Home Police news

Tag: Police news

Post
ಮೈನಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್, ಕೆಂದಲಗೇರಿಯ ವ್ಯಕ್ತಿಗೆ ಗಂಭೀರ ಗಾಯ..!

ಮೈನಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್, ಕೆಂದಲಗೇರಿಯ ವ್ಯಕ್ತಿಗೆ ಗಂಭೀರ ಗಾಯ..!

ಮುಂಡಗೋಡ: ತಾಲೂಕಿನ ಮೈನಳ್ಳಿ ಸಮೀಪದಲ್ಲಿ ಬೈಕ್ ಅಪಘಾತವಾಗಿದೆ. ಬೈಕ್ ಸವಾರನೊಬ್ಬ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಕೆಂದಲೆಗೇರಿ ಗ್ರಾಮದ ನೂರ್ ಅಹ್ಮದ್ (30) ಎಂಬುವವನೇ ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಈತ ಕೆಂದಲಗೇರಿ ಗ್ರಾಮದಿಂದ ಯಲ್ಲಾಪುರ ರಸ್ತೆ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ, ಈ ವೇಳೆ ಬೈಕ್ ನಿಯಂತ್ರಣ ತಪ್ಪಿದೆ. ಪರಿಣಾಮ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬವೂ ಮುರಿದಿದೆ. ಸದ್ಯ ಬೈಕ್ ಸವಾರನ...

Post
ಹುನಗುಂದದಲ್ಲಿ ಅಪರಿಚಿತ, ಅರೆನಗ್ನ ವ್ಯಕ್ತಿಯ ತಿರುಗಾಟದ ಆತಂಕ, ಪೊಲೀಸರ ವಶಕ್ಕೆ ಒಪ್ಪಿಸಿದ ಗ್ರಾಮಸ್ಥರು..!

ಹುನಗುಂದದಲ್ಲಿ ಅಪರಿಚಿತ, ಅರೆನಗ್ನ ವ್ಯಕ್ತಿಯ ತಿರುಗಾಟದ ಆತಂಕ, ಪೊಲೀಸರ ವಶಕ್ಕೆ ಒಪ್ಪಿಸಿದ ಗ್ರಾಮಸ್ಥರು..!

 ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ಇಂದು ಸಂಜೆ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಪರಿಚಿತ ವ್ಯಕ್ತಿಯೊಬ್ಬ ಅರೆನಗ್ನ ಸ್ಥಿತಿಯಲ್ಲಿ ಏಕಾಏಕಿ ಮನೆಗಳಿಗೆ ನುಗ್ಗಿ ಅವಾಚ್ಯವಾಗಿ ನಿಂದಿಸುತ್ತಿದ್ದ. ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯನ್ನು ಕಂಡ ಜನ ಅಕ್ಷರಶಃ ಆತಂಕಕ್ಕೀಡಾಗಿದ್ದರು. ಆತ ಬಿಹಾರಿ..! ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ಕಂಡುಬಂದ. ಆದ್ರೆ ಜನ ಮಾತ್ರ ಆತ ನಡೆದುಕೊಂಡ ರೀತಿ ನೋಡಿ ಭಯಭೀತಗೊಂಡು ಆತನನ್ನು ಕಳ್ಳ‌ ಇರಬಹುದು ಅಂತ ಭಾವಿಸಿದ್ರು. ಹೀಗಾಗಿ, ತಕ್ಷಣವೇ 112 ಪೊಲೀಸರಿಗೆ ಕರೆ...

Post
ನ್ಯಾಸರ್ಗಿಯಲ್ಲಿ ವಿಷಕಾರಿ ಹಾವು ಕಚ್ಚಿ ಯುವಕ ದಾರುಣ ಸಾವು..!

ನ್ಯಾಸರ್ಗಿಯಲ್ಲಿ ವಿಷಕಾರಿ ಹಾವು ಕಚ್ಚಿ ಯುವಕ ದಾರುಣ ಸಾವು..!

ಮುಂಡಗೋಡ: ನ್ಯಾಸರ್ಗಿಯಲ್ಲಿ ಮೊಬೈಲ್ ನಲ್ಲಿ ಮಾತಾನಾಡುತ್ತ ಹಾವು ತುಳಿದ ಕಾರಣ ವಿಷಕಾರಿ ಹಾವು ಕಚ್ಚಿ ಯುವಕನೊರ್ವ ಮೃತಪಟ್ಟ ಘಟನೆ ನಡೆದಿದೆ. ಚಂದ್ರು ಗೂಳಪ್ಪ ಜಮಾತಿ(30) ಎಂಬ ಯುವಕನೇ ವಿಷಕಾರಿ ಹಾವಿಗೆ ಬಲಿಯಾಗಿದ್ದಾನೆ. ನಿನ್ನೆ ಬೆಳಿಗ್ಗೆ ತನ್ನ ಹಿತ್ತಲಿನಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಚಂದ್ರು, ವಿಷಕಾರಿ ಹಾವಿನ ಮೇಲೆ ಹೆಜ್ಜೆಯಿಟ್ಟಿದ್ದಾನೆ. ಹೀಗಾಗಿ, ಹಾವು ರೋಷದಿಂದ ಕಚ್ಚಿದೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ...

Post
“ಚರ್ಮ ಸುಲಿದು ಬಿಡ್ತಿನಿ” ಅಂದ್ರಂತೆ ಮುಂಡಗೋಡ ಪಿಐ ಸಾಹೇಬ್ರು, ಅಷ್ಟಕ್ಕೇ, ಶಾಲೆ ಬಿಟ್ಟು ಮನೆಯಲ್ಲೇ ಕುಳಿತ್ಲು ಹುಲಿಹೊಂಡದ ಬಾಲಕಿ..!

“ಚರ್ಮ ಸುಲಿದು ಬಿಡ್ತಿನಿ” ಅಂದ್ರಂತೆ ಮುಂಡಗೋಡ ಪಿಐ ಸಾಹೇಬ್ರು, ಅಷ್ಟಕ್ಕೇ, ಶಾಲೆ ಬಿಟ್ಟು ಮನೆಯಲ್ಲೇ ಕುಳಿತ್ಲು ಹುಲಿಹೊಂಡದ ಬಾಲಕಿ..!

 ಮುಂಡಗೋಡ: ಪೊಲೀಸರೆಂದ್ರೆ ಯಾರಿಗೆ ತಾನೆ ಭಯ ಇಲ್ಲ ಹೇಳಿ..? ಪುಟ್ಟ ಹುಡುಗರಿಗೆ “ಹೇ ಪೊಲೀಸು ಮಾಮಾ ಬಂದ” ಅಂತಾ ಒಂದು ಮಾತು ಹೇಳಿದ್ರೆ ಸಾಕು ಮಕ್ಕಳು ಗಡ ಗಡ ನಡುಗಿ ಅಡಗಿಕೊಳ್ತವೆ. ಅಂತಹದ್ದೊಂದು ಭಯ ಖಾಕಿಗಳನ್ನ ಕಂಡ್ರೆ ಬಹುತೇಕ ಮಕ್ಕಳಿಗೆ ಇದ್ದೇ ಇರತ್ತೆ. ಹೀಗಿದ್ದಾಗ, ಖುದ್ದು ಪೊಲೀಸ್ರೇ ಪುಟ್ಟ ಬಾಲಕಿಯೋರ್ವಳಿಗೆ ಧಮ್ಕಿ ಹಾಕಿದ್ರೆ ಹೇಗಾಗಬೇಡ..? ಇಂತದ್ದೇ ಒಂದು ಘಟನೆ ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ನಡೆದಿದೆ. ಆಕೆ 13 ರ ಬಾಲಕಿ..! ಹೌದು, ಆಕೆಯ ವಯಸ್ಸು...

Post
ಕೌಟುಂಬಿಕ ಕಲಹ ಹಿನ್ನೆಲೆ, ಕಲ್ಲಿನಿಂದ ಜಜ್ಜಿ ಅಣ್ಣ ತಂಗಿಯ ಬರ್ಬರ ಹತ್ಯೆ..!

ಕೌಟುಂಬಿಕ ಕಲಹ ಹಿನ್ನೆಲೆ, ಕಲ್ಲಿನಿಂದ ಜಜ್ಜಿ ಅಣ್ಣ ತಂಗಿಯ ಬರ್ಬರ ಹತ್ಯೆ..!

ವಿಜಯಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ, ಕಲ್ಲಿನಿಂದ ಜಜ್ಜಿ ಅಣ್ಣ ಹಾಗೂ ತಂಗಿಯ ಬರ್ಭರ ಹತ್ಯೆ ಮಾಡಿರೊ ಘಟನೆ, ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ. ರಾಜಶ್ರೀ ಶಂಕರಗೌಡ ಬಿರಾದಾರ್ (40), ನಾನಾಗೌಡ ಯರಗಲ್ (45) ಕೊಲೆಗೀಡಾದ ಅಣ್ಣ ಹಾಗೂ ತಂಗಿಯಾಗಿದ್ದಾರೆ. ರಾಜಶ್ರೀ ಪತಿ ಶಂಕರಗೌಡ ಹಾಗೂ ಇತರರು ಕೊಲೆ ಮಾಡಿರೋ ಆರೋಪ ಕೇಳಿಬಂದಿದೆ. ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದ ಹೊರ ಭಾಗದಲ್ಲಿ ಘಟನೆ ನಡೆದಿದೆ‌. ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Post
ಮುಂಡಗೋಡ ಪೊಲೀಸರ ಕಾರ್ಯಾಚರಣೆ: ಮಳಗಿಯಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳು ಅಂದರ್..!

ಮುಂಡಗೋಡ ಪೊಲೀಸರ ಕಾರ್ಯಾಚರಣೆ: ಮಳಗಿಯಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳು ಅಂದರ್..!

ಮುಂಡಗೋಡ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ತಾಲೂಕಿನ ಮಳಗಿಯ ಪಂಚವಟಿಯಲ್ಲಿ ಮೇ. 20 ರಂದು ನಡೆದಿದ್ದ ಅಂಗಡಿ ಕಳ್ಳತನ ಪ್ರಕರಣ ಬೇಧಿಸಿ, ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ‌. ಇದ್ರೊಂದಿಗೆ ನಿಟ್ಟುಸಿರು ಬಿಟ್ಟಿದ್ದಾರೆ ಖಾಕಿಗಳು. ಶಿರಸಿಯ ನಿವಾಸಿಗಳಾದ ಸಲೀಂ(25) ಅಬ್ದುಲ್ ಸತ್ತಾರ ಅಬ್ದುಲ್‌ ಗಫಾರ್ ಮುಲ್ಲಾ(28) ಹಾಗೂ ಇರ್ಫಾನ್ ಮಕಬೂಲ್ ಶೇಖ್ (21) ಎಂಬುವ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅಂದಹಾಗೆ, ಮೇ 20 ರ ರಾತ್ರಿ ಮಳಗಿ ಸಮೀಪದ ಪಂಚವಟಿಯಲ್ಲಿರುವ ಹಜರತ ಅಲಿ ಯಲಿವಾಳ್ ಎಂಬುವವರ ಅಂಗಡಿಯ ಮೇಲ್ಚಾವಣಿ ತೆಗೆದು...

Post
ಶಿರಸಿಯಲ್ಲಿ ಮಟ್ಕಾ ಅಡ್ಡೆಯ ಮೇಲೆ ಪೊಲೀಸರ ದಾಳಿ, ಲಕ್ಷ ಲಕ್ಷ ನಗದು ವಶ..?

ಶಿರಸಿಯಲ್ಲಿ ಮಟ್ಕಾ ಅಡ್ಡೆಯ ಮೇಲೆ ಪೊಲೀಸರ ದಾಳಿ, ಲಕ್ಷ ಲಕ್ಷ ನಗದು ವಶ..?

ಶಿರಸಿಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮಟ್ಕಾ ಅಡ್ಡೆಯ ಮೇಲೆ ದಾಳಿ ನಡೆಸಿರೋ ಪೊಲೀಸರು ಬುಕ್ಕಿ ಸೇರಿ,15 ಕ್ಕೂ ಹೆಚ್ಚು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಉತ್ತರ ಕನ್ನಡ ಎಸ್ಪಿ, ಡಾ.ಸುಮನಾ ಪೆನ್ನೇಕರ್ ರಚಿಸಿರೋ ವಿಶೇಷ ಪೊಲೀಸ್ ಟೀಂ ಕಾರ್ಯಾಚರಣೆ ನಡೆಸಿದ್ದು, ಮಟ್ಕಾ ಆಡಿಸುತ್ತಿದ್ದ ದಂಧೆಕೋರರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆನೆ, ಮಟ್ಕಾ ದಂಧೆಯಲ್ಲಿಬಕೈ ಬದಲಾಯಿಸುತ್ತ ಅಂದಾಜು 3-4 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಅನ್ನೋ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ‌. ಶಿರಸಿ ನಗರ ಹಾಗೂ...

Post
ಶಿಗ್ಗಾವಿಯಲ್ಲಿ ಮುಂಡಗೋಡಿನ ಟಿಪ್ಪರ್ ಮಾಲೀಕ ಮರ್ಡರ್..! ಸಿಎಂ ತವರು ಕ್ಷೇತ್ರದಲ್ಲಿ ಏನಿದೇಲ್ಲ..?

ಶಿಗ್ಗಾವಿಯಲ್ಲಿ ಮುಂಡಗೋಡಿನ ಟಿಪ್ಪರ್ ಮಾಲೀಕ ಮರ್ಡರ್..! ಸಿಎಂ ತವರು ಕ್ಷೇತ್ರದಲ್ಲಿ ಏನಿದೇಲ್ಲ..?

ಸಿಎಂ ಬಸವರಾಜ್ ಬೊಮ್ಮಾಯಿಯವರ ತವರು ಕ್ಷೇತ್ರ ಶಿಗ್ಗಾವಿ ಕ್ರೈಮುಗಳ ಸಿಟಿಯಾಯ್ತಾ..? ಇಂತಹದ್ದೊಂದು ಅನುಮಾನ ಇಡೀ ಕ್ಷೇತ್ರದ ಪ್ರಜ್ಞಾವಂತರನ್ನ ಬೆಂಬಿಡದೇ ಕಾಡ್ತಿದೆ. ಇಲ್ಲಿ ಕೊಲೆ ಅನ್ನೋದು ಕಾರಣಗಳೇ ಇಲ್ಲದೇ ನಡೆದು ಹೋಗ್ತಿವೆ. ನಿನ್ನೆ ಸಂಜೆ ನಡೆದದ್ದೂ ಇದೆ. ಸರಗೊಲು ಆಡುತ್ತಿದ್ದಾಗ ಕೋಲು ಬಡಿಸಿಕೊಂಡ ಟಿಪ್ಪರ್ ಮಾಲೀಕನೊಬ್ಬ ಪ್ರಶ್ನೆ ಮಾಡಿದ್ದಕ್ಕೆ ಅನಾಮತ್ತಾಗಿ ಮರ್ಡರ್ ಆಗಿದ್ದಾನೆ ಅನ್ನೊ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ತಾಲೂಕಿನ ಚಿಗಳ್ಳಿಯ ಉಮೇಶ್ ಶಿವಜೋಗಿಮಠ್ (45) ಎಂಬುವವನನ್ನು ಬರೋಬ್ಬರಿ ಏಳು ಜನರ ತಂಡ ಮನಬಂದಂತೆ ಥಳಿಸಿ ಕೊಂದು ಹಾಕಿದ್ದಾರೆ...

Post
ಮುಂಡಗೋಡ ತಾಲೂಕಿನ ಮೂರು ಕಡೆ ಮಟ್ಕಾ ಅಡ್ಡೆಗಳ‌ ಮೇಲೆ ಪೊಲೀಸರ ದಾಳಿ, 7 ಜನರ ವಿರುದ್ಧ ಕೇಸ್..!

ಮುಂಡಗೋಡ ತಾಲೂಕಿನ ಮೂರು ಕಡೆ ಮಟ್ಕಾ ಅಡ್ಡೆಗಳ‌ ಮೇಲೆ ಪೊಲೀಸರ ದಾಳಿ, 7 ಜನರ ವಿರುದ್ಧ ಕೇಸ್..!

ಮುಂಡಗೋಡ ಪೊಲೀಸರು ನಿನ್ನೆಯಿಂದ ಭರ್ಜರಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಮಟ್ಕಾ ಅಡ್ಡೆಗಳ ಮೇಲೆ ಬಲೆ ಬೀಸಿರೋ ಮುಂಡಗೋಡ ಪಿಎಸ್ಐ ಬಸವರಾಜು ಮಬನೂರು ಮತ್ತವರ ತಂಡ ಮೂರು ಕಡೆ ಪ್ರತ್ಯೇಕ ದಾಳಿ ನಡೆಸಿ ಹಲವು ದಂಧೆಕೋರರ ಹೆಡೆಮುರಿ ಕಟ್ಟಿದ್ದಾರೆ. 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದ್ರೊಂದಿಗೆ ಮೂರೂ ಕೇಸುಗಳಲ್ಲಿ ಒಟ್ಟೂ 10 ಸಾವಿರಕ್ಕೂ ಹೆಚ್ಚು ನಗದು ವಶಪಡಿಸಿಕೊಂಡಿದ್ದಾರೆ. ದಾಳಿ ನಂಬರ್-1 ಮುಂಡಗೋಡ ತಾಲೂಕಿನ ಕಾತೂರಿನ ಬಸ್ ನಿಲ್ದಾಣದ ಪಕ್ಕದಲ್ಲಿ ನಿಂತು ಮಟ್ಕಾ ಆಡಿಸುತ್ತಿದ್ದ, ನಾಗರಾಜ ಅಡಿವೆಪ್ಪ ಆಡಿನವರ ಎಂಬುವವನ...

Post
ಮುಂಡಗೋಡಿನ ಆನಂದ್ ಕಡಗಿ ಕಣ್ಮರೆ, ಅಷ್ಟಕ್ಕೂ CCTV ದೃಷ್ಯದಲ್ಲಿ ಕಂಡದ್ದು ಏನು..?

ಮುಂಡಗೋಡಿನ ಆನಂದ್ ಕಡಗಿ ಕಣ್ಮರೆ, ಅಷ್ಟಕ್ಕೂ CCTV ದೃಷ್ಯದಲ್ಲಿ ಕಂಡದ್ದು ಏನು..?

ಮುಂಡಗೋಡಿನ ಶಿಕ್ಷಕ ಆನಂದ್ ಕಡಗಿ ನಾಪತ್ತೆಯಾಗಿದ್ದಾರೆ. ರವಿವಾರ ದಿ.29 ರಂದು ಬೆಳಿಗ್ಗೆ 11 ಗಂಟೆಯಷ್ಟೊತ್ತಿಗೆ ಬರಿಗಾಲಲ್ಲೇ ಮನೆ ಬಿಟ್ಟು ಹೋಗಿರೋ ಆನಂದ್, ಹಸಿರು ಬಣ್ಣದ ಸಿಮೆಂಟ್ ಕಂಪನಿ ಹೆಸರಿರೋ ಟೀಶರ್ಟ್, ಹಾಗೇ ಖಾಕಿ ಬಣ್ಣದ ತ್ರಿಪೋರ್ಥ್ ತೊಟ್ಟು ಉಟ್ಟುಡುಗೆಯಲ್ಲೇ ನಾಪತ್ತೆಯಾಗಿದ್ದಾರೆ. ಮೊಬೈಲ್, ಪರ್ಸ್ ಏನು ಅಂದ್ರೆ ಏನೂ ತೆಗೆದುಕೊಂಡು ಹೋಗಿಲ್ಲ. ಹೀಗಾಗಿ, ಕುಟುಂಬದವರು ಆತಂಕಗೊಂಡಿದ್ದಾರೆ. ಸಿಸಿಟಿವಿಯಲ್ಲಿ..! ಅಸಲು, ಆನಂದ್ ಕಡಗಿ ರವಿವಾರ ಬೆಳಿಗ್ಗೆ ಮಕ್ಕಳನ್ನು ಸಲೂನ್ ಶಾಪ್ ಗೆ ಕರೆದುಕೊಂಡು ಹೋಗಿ ಬಂದಿದ್ದರು. ತಾವೂ ಕೂಡ ಕಟ್ಟಿಂಗ್...

error: Content is protected !!