿಸ್ತಿದಾರೆ. ಶಾಲಾ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಇವ್ರ ಗೋಳು ಹೇಳತೀರದ್ದಾಗಿದೆ. ಹೀಗಾಗಿ, ಇವತ್ತು ನಂದಿಕಟ್ಟಾ ಗ್ರಾಮದಲ್ಲಿ ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಬಸ್ ತಡೆ ನಡೆಸಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ. ಅಂದಹಾಗೆ..! ನಂದಿಕಟ್ಟಾ ಗ್ರಾಮದಿಂದ ಮುಂಡಗೋಡಿಗೆ ಪ್ರತಿದಿನ 150 ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ತೆರಳುತ್ತಾರೆ. ಹಾಗೆ ತೆರಳುವ ಮಕ್ಕಳಿಗೆ ನಿತ್ಯವೂ ಸರಿಯಾದ ಸಮಯಕ್ಕೆ ಬಸ್ ಬರೋದೋ ಇಲ್ಲ....

Post
ಬೆಳಿಗ್ಗೆ ಬಿಜೆಪಿ, ರಾತ್ರಿ ಕಾಂಗ್ರೆಸ್ ಅನ್ನೋ “ಶಕುನಿ” ಲೀಡರ್ಸ್ ನಮಗೆ ಬೇಕಾಗಿಲ್ಲ: ರವಿಗೌಡ ಪಾಟೀಲ್ ಖಡಕ್ ಮಾತು..!

ಬೆಳಿಗ್ಗೆ ಬಿಜೆಪಿ, ರಾತ್ರಿ ಕಾಂಗ್ರೆಸ್ ಅನ್ನೋ “ಶಕುನಿ” ಲೀಡರ್ಸ್ ನಮಗೆ ಬೇಕಾಗಿಲ್ಲ: ರವಿಗೌಡ ಪಾಟೀಲ್ ಖಡಕ್ ಮಾತು..!

 ಬೆಳಿಗ್ಗೆ ಬಿಜೆಪಿಯಲ್ಲಿ ಚಹಾ ಕುಡಿದು, ರಾತ್ರಿಯಾದಂತೆ ಕಾಂಗ್ರೆಸ್ ಜೊತೆ ಚೀಯರ್ಸ್ ಹೇಳೊ, ಬೆನ್ನಿಗೆ ಚೂರಿ ಹಾಕೊ ಕಾರ್ಯಕರ್ತರು, ಮುಖಂಡರು ನಮಗೆ ಬೇಕಾಗಿಲ್ಲ. ಅಂತಹ ಮನಸ್ಥಿತಿಯವರು ಇದ್ರೆ ಈಗಲೇ ಈ ಸಭೆಯಿಂದಲೇ ಎದ್ದು ಹೋಗಿ ಅಂತಾ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವಿಗೌಡ ಪಾಟೀಲ್ ಖಡಕ್ಕಾಗೇ ಎಚ್ಚರಿಸಿದ್ರು. ಅವ್ರು, ಮುಂಡಗೋಡ ತಾಲೂಕಿನ ಇಂದೂರಿನ ಕಲ್ಮೇಶ್ವರ ದೇವಸ್ಥಾನದಲ್ಲಿ ನಡೆದ ಇ‌ಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿಜೆಪಿ ಯುವ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ರು. ಕೊಪ್ಪರಿಗೆ ಹಾಲಿನಲ್ಲಿ ಒಂದು ಸಣ್ಣ ಉಪ್ಪಿನ...

Post
ಬಿಜೆಪಿ ಪಕ್ಷದ ನೆರಳಲ್ಲೇ ನಡಿತಿದೆಯಾ ಮುಂಡಗೋಡ ಕಸಾಪ..? ಅಷ್ಟಕ್ಕೂ ಕಸಾಪ ಅಧ್ಯಕ್ಷ ನಡಗೇರಿಯವರದ್ದು ಯಾವ ಸಿದ್ಧಾಂತ..?

ಬಿಜೆಪಿ ಪಕ್ಷದ ನೆರಳಲ್ಲೇ ನಡಿತಿದೆಯಾ ಮುಂಡಗೋಡ ಕಸಾಪ..? ಅಷ್ಟಕ್ಕೂ ಕಸಾಪ ಅಧ್ಯಕ್ಷ ನಡಗೇರಿಯವರದ್ದು ಯಾವ ಸಿದ್ಧಾಂತ..?

 ಮುಂಡಗೋಡ : ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಯಾವ ರಾಜಕೀಯದ ಪಕ್ಷದ ಅಡಿ ಕೆಲಸ ಮಾಡ್ತಿದೆ..? ಅಷ್ಟಕ್ಕೂ ಇಲ್ಲಿನ ಸಾಹಿತ್ಯ ಪರಿಷತ್ತಿಗೆ ಯಾವುದಾದ್ರೂ ಪಕ್ಷದ ಸಿದ್ದಾಂತಗಳನ್ನ ಹೇರಲಾಗ್ತಿದೆಯಾ..? ಅಥವಾ ಇಡೀ ಪರಿಷತ್ತನ್ನೇ ರಾಜಕೀಯ ಪಕ್ಷದ ಜೊತೆ ವಿಲೀನಗೊಳಿಸಲಾಗಿದೆಯಾ..? ನಿಜಕ್ಕೂ ಅರ್ಥವೇ ಆಗ್ತಿಲ್ಲ. ಯಾಕಂದ್ರೆ, ತಾಲೂಕಿನಲ್ಲಿ ಸಾಹಿತ್ಯಿಕ ಕೃಷಿ ಮಾಡಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರು ಪಕ್ಷವೊಂದರ ಬಲವರ್ಧನೆಯಲ್ಲೇ ಬ್ಯುಸಿಯಾಗಿದ್ದಾರೆ. ಅರಿಕೆಯಿರಲಿ..! ನಾವಿಲ್ಲಿ ಯಾವುದೇ ಪಕ್ಷದ ಸಿದ್ಧಾಂತಗಳ ಬಗ್ಗೆ ಖಂಡಿತ ಮಾತನಾಡಲ್ಲ. ವಿರೋಧಿಸುವುದೂ ಇಲ್ಲ. ಆಯಾ ಪಕ್ಷಗಳಿಗೆ...

Post
ಮುಂಡಗೋಡ APMC ಸಮೀಪ ಜಿಂಕೆಗೆ ಡಿಕ್ಕಿ ಹೊಡೆದ KSRTC ಬಸ್, ಜಿಂಕೆ ಸಾವು..!

ಮುಂಡಗೋಡ APMC ಸಮೀಪ ಜಿಂಕೆಗೆ ಡಿಕ್ಕಿ ಹೊಡೆದ KSRTC ಬಸ್, ಜಿಂಕೆ ಸಾವು..!

ಮುಂಡಗೋಡ: ಪಟ್ಟಣದ APMC ಹತ್ತಿರ KSRTC ಬಸ್ ಡಿಕ್ಕಿಯಾಗಿ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಹೊರಟಿದ್ದ KSRTC ಬಸ್ APMC ಸಮೀಪದ ರಸ್ತೆಯಲ್ಲಿ ಏಕಾಏಕಿ ಜಿಂಕೆ ಅಡ್ಡ ಬಂದ ಪರಿಣಾಮ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು ಜಿಂಕೆ ಸ್ಥಳದಲ್ಲೇ‌ ಮೃತಪಟ್ಟಿದೆ. ಇನ್ನು, ಮೃತಪಟ್ಟ ಜಿಂಕೆ ರಸ್ತೆಯಲ್ಲೇ ಬಿದ್ದಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕಿದೆ.

Post
ಚೌಡಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಮಂಜುನಾಥ್ ಕಟಗಿ ಅವಿರೋಧ ಆಯ್ಕೆ ಫಿಕ್ಸ್..!

ಚೌಡಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಮಂಜುನಾಥ್ ಕಟಗಿ ಅವಿರೋಧ ಆಯ್ಕೆ ಫಿಕ್ಸ್..!

ಮುಂಡಗೋಡ: ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚೌಡಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಗಾದಿಯ ಫೈಟ್ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ನೇತ್ರಾವತಿ ಬಿಸವಣ್ಣವರ್ ರಾಜೀನಾಮೆಯಿಂದ ಖಾಲಿಯಾಗಿದ್ದ ಅಧ್ಯಕ್ಷ ಖುರ್ಚಿಗೆ ಮಂಜುನಾಥ್ ಕಟಗಿ ನೂತನ ಅಧ್ಯಕ್ಷರಾಗಿ ಪಟ್ಟಕ್ಕೆ ಏರೋದು ಬಹುತೇಕ ಕನ್ಫರ್ಮ್ ಆದಂತಾಗಿದೆ. ಅವಿರೋಧ ಆಯ್ಕೆನಾ..? ಬಿಜೆಪಿಯಲ್ಲೇ ಎರಡೆರಡು ಬಣಗಳಾಗಿ ಕಚ್ಚಾಡಿಕೊಂಡಿದ್ದ ಚೌಡಳ್ಳಿ ಪಂಚಾಯತಿಯ ಅಧಿಕಾರದ ತಿಕ್ಕಾಟ, ಇಡೀ ತಾಲೂಕಿನ ಬಿಜೆಪಿ ಮುಖಂಡರುಗಳಿಗೆ ಮುಜುಗರ ತಂದಿಟ್ಟಿತ್ತು. ಕೋರ್ಟ್ ಅಂಗಳಕ್ಕೂ ಹೋಗಿ ಬಂದಿದ್ದ ಅಧ್ಯಕ್ಷರ ಬದಲಾವಣೆ ಪ್ರಹಸನಗಳು ಖುದ್ದು ಸಚಿವ ಶಿವರಾಮ್...

Post
ತಾಲೂಕಿನಲ್ಲಿ ಮತ್ತೆ ಮಹಾಮಳೆ ಕಂಟಕ, ಬಡ್ಡಿಗೇರಿ ಹಳ್ಳದ ಬ್ರಿಡ್ಜ್  ಜಲಾವೃತ, ಸಂಚಾರ ಬಂದ್..!

ತಾಲೂಕಿನಲ್ಲಿ ಮತ್ತೆ ಮಹಾಮಳೆ ಕಂಟಕ, ಬಡ್ಡಿಗೇರಿ ಹಳ್ಳದ ಬ್ರಿಡ್ಜ್ ಜಲಾವೃತ, ಸಂಚಾರ ಬಂದ್..!

 ಮುಂಡಗೋಡ: ತಾಲೂಕಿನ ಹಲವು ಕಡೆ ಭರ್ಜರಿ ಮಳೆಯಾಗಿದೆ. ಸಂಜೆಯಿಂದ ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಮಳೆಯಾಗಿದೆ. ಇದ್ರಿಂದ ಯಲ್ಲಾಪುರ ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿದೆ. ಮುಂಡಗೋಡ ತಾಲೂಕಿನ ಬಡ್ಡಿಗೇರಿ ಹಾಗೂ ಗುಂಜಾವತಿ ಮದ್ಯೆ ಬಡ್ಡಿಗೇರಿ ಹಳ್ಳ ತುಂಬಿದ ಪರಿಣಾಮ ಹಳ್ಳದ ನೀರು ರಸ್ತೆಯ ಮೇಲೆ ಹರಿದು, ಕಿರು ಸೇತುವೆ ಮುಳುಗಡೆಯಾಗಿದೆ. ಹೀಗಾಗಿ, ರಸ್ತೆ ಮೇಲೆ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಯಲ್ಲಾಪುರ ರಸ್ತೆಯ ಬಹುತೇಕ ಕಡೆ ಭಾರಿ ಮಳೆಯಾಗಿದ್ದು ,ಹಲವು ಹಳ್ಳಗಳಲ್ಲಿ ನೀರು ಭರ್ತಿಯಾಗಿ ಹರಿಯುತ್ತಿದೆ.

Post
ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಲಕ್ಕೊಳ್ಳಿಯ ಯುವ ಕ್ರೀಡಾಪಟು ಎನ್.ಎಸ್. ಸಿಮಿ ಸಂಭ್ರಮದ ಹೆಜ್ಜೆ..!

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಲಕ್ಕೊಳ್ಳಿಯ ಯುವ ಕ್ರೀಡಾಪಟು ಎನ್.ಎಸ್. ಸಿಮಿ ಸಂಭ್ರಮದ ಹೆಜ್ಜೆ..!

 ಮುಂಡಗೋಡ: ತಾಲೂಕಿನ ಚೌಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಲಕ್ಕೊಳ್ಳಿ ಗ್ರಾಮದ ಯುವ ಕ್ರೀಡಾಪಟು ಎನ್.ಎಸ್.ಸಿಮಿ, ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ 4×100 ಮೀ ರಿಲೇ ಓಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅಲ್ಲಿಂದಲೇ, ವಿಡಿಯೋ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ಗೆ ಆಯ್ಕೆಯಾಗಿ ಮುಂಡಗೋಡ ತಾಲೂಕಿನ ಕೀರ್ತಿಯನ್ನು ಹಾಗೂ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಸದ್ಯ ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿರೊ ಎನ್.ಎಸ್.ಸಿಮಿ, ಹುರುಪಿನಿಂದಲೇ ಭಾರತ ಧ್ವಜ ಹಿಡಿದು ಸಂಭ್ರಮಿಸಿದ್ದಾರೆ....

Post
ಮರಗಡಿಯಲ್ಲಿ ರೈತನ ಮೇಲೆ ಕರಡಿಯಿಂದ ಮಾರಣಾಂತಿಕ ದಾಳಿ, ರೈತ ಗಂಭೀರ..!

ಮರಗಡಿಯಲ್ಲಿ ರೈತನ ಮೇಲೆ ಕರಡಿಯಿಂದ ಮಾರಣಾಂತಿಕ ದಾಳಿ, ರೈತ ಗಂಭೀರ..!

 ಮುಂಡಗೋಡ: ತಾಲೂಕಿನ ಕಾತೂರು ಅರಣ್ಯ ವ್ಯಾಪ್ತಿಯಲ್ಲಿ ಅನ್ನದಾತನ ಮೇಲೆ ಕರಡಿ ದಾಳಿ ಮಾಡಿದೆ. ಮರಗಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಫಕ್ಕಿರೇಶ ರಾಮಣ್ಣ ಗೊಲ್ಲರ್ ಎಂಬುವನ ಮೇಲೆ ಮಾರಣಾಂತಿಕ ದಾಳಿ ಮಾಡಿದೆ. ಮರಿಗಳೊಂದಿಗೆ ಆಹಾರ ಅರಸಿ ಬಂದಿದ್ದ ಕರಡಿ ರೈತನನ್ನು ನೋಡಿ ಪ್ರಾಣಭಯದಿಂದ ದಾಳಿ ಮಾಡಿದೆ ಎನ್ನಲಾಗಿದೆ. ಅಂದಹಾಗೆ, ಗದ್ದೆಯಲ್ಲಿ ಮಂಗಗಳ ಹಾವಳಿ ಕಾರಣಕ್ಕೆ ಗೋವಿನಜೋಳ ರಕ್ಷಣೆಗಾಗಿ ಕಟ್ಟಿದ್ದ ಶ್ವಾನಗಳಿಗೆ ಆಹಾರ ಕೊಡಲು ಹೋದಾಗ ಘಟನೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ತಕ್ಷಣವೇ ಸ್ಥಳೀಯರು ರೈತನ‌ ನೆರವಿಗೆ ಬಂದಿದ್ದಾರೆ....

Post
ಮುಂಡಗೋಡ ತಹಶೀಲ್ದಾರ್ ವಿರುದ್ಧ ದಲಿತರ ಅನಿರ್ಧಿಷ್ಟ ಧರಣಿ, ಸಾಹೇಬ್ರೇ ಇನ್ನೂ ಎಷ್ಟು ದಿನ..?

ಮುಂಡಗೋಡ ತಹಶೀಲ್ದಾರ್ ವಿರುದ್ಧ ದಲಿತರ ಅನಿರ್ಧಿಷ್ಟ ಧರಣಿ, ಸಾಹೇಬ್ರೇ ಇನ್ನೂ ಎಷ್ಟು ದಿನ..?

ನಿಜ, ಮುಂಡಗೋಡಿನ ಇತಿಹಾಸದಲ್ಲೇ ಇದು ಬಹುದೊಡ್ಡ ನಾಚಿಗ್ಗೇಡಿನ ಸಂಗತಿ ಅಂದ್ರೂ ತಪ್ಪಿಲ್ಲ ಅನಿಸತ್ತೆ. ತಾಲೂಕಿನ ದಂಡಾಧಿಕಾರಿಯೊಬ್ಬರ ವಿರುದ್ಧ ಈ ಪರಿಯ ಹೋರಾಟ ಬಹುಶಃ ಹಿಂದೆ ಎಂದೂ ನಡೆದಿರಲಿಲ್ಲವೆನೋ..? ಇಷ್ಟಾದ್ರೂ ಆ ಅಧಿಕಾರಿಯನ್ನ ಬಚಾವ್ ಮಾಡುವಲ್ಲಿ ತೆರೆ‌ಮರೆಯ ಕಸರತ್ತು ನಡೆಸ್ತಿರೋ “ದೊಡ್ಡ”ವರಿಗೆ ಏನೂ ಅನಿಸ್ತಾನೇ ಇಲ್ವಾ..? ಅದೂ ಹೋಗಲಿ, ತಮ್ಮ ಮೇಲೆ ಅಂತಹದ್ದೊಂದು ಭಯಂಕರ ಆರೋಪ ಬಂದು, ಪೊಲೀಸ್ ಠಾಣೆಯ ಮೆಟ್ಟಿಲೇರಿ ಜಗಜ್ಜಾಹೀರಾದಾಗಲೂ ಆ ಅಧಿಕಾರಿಗೆ ಮುಂಡಗೋಡಿಗರ ತಾಳ್ಮೆ ಅರ್ಥ ಆಗ್ತಿಲ್ವಾ..? ಇದು ಬಹುತೇಕ‌ ಮುಂಡಗೋಡಿನ ಪ್ರಜ್ಞಾವಂತರ ಪ್ರಶ್ನೆ..!...

Post
ಹುಲಿಹೊಂಡದಲ್ಲಿ ಆಕಸ್ಮಿಕ ಬೆಂಕಿಗೆ ಕಬ್ಬು ಭಸ್ಮ..!

ಹುಲಿಹೊಂಡದಲ್ಲಿ ಆಕಸ್ಮಿಕ ಬೆಂಕಿಗೆ ಕಬ್ಬು ಭಸ್ಮ..!

ಹುಲಿಹೊಂಡದಲ್ಲಿ ಆಕಸ್ಮಿಕ ಬೆಂಕಿಗೆ ಕಬ್ಬು ಭಸ್ಮ..! ಮುಂಡಗೋಡ: ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಕಬ್ಬು ಸುಟ್ಟು ಕರಕಲಾದ ಘಟನೆ ನಡೆದಿದೆ. ಆಕಸ್ಮಿವಾಗಿ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆ ಪಕ್ಕದ ಗದ್ದೆಗೂ ಹರಡುವ ಸಾಧ್ಯತೆ ಇದ್ದ ಕಾರಣಕ್ಕೆ ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸ ಪಟ್ಟರು, ನಂತರ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಿದ್ರು‌. ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ಕಬ್ಬು ಸುಟ್ಟು ಕರಕಲಾಗಿದ್ದು ರೈತನ ಬದುಕು ಮೂರಾಬಟ್ಟೆಯಾಗಿದೆ‌ ಹೀಗಾಗಿ ರೈತನಿಗೆ ಪರಿಹಾರ...

error: Content is protected !!