ಶಿಗ್ಗಾವಿ: ಬೈಕ್ ಅಪಘಾತದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯೋರ್ವರು ದಾರುಣ ಸಾವು ಕಂಡ ಘಟನೆ ಶಿಗ್ಗಾವಿ ನಡೆದಿದೆ. ಶಿಗ್ಗಾವಿಯಲ್ಲಿ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಚನ್ನಪ್ಪ ದೊಡ್ಡಪ್ಪ ಸಂಶಿ(54) ಎಂಬುವವರೇ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಪೇದೆಯಾಗಿದ್ದಾರೆ. ಇಂದು ಮದ್ಯಾಹ್ನ ಶಿಗ್ಗಾವಿ ತಾಲೂಕಿನ ಹನುಮರಳ್ಳಿ ಗ್ರಾಮದ ಬಳಿ ಬೈಕ್ ಅಪಘಾತವಾಗಿದೆ. ಸಮನ್ಸ್ ಜಾರಿ ಕುರಿತು ಕರ್ತವ್ಯ ನಿಮಿತ್ತ ಹೊರಟಾಗ ಶಿಗ್ಗಾವಿ ತಾಲ್ಲೂಕಿನ ಹನಮರಹಳ್ಳಿ ಗ್ರಾಮದ ಹತ್ತಿರ ಬೈಕ್ ಅಪಘಾತವಾಗಿ ಮೃತಪಟ್ಟಿದ್ದಾರೆ. ಮೂಲತಃ ಶಿಗ್ಗಾವಿ ತಾಲೂಕಿನ...
Top Stories
ತಟ್ಟಿಹಳ್ಳಿ ಶಿವಾನಂದನ ಹತ್ಯೆ ಯತ್ನ ಕೇಸ್, ಆರೋಪಿಯ ಹೆಡೆಮುರಿ ಕಟ್ಟಿದ ಮುಂಡಗೋಡಿನ ಚಾಣಾಕ್ಷ ಪೊಲೀಸ್ರು..!
ತಟ್ಟಿಹಳ್ಳಿ ಶಿವಾನಂದನ ಹತ್ಯೆಗೆ ಸಜ್ಜಾಗಿದ್ದವನ ಹೆಸರು ಶಿವರಾಜ್.. ಅಷ್ಟಕ್ಕೂ ಆತ 3ನೇ ಹೆಂಡತಿಯ ಮೊದಲನೇ ಗಂಡನ ಮಗ..!
ತಟ್ಟಿಹಳ್ಳಿಯಲ್ಲಿ ಮಗನಿಂದಲೇ ತಂದೆಯ ಭೀಕರ ಹತ್ಯೆಗೆ ಯತ್ನ..? ಕಂದಲಿಯಿಂದ ಕುತ್ತಿಗೆಗೆ ಕೊಯ್ದ ಶಿವರಾಜ್ ಪರಾರಿ..!
ವಿ.ಎಸ್.ಪಾಟೀಲರ “ಬಂದೂಕು” ನಾಪತ್ತೆ, ಹುಡಿಕಿಕೊಡುವಂತೆ ಮುಂಡಗೋಡ ಠಾಣೆಯಲ್ಲಿ ದೂರು..!
ಕಾತೂರು ನಾಗನೂರು ರಸ್ತೆಯಲ್ಲಿ ಬೈಕುಗಳ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರಿಗೆ ಗಾಯ
ಹೊನ್ನಾವರದಲ್ಲಿ ಭೀಕರ ಅಗ್ನಿ ದುರಂತ, ಸುಟ್ಟು ಕರಕಲಾದ ಕಾರು, ಕಾರಲ್ಲಿದ್ದ ಇಬ್ಬರು ಸಜೀವ ದಹನ..!
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು..!
ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿ ಕಬ್ಬು ತುಂಬಿದ ಟ್ರಾಕ್ಟರ್ ಪಲ್ಟಿ, ತಪ್ಪಿದ ಭಾರೀ ಅನಾಹುತ..!
ಯಲ್ಲಾಪುರ ರಂಜಿತಾ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್, ನಿಸರ್ಗ ಮನೆ ಜಂಗಲ್ ನಲ್ಲಿ ಹೆಣವಾಗಿ ಪತ್ತೆಯಾದ ಆರೋಪಿ ರಫೀಕ್, ಆತ್ಮಹತ್ಯೆ ಮಾಡಿಕೊಂಡ್ನಂತೆ..!
ಯಲ್ಲಾಪುರ ರಂಜಿತಾ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್, ನಿಸರ್ಗ ಮನೆ ಜಂಗಲ್ ನಲ್ಲಿ ಹೆಣವಾಗಿ ಪತ್ತೆಯಾದ ಆರೋಪಿ ರಫೀಕ್, ಆತ್ಮಹತ್ಯೆ ಮಾಡಿಕೊಂಡ್ನಂತೆ..!
ಮುಂಡಗೋಡ ತಾಲೂಕಿನ ಪ.ಪಂಗಡದ ಮೀನುಗಾರರಿಗೆ ವಾಹನ ಖರೀದಿಗೆ ಸಹಾಯಧನಕ್ಕೆ ಅರ್ಜಿ ಅಹ್ವಾನ..!
ತಟ್ಟಿಹಳ್ಳಿ ಬಳಿ ಕಾರ್, ಟ್ರಾಕ್ಟರ್ ನಡುವೆ ಮುಖಾಮುಕಿ ಡಿಕ್ಕಿ, ಕಾರ್ ಪಲ್ಟಿ, ಮಗುವಿಗೆ ಗಾಯ..!
ಜಸ್ಟ್ ಅದೊಂದು ವಾಟ್ಸಾಪ್ ಕಾಲ್, ಈ ಟಿಬೇಟಿಗನಿಂದ ಆ ವಂಚಕರು ದೋಚಿದ್ದು ಬರೋಬ್ಬರಿ 1 ಕೋಟಿ 61 ಲಕ್ಷ..!
ಪ.ಜಾತಿ, ಪಂಗಡ ಯೋಜನೆಗಳಲ್ಲಿ 100% ಗುರಿ ಸಾಧಿಸಲು ಅಧಿಕಾರಿಗಳಿಗೆ ಡೀಸಿ ಕಟ್ಟುನಿಟ್ಟಿನ ಸೂಚನೆ..!
ಪೌರಕಾರ್ಮಿಕರಿಗೆ ಆದ್ಯತೆಯಲ್ಲಿ ಮನೆಗಳನ್ನು ಒದಗಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸೂಚನೆ..!
ಪೊಲೀಸ್ ಇಲಾಖೆ ವತಿಯಿಂದ ಪ್ರತಿ ತಿಂಗಳು ಪ.ಜಾತಿ ಪಂಗಡದವರ ಕುಂದುಕೊರತೆ ಸಭೆ: ಎಸ್ಪಿ ದೀಪನ್
ಖಾಸಗಿ ಆಸ್ಪತ್ರೆ, ಆರೋಗ್ಯ ಸಂಸ್ಥೆಗಳಲ್ಲಿ ನಕಲಿ ವೈದ್ಯರು ಕಂಡುಬಂದಲ್ಲಿ ಕಠಿಣ ಕ್ರಮ: ಡೀಸಿ ಖಡಕ್ ಎಚ್ಚರಿಕೆ..!
ಉತ್ತರ ಕನ್ನಡದಲ್ಲಿ ಹೊಸ ವರ್ಷ ಆಚರಣೆಗೆ ಡೀಸಿ ರೂಲ್ಸ್: ಈ ಸೂಚನೆ ಪಾಲಿಸಲೇಬೇಕು ಅಂದ್ರು ಜಿಲ್ಲಾಧಿಕಾರಿ..!
ಹುಬ್ಬಳ್ಳಿಯ ಅಂಚಟಗೇರಿ ಬಳಿ ಭೀಕರ ಅಪಘಾತ- ತಂದೆ, ಎರಡು ಮಕ್ಕಳು ದುರಂತ ಸಾವು..!
Tag: Police news
ಅರೆಬೈಲು ಘಾಟಿನಲ್ಲಿ ಥೇಟು ಸಿನಿಮಾ ಸ್ಟೈಲಿನಲ್ಲೇ ರಾಬರಿ, ಕಾರು ಅಡ್ಡಗಟ್ಟಿ ದೋಚಿದ್ದು ಎಷ್ಟು ಕೋಟಿ ಗೊತ್ತಾ..?
ಯಲ್ಲಾಪುರ ಅರೆಬೈಲ್ ಘಾಟಿನಲ್ಲಿ ಭಯಾನಕ ರಾಬರಿ ನಡೆದಿದೆ. ಕಾರಲ್ಲಿ ತೆರಳುತ್ತಿದ್ದವರನ್ನ ಥೇಟು ಸಿನಿಮಾ ಸ್ಟೈಲಿನಲ್ಲೇ ಅಡ್ಡಗಟ್ಟಿ ಕೋಟಿ ಕೋಟಿ ಹಣ ಎಗರಿಸಿಕೊಂಡು ಹೋಗಿದ್ದಾರೆ ಖದೀಮರು. ಜೊತೆಗೆ ಕಾರನ್ನೂ ಬಿಡದೇ ರಾಬರಿ ಮಾಡಿದ್ದಾರೆ ಆಗಂತುಕರು. ಹೀಗಾಗಿ, ಈ ಪ್ರಕರಣವೀಗ ಇಡೀ ಯಲ್ಲಾಪುರದ ಮಂದಿಯ ನಿದ್ದೆಗೆಡಿಸಿದೆ. ಹೇಗಾಯ್ತು..? ಅವತ್ತು ಅಕ್ಟೋಬರ್ ಒಂದನೇ ತಾರೀಖು, ಶನಿವಾರ ರಾತ್ರಿ ನಡೆದ ಘಟನೆ ಇದು. ಬೆಳಗಾವಿಯಿಂದ ಯಲ್ಲಾಪುರ ಮಾರ್ಗವಾಗಿ ಕೇರಳಕ್ಕೆ ಚಿನ್ನ ಖರೀದಿಗಾಗಿ ಹೊರಟಿದ್ದವರನ್ನು ಅನಾಮತ್ತಾಗಿ ರಾಬರಿ ಮಾಡಲಾಗಿದೆ. ಚಿನ್ನ ಖರೀದಿಗಾಗಿ ಸ್ವಿಪ್ಟ್ ಕಾರಲ್ಲಿ...
ಗಾಂಜಾ ಮಾರಾಟ ಮಾಡುವ ವ್ಯಕ್ತಿಯನ್ನು, ಸಿನಿಮಿಯ ರೀತಿ ಬಂಧಿಸಿದ ಪೊಲೀಸ್ರು..!
ಹಳಿಯಾಳ: ಗಾಂಜಾ ಮಾರಾಟ ಮಾಡಲು ಪಟ್ಟಣಕ್ಕೆ ಬರುತ್ತಿದ್ದ ವ್ಯಕ್ತಿಯನ್ನು ಸಿನಿಮಿಯ ರೀತಿಯಲ್ಲಿ ಟ್ರೇಸ್ ಮಾಡಿ ಹಿಡಿದಿದ್ದಾರೆ ಹಳಿಯಾಳ ಪೊಲೀಸ್ರು. ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದು ಕಲ್ಲಯ್ಯ ಚಂಬಯ್ಯ ಗುಡಿ ಎಂಬುವನೇ ಗಾಂಜಾ ಸಾಗಿಸುತ್ತಿದ್ದ ಆರೋಪಿಯಾಗಿದ್ದಾನೆ. ಅಂದಹಾಗೆ, ಹಳಿಯಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸದ್ಯ ನವರಾತ್ರಿಯ ಸಂಭ್ರಮ ಜೋರಾಗಿದೆ. ಗ್ರಾಮಗಳಲ್ಲಿ ದಸರಾ ಹಬ್ಬದ ನಿಮಿತ್ಯ ದುರ್ಗಾದೌಡ್ ಮೆರೆವಣಿಗೆ ಸಂಭ್ರಮದಿಂದ ನಡೆಯುತ್ತಿದೆ. ಹೀಗಾಗಿ ದುರ್ಗಾ ದೌಡ್ ಮೆರವಣಿಗೆಯ ಬಂದೋಬಸ್ತ್ ಗಾಗಿ ತೆರಳಿದ್ದ ಹಳಿಯಾಳ ಪಿಎಸ್ ಐ ವಿನೋದ್ ರೆಡ್ಡಿ ಹಾಗೂ...
ಪಾಳಾದಲ್ಲಿ MSIL ವೈನ್ ಶಾಪ್ ದೋಚಿದ ಖದೀಮರು, ಗಾಂಧಿ ಜಯಂತಿಯಂದೇ ಅದೇಷ್ಟು ಎಣ್ಣೆ ಕದ್ರು ಗೊತ್ತಾ..?
ಮುಂಡಗೋಡ ತಾಲೂಕಿನ ಪಾಳಾದಲ್ಲಿ MSIL ವೈನ್ ಶಾಪ್ ಕಳ್ಳತನವಾಗಿದೆ. ಸೆಟರ್ಸ್ ಮುರಿದು ಒಳನುಗ್ಗಿರೋ ಕಳ್ಳರು ಸಿಕ್ಕಷ್ಟು ಎಣ್ಣೆ ಬಾಚಿಕೊಂಡು ಪರಾರಿಯಾಗಿದ್ದಾರೆ. ನಿನ್ನೆ ರಾತ್ರಿಯೇ ನಡೆದಿರೋ ಘಟನೆ, ಇಂದು ಸಂಜೆ ಬೆಳಕಿಗೆ ಬಂದಿದೆ. ಗಾಂಧಿ ಜಯಂತಿಯ ಕಾರಣಕ್ಕೆ ಬಂದ್ ಆಗಿದ್ದ MSIL ವೈನ್ ಶಾಪ್ ಗೆ ಕನ್ನ ಹಾಕಿರೋ ಖದೀಮರು ಸುಮಾರು 60-65 ಸಾವಿರ ಮೌಲ್ಯದ ಮದ್ಯ ಎಗರಿಸಿ ಹೋಗಿದ್ದಾರೆ ಅಂತಾ ಅಂದಾಜಿಸಲಾಗಿದೆ. ಅಂದಹಾಗೆ, ನಿನ್ನೆ ಶಿರಸಿ ತಾಲೂಕಿನ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಕೊಪ್ಪದಲ್ಲೂ ಇದೇಮಾದರಿಯಲ್ಲಿ ವೈನ್...
ಸಿಪಿಐ ವಾಹನ ಚಾಲಕ ಪೊಲೀಸಪ್ಪ ಲಂಚ ಸ್ವೀಕರಿಸುವಾಗಲೇ ಬಲೆಗೆ, “ಲೋಕಾ” ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕ ಇಬ್ಬರು..!
ಕಲಬುರಗಿ: ಸಿನೀಮಯ ರೀತಿಯಲ್ಲಿ ಚೇಸ್ ಮಾಡಿ ಲಂಚ ಸ್ವೀಕರಿಸುತ್ತಿರುವ ಇಬ್ಬರು ಪೇದೆಗಳನ್ನ ಲೋಕಾಯುಕ್ತ ತಂಡ ಹಿಡಿದಿರೋ ಘಟನೆ ಕಲಬುರಗಿಯಲ್ಲಿ ನಡೆದಿದೆ.. ಅಕ್ರಮ ಮರಳು ಸಾಗಾಟ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜೇವರ್ಗಿ ಠಾಣೆ ಅವಣ್ಣ ಮತ್ತು ಶಿವರಾಯ ಈ ಇಬ್ಬರೂ ಪೇದೆಗಳು ಲೋಕಾ ತಂಡಕ್ಕೆ ಲಾಕ್ ಆಗಿದ್ದಾರೆ. ಶಹಪುರದ ಅಖಿಲ್ ಎಂಬುವವರು ನೀಡಿದ ದೂರಿನ ಮೇರೆಗೆ ಫೀಲ್ಡಿಗಿಳಿದ ಲೋಕಾ ಟೀಂ ದಾಳಿ ಮಾಡಿದೆ. ಹೈವೇ ರೋಡಲ್ಲಿ ವೆಹಿಕಲ್ ಅಡ್ಡಗಟ್ಟಿ ಟ್ರಾಪ್ ಮಾಡಿದ ಹಣದ ಸಮೇತ ಒಬ್ಬ ಹೆಡ್...
ಶಿರಸಿಯಲ್ಲಿ NIA ದಾಳಿ, ಓರ್ವ SDPI ಮುಖಂಡನ ಬಂಧನ, ಬಂಧಿತ ತನ್ನ ಮನೆಯ ಗೋಡೆಯ ಮೇಲೆ ಏನೇಲ್ಲ ಬರೆದಿದ್ದ ಗೊತ್ತಾ..?
ಶಿರಸಿ: ರಾಜ್ಯದ ವಿವಿಧೆಡೆ ರಾಷ್ಟ್ರೀಯ ತನಿಖಾ ಪಡೆಗಳಿಂದ ದಾಳಿಯಾಗಿದೆ. ಈ ನಡುವೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲೂ ಎನ್‌ಐಎ ಹಾಗೂ ಐಬಿ ತಂಡದಿಂದ ದಾಳಿ ನಡೆದಿದೆ. ಪರಿಣಾಮ, ಶಿರಸಿ ತಾಲೂಕಿನ ಟಿಪ್ಪು ನಗರದಲ್ಲಿ ಸ್ಥಳೀಯ ಪೊಲೀಸರ ಸಹಾಯದಿಂದ ಓರ್ವ ಎಸ್ಡಿಪಿಐ ಮುಖಂಡನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎಸ್ಡಿಪಿಐ ಮುಖಂಡ ಹಝೀಝ್ ಅಬ್ದುಲ್ ಶುಕುರ್ ಹೊನ್ನಾವರ್ (45) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಬೆಳಿಗ್ಗೆ 3.30ರಿಂದಲೇ ಹಝೀಝ್ ಮನೆಯ ಮೇಲೆ ದಾಳಿ ನಡೆಸಲು ಪೊಲೀಸರ ದಂಡೇ ನೆರೆದಿತ್ತು ಆದ್ರೆ ಬೆಳ್ಳಂ ಬೆಳಿಗ್ಗೆ...
ಮುಂಡಗೋಡಿನಲ್ಲಿ ವೆಲ್ಡಿಂಗ್ ವರ್ಕ್ ಶಾಪ್ ದೋಚಿದ ಕಳ್ಳರು, 1.30 ಲಕ್ಷ ಮೌಲ್ಯದ ವಸ್ತುಗಳ ಕಳ್ಳತನ..!
ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ವೆಲ್ಡಿಂಗ್ ವರ್ಕ್ ಶಾಪ್ ನಲ್ಲಿ ಕಳ್ಳತನವಾಗಿದೆ. ಒಟ್ಟೂ 1 ಲಕ್ಷ 30 ಸಾವಿರ ಮೌಲ್ಯದ ಕಬ್ಬಿಣದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಖದೀಮರು. ವೆಲ್ಡಿಂಗ್ ವರ್ಕ್ ಶಾಪ್ ನ ಮಾಲೀಕ ಎಜಾಜ್ ನವಾಜ ಮಹ್ಮದ್ ರಫೀಕ ನರೇಗಲ್ ಎಂಬುವವರು ಮುಂಡಗೋಡ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ. ಸೆಪ್ಟೆಂಬರ್ 16 ರಂದು ರಾತ್ರಿ ಘಟನೆ ನಡೆದಿದ್ದು, ನವರಂಗ್ ವೆಲ್ಡಿಂಗ ವರ್ಕ್ಸ್ ಶಾಪ್ ನ ಮುಂದೆ ಇಟ್ಟಿದ್ದ ಕಬ್ಬಿಣದ ಟೇಬಲ್ಲುಗಳು, ದೊಡ್ಡದಾದ ಕಬ್ಬಿಣದ...
ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ, ಇಬ್ಬರ ಮೇಲೆ ಚಾಕುವಿನಿಂದ ಹಲ್ಲೆ..!
ಧಾರವಾಡ: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಇಬ್ಬರ ಮೇಲೆ ಹಲ್ಲೆ ನಡೆದಿದೆ. ನಮ್ಮ ಹುಡುಗಿಗೆ ಕಾಡಿಸುತ್ತೀರಾ, ಲೈಂಗಿಕ ದೌರ್ಜನ್ಯ ಎಸಗಿದ್ದಿರಾ ಅಂತಾ ಧಿಡೀರ್ ಜಗಳ ತೆಗೆದ ಮೂವರು ಆರೋಪಿಗಳು ಮನೋಜ್ ಕರ್ಜಗಿ ಹಾಗೂ ಅಯಾನ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಮನೋಜ್ ಗುಡದೂರ್, ಆನಂದ ತಳವಾರ್, ಹಾಗೂ ಉದಯ್ ಕೆಲಗೇರಿ ಎನ್ನುವ ಯುವಕರು ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಚಾಕುವಿನಿಂದ ಅಯಾನ್ ಮೇಲೆ ಹಲ್ಲೆ ಮಾಡಿದ್ದಾರೆ....
ಅತ್ತಿವೇರಿಯ ವ್ಯಕ್ತಿ ಲಕ್ಣ್ಮೇಶ್ವರದಲ್ಲಿ ನೇಣು ಬಿಗಿದು ಆತ್ಮಹತ್ಯೆ..!
ಮುಂಡಗೋಡ: ತಾಲೂಕಿನ ಅತ್ತಿವೇರಿಯ ವ್ಯಕ್ತಿಯೊಬ್ಬ ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಅತ್ತಿವೇರಿ ಗ್ರಾಮದ ನಬೀಸಾಬ್ ಮತ್ತಿಗಟ್ಟಿ(32) ಎಂಬುವ ವ್ಯಕ್ತಿಯೇ ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ. ತನ್ನ ಪತ್ನಿಯ ತವರು ಮನೆಯಲ್ಲೇ ವಾಸವಾಗಿದ್ದ ನಬೀಸಾಬ್ ಹೀಗೆ ದಿಢಿರನೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಅನ್ನೋ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಲಕ್ಷ್ಮೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮುಂಡಗೋಡಿನಲ್ಲಿ ಮಾನಸಿಕ ಅಸ್ವಸ್ಥೆಯ ಮೇಲೆ ಅಮಾನುಷ ಹಲ್ಲೆ, ರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದ “ಲೇಡಿ” ಯಾರು..?
ಮುಂಡಗೋಡ ಪಟ್ಟಣದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮಾನಸಿಕ ಅಸ್ವಸ್ಥಳೊಬ್ಬಳನ್ನು ಮಹಿಳೆಯೋರ್ವಳು ಮನಬಂದಂತೆ ಥಳಿಸಿದ್ದಾಳೆ. ಮನಸೋ ಇಚ್ಚೆ ಚಪ್ಪಲಿಯಿಂದ ನಡುರಸ್ತೆಯಲ್ಲೇ ಥಳಿಸಿರೋದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಸ್ವಸ್ಥೆಯ ನರಳಾಟ..! ನಿಜ ಅಂದ್ರೆ, ಇದು ನಡೆದದ್ದು ಮುಂಡಗೋಡ ಪಟ್ಟಣದ ಪಟ್ಟಣ ಪಂಚಾಯತಿ ಎದುರಗಡೆ. ಮಾನಸಿಕ ಅಸ್ವಸ್ಥೆಯನ್ನು ಅಟ್ಟಾಡಿಸಿ ಹೊಡೆದಿರೋ ಮಹಿಳೆ ಥೇಟು ರೌಡಿಯಂತೆ ನಡೆದುಕೊಂಡಿದ್ದಾಳೆ. ರಸ್ತೆಯಲ್ಲಿ ಹೊಡೆತ ತಾಳಲಾರದೇ ಮಾನಸಿಕ ಅಸ್ವಸ್ಥೆ ಚೀರಾಟ ಮಾಡುತ್ತಿದ್ದರೂ ಕರುಣೆ ಬಾರದೇ ಆ ಮಹಿಳೆ ಚಪ್ಪಲಿಯಿಂದ ಥಳಿಸಿದ್ದಾಳೆ. ಇನ್ನು ಘಟನೆ ಕಂಡ ದಾರಿಹೋಕನೊಬ್ಬ...









