PSI Transfer: ಮುಂಡಗೋಡ ಠಾಣೆಯ ಪಿಎಸ್ಐ ಪರಶುರಾಮ್ ಮಿರ್ಜಿಗಿ ವರ್ಗಾವಣೆಗೊಂಡಿದ್ದಾರೆ. ಸದ್ಯ ನೂತನ ಪಿಎಸ್ಐ ಆಗಿ ಮಾಹಾಂತೇಶ್ ವಾಲ್ಮೀಕಿ ಬಂದಿಳಿಯಲಿದ್ದಾರೆ. ಅಂದಹಾಗೆ, ಒಂದು ವರ್ಷ ಎಂಟು ತಿಂಗಳು, ಮುಂಡಗೋಡ ಠಾಣೆಯ ಪಿಎಸ್ಐ ಆಗಿ ಕಾರ್ಯ ನಿರ್ವಹಿಸಿರೋ ಪರಶುರಾಮ್, ಜನರೊಂದಿಗೆ ಬೆರೆತು ಕೆಲಸ ಮಾಡುತ್ತಿದ್ದರು. ಸದ್ಯ, ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆಗೆ ವರ್ಗವಾಗಿದ್ದಾರೆ.