Home Police news

Tag: Police news

Post
ಧಾರವಾಡದ ಕೋಟೂರಿನಲ್ಲಿ ಬಿಜೆಪಿ ಯುವ ಮುಖಂಡನ ಬರ್ಬರ ಹತ್ಯೆ, ಯುವಕರ ನಡುವಿನ ಸಣ್ಣ ಜಗಳ, ಕೊಲೆಯಲ್ಲಿ ಅಂತ್ಯ..!

ಧಾರವಾಡದ ಕೋಟೂರಿನಲ್ಲಿ ಬಿಜೆಪಿ ಯುವ ಮುಖಂಡನ ಬರ್ಬರ ಹತ್ಯೆ, ಯುವಕರ ನಡುವಿನ ಸಣ್ಣ ಜಗಳ, ಕೊಲೆಯಲ್ಲಿ ಅಂತ್ಯ..!

ಧಾರವಾಡ: ಬಿಜೆಪಿ ಧಾರವಾಡ ಜಿಲ್ಲಾ ಯವಮೋರ್ಚಾ ಉಪಾಧ್ಯಕ್ಷ ಪ್ರವೀಣ ಕಮ್ಮಾರ ಎಂಬುವವರನ್ನು ನಿನ್ನೆ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ. ಪ್ರವೀಣ ಕಮ್ಮಾರ ಎಂಬುವವರೇ ಹತ್ಯೆಗೀಡಾದವರು. ನಿನ್ನೆ ರಾತ್ರಿ ವೈಯಕ್ತಿಕ ಕಾರಣಕ್ಕಾಗಿ ಯುವಕರ ಮಧ್ಯೆ ಜಗಳ ಸಂಭವಿಸಿದ್ದು, ಈ ಜಗಳ ಪ್ರವೀಣ ಅವರ ಕೊಲೆಯಲ್ಲಿ ಅಂತ್ಯವಾಗಿದೆ. ಜಗಳದಲ್ಲಿ ದುಷ್ಕರ್ಮಿಗಳು ಪ್ರವೀಣ ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಚಿಕಿತ್ಸೆಗಾಗಿ ಪ್ರವೀಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಪ್ರವೀಣ ಅಸುನೀಗಿದ್ದಾರೆ....

Post
ಘಟಪ್ರಭಾ ನದಿಯಲ್ಲಿ ಮುಂಡಗೋಡಿನ ನಾಲ್ವರು ಯುವಕರ ಸಾವು ಕೇಸ್, ಚಿಕಿತ್ಸೆ ಫಲಿಸದೇ ಮತ್ತೋರ್ವ ಯುವಕ ಸಾವು..!

ಘಟಪ್ರಭಾ ನದಿಯಲ್ಲಿ ಮುಂಡಗೋಡಿನ ನಾಲ್ವರು ಯುವಕರ ಸಾವು ಕೇಸ್, ಚಿಕಿತ್ಸೆ ಫಲಿಸದೇ ಮತ್ತೋರ್ವ ಯುವಕ ಸಾವು..!

ಮುಂಡಗೋಡ: ತಾಲೂಕಿನ ಶಿರಗೇರಿ ಗ್ರಾಮದ ಯುವಕರು, ಬೆಳಗಾವಿ ಜಿಲ್ಲೆಯ ಘಟಪ್ರಭಾ ನದಿಯಲ್ಲಿ ಈಜಲು ಹೋಗಿ ಮೃತಪಟ್ಟವರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ. ನೀರಲ್ಲಿ ಮುಳುಗಿ ತೀವ್ರ ಅಸ್ವಸ್ಥ ಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಅನ್ನೊ ಮಾಹಿತಿ ಲಭ್ಯವಾಗಿದೆ. ತಾಲೂಕಿನ ಶಿರಗೇರಿ ಗ್ರಾಮದ ರಾಮಚಂದ್ರ ಜೋರೆ ಎಂಬುವನೆ ಸಾವನ್ನಪ್ಪಿದ ಮತ್ತೋರ್ವ ಯುವಕನಾಗಿದ್ದು, ನಿನ್ನೆ ಶುಕ್ರವಾರ ದುಪದಾಳ ಗ್ರಾಮದ ಸನಿಹ ಘಟಪ್ರಭಾ ನದಿಯಲ್ಲಿ 6ಜನ ಸ್ನೇಹಿತರು ಈಜಲು ಇಳಿದಿದ್ದರು ಈ ವೇಳೆ ನಾಲ್ವರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದು ಮತ್ತಿಬ್ಬರು...

Post
ಘಟಪ್ರಭಾ ನದಿಯಲ್ಲಿ ಭೀಕರ ದುರಂತ, ಮುಂಡಗೋಡಿನ ನಾಲ್ವರು ಯುವಕರು ನದಿಯಲ್ಲಿ ಮುಳುಗಿ ಸಾವು..!

ಘಟಪ್ರಭಾ ನದಿಯಲ್ಲಿ ಭೀಕರ ದುರಂತ, ಮುಂಡಗೋಡಿನ ನಾಲ್ವರು ಯುವಕರು ನದಿಯಲ್ಲಿ ಮುಳುಗಿ ಸಾವು..!

ಬೆಳಗಾವಿ ಜಿಲ್ಲೆಯ ಘಟಪ್ರಭಾದಲ್ಲಿ ಭಾರೀ ಅನಾಹುತ ಸಂಭವಿಸಿದೆ.. ಘಟಪ್ರಭಾ ನದಿಯಲ್ಲಿ ಮುಳುಗಿ ಮುಂಡಗೋಡ ತಾಲೂಕಿನ ನಾಲ್ವರು ಯುವಕರು ದಾರುಣ ಸಾವು ಕಂಡಿದ್ದಾರೆ. ಇಬ್ಬರು ಗಂಭೀರವಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮುಂಡಗೋಡ ತಾಲೂಕಿನ ಸಿರಿಗೇರಿ ಗ್ರಾಮದ ಸಂತೋಷ ಬಾಬು ಎಡಗೆ(19), ಅಜಯ್ ಬಾಬು ಜೋರೆ (19), ಕೃಷ್ಣ ಬಾಬು ಜೋರೆ (19), ಆನಂದ್ ವಿಷ್ಣು ಕೋಕರೆ (20) ನೀರಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇನ್ನು ಘಟನೆಯಲ್ಲಿ ರಾಮಚಂದ್ರ ವಿಷ್ಣು ಕೋಕರೆ, ವಿಠ್ಠಲ್ ಜಾನು ಕೋಕರೆ ನೀರಲ್ಲಿ ಮುಳುಗಿ...

Post
ಅಯ್ಯೋ ವಿಧಿಯೇ..! ಆಟೋ ಡಿಕ್ಕಿಯಾಗಿ ನಾಲ್ಕು ತಿಂಗಳ ಗರ್ಭಿಣಿ ದಾರುಣ ಸಾವು..!

ಅಯ್ಯೋ ವಿಧಿಯೇ..! ಆಟೋ ಡಿಕ್ಕಿಯಾಗಿ ನಾಲ್ಕು ತಿಂಗಳ ಗರ್ಭಿಣಿ ದಾರುಣ ಸಾವು..!

ಅಂಕೋಲಾ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗರ್ಭಿಣಿ ಮಹಿಳೆಯೋರ್ವಳಿಗೆ ರಿಕ್ಷಾ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾವಿಕೇರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಶೋಭಾ ಗೋಪಾಲ ನಾಯಕ (28) ಎಂಬಾಕೆಯೆ ಮೃತಪಟ್ಟ ದುರ್ದೈವಿಯಾಗಿದ್ದಾಳೆ, ಮೃತ ಮಹಿಳೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ಈಕೆ ಪತಿಯ ಜೊತೆಯಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಟೋ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಆಟೋ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬದಿಗೆ ಬಂದು ಅಪಘಾತ ಪಡಿಸಿದ್ದಾನೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ...

Post
ಮುಂಡಗೋಡ ಪೊಲೀಸರ ಕಾರ್ಯಾಚರಣೆ, ಟಿಬೇಟಿಯನ್ ಕ್ಯಾಂಪ್ ಬಳಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಅಂದರ್..!

ಮುಂಡಗೋಡ ಪೊಲೀಸರ ಕಾರ್ಯಾಚರಣೆ, ಟಿಬೇಟಿಯನ್ ಕ್ಯಾಂಪ್ ಬಳಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಅಂದರ್..!

ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಎಳೆದು ತಂದಿದ್ದಾರೆ. ಟಿಬೇಟಿಯನ್ ಕ್ಯಾಂಪ್ ನಂಬರ್ 2 ರ ಕುಸೂರು ಕ್ರಾಸ್ ಬಳಿ ಗಾಂಜಾ ಸಾಗಾಟ ‌ಮಾಡುತ್ತಿದ್ದ ಇಬ್ಬರು ಆರೋಪಿಗಳು ಸೇರಿದಂತೆ 410 ಗ್ರಾಂ ಗಾಂಜಾ ಹಾಗೂ ಸ್ಕೂಟಿ ವಶ ಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಆಧಾರದಲ್ಲಿ ದಾಳಿ‌ ಮಾಡಿರೋ ಮುಂಡಗೋಡ ಪೊಲೀಸರು, ಮುಂಡಗೋಡ ಯಲ್ಲಾಪುರ ರಸ್ತೆಯ ಬ್ಲ್ಯೂ ಹಿಲ್ ಹೊಟೇಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ, ಉತ್ತರ ಪ್ರದೇಶ ಮೂಲದ ಆರ್ಯನ್ ಅಲಿಯಾಸ್...

Post
ಅಮ್ಮಾಜಿ ಕೆರೆ ಹತ್ತಿರ ಅಂಬ್ಯುಲೆನ್ಸ್, ಬೈಕ್ ನಡುವೆ ಡಿಕ್ಕಿ, ಯುವಕನಿಗೆ ಗಾಯ..!

ಅಮ್ಮಾಜಿ ಕೆರೆ ಹತ್ತಿರ ಅಂಬ್ಯುಲೆನ್ಸ್, ಬೈಕ್ ನಡುವೆ ಡಿಕ್ಕಿ, ಯುವಕನಿಗೆ ಗಾಯ..!

ಮುಂಡಗೋಡ ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆ ಹತ್ತಿರ ಅಪಘಾತವಾಗಿದೆ. ಅಂಬ್ಯುಲೆನ್ಸ್ ಹಾಗೂ ಬೈಕ್ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ. ಮುಂಡಗೋಡಿನ ತೇಜಸ್ (26) ಎಂಬುವ ಯುವಕನೇ ಗಾಯಗೊಂಡಿದ್ದು, ಸದ್ಯ ಮುಂಡಗೋಡ ತಾಲೂಕಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಮುಂಡಗೋಡ ಅಗಡಿ ಚೆಕ್ ಪೊಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶಕ್ಕೆ..! ಸಿಕ್ಕ ಮೊತ್ತ ಎಷ್ಟು ಗೊತ್ತಾ..?

ಮುಂಡಗೋಡ ಅಗಡಿ ಚೆಕ್ ಪೊಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶಕ್ಕೆ..! ಸಿಕ್ಕ ಮೊತ್ತ ಎಷ್ಟು ಗೊತ್ತಾ..?

ಮುಂಡಗೋಡ ತಾಲೂಕಿನ ಅಗಡಿ ಚೆಕ್ ಪೊಸ್ಟ್ ಬಳಿ ದಾಖಲೆ ಇಲ್ಲದೇ ಸ್ಕೂಟಿಯಲ್ಲಿ ಸಾಗಿಸುತ್ತಿದ್ದ 3.40 ಲಕ್ಷ ರೂ. ವಶ ಪಡಿಸಿಕೊಳ್ಳಲಾಗಿದೆ‌. ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ದಾಳಿ ನಡೆಸಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಹಣ ವಶಕ್ಕೆ ಪಡೆದಿದ್ದಾರೆ‌. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಚಿಸಲಾಗಿರೋ ಚೆಕ್ ಪೊಸ್ಟ್ ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಮುಂಡಗೋಡ ನೆಹರು ನಗರದ ನಿವಾಸಿ ಹಸನ ಸಾಬ್ ಮೋದಿನ್ ಸಾಬ್ ಫರೀದ್ ಎಂಬುವವರು ತಮ್ಮ ಸ್ಕೂಟಿಯಲ್ಲಿ ಹಣವನ್ನು ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ. ಹೀಗಾಗಿ,...

Post
ನ್ಯಾಸರ್ಗಿ ಡ್ಯಾಂ ನಲ್ಲಿ ಮಗನ ಎದುರೇ ತಂದೆ ಸಾವು, ನೀರಲ್ಲಿ ಈಜಲು ಹೋದವ ಹೆಣವಾದ..!

ನ್ಯಾಸರ್ಗಿ ಡ್ಯಾಂ ನಲ್ಲಿ ಮಗನ ಎದುರೇ ತಂದೆ ಸಾವು, ನೀರಲ್ಲಿ ಈಜಲು ಹೋದವ ಹೆಣವಾದ..!

ಮುಂಡಗೋಡ: ತಾಲೂಕಿನ ನ್ಯಾಸರ್ಗಿ ಡ್ಯಾಂ ನಲ್ಲಿ ಈಜಲು ನೀರಿಗೆ ಇಳಿದಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಪುಟ್ಟ ಮಗನ ಕಣ್ಣೇದುರೇ ತಂದೆ ನೀರಲ್ಲಿ ಮುಳುಗಿ ಸಾವು ಕಂಡಿದ್ದು ಧಾರುಣವಾಗಿದೆ. ಲಕ್ಷ್ಮಣ ಭೀಮಣ್ಣ ಬೋವಿ (42) ಈಜಲು ಹೋಗಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಇವನು ಮದ್ಯಾನ ನ್ಯಾಸರ್ಗಿ ಡ್ಯಾಂ ನಲ್ಲಿ ಸ್ನಾನ ಮಾಡಲೆಂದು, ಮಗನ ಬಳಿ ಬಟ್ಟೆ ಕೊಟ್ಟು ನೀರಿಗೆ ಇಳಿದಿದ್ದ ಎನ್ನಲಾಗಿದೆ. ಈ ವೇಳೆ ನೀರಲ್ಲಿ ಈಜಾಡುತ್ತಿರುವಾಗಲೇ ನಾಪತ್ತೆಯಾಗಿದ್ದಾನೆ. ಹೀಗಾಗಿ ತಂದೆ ನೀರಲ್ಲಿ ಕಣ್ಮರೆಯಾಗುತ್ತಲೇ ಆತಂಕಗೊಂಡ ಮಗ ಸ್ಥಳೀಯರಿಗೆ...

Post
ರಾಣೆಬೆನ್ನೂರಿನ ಪಿಎಸ್ಐ ಮತ್ತವನ ಚಾಲಕ ಲೋಕಾ ಬಲೆಗೆ, ಅದೇಷ್ಟು ಲಂಚ ಪಡೀತಿದ್ರು ಗೊತ್ತಾ..?

ರಾಣೆಬೆನ್ನೂರಿನ ಪಿಎಸ್ಐ ಮತ್ತವನ ಚಾಲಕ ಲೋಕಾ ಬಲೆಗೆ, ಅದೇಷ್ಟು ಲಂಚ ಪಡೀತಿದ್ರು ಗೊತ್ತಾ..?

ರಾಣೆಬೆನ್ನೂರಿನ ಶಹರ ಠಾಣೆಯ ಪಿಎಸ್ಐ ಹಾಗೂ ಆತನ ವಾಹನ ಚಾಲಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅನಾಮತ್ತಾಗಿ 40 ಸಾವಿರ ಲಂಚ ಸ್ವೀಕರಿಸೋವಾಗ ತಗಲಾಕ್ಕೊಂಡಿದ್ದಾರೆ. ರಾಣೆಬೆನ್ನೂರು ಶಹರ ಠಾಣೆ ಪಿಎಸ್ಐ ಸುನೀಲ ತೇಲಿ ಮತ್ತು ಈತನ ವಾಹನದ ಚಾಲಕ ಸಚಿನ್ ಲೋಕಾಯುಕ್ತ ಬಲೆಗೆ ಬಿದ್ದ ಖತರ್ನಾಕ ಲಂಚ ಬಾಕ ಆರೋಪಿಗಳು. ಇವರೀರ್ವರೂ ಫಿರೋಜ್ ಎಂಬುವವರ ಮನೆ ಬಾಡಿಗೆ ವಸೂಲಿ‌ ಮಾಡಿಸಿಕೊಡುವ ವಿಚಾರಕ್ಕೆ ಬರೋಬ್ಬರಿ 50ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹೀಗಾಗಿ, ಅದರಲ್ಲಿ 40 ಸಾವಿರ ರೂ.‌...

Post
ಗಾಜೀಪುರ ಬಳಿ ಭೀಕರ ಅಪಘಾತ, ಚಿಗಳ್ಳಿಯ ಓರ್ವ ಯುವಕ ಸ್ಥಳದಲ್ಲೇ ಸಾವು, ಮತ್ತೋರ್ವನಿಗೆ ಗಂಭೀರ ಗಾಯ..!

ಗಾಜೀಪುರ ಬಳಿ ಭೀಕರ ಅಪಘಾತ, ಚಿಗಳ್ಳಿಯ ಓರ್ವ ಯುವಕ ಸ್ಥಳದಲ್ಲೇ ಸಾವು, ಮತ್ತೋರ್ವನಿಗೆ ಗಂಭೀರ ಗಾಯ..!

ಮುಂಡಗೋಡ ತಾಲೂಕಿನ ಗಡಿಭಾಗ ಹಾಗೂ ಹಾನಗಲ್ ತಾಲೂಕಿನ ಗಾಜೀಪುರ ಬಳಿ ಭೀಕರ ಅಪಘಾತವಾಗಿದೆ. ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಚಿಗಳ್ಳಿಯ ಯುವಕನೋರ್ವ ಸ್ಥಳದಲ್ಲೇ ಮೃತಟ್ಟಿದ್ದಾನೆ. ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಮುಂಡಗೋಡ ತಾಲೂಕಿನ ಚಿಗಳ್ಳಿಯ ಯಲ್ಲಪ್ಪ ಕಡೆಮನಿ(40) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಯಾಗಿದ್ದು, ಈತ ಇವತ್ತು ತನ್ನ ಅಳಿಯನೊಂದಿಗೆ ಬೈಕ್ ಏರಿ ಹಾನಗಲ್ ಗೆ ಹೋಗಿದ್ದ. ಕೆಲಸ ಮುಗಿಸಿಕೊಂಡು ವಾಪಸ್ ಬರುತ್ತಿದ್ದಾಗ ಹಾನಗಲ್ ತಾಲೂಕಿ‌ನ ಗಾಜೀಪುರ ಬಳಿ ಬೈಕ್ ಗಳ‌ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಡಿಕ್ಕಿಯ...

error: Content is protected !!