ಮುಂಡಗೋಡ ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆ ಮೇಲೆ ಅಪಘಾತವಾಗಿದೆ.. ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಆಟೋಗೆ ಕಾರ್ ಡಿಕ್ಕಿಯಾದ ಪರಿಣಾಮ ಹಲವರಿಗೆ ಗಾಯವಾಗಿದೆ. ಮುಂಡಗೋಡ ಕಡೆಯಿಂದ ಯಲ್ಲಾಪುರ ರಸ್ತೆ ಕಡೆ ಹೊರಟಿದ್ದ ಆಟೋಗೆ, ಮುಂಡಗೋಡ ಕಡೆಯಿಂದ ಕಲಘಟಗಿ ಕಡೆ ಹೊರಟಿದ್ದ ಕಾರ್, ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಅಂತಾ ತಿಳಿದು ಬಂದಿದೆ. ಪರಿಣಾಮ ಆಟೋದಲ್ಲಿದ್ದ ಚಾಲಕ ಸೇರಿ ಕೆಲವರಿಗೆ ಗಾಯವಾಗಿದೆ. ಆಟೋ ಚಾಲಕ ಇಂದೂರಿನ ಮೆಹೆಬೂಬ್ ಇಂಗಳಗಿ ಗಾಯವಾಗಿದ್ದು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು, ಕಾರು...
Top Stories
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಮತ್ತೊಮ್ಮೆ ರವಿಗೌಡ ಪಾಟೀಲರೇ ಕಿಂಗ್..!
ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಅಧ್ಯಕ್ಷರಾಗಿ ರವಿಗೌಡ ಪಾಟೀಲ್ ಅವಿರೋಧ ಆಯ್ಕೆ..? ಎರಡನೇ ಬಾರಿಗೆ ಪಟ್ಟಕ್ಕೇರ್ತಾರಾ ಗೌಡ್ರು..?
ಗದ್ದೆಯಲ್ಲಿ ಅಣ್ಣತಮ್ಮರ ಮೇಲೆ ಚಿರತೆಯ ಭಯಾನಕ ದಾಳಿ; ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯ..!
ಮುಂಡಗೋಡಿನಲ್ಲಿ ಅರ್ಥಪೂರ್ಣ “ವಾಲ್ಮೀಕಿ ಜಯಂತಿ”
ಬೋಧಕೇತರ ನೌಕರರು ಸಂಘಟಿತರಾಗಿರುವುದು ಖುಷಿ ತಂದಿದೆ”- ಡಿಡಿಪಿಐ ಎಂ ಎನ್ ದಂಡಿನ ಶ್ಲಾಘನೆ
Tag: mundgod news
ಧಾರವಾಡ ಡಬ್ಬಲ್ ಮರ್ಡರ್, ನಾಲ್ವರು ಆರೋಪಿಗಳು ಮುಂಡಗೋಡಿನಲ್ಲಿ ವಶಕ್ಕೆ..!
ಧಾರವಾಡದ ಜನತೆಯನ್ನು ಬೆಚ್ಚಿಬಿಳಿಸಿದ್ದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ವರು ಆರೋಪಿಗಳನ್ನು ಮುಂಡಗೋಡಿನಲ್ಲಿ ಪೊಲೀಸರು ವಶಕ್ಕೆ ಪಡೆದು ಧಾರವಾಡಕ್ಕೆ ಕರೆದೊಯ್ದಿರೋ ಮಾಹಿತಿ ಲಭ್ಯವಾಗಿದೆ. ಅರ್ಬಾಜ್ ಹಂಚಿನಾಳ, ನದೀಮ್ ಹಾಗೂ ರಹೀಂ ಸೇರಿ ನಾಲ್ವರನ್ನು ವಶಕ್ಕೆ ಪಡೆದಿರೋ ಧಾರವಾಡ ಪೊಲೀಸರು ಸದ್ಯ ಧಾರವಾಡ ಉಪನಗರ ಠಾಣೆಯಲ್ಲಿ ವಿಚಾರಣೆ ನಡಿಸ್ತಿದಾರೆ. ನಿನ್ನೆ ಅಂದ್ರೆ, ಮೇ.25ರ ತಡರಾತ್ರಿ ಧಾರವಾಡದ ಕಮಲಾಪುರದ ಹೊರವಲಯದಲ್ಲಿ ನಡೆದಿದ್ದ ಡಬಲ್ ಮರ್ಡರ್ ಕೇಸಿನಲ್ಲಿ, ಕಮಲಾಪುರ ನಿವಾಸಿ ಮಹಮ್ಮದ ಕುಡಚಿ ಎಂಬುವವರನ್ನು ಆತನ ನಿವಾಸದಲ್ಲೇ ಹತ್ಯೆ ಮಾಡಲಾಗಿತ್ತು. ಆರೋಪಿಗಳೊಂದಿಗೆ...
ಧಾರವಾಡದಲ್ಲಿ ನಡೆದ ಭೀಕರ ಡಬಲ್ ಮರ್ಡರ್ ನಲ್ಲಿ ಮುಂಡಗೋಡ ಯುವಕನ ಹತ್ಯೆ..! ವಿದೇಶಕ್ಕೆ ಹೋಗಬೇಕಾಗಿದ್ದ ಹುಡುಗ ಹೆಣವಾದ..!
ಧಾರವಾಡದಲ್ಲಿ ಡಬಲ್ ಮರ್ಡರ ಆಗಿದೆ. ಇಬ್ಬರು ವ್ಯಕ್ತಿಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಕೊಲೆ ಮಾಡಲಾಗಿದೆ. ಧಾರವಾಡದ ಕಮಲಾಪೂರದ ಹಾತರಕಿ ಪ್ಲಾಟ್ ಬಳಿ ಘಟನೆ ನಡೆದಿದ್ದು ಇದ್ರಲ್ಲಿ ಮುಂಡಗೋಡಿನ ಯುವಕನೂ ಬರ್ಬರವಾಗಿ ಕೊಲೆಯಾಗಿದ್ದಾನೆ. ಅಂದಹಾಗೆ, ಮುಂಡಗೋಡಿನ ದೇಶಪಾಂಡೆ ನಗರದ ಯುವಕ ಗಣೇಶ್ ಕಮ್ಮಾರ್ (ಸಾಳುಂಕೆ)(24) ಕೊಲೆಯಾಗಿದ್ದಾನೆ. ಮತ್ತೋರ್ವ ಮಹ್ಮದ್ ಖುಡಚಿ (45) ಭೀಕರವಾಗಿ ಹತ್ಯೆಯಾಗಿದ್ದಾನೆ. ಹೀಗಾಗಿ ಚುಮು ಚುಮು ಬೆಳಕಿನಲ್ಲಿ ನಡೆದಿರೋ ಭೀಕರ ಡಬಲ್ ಮರ್ಡರ್ ಗೆ ಧಾರವಾಡದ ಕಮಲಾಪುರ ಗ್ರಾಮ ಬೆಚ್ಚಿ ಬಿದ್ದಿದೆ. ರಿಯಲ್ ಎಸ್ಟೇಟ್...
ವಡಗಟ್ಟಾ ನಾಕಾ ಬಳಿ ಬೈಕ್ ಸ್ಕಿಡ್, ಸವಾರನ ಕಾಲು ಮುರಿತ, ತಾಲೂಕಾಸ್ಪತ್ರೆಗೆ ರವಾನೆ..!
ಮುಂಡಗೋಡ ತಾಲೂಕಿನ ಹುಬ್ಬಳ್ಳಿ ರಸ್ತೆಯ ವಡಗಟ್ಟಾ ಚೆಕ್ ಪೋಸ್ಟ್ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರನಿಗೆ ಕಾಲು ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದಾನೆ. ಕುಷ್ಟಗಿಯಿಂದ ಮಣಿಪಾಲಕ್ಕೆ ಬೈಕ್ ಮುಖಾಂತರ ತೆರಳುತ್ತಿದ್ದ ನಿರಂಜನ್ ಅಮರೇಶ್ ಅಮ್ಮಿನಗಡ ಎನ್ನುವ ವ್ಯಕ್ತಿಯ ಬೈಕ್ ಅಪಘಾತವಾಗಿದ್ದು, ಸದ್ಯ 108 ಅಂಬ್ಯುಲೆನ್ಸ್ ಮೂಲಕ ಪ್ರಥಮ ಚಿಕಿತ್ಸೆ ನೀಡಿ ಮುಂಡಗೋಡಿನ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡು ನರಳುತ್ತಿದ್ದ ವ್ಯಕ್ತಿಯನ್ನು ಕಂಡ ಸ್ಥಳೀಯರು ತಕ್ಷಣವೇ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಮಾನವೀಯತೆ ತೋರಿದ್ದಾರೆ....
ಕೊಪ್ಪ ಇಂದಿರಾನಗರ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಕೋಡಂಬಿಯ ವ್ಯಕ್ತಿಗೆ ಗಾಯ, ಆಸ್ಪತ್ರೆಗೆ ದಾಖಲು..!
ಮುಂಡಗೋಡ ತಾಲೂಕಿನ ಕೊಪ್ಪ ಇಂದಿರಾನಗರದ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರನಿಗೆ ಗಾಯವಾಗಿದೆ. ಸದ್ಯ ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡಿರೋ ಬೈಕ್ ಸವಾರ, ಕೋಡಂಬಿ ಗ್ರಾಮದ ರಾಘವೇಂದ್ರ ಬಾಬು ಅರ್ಕಸಾಲಿ ಅಂತಾ ಗುರುತಿಸಲಾಗಿದೆ. ಈತ ಸಂಜೆ ತನ್ನ ಬೈಕ್‌ಮೂಲಕ ಇಂದಿರಾನಗರದ ಬಳಿ ಹೊರಟಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದು ದುರ್ಘಟನೆ ನಡೆದಿದೆ. ನಂತರ ಮಾಹಿತಿ ತಿಳಿದು 108 ಅಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿ 108 ಅಂಬ್ಯಲೆನ್ಸ್ ಸಿಬ್ಬಂದಿಗಳು ಸವಾರನಿಗೆ ಪ್ರಥಮ ಚಿಕಿತ್ಸೆ ಕೊಟ್ಟು ಮುಂಡಗೋಡ...
ಯಲ್ಲಾಪುರ ರಸ್ತೆಯ ಗುಂಜಾವತಿ ಬಳಿ ಕಾರು ಅಪಘಾತ, ಮದುವೆಗೆಂದು ಬಂದಿದ್ದ ಮಹಾರಾಷ್ಟ್ರದ ಕುಟುಂಬಕ್ಕೆ ಆಘಾತ..!
ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯ ಬಡ್ಡಿಗೇರಿ, ಗುಂಜಾವತಿ ನಡುವೆ ಕಾರು ಅಪಘಾತವಾಗಿದೆ. ಮದುವೆಗೆಂದು ಬಂದಿದ್ದ ಮಹಾರಾಷ್ಟ್ರ ಮೂಲದ ಕುಟುಂಬದ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಪರಿಣಾಮ ಕಾರಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. ಮಹಾರಾಷ್ಟ್ರ ಮೂಲದ ಕುಟುಂಬ ಇಂದು ಮುಂಡಗೋಡ ತಾಲೂಕಿನಲ್ಲಿ ಮದುವೆ ಇದ್ದ ಕಾರಣ, ಮದುವೆಗೆಂದು ಆಗಮಿಸಿತ್ತು. ಮದುವೆ ಮುಗಿಸಿಕೊಂಡು ಹೊರಡುವಾಗ ಬಡ್ಡಿಗೇರಿ ಸಮೀಪದ ರಸ್ತೆಯಲ್ಲಿ ನಿಯಂತ್ರಣ ತಪ್ಪಿದೆ. ಹೀಗಾಗಿ, ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ಆದ್ರೂ ಅದೃಷ್ಟವಶಾತ್ ಕಾರಲ್ಲಿದ್ದವರಿಗೆ...
ಮುಂಡಗೋಡ ಹೊರವಲಯದ APMC ಬಳಿಯ ಕಾಡಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ..!
ಮುಂಡಗೋಡ ಪಟ್ಟಣದ ಹೊರವಲಯದ APMC ಹತ್ತಿರದ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಸುಮಾರು 45 ವರ್ಷ ವಯಸ್ಸಿನ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯಾವುದೋ ಕಾರಣಕ್ಕೆ ಕಾಡಿನಲ್ಲಿ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಕೊಳೆತು ನಾರುವ ಸ್ಥಿತಿಯಲ್ಲಿರೋ ಶವ, ಕನಿಷ್ಟ ಸುಮಾರು ಹತ್ತು ದಿನಗಳ ಹಿಂದೆ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೈನಳ್ಳಿ ಯುವಕನಿಂದ ಲವ್, ಸೆಕ್ಸ್, ದೋಖಾ ಆರೋಪ, ಆತನ ಮನೆ ಎದುರೇ ಧರಣಿ ಕುಳಿತ ಯುವತಿ..! ಅಷ್ಟಕ್ಕೂ ಏನಿದು ಘಟನೆ..?
ಮುಂಡಗೋಡ ತಾಲೂಕಿನ ಮೈನಳ್ಳಿಯಲ್ಲಿ ಯುವತಿಯೋರ್ವಳು ತನಗೆ ಅನ್ಯಾಯವಾಗಿದೆ ಅಂತಾ ಯುವಕನ ಮನೆಯೆದುರು ನಿನ್ನೆ ಸೋಮವಾರದಿಂದಲೂ ಸತ್ಯಾಗ್ರಹ ನಡೆಸ್ತಿದಾಳೆ. ಇಲ್ಲಿನ ಯುವಕನೊಬ್ಬ ನಂಗೆ ಪುಸಲಾಯಿಸಿ, ಪ್ರೀತಿಯ ಬಲೆ ಹೆಣೆದು, ಬಳಸಿಕೊಂಡು ಇವಾಗ ಮದುವೆ ಅಂತಾ ಮಾತಾಡಿದ್ರೆ ಆಗಲ್ಲ ಅಂತಾ ದ್ರೋಹ ಮಾಡ್ತಿದಾನೆ ಎಂದು ಅಲವತ್ತುಕೊಂಡಿದ್ದಾಳೆ.. ಘಟನೆ ಏನು..? ಯುವತಿ ಹೇಳೋ ಪ್ರಕಾರ, ಮೈನಳ್ಳಿ ಗ್ರಾಮದ ಅದೊಬ್ಬ ಯುವಕ, ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಅದೇಂತದ್ದೋ ಟ್ರೇನಿಂಗ್ ಗೆ ಹೋದಾಗ, ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕಾಂಡೇಬಾಗೂರ್ ಗ್ರಾಮದ...
ಕಾತೂರಿನಿಂದ ಆಸ್ಪತ್ರೆಗೆಂದು ಮುಂಡಗೋಡಿಗೆ ಬಂದಿದ್ದ ವೃದ್ದೆ ನಾಪತ್ತೆ, ಕಂಡರೆ ತಕ್ಷಣವೇ ಮಾಹಿತಿ ನೀಡಲು ಮನವಿ..!
ಮುಂಡಗೋಡ ತಾಲೂಕಿನ ಕಾತೂರ ಗ್ರಾಮದ ವೃದ್ದೆಯೋರ್ವರು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಮುಂಡಗೋಡ ಪಟ್ಟಣಕ್ಕೆ ಬಂದವರು ನಾಪತ್ತೆಯಾಗಿದ್ದಾರೆ ಹುಡುಕಿಕೊಡಿ ಅಂತಾ ಆಕೆಯ ಪುತ್ರ ಮನವಿ ಮಾಡಿದ್ದಾರೆ. ಕಾತೂರಿನ ಶಿವಕ್ಕ ಫಕ್ಕೀರಪ್ಪ ತಳವಾರ(65) ಎಂಬ ವೃದ್ದೆಯೇ ನಾಪತ್ತೆಯಾದವರು. ನಿನ್ನೆ ಮುಂಜಾನೆ 10 ಘಂಟೆಗೆ ಕಾತೂರನಿಂದ ಮುಂಡಗೋಡಿಗೆ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ಬಂದಿದ್ದರು. ಆದ್ರೆ, ಆಸ್ಪತ್ರೆಗೆ ಅಂತಾ ಬಂದವರು ವಾಪಸ್ ಮನೆಗೆ ಹೋಗದೆ ಎಲ್ಲಿಯೊ ನಾಪತ್ತೆಯಾಗಿದ್ದು, ಕುಟುಂಬಸ್ಥರು ಎಲ್ಲ ಕಡೆ ಹುಡುಕುತ್ತಿದ್ದಾರೆ. ಆದ್ರೆ ಇದುವರೆಗೂ ವೃದ್ದೆಯ ಪತ್ತೆಯಾಗಿಲ್ಲ. ಹೀಗಾಗಿ, ಯಾರಿಗಾದ್ರೂ...
ಅಯ್ಯಪ್ಪ ದೇವಸ್ಥಾನದ ಬಳಿ ನಡೆದಿದ್ದ ಭೀಕರ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ನ್ಯಾಸರ್ಗಿ ಯುವಕ ಚಿಕಿತ್ಸೆ ಫಲಿಸದೇ ಸಾವು..!
ಮುಂಡಗೋಡ ಪಟ್ಟಣದ ಹೊರವಲಯದ ಅಯ್ಯಪ್ಪ ದೇವಸ್ಥಾನದ ಬಳಿ ನಿನ್ನೆ ನಡೆದಿದ್ದ ಭೀಕರ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿರೋ ಮಾಹಿತಿ ಲಭ್ಯವಾಗಿದೆ. ನ್ಯಾಸರ್ಗಿ ಗ್ರಾಮದ ಕಿರಣ್ ಫಕ್ಕೀರಪ್ಪ ಮೇದಾರ್ (25) ಮೃತ ಬೈಕ್ ಸವಾನಾಗಿದ್ದಾನೆ. ನಿನ್ನೆ ರವಿವಾರ ರಾತ್ರಿ ನಡೆದಿದ್ದ ಬೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಿರಣ್ ಗೆ ಸೂಕ್ತ ಚಿಕಿತ್ಸೆಗಾಗಿ 108 ಅಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ಕಿಮ್ಸ್ ನಲ್ಲಿ...









