Home Police news

Tag: Police news

Post
ಹುಬ್ಬಳ್ಳಿಯಲ್ಲಿ ಇಂದು ಪೊಲೀಸ್ “ಸೂಪರ್ ಕಾಪ್”ಗಳ ಕಾರ್ಯಾಗಾರ ಮತ್ತು ಸಮ್ಮೇಳನ..!

ಹುಬ್ಬಳ್ಳಿಯಲ್ಲಿ ಇಂದು ಪೊಲೀಸ್ “ಸೂಪರ್ ಕಾಪ್”ಗಳ ಕಾರ್ಯಾಗಾರ ಮತ್ತು ಸಮ್ಮೇಳನ..!

ಹುಬ್ಬಳ್ಳಿ: ಕರ್ನಾಟಕ ಸೂಪರ್ ಕಾಪ್ ವಾಟ್ಸಾಪ್ ಗ್ರೂಪ್ ನೇತೃತ್ವದಲ್ಲಿ ಕರ್ನಾಟಕ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳ ಕಾರ್ಯಾಗಾರ ಮತ್ತು ಪ್ರಥಮ ಸಮ್ಮೇಳನ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಹುಬ್ಬಳ್ಳಿ ವಿದ್ಯಾನಗರದ ಜಿವಿಜಿ ಟೆಕ್ನಾಲಜಿ ಮತ್ತು ಇಂಜನೀಯರಿಂಗ್ ಕಾಲೇಜಿನ ಸಭಾಭವನದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಹಲವು ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಹಲವು ಬಗೆಯ ಅಪರಾಧಗಳ ಬೆನ್ನತ್ತಿ ಆರೋಪಿಗಳ ಹೆಡೆಮುರಿ ಕಟ್ಟುವ “ಸೂಪರ್ ಕಾಪ್” ಗಳಿಗೆ ಮತ್ತಷ್ಟು ಹುರಿದುಂಬಿಸುವ ಕಾರ್ಯಾಗಾರ ಇದಾಗಿದ್ದು, ಉತ್ಸುಕತೆಯಿಂದಲೇ ನೂರಾರು ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.

Post
ಸಿಡ್ಲಗುಂಡಿ ಬಳಿ ಲಾರಿ, ಬೊಲೆರೊ ಮದ್ಯೆ ಮುಖಾಮುಕಿ ಡಿಕ್ಕಿ, ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ..!

ಸಿಡ್ಲಗುಂಡಿ ಬಳಿ ಲಾರಿ, ಬೊಲೆರೊ ಮದ್ಯೆ ಮುಖಾಮುಕಿ ಡಿಕ್ಕಿ, ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ..!

 ಮುಂಡಗೋಡ:ತಾಲೂಕಿನ ಯಲ್ಲಾಪುರ ರಸ್ತೆಯಲ್ಲಿ ಅಪಘಾತವಾಗಿದೆ. ಅಶೋಕ‌ ಲೈಲ್ಯಾಂಡ್ ಹಾಗೂ ಬುಲೆರೊ ವಾಹನದ ನಡುವೆ ಮುಖಾಮುಕಿ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಸಿಡ್ಲಗುಂಡಿ, ಮೈನಳ್ಳಿ ಸಮೀಪದ ಕಿರು ಸೇತುವೆ ಬಳಿ ಘಟನೆ ನಡೆದಿದ್ದು, ಅಪಘಾತದ ಭೀಕರತೆಗೆ, ಡಿಕ್ಕಿಯ ರಭಸಕ್ಕೆ ಅಶೋಕ ಲೈಲಾಂಡ್ ಲಾರಿ ಉರುಳಿ ಬಿದ್ದಿದೆ. ಇಷ್ಟಾದ್ರೂ, ಅದೃಷ್ವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಬೊಲೆರೋ ವಾಹನದಲ್ಲಿ ಸಾಕಷ್ಟು ಜನ ಪ್ರಯಾಣಿಕರಿದ್ರು. ಆದ್ರೆ ಯಾರಿಗೂ ತೊಂದರೆಯಾಗಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ...

Post
ಇಂದೂರು ಬಳಿ ಸ್ಕೂಟಿಗೆ ಅಡ್ಡ ಬಂದ ಎಮ್ಮೆ; ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡ ನಂದಿಕಟ್ಟಾ ಯುವಕ..!

ಇಂದೂರು ಬಳಿ ಸ್ಕೂಟಿಗೆ ಅಡ್ಡ ಬಂದ ಎಮ್ಮೆ; ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡ ನಂದಿಕಟ್ಟಾ ಯುವಕ..!

 ಮುಂಡಗೋಡ : ತಾಲೂಕಿನ ಇಂದೂರು ಬಳಿ ಅಪಘಾತವಾಗಿದೆ. ಎಮ್ಮೆ ಅಡ್ಡ ಬಂದ ಪರಿಣಾಮ ಸ್ಕೂಟಿ ಸ್ಕಿಡ್ ಆಗಿ ಬಿದ್ದು ಯುವಕ ಗಂಭೀರ ಗಾಯಗೊಂಡಿದ್ದಾನೆ. ತಾಲೂಕಿನ ನಂದಿಕಟ್ಟಾ ಗ್ರಾಮದ ಯುವಕ ಗಂಭೀರ ಗಾಯಗೊಂಡಿದ್ದಾನೆ. ಯುವಕನ ಹೆಸರು ಇನ್ನು ತಿಳಿದು ಬಂದಿಲ್ಲ. ಗಂಭೀರ ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಯುವಕನನ್ನು ಸ್ಥಳೀಯರು ನೋಡಿದ್ದಾರೆ‌. ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

Post
9 ತಿಂಗಳ ಹಿಂದೆ ಸಿಕ್ಕಿದೆ ಅನಾಥ ಶವ, ಕೊಲೆಯಾಗಿ ನದಿಯಲ್ಲಿ ತೇಲಿಬಂದಿದೆ ಹೆಣ, ಈ ವ್ಯಕ್ತಿ ನಿಮಗೇನಾದ್ರೂ ಗೊತ್ತಾ..?

9 ತಿಂಗಳ ಹಿಂದೆ ಸಿಕ್ಕಿದೆ ಅನಾಥ ಶವ, ಕೊಲೆಯಾಗಿ ನದಿಯಲ್ಲಿ ತೇಲಿಬಂದಿದೆ ಹೆಣ, ಈ ವ್ಯಕ್ತಿ ನಿಮಗೇನಾದ್ರೂ ಗೊತ್ತಾ..?

ಬಹುಶಃ ಅದೊಂದು ಭೀಕರ ಕೊಲೆ. ಅದ್ಯಾವ ಕಾರಣಕ್ಕೋ ಗೊತ್ತಿಲ್ಲ, ಅದ್ಯಾರೋ ಗೊತ್ತಿಲ್ಲ, ಕುತ್ತಿಗೆಗೆ ಟವೇಲ್ ಬಿಗಿದು ಬರ್ಬರವಾಗಿ ಕೊಂದಿದ್ದಾರೆ ದುಷ್ಟರು. ಅದೇಲ್ಲಿ ಕೊಲೆ ಮಾಡಿದ್ದಾರೋ ಅದೂ ಕೂಡ ಇವತ್ತಿಗೂ ಗೊತ್ತಾಗಿಲ್ಲ. ಹಾಗೆ ನಿರ್ದಯವಾಗಿ ಕೊಲೆ ಮಾಡಿ, ಮಲಪ್ರಭಾ ನದಿಯಲ್ಲಿ ತಂದು ಬೀಸಾಕಿ ಹೋಗಿದ್ದಾರೆ. ಆ ಶವ ತೇಲುತ್ತ ಬಂದು ಬೆಳಗಾವಿ ಜಿಲ್ಲೆಯ ಚಾಪಗಾಂವ್ ಸಮೀಪದ ಮಲಪ್ರಭಾ ನದಿಯ ದಂಡೆಯ ಮೇಲೆ ಸಿಕ್ಕಿದೆ. 9 ತಿಂಗಳ ಹಿಂದೆ.. ಅಷ್ಟಕ್ಕೂ, ಈ ಶವ ಸಿಕ್ಕಿದ್ದು ನಿನ್ನೆ ಮೊನ್ನೆಯಲ್ಲ. ಬರೋಬ್ಬರಿ 9...

Post
ಭೀಕರ ರಸ್ತೆ ಅಪಘಾತ, ಕ್ರೂಸರ್ ನಾಲೆಗೆ ಬಿದ್ದು 9 ಜನರ ದಾರುಣ ಸಾವು, 8 ಜನರಿಗೆ ಗಾಯ..!

ಭೀಕರ ರಸ್ತೆ ಅಪಘಾತ, ಕ್ರೂಸರ್ ನಾಲೆಗೆ ಬಿದ್ದು 9 ಜನರ ದಾರುಣ ಸಾವು, 8 ಜನರಿಗೆ ಗಾಯ..!

 ಬೆಳಗಾವಿ: ಬೆಳ್ಳಂ ಬೆಳಿಗ್ಗೆ ಬೆಳಗಾವಿ ಸಮೀಪ ಕಣಬರಗಿ ಬಳಿ ಭೀಕರ ಅಪಘಾತವಾಗಿದೆ. ಕ್ರೂಸರ್ ನಾಲೆಗೆ ಉರುಳಿ ಬಿದ್ದ ಪರಿಣಾಮ, 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 8 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರು ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದವರು ಎನ್ನಲಾಗಿದೆ. ಕೂಲಿ ಕೆಲಸಕ್ಕಾಗಿ ಕ್ರೂಸರ್ ವಾಹನದಲ್ಲಿ ಬೆಳಗಾವಿಯತ್ತ ಬರುತ್ತಿದ್ರು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿ, ಬಳ್ಳಾರಿ ನಾಲೆಗೆ ಕ್ರೂಸರ್ ವಾಹನ ಪಲ್ಟಿಯಾಗಿ ಬಿದ್ದು 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಿನಗೂಲಿ ನೌಕರರು ರೈಲ್ವೆ ಬ್ರಿಡ್ಜ್...

Post
ಅಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗೂಡಂಗಡಿಯ ಮೇಲೆ ಪೊಲೀಸರ ದಾಳಿ, ಕೇಸು ದಾಖಲು..!

ಅಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗೂಡಂಗಡಿಯ ಮೇಲೆ ಪೊಲೀಸರ ದಾಳಿ, ಕೇಸು ದಾಖಲು..!

ಮುಂಡಗೋಡ: ತಾಲೂಕಿನ ಅಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ, ಓರ್ವನ ಮೇಲೆ ಕೇಸು ದಾಖಲಿಸಲಾಗಿದೆ. ಅಗಡಿಯ ನಾಗರಾಜ್ ರೇಖಪ್ಪ ಲಮಾಣಿ ಎಂಬುವವನ ಮೇಲೆ ಕೇಸು ದಾಖಲಿಸಲಾಗಿದ್ದು, ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಅಕ್ರಮವಾಗಿ ಯಾವುದೇ ಪರ್ಮಿಟ್ ಇಲ್ಲದೇ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Post
ಮುಂಡಗೋಡ ತಾಲೂಕಿನ ಗಲ್ಲಿಗಳಲ್ಲಿ ಅಕ್ರಮ ಮದ್ಯ‌ಮಾರಾಟ, ಅಬಕಾರಿಗಳ ನೆರಳಲ್ಲೇ ನಡಿತಿದೆಯಾ ದಂಧೆ..?

ಮುಂಡಗೋಡ ತಾಲೂಕಿನ ಗಲ್ಲಿಗಳಲ್ಲಿ ಅಕ್ರಮ ಮದ್ಯ‌ಮಾರಾಟ, ಅಬಕಾರಿಗಳ ನೆರಳಲ್ಲೇ ನಡಿತಿದೆಯಾ ದಂಧೆ..?

ಮುಂಡಗೋಡ: ತಾಲೂಕಿನಲ್ಲಿ ಈಗ ಎಲ್ಲೆಂದರಲ್ಲಿ ಸರಾಯಿ ಮಾರಾಟದ ಅಕ್ರಮ ಅಡ್ಡೆಗಳು ತಲೆ ಎತ್ತಿವೆ. ಅಧಿಕೃತ ಮದ್ಯದಂಗಡಿಗಳು ಮುಂಡಗೋಡಿಗಷ್ಟೇ ಸೀಮಿತವಾಗಿವೆ. ಆದ್ರೆ ಅದ್ಯಾರ ಕೃಪಾಕಟಾಕ್ಷವೋ ಗೊತ್ತಿಲ್ಲ, ಇಡೀ ತಾಲೂಕಿನ ಗಲ್ಲಿ ಗಲ್ಲಿಗಳಲ್ಲಿ ಅಕ್ರಮ ದಂಧೆಕೋರರನ್ನು ಹುಟ್ಟು ಹಾಕಲಾಗಿದೆ. ಹೀಗಾಗಿ, ತಾಲೂಕಿನ ಮಹಿಳೆಯರು, ಪ್ರಜ್ಞಾವಂತರು ಸಂಬಂಧಪಟ್ಟವರಿಗೆ ಹಿಡಿಶಾಪ ಹಾಕ್ತಿದಾರೆ. ಅದ್ರಲ್ಲೂ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಹಾಮಂಗಳಾರತಿ ಮಾಡ್ತಿದಾರೆ. ಅಬಕಾರಿಗಳದ್ದೇ ಆಟ..? ನಿಜ ಅಂದ್ರೆ ಮುಂಡಗೋಡ ತಾಲೂಕಿನಲ್ಲಿ ಈಗ ಕೆಲವು ಕಿರಾಣಿ ಅಂಗಡಿಗಳಲ್ಲೂ ಮದ್ಯ ಹೇರಳವಾಗಿ ಸಿಗುತ್ತಿದೆ. ಇನ್ನು ತಾಲೂಕಿನ ಟಿಬೇಟಿಯನ್...

Post
ಡೀಸೆಲ್ ಟ್ಯಾಂಕರ್ ಪಲ್ಟಿ, ರಸ್ತೆಗೆ ಹರಿದ ಡೀಸೆಲ್, ತುಂಬಿಕೊಳ್ಳಲು ಮುಗಿಬಿದ್ದ ಜನ..!

ಡೀಸೆಲ್ ಟ್ಯಾಂಕರ್ ಪಲ್ಟಿ, ರಸ್ತೆಗೆ ಹರಿದ ಡೀಸೆಲ್, ತುಂಬಿಕೊಳ್ಳಲು ಮುಗಿಬಿದ್ದ ಜನ..!

ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ, ವಿಜಯಪುರದ ಹೊರವಲಯದಲ್ಲಿ ನಡೆದಿದೆ. ಟ್ಯಾಂಕರ್ ಪಲ್ಟಿಯಾದ ಪರಿಣಾಮ, ಡೀಸೆಲ್ ರಸ್ತೆಗೆ ಹರಿದಿದೆ. ಹೀಗಾಗಿ, ಟ್ಯಾಂಕರ್ ನಿಂದ ಸೋರುತ್ತಿದ್ದ ಡಿಸೈಲ್ ತುಂಬಿಕೊಳ್ಳಲು ಜನರು ಮುಗಿ ಬಿದ್ದಿದ್ದರು. ವಿಜಯಪುರ ನಗರದ ಹೊರ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 50 ರಹೈಪರ್ ಮಾರ್ಟ್ ಬಳಿ ಡೀಸೆಲ್ ಟ್ಯಾಂಕರ್ ಉರುಳಿಬಿದ್ದಿದ್ದು, ವಾಟರ್ ಬಾಟಲ್ ಹಾಗೂ ಇತರ ವಸ್ತುಗಳಲ್ಲಿ ಜನರು, ಡೀಸೆಲ್ ತುಂಬಿಕೊಂಡು‌ ಹೋಗ್ತಿದಾರೆ. ಟ್ಯಾಂಕರ್ ನಿಂದ ಅಪಾರ ಪ್ರಮಾಣದ ಡಿಸೈಲ್...

Post
ವರೂರು ಬಳಿ ಸರಣಿ ಅಪಘಾತ, ಓರ್ವ ಸ್ಥಳದಲ್ಲೇ ಸಾವು, ಐವರಿಗೆ ಗಂಭೀರ ಗಾಯ..!

ವರೂರು ಬಳಿ ಸರಣಿ ಅಪಘಾತ, ಓರ್ವ ಸ್ಥಳದಲ್ಲೇ ಸಾವು, ಐವರಿಗೆ ಗಂಭೀರ ಗಾಯ..!

 ಹುಬ್ಬಳ್ಳಿ ಸಮೀಪದ ವರೂರಿನ ವಿಆರ್ ಎಲ್ ಬಳಿ ರಾ.ಹೆದ್ದಾರಿ 4 ರಲ್ಲಿ, ಭೀಕರ ಸರಣಿ ಅಪಘಾತವಾಗಿದೆ‌. ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಐವರಿಗೆ ಗಂಭೀರ ಗಾಯವಾಗಿದೆ. ವರೂರಿನ VRL ಬಳಿ, ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಕ್ತಿಯೊರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತ ಕಂಡು ಮೃತ ವ್ಯಕ್ತಿಯನ್ನು ನೋಡಲು ಬಂದ ಐವರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ. ಹೀಗಾಗಿ ಐವರಿಗೆ ಗಂಭೀರ ಗಾಯವಾಗಿದೆ. ಇದ್ರಲ್ಲಿ ಗಾಯಾಳುವನ್ನು ಸಾಗಿಸಲು ಬಂದಿದ್ದ ಅಂಬ್ಯುಲೆನ್ಸ್ ಸಿಬ್ಬಂದಿಗೂ ಗಾಯವಾಗಿದೆ....

Post
ಕೆಂದಲಗೇರಿಯಲ್ಲಿ ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ, ಮೂವರು ವಶಕ್ಕೆ..!

ಕೆಂದಲಗೇರಿಯಲ್ಲಿ ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ, ಮೂವರು ವಶಕ್ಕೆ..!

ಮುಂಡಗೋಡ: ತಾಲೂಕಿನ ಕೆಂದಲಗೇರಿಯಲ್ಲಿ ಇಸ್ಪೀಟು ಆಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಇಸ್ಪೀಟು ಆಡುತ್ತಿದ್ದ ಮೂವರನ್ನು ವಶಕ್ಕೆ ಪಡೆದು, ಐವರ ಮೇಲೆ ಕೇಸು ದಾಖಲಿಸಲಾಗಿದೆ. ನಾಗರಾಜ ಹನುಮಂತ ಚವ್ಹಾಣ(45), ಆಶೋಕ ನಿಂಗಪ್ಪ ಮಂಜಣ್ಣನವರ್(28), ಫಕ್ಕೀರಾ ಸಾಕಪ್ಪ ಕಟ್ಟಿಮನಿ(30), ರುದ್ರಪ್ಪ ತಂದೆ ಗುಳುವಪ್ಪ ಸುಣಗಾರ(38) ಹಾಗೂ ಅಲಿ ಹುಸನ್‌ ಸಾಬ ಮುಜಾವರ್(35) ಎಂಬುವವರ ಮೇಲೆ ಕೇಸು ದಾಖಲಿಸಲಾಗಿದೆ. ಇದ್ರಲ್ಲಿ ಮೂವರು ಆರೋಪಿಗಳು ಪೊಲೀಸರ ದಾಳಿ ವೇಳೆ ಸಿಕ್ಕಿಬಿದ್ದಿದ್ದಾರೆ, ಇನ್ನುಳಿದವರು ಪರಾರಿಯಾಗಿದ್ದಾರೆ.

error: Content is protected !!