ಹುಲಿಹೊಂಡದಲ್ಲಿ ಆಕಸ್ಮಿಕ ಬೆಂಕಿಗೆ ಕಬ್ಬು ಭಸ್ಮ..! ಮುಂಡಗೋಡ: ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಕಬ್ಬು ಸುಟ್ಟು ಕರಕಲಾದ ಘಟನೆ ನಡೆದಿದೆ. ಆಕಸ್ಮಿವಾಗಿ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆ ಪಕ್ಕದ ಗದ್ದೆಗೂ ಹರಡುವ ಸಾಧ್ಯತೆ ಇದ್ದ ಕಾರಣಕ್ಕೆ ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸ ಪಟ್ಟರು, ನಂತರ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಿದ್ರು. ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ಕಬ್ಬು ಸುಟ್ಟು ಕರಕಲಾಗಿದ್ದು ರೈತನ ಬದುಕು ಮೂರಾಬಟ್ಟೆಯಾಗಿದೆ ಹೀಗಾಗಿ ರೈತನಿಗೆ ಪರಿಹಾರ...
Top Stories
ಬೈಕ್ ಅಪಘಾತ, ರಜೆಗೆ ಬಂದಿದ್ದ ಯೋಧ ಸ್ಥಳದಲ್ಲೇ ಸಾ*ವು..!
ಕಾತೂರು| ಓರಲಗಿ ಗದ್ದೆಯ ಪೈಪಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರಹಾವಿನ ರಕ್ಷಣೆ..!
ಸತತ 7 ದಿನ 170 ಗಂಟೆಗಳ ಕಾಲ ಭರತನಾಟ್ಯ ಮಾಡಿ ವಿಶ್ವದಾಖಲೆ ಬರೆದ ರೆಮೋನಾ ಪಿರೇರಾ..!
ಧರ್ಮಸ್ಥಳ ಶವ ಪ್ರಕರಣ; SIT ತನಿಖೆ ಉದ್ದೇಶ ಸತ್ಯ ಹೊರ ಬರಲಿ ಎಂಬುದಷ್ಟೆ, ಕಾರವಾರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ..!
‘ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ..ʼ ; ಹನುಮಂತ ದೇವರ ಕಾರ್ಣಿಕ..!
ಮುಂಡಗೋಡ ತಾಲೂಕಾಸ್ಪತ್ರೆ ಆವರಣದಲ್ಲೇ ಆರೋಗ್ಯ ಅಧಿಕಾರಿಗಳ ದಿಢೀರ್ ದಾಳಿ..! ಕ್ಯಾಂಟೀನ್, ಜನೌಷಧಿ ಕೇಂದ್ರದಲ್ಲಿ ಏನದು ಸಮಸ್ಯೆ..?
ಇಸ್ರೋ-ನಾಸಾ ಜಂಟಿ ಸಹಭಾಗಿತ್ವದ ನಿಸಾರ್ ಉಪಗ್ರಹ ಉಡಾವಣೆ..!
ಆಕಸ್ಮಿಕವಾಗಿ ಕಳೆನಾಶಕ ಸೇವಿಸಿದ್ದ (ಕೊಪ್ಪ) ಇಂದಿರಾನಗರದ ವ್ಯಕ್ತಿ ಸಾವು..!
ಕಾತೂರು ಪ್ರೌಢಶಾಲೆಯಲ್ಲಿ ಆ “ಹುಡುಗ”ನ ಭಯಕ್ಕೆ, ತರಗತಿಯನ್ನೇ ಬಹಿಷ್ಕರಿಸಿದ ವಿದ್ಯಾರ್ಥಿಗಳು..! ದೈರ್ಯ ತುಂಬಿದ ಪಿಐ ರಂಗನಾಥ್..!
ಚಿಗಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ರಹೀಮಾಬಿ ಮಕ್ತೇಸರ್, ಉಪಾಧ್ಯಕ್ಷರಾಗಿ ರತ್ನವ್ವ ಅವಿರೋಧ ಆಯ್ಕೆ..!
ಇಸ್ಪೀಟು ಅಡ್ಡೆಯ ಮೇಲೆ ಭರ್ಜರಿ ದಾಳಿ ಕೇಸ್..! ಮುಂಡಗೋಡ ಪೊಲೀಸ್ರಿಗೆ ಬಂದಿತ್ತು ಅದೊಂದು ಪೋನ್ ಕಾಲ್, ಬೆನ್ನತ್ತಿ ಹೋದವರದ್ದೇ ರೋಚ”ಕತೆ”..!
ಶಿರಸಿ ಬಳಿ ಹೋಂ ಸ್ಟೇಯಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಬಂಧನ, ಬಂಧಿತರು ಯಾರ್ಯಾರು ಗೊತ್ತಾ..? ವಿವರ ಇಲ್ಲಿದೆ ನೋಡಿ..!
ವಾಯುಭಾರ ಕುಸಿತ ಹಿನ್ನೆಲೆ; ಜು.29 ರವರೆಗೆ ಅತೀ ಭಾರೀ ಮಳೆ ಮುನ್ಸೂಚನೆ..!
ಶಿರಸಿ ಡಿವೈಎಸ್ಪಿ ನೇತೃತ್ವದಲ್ಲಿ ಭರ್ಜರಿ ದಾಳಿ, ಇಸ್ಪೀಟು ಆಟದಲ್ಲಿ ತೊಡಗಿದ್ದ 19 ಜನರ ಬಂಧನ, ಸಿಕ್ಕ ಹಣವೆಷ್ಟು..? ಹಾವೇರಿ ವೈದ್ಯನ ರೆಸಾರ್ಟಿನಲ್ಲಿ ದಂಧೆ..!?
ವಾಣಿಜ್ಯ ತೆರಿಗೆ ಉಪನಿರ್ದೇಶಕನ ಮನೆಗೆ ಲೋಕಾ ದಾಳಿ – ಅಪಾರ ಪ್ರಮಾಣದ ನಗದು, ಬಂಗಾರ, ಬೆಳ್ಳಿ ಪತ್ತೆ..!
ಅರಣ್ಯದಲ್ಲಿ ದನಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸುವಂತೆ ಸಚಿವ ಈಶ್ವರ ಖಂಡ್ರೆ ಸೂಚನೆ..!
School holiday News; ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ ಕರಾವಳಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ..!
ಕೋರ್ಟ್ ಆವರಣದಲ್ಲೇ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಪಾಪಿ ಪತಿ..!
ಉತ್ತರ ಕನ್ನಡ; ಗುಡ್ಡ ಕುಸಿತ, ಕಡಲುಕೊರೆತ ತಡೆಗೆ 800 ಕೋಟಿ ಅನುದಾನ- ಸಚಿವ ಕೃಷ್ಣ ಬೈರೇಗೌಡ
Tag: Police news
ಬಾಚಣಕಿ ಡ್ಯಾಂ ನಲ್ಲಿ ನಾಪತ್ತೆಯಾಗಿರೋ ವಿದ್ಯಾರ್ಥಿಗಾಗಿ ಶೋಧ..! ಹಾಗಾದ್ರೆ ಆತ ಏನಾದ..?
ಮುಂಡಗೋಡ; ಬಾಚಣಕಿ ಜಲಾಶಯದಲ್ಲಿ ನಿನ್ನೆ ನಾಪತ್ತೆಯಾಗಿರೋ ವಿದ್ಯಾರ್ಥಿಗಾಗಿ ಇಂದೂ ಕೂಡ ಶೋಧ ಕಾರ್ಯ ಜಾರಿಯಲ್ಲಿತ್ತು. ಆದ್ರೆ ಇದುವರೆಗೂ ವಿದ್ಯಾರ್ಥಿ ಪತ್ತೆಯಾಗಿಲ್ಲ. ನಿನ್ನೆ ಇದೇ ಬಾಚಣಕಿ ಡ್ಯಾಂ ಅಂಗಳದಲ್ಲಿ ಮುಂಡಗೋಡ ಜೂನಿಯರ್ ಕಾಲೇಜಿನಲ್ಲಿ ಪಿಯೂ ಓದುತ್ತಿದ್ದ ಕಲಕೇರಿ ಗ್ರಾಮದ ತನುಜಾ ಎನ್ನುವ ವಿದ್ಯಾರ್ಥಿನಿಯ ಶವ ಪತ್ತೆಯಾಗಿತ್ತು. ಅಲ್ಲದೇ, ಆಕೆಯ ಜೊತೆಗೆ ಬಂದಿದ್ದ ಅಂತಾ ಹೇಳಲಾಗಿರೊ ವಿದ್ಯಾರ್ಥಿಯ ಪಾದರಕ್ಷೆಗಳು ಜಲಾಶಯದ ದಡದಲ್ಲಿ ದೊರೆತಿದ್ದವು. ಹೀಗಾಗಿ, ವಿದ್ಯಾರ್ಥಿ ಕೂಡ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ವಿದ್ಯಾರ್ಥಿಯ ಶವಕ್ಕಾಗಿ...
ಅಯ್ಯೋ ದೇವ್ರೇ, ಬಾಚಣಕಿ ಡ್ಯಾಂನಲ್ಲಿ ಹೆಣವಾದ್ರಾ ಪ್ರೇಮಿಗಳು..? ಆತ್ಮಹತ್ಯೆನಾ..?
ಮುಂಡಗೋಡ: ಬಾಚಣಕಿ ಜಲಾಶಯದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ್ರಾ..? ಸಧ್ಯದ ಮಾಹಿತಿ ಪ್ರಕಾರ ಹೌದು ಅಂತಿವೆ ಮೂಲಗಳು. ಕಾಲೇಜು ಯೂನಿಫಾರ್ಮಿನಲ್ಲೇ ಯುವಕ ಹಾಗೂ ಯುವತಿ ಬಾಚಣಕಿ ಜಲಾಶಯದಲ್ಲಿ ದಾರುಣ ಸಾವು ಕಂಡಿರೋ ಘಟನೆ ನಡೆದಿದೆ. ಕಾಲೇಜಿನಿಂದ ನೇರವಾಗಿ ಬಾಚಣಕಿ ಜಲಾಶಯಕ್ಕೆ ಬಂದಿರೋ ಯುವಕ ಯುವತಿ ಜಲಾಶಯದಲ್ಲಿ ನೀರು ಪಾಲಾಗಿದ್ದಾರೆ ಎನ್ನಲಾಗ್ತಿದೆ. ಯುವತಿ ಶವ ಹೊರ ತೆಗೆಯಲಾಗಿದ್ದು, ಮೃತ ಯುವತಿ ಮುಂಡಗೋಡ ತಾಲೂಕಿನ ಕಲಕೇರಿ ಗ್ರಾಮದ ತನುಜಾ ಅಂತಾ ತಿಳಿದು ಬಂದಿದೆ. ಆದ್ರೆ ಯುವಕನ ಶವಕ್ಕಾಗಿ ಶೋಧ ಕಾರ್ಯ ನಡೆದಿದೆ....
ಮುಂಡಗೋಡಿನಲ್ಲಿ ಮೊಬೈಲ್ ಎಗರಿಸಿದ್ದವನಿಗೆ ಬಿತ್ತು ಬಿಸಿ ಬಿಸಿ ಗೂಸಾ..!
ಮುಂಡಗೋಡ; ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಮೊಬೈಲ್ ಕಳ್ಳತನ ಮಾಡಿದ್ದ ವ್ಯಕ್ತಿಗೆ ಧರ್ಮದೇಟು ಬಿದ್ದಿದೆ. ಪಟ್ಟಣದ ಮೊಬೈಲ್ ಶಾಪ್ ಒಂದರಲ್ಲಿ ಮೊಬೈಲ್ ಖರೀಧಿಸುತ್ತಿದ್ದಾಗ, ಹಿಂದಿನಿಂದ ಬಂದ ವ್ಯಕ್ತಿ ಮೊಬೈಲ್ ಎಗರಿಸಿಕೊಂಡು ಹೋಗಿದ್ದಾನೆ. ನಂತರ ಮೊಬೈಲ್ ಕಳೆದುಕೊಂಡ ಇಬ್ಬರು ವ್ಯಕ್ತಿಗಳು ಮೊಬೈಲ್ ಕಳ್ಳನಿಗಾಗಿ ತಡಕಾಡಿದ್ದಾರೆ. ನಂತ್ರ ಶಿವಾಜಿ ಸರ್ಕಲ್ ನಲ್ಲಿ ಅಚಾನಕ್ಕಾಗಿ ಮೊಬೈಲ್ ಕಳ್ಳ ತಗಲಾಕ್ಕೊಂಡಿದ್ದಾನೆ. ಹೀಗಾಗಿ, ಮೊಬೈಲ್ ಕಳೆದುಕೊಂಡಿದ್ದ ಇಬ್ಬರು ವ್ಯಕ್ತಿಗಳು ಮೊಬೈಲ್ ಕಳ್ಳನಿಗೆ ಗೂಸಾ ನೀಡಿದ್ದಾರೆ. ನಂತರ ಪೊಲೀಸ್ ಠಾಣೆಗೆ ಮೊಬೈಲ್ ಕಳ್ಳನನ್ನು ಕರೆದುಕೊಂಡು ಹೋಗಿದ್ದಾರೆ...
ಇಂದೂರಿನಲ್ಲಿ ನೇಣಿಗೆ ಶರಣಾದ 17 ವರ್ಷದ ಯುವತಿ..!
ಮುಂಡಗೋಡ: ತಾಲೂಕಿನ ಇಂದೂರಿನಲ್ಲಿ 17 ವರ್ಷದ ಯುವತಿಯೋರ್ವಳು ನೇಣಿಗೆ ಶರಣಾದ ಘಟನೆ ನಡೆದಿದೆ.ಇಂದು ಮದ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ರೂಪಾ ಬಸವರಾಜ್ ಹಳಿಯಾಳ (17) ಎಂಬ ಯುವತಿಯೇ ನೇಣಿಗೆ ಶರಣಾಗಿದ್ದು ಪೋಷಕರ ಆಕ್ರಂದನಕ್ಕೆ ಕಾರಣವಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿದ್ದಾರೆ.
ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಕಾರಿಗೆ ಗುದ್ದಿದ ಲಾರಿ..!
ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಕಾರಿಗೆ ಗುದ್ದಿದ ಲಾರಿ..! ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಲಾರಿಯೊಂದು ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಬದಿ ಗೆ ಚಿಕ್ಕದಾಗಿ ಹಾನಿಯಾದ ಘಟನೆ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಹೊರಟಿದ್ದ ಲಾರಿ, ಪಟ್ಟಣದಲ್ಲಿ ಬಂಕಾಪುರ ರಸ್ತೆ ಕಡೆಗೆ ಹೊರಟಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿತ್ತು ಎನ್ನಲಾಗಿದೆ. ಹೀಗಾಗಿ ಡಿಕ್ಕಿ ಹೊಡೆದು ಶಿರಸಿ ರಸ್ತೆ ಕಡೆಗೆ ಹೊರಟಿದ್ದ ಲಾರಿಯನ್ನು ತಡೆದ ಕಾರು ಚಾಲಕ, ಆಗಿರೋ ಹಾನಿ ತುಂಬಿ ಕೊಡುವಂತೆ...
ಅಜ್ಜಳ್ಳಿಯಲ್ಲಿ ತೋಟಕ್ಕೆ ನುಗ್ಗಿ ಹಲ್ಲೆ ಆರೋಪ ಇಬ್ಬರ ವಿರುದ್ಧ ದೂರು ದಾಖಲು..!
ಮುಂಡಗೋಡ: ತಾಲೂಕಿನ ಅಜ್ಜಳ್ಳಿಯಲ್ಲಿ ತೋಟದ ಜಮೀನಿನಲ್ಲಿ ಬಂದು ಅವಾಚ್ಯವಾಗಿ ಬೈದು ಹಲ್ಲೆ ಮಾಡಲಾಗಿದೆ ಅಂತಾ ಆರೋಪಿಸಿ ಮುಂಡಗೋಡ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಹರೀಶ್ ವೆಂಕಟೇಶ ಪಾಟೀಲ ಎಂಬುವವರು ದೂರು ನೀಡಿದ್ದು, ಹನುಮಂತ ತಿಪ್ಪಣ್ಣ ಪಾಟೀಲ, ಪ್ರವೀಣ ತಿಪ್ಪಣ್ಣ ಪಾಟೀಲ್ ಎಂಬುವವರ ವಿರುದ್ಧ ದೂರು ದಾಖಲಿಸಿದ್ದಾರೆ. ಅಜ್ಜಳ್ಳಿ ಗ್ರಾಮ ಸರ್ವೆ ನಂ. 33 ರಲ್ಲಿಯ ಜಾಗದ ಹಕ್ಕಿನ ವಿಷಯದಲ್ಲಿ 2016 ರಿಂದಲೂ ತಂಟೆ ತಕರಾರು ಮಾಡುತ್ತಾ ಬಂದಿರೋ ಆರೋಪಿತರಿಬ್ಬರೂ ಅಕ್ರಮವಾಗಿ ತೋಟಕ್ಕೆ ನುಗ್ಗಿ ಅವಾಚ್ಯವಾಗಿ ಬೈದು ಕುಡುಗೋಲಿನಿಂದ ಹಲ್ಲೆ...
ಪಾಳಾದಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ..!
ಮುಂಡಗೋಡ: ತಾಲೂಕಿನ ಪಾಳಾ ಗ್ರಾಮದಲ್ಲಿ ಮಾನಸಿಕ ವೇದನೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪಾಳಾ ಗ್ರಾಮದ ಗಂಗವ್ವ ಕೋಂ ಇಂದ್ರಪ್ಪ ಇಂಗಳೆ (60), ಎಂಬುವವಳೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ ಇವಳು ಕಳೆದ 17 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದವಳು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜ. 19 ರಂದು ಬೆಳಿಗ್ಗೆ, ಮನೆಯಲ್ಲಿ ತಂದಿಟ್ಟಿದ್ದ ಅಡಿಕೆ ಗಿಡಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಔಷಧಿಯನ್ನು ಸೇವಿಸಿ ಅಸ್ವಸ್ಥಳಾಗಿದ್ದಳು. ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ...