ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ 16 ವರ್ಷದ ಬಾಲಕನಿಗೆ ಉರಿಮಂಡಲ ಹಾವು ಕಚ್ಚಿದೆ. ಪರಿಣಾಮ ಗಾಯಗೊಂಡ ಬಾಲಕನಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂದಿಕಟ್ಟಾ ಗ್ರಾಮದಲ್ಲಿ ಸಂಜೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ, ಕಟ್ಟಿಗೆ ಮೇಲೆ ಕಾಲಿಟ್ಟ ಬಾಲಕ ನಂದನ್ ರವಿ ತೇರಗಾಂವ್(16) ಎಂಬುವವನಿಗೆ ಕಟ್ಟಿಗೆಯಡಿ ಇದ್ದ ಹಾವು ಕಾಲಿಗೆ ಕಚ್ಚಿದೆ. ತಕ್ಷಣವೇ ಬಾಲಕನನ್ನು ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿಂದ ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಬಾಲಕನ ಆರೋಗ್ಯ ಸ್ಥಿರವಾಗಿದೆ ಅಂತಾ ಕುಟುಂಬದ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ....
Top Stories
ಜನ-ಧನ್ ಅಕೌಂಟ್ಗೆ ಮರು ಕೆವೈಸಿ : ಸೆ.30ಕ್ಕೆ ಡೆಡ್ಲೈನ್ ಫಿಕ್ಸ್ ಮಾಡಿದೆ RBI, ಅಪ್ಡೇಟ್ ಮಾಡುವುದು ಹೇಗೆ..?
ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಬಂಕಾಪುರ್ ರಸ್ತೆ ಹೆಬ್ಬಾರ ನಗರ ಕ್ರಾಸ್ ಬಳಿ ಗಾಂಜಾ “ದಂಧೆ” ಗಿಳಿದಿದ್ದ ಓರ್ವ ಅಂದರ್..!
ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ..!
ತುಮಕೂರಲ್ಲಿ 20 ನವಿಲುಗಳ ಧಾರುಣ ಸಾವು..!
ಮೈಸೂರು ದಸರಾ ಜಂಬೂ ಸವಾರಿ: ಗಜಪಡೆಯ 14 ಆನೆಗಳ ಸಂಪೂರ್ಣ ಮಾಹಿತಿ ಹೀಗಿದೆ..!
ಆ.8 ರಿಂದ 14ರ ವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಸಪ್ತರಥೋತ್ಸವ..!
ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ತಲೆಗೆ ರಾಡ್ನಿಂದ ಹೊಡೆದು ಮಹಿಳೆಯ ಕೊಲೆ..!
ಆರ್ಬಿಐ ರೆಪೋ ದರ ಶೇ.5.5ರಲ್ಲಿ ಸ್ಥಿರ; ನಿಮ್ಮ ಲೋನ್ EMI ಹೊರೆ ಇಳಿಸಲು ಈ ವಿಧಾನ ಅನುಸರಿಸಿ..!
ಚಿನ್ನದ ಬೆಲೆ ಸತತ ಏರಿಕೆ: ಬುಧವಾರ ಬೆಂಗಳೂರಿನಲ್ಲಿ 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ?
ಕೊಪ್ಪ ಬಳಿ ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿ,ಇಂದೂರಿನ ದಂಪತಿ ಸೇರಿ ಮೂವರಿಗೆ ಗಾಯ..!
ಜಿ.ಪಂ ಸಿಇಒ ದಿಲೀಷ್ ರಿಂದ ಮುಂಡಗೋಡ ಹಾಗೂ ಶಿರಸಿ ತಾಲೂಕಿನ ಜೆಜೆಎಮ್ ಕಾಮಗಾರಿ ಪರಿಶೀಲನೆ..!
ಬೈಕ್ ಅಪಘಾತ, ರಜೆಗೆ ಬಂದಿದ್ದ ಯೋಧ ಸ್ಥಳದಲ್ಲೇ ಸಾ*ವು..!
ಕಾತೂರು| ಓರಲಗಿ ಗದ್ದೆಯ ಪೈಪಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರಹಾವಿನ ರಕ್ಷಣೆ..!
ಸತತ 7 ದಿನ 170 ಗಂಟೆಗಳ ಕಾಲ ಭರತನಾಟ್ಯ ಮಾಡಿ ವಿಶ್ವದಾಖಲೆ ಬರೆದ ರೆಮೋನಾ ಪಿರೇರಾ..!
ಧರ್ಮಸ್ಥಳ ಶವ ಪ್ರಕರಣ; SIT ತನಿಖೆ ಉದ್ದೇಶ ಸತ್ಯ ಹೊರ ಬರಲಿ ಎಂಬುದಷ್ಟೆ, ಕಾರವಾರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ..!
‘ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ..ʼ ; ಹನುಮಂತ ದೇವರ ಕಾರ್ಣಿಕ..!
ಮುಂಡಗೋಡ ತಾಲೂಕಾಸ್ಪತ್ರೆ ಆವರಣದಲ್ಲೇ ಆರೋಗ್ಯ ಅಧಿಕಾರಿಗಳ ದಿಢೀರ್ ದಾಳಿ..! ಕ್ಯಾಂಟೀನ್, ಜನೌಷಧಿ ಕೇಂದ್ರದಲ್ಲಿ ಏನದು ಸಮಸ್ಯೆ..?
ಇಸ್ರೋ-ನಾಸಾ ಜಂಟಿ ಸಹಭಾಗಿತ್ವದ ನಿಸಾರ್ ಉಪಗ್ರಹ ಉಡಾವಣೆ..!
ಆಕಸ್ಮಿಕವಾಗಿ ಕಳೆನಾಶಕ ಸೇವಿಸಿದ್ದ (ಕೊಪ್ಪ) ಇಂದಿರಾನಗರದ ವ್ಯಕ್ತಿ ಸಾವು..!
Tag: Police news
ಕೊಪ್ಪದಲ್ಲಿ ವಿಷಕಾರಿ ಹಾವು ಕಚ್ಚಿ ರೈತ ಸಾವು..? ಭತ್ತಕ್ಕೆ ಔಷಧಿ ಸಿಂಪಡಿಸುವಾಗ ಘಟನೆ..!
ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದಲ್ಲಿ ವಿಷಕಾರಿ ಹಾವು ಕಚ್ಚಿ ರೈತನೋರ್ವ ಮೃತಪಟ್ಟಿರೋ ಶಂಕೆ ವ್ಯಕ್ತವಾಗಿದೆ. ಭತ್ತದ ಗದ್ದೆಯಲ್ಲಿ ಔಷಧಿ ಸಿಂಪಡಿಸುವ ವೇಳೆ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದ್ದು, ಅಸಲು ಹಾವು ಕಚ್ಚಿಯೇ ಮೃತಪಟ್ಟಿದ್ದಾನಾ ಅಥವಾ ಬೇರೆ ಯಾವುದೋ ಕಾರಣಕ್ಕೆ ಮೃತಪಟ್ಟಿದ್ದಾನಾ..? ಮಾಹಿತಿ ಲಭ್ಯವಾಗಬೇಕಿದೆ. ಕೊಪ್ಪ ಗ್ರಾಮದ ಚಂದ್ರು ಗಾಂಜಿ(56) ಎಂಬುವವನೇ ಮೃತಪಟ್ಟ ರೈತನಾಗಿದ್ದಾನೆ. ಇಂದು ಮುಂಜಾನೆ ತನ್ನ ಭತ್ತದ ಗದ್ದೆಯಲ್ಲಿ ಔಷಧಿ ಸಿಂಪಡಿಸಲು ಗದ್ದೆಗೆ ತೆರಳಿದ್ದ ಚಂದ್ರು ಮದ್ಯಾನದವರೆಗೂ ಭತ್ತಕ್ಕೆ ಔಷಧಿ ಸಿಂಪಡಿಸಿದ್ದಾನೆ. ಆದ್ರೆ ಅದ್ಯಾವಾಗ ಹಾವು...
ಸನವಳ್ಳಿ ಮಾರಿಕಾಂಬೆಯ ಆಭರಣ ಕದ್ದಿದ್ದ ಚಾಲಾಕಿ ಅರೆಸ್ಟ್, ಅಷ್ಟಕ್ಕೂ ಕಳ್ಳತನದ ಆರೋಪಿ ಯಾರು ಗೊತ್ತಾ..?
ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ಶ್ರೀಮಾರಿಕಾಂಬಾದೇವಿ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಕೇಸ್ ಕೂಡ ಬಟಾ ಬಯಲಾಗಿದೆ. ಮುಂಡಗೋಡ ಪೊಲೀಸರ ಖಡಕ್ ತನಿಖೆಯಲ್ಲಿ ಆ ಗ್ರಾಮದಲ್ಲೇ ಅಡಗಿ ಕುಳಿತಿದ್ದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಈ ಮೂಲಕ ಪಿಐ ಸಿದ್ದಪ್ಪ ಸಿಮಾನಿ ಹಾಗೂ ಪಿಎಸ್ ಐ ಬಸವರಾಜ್ ಮಬನೂರು ಕಳ್ಳತನದ ಕೇಸ್ ಬಯಲು ಮಾಡಿದ್ದಾರೆ. ಮಳ್ಳನಂತಿದ್ದ ಕಳ್ಳ..! ಅಸಲಿಗೆ, ಊರ ದೇವಿಯ ಆಭರಣವನ್ನೇ ಎಗರಿಸಿ ಮಳ್ಳನಂತೆ ಕುಳಿತಿದ್ದ, ಸನವಳ್ಳಿ ಗ್ರಾಮದ ಮಹಾಂತೇಶ್ ಅರ್ಜುನ್ ಆರೆಗೊಪ್ಪ ಎಂಬುವ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ....
ಅಡಿಕೆ ಕಳ್ಳತನ ಕೇಸ್ ಬೇಧಿಸಿದ ಮುಂಡಗೋಡ ಪೊಲೀಸರು, ಕೊಪ್ಪ ಗ್ರಾಮದವನೇ ಅಡಿಕೆ ಕದ್ದವನಂತೆ..!
ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಡಿಕೆ ಕಳ್ಳತನ ಮಾಡಿದ್ದ ಆರೋಪಿಯನ್ನು ರಾತ್ರೋ ರಾತ್ರಿ ಎಳೆದು ತಂದಿದ್ದಾರೆ. ಈ ಮೂಲಕ ಪಿಐ ಸಿದ್ದಪ್ಪ ಸಿಮಾನಿ ಮತ್ತವರ ತಂಡ ಅಡಿಕೆ ಕಳ್ಳತನದ ಕೇಸ್ ಸಾರಾಸಗಟಾಗಿ ಬೇಧಿಸಿದೆ. ಕೊಪ್ಪ (ಇಂದೂರು) ಗ್ರಾಮದ ಫಕ್ಕಿರೇಶ ಮಲ್ಲಪ್ಪ ದೊಡ್ಮನಿ ಎಂಬುವವನೇ ಅಡಿಕೆ ಕಳ್ಳತನದ ಆರೋಪಿಯಾಗಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಈತನನ್ನು ಖಚಿತ ಸುಳಿವಿನ ಮೇರೆಗೆ ಪಿಐ ಸಿದ್ದಪ್ಪ ಸಿಮಾನಿ, ಪಿಎಸ್ ಐ ಬಸವರಾಜ್ ಮಬನೂರು ಸೇರಿದಂತೆ ಮತ್ತವರ ತಂಡ ದಾಳಿ ಮಾಡಿ...
ಇಂದೂರು ಸಮೀಪ ಮರಕ್ಕೆ ಡಿಕ್ಕಿ ಹೊಡೆದ ಕಾರ್, ನಾಲ್ವರಿಗೆ ಗಾಯ, ಆಸ್ಪತ್ರೆಗೆ ದಾಖಲು..!
ಮುಂಡಗೋಡ: ಇಂದೂರು ಕೊಪ್ಪ ಸಮೀಪದ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರ್ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಮಹಳೆಯರೂ ಸೇರಿ ನಾಲ್ವರಿಗೆ ಗಾಯವಾಗಿದೆ. ಇಂದೂರಿನಿಂದ ಮುಂಡಗೋಡ ಕಡೆಗೆ ಹೊರಟಿದ್ದ ಕಾರ್ ನಂ. KA-31-N-5760 ನಂಬರಿನ ಕಾರ್ ವೇಗವಾಗಿ ಬಂದಿದೆ. ಅತಿವೇಗದಿಂದ ಚಾಲನೆ ಮಾಡುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿ, ಎದುರಿಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಯುತ್ತಿತ್ತು. ಅದ್ರೆ ಅದೃಷ್ಟವಶಾತ್ ಬೈಕ್ ಗೆ ಡಿಕ್ಕಿ ಹೊಡೆದಿಲ್ಲ. ಬದಲಾಗಿ ವೇಗವಾಗಿ ಬಂದು ಬೃಹತ್ ಆಲದ ಮರಕ್ಕೆ...
ಗೊಬ್ಬರ ಸಿಂಪಡಿಸುವಾಗ ಕಚ್ಚಿದ ವಿಷಕಾರಿ ಸರ್ಪ, ಚಿಗಳ್ಳಿಯಲ್ಲಿ ಅನ್ನದಾತನ ದುರಂತ ಸಾವು..!
ಮುಂಡಗೋಡ: ತಾಲೂಕಿನ ಚಿಗಳ್ಳಿಯಲ್ಲಿ ವಿಷಕಾರಿ ಹಾವು ಕಚ್ಚಿ ರೈತ ಸಾವನ್ನಪ್ಪಿದ್ದಾನೆ. ಪಾಂಡುರಂಗ ಚೆನ್ನಾಪುರ(48) ಹಾವು ಕಚ್ಚಿ ಮೃತಪಟ್ಟ ರೈತನಾಗಿದ್ದಾನೆ. ಇಂದು ಬೆಳಿಗ್ಗೆ ತನ್ನ ಗೋವಿನಜೋಳದ ಗದ್ದೆಯಲ್ಲಿ ಗೊಬ್ಬರ ಸಿಂಪಡಿಸುವ ವೇಳೆ ಆಕಸ್ಮಿಕವಾಗಿ ಹಾವು ಕಚ್ಚಿದೆ. ಹೀಗಾಗಿ, ತೀವ್ರ ಅಸ್ವಸ್ಥಗೊಂಡಿದ್ದ ರೈತನನ್ನು ಚಿಕಿತ್ಸೆಗಾಗಿ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ತೆ ಚಿಕಿತ್ಸೆ ಫಲಕಾರಿಯಾಗದೆ ರೈತ ಮೃತಪಟ್ಟಿದ್ದಾನೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇಂದೂರು ಬಳಿ ಕ್ರೂಸರ್ ಹಾಗೂ ಬೈಕ್ ನಡುವೆ ಡಿಕ್ಕಿ, ಬೈಕ್ ಸವಾರನಿಗೆ ಗಾಯ..!
ಮುಂಡಗೋಡ: ತಾಲೂಕಿನ ಇಂದೂರು ಹೊರವಲಯದ ಶರೀಪ ಗೋವಿಂದ ದೇವಸ್ಥಾನದ ಹತ್ತಿರ, ಬೈಕ್ ಹಾಗೂ ಕ್ರೂಸರ್ ನಡುವೆ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಇಂದೂರು ಗ್ರಾಮದ ಬೈಕ್ ಸವಾರ ಮಲ್ಲೇಶ್ ದೊಡ್ಡಮನಿ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಇಂದೂರಿನಿಂದ ಮುಂಡಗೋಡ ಕಡೆಗೆ ಹೊರಟಿದ್ದ ಬೈಕ್ ಸವಾರನಿಗೆ, ಮುಂಡಗೋಡ ಕಡೆಯಿಂದ ಇಂದೂರು ಕಡೆಗೆ ಬರುತ್ತಿದ್ದ ಕ್ರೂಸರ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯಗೊಂಡಿದ್ದಾನೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಂಗಳೂರಿನಲ್ಲಿ ಬೆಳ್ಳಂ ಬೆಳಿಗ್ಗೆ ಫೈರಿಂಗ್, ನಟೋರಿಯಸ್ ರೌಡಿಶೀಟರ್ ಮೇಲೆ ದಾಳಿ..!
ಮಂಗಳೂರು: ನಗರದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು ಕೇಳಿದೆ. ನಗರದ ಅಸೈಗೋಳಿ ಬಳಿ ಪೊಲೀಸರು ನಟೋರಿಯಸ್ ರೌಡಿಶೀಟರ್ ಮುಕ್ತಾರ್ ಮೇಲೆ ಫೈರಿಂಗ್ ಮಾಡಿದ್ದಾರೆ. 15ಕ್ಕೂ ಅಧಿಕ ಪ್ರಕರಣಗಳ ಆರೋಪಿಯಾಗಿರುವ ಮುಕ್ತಾರ್, ಪ್ರಕರಣವೊಂದರಲ್ಲಿ ಬಂಧಿಸಿ ಕಾರಿನ ಮಹಜರಿಗೆ ಹೋಗಿದ್ದ ವೇಳೆ ಪರಾರಿಯಾಗಲು ಯತ್ನಿಸಿದ್ದಾನೆ. ಹೀಗಾಗಿ, ಈ ವೇಳೆ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮುಕ್ತಾರ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ರೌಡಿಶೀಟರ್ ಮುಕ್ತಾರ್ ಹಲವು ಪ್ರಕರಣಗಳಲ್ಲಿ ಕಳೆದ ಐದು ವರ್ಷಗಳಿಂದ ಪೊಲೀಸರ...
ಕೊಪ್ಪದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಕ್ಷೌರಿಕ..!
ಮುಂಡಗೋಡ:ತಾಲೂಕಿನ ಕೊಪ್ಪ ಗ್ರಾಮದಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣಾಗಿದ್ದಾನೆ. ಶ್ರೀನಿವಾಸ್ ನರಸಿಂಹ ಬಾರಬಾರ್ (45) ಎಂಬುವವನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಮದ್ಯಾನ ಕೊಪ್ಪ ಗ್ರಾಮದ ತನ್ನ ಹಳೆಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಪ್ಪ ಗ್ರಾಮದಲ್ಲೇ ಹೇರ್ ಕಟ್ಟಿಂಗ್ ಸಲೂನ್ ನಡೆಸುತ್ತಿದ್ದ ಶ್ರೀನಿವಾಸ್, ಇಂದು ಮದ್ಯಾಹ್ನ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದ್ರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸನವಳ್ಳಿ ಪ್ಲಾಟ್ ಬಳಿ ಅಪಘಾತ, ಬಸನಕಟ್ಟಿಯ ದಂಪತಿಗೆ ಗಾಯ..!
ಮುಂಡಗೋಡ: ತಾಲೂಕಿನ ಸನವಳ್ಳಿ ಬಳಿ ರಸ್ತೆ ಅಪಘಾತವಾಗಿದೆ. ಬೈಕ್ ಮತ್ತು ಕಾರ್ ನಡುವೆ ಡಿಕ್ಕಿಯಾಗಿ ಬೈಕ್ ಮೇಲಿದ್ದ ದಂಪತಿಗೆ ಗಂಭೀರ ಗಾಯವಾಗಿದೆ. ಶಿಗ್ಗಾವಿ ತಾಲೂಕಿನ ಬಸನಕಟ್ಟಿ ಗ್ರಾಮದ ನಾಗರಾಜ್ ಲಕ್ಷ್ಮಣ ಅಂಬಿಗೇರ(42) ಹಾಗೂ ಅವ ನ ಪತ್ನಿಗೆ ಗಂಭೀರ ಗಾಯವಾಗಿದ್ದು, ಸದ್ಯ ಮುಂಡಗೋಡ ತಾಲೂಕಾಸ್ಪತ್ರೆಗೆ ಗಾಯಾಳುವನ್ನು ತರಲಾಗಿತ್ತು, ಆದ್ರೆ, ಗಂಭೀರ ಗಾಯಗೊಂಡಿರೋ ಕಾರಣಕ್ಕೆ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇನ್ನು, ಮುಂಡಗೋಡಿನಿಂದ ಸಂತೆ ಮುಗಿಸಿಕೊಂಡು ಬಸನಕಟ್ಟಿಗೆ ಬೈಕ್ ಮೂಲಕ ತೆರಳುತ್ತಿದ್ದಾಗ, ಬಂಕಾಪುರ...