ಮುಂಡಗೋಡ : ತಾಲೂಕಿನ ಬಸಾಪುರದಲ್ಲಿ KSRTC ಚಾಲಕ ಹಾಗೂ ನಿರ್ವಾಹಕನ ಮೇಲೆ ಇಬ್ಬರು ಯುವಕರು ಹಲ್ಲೆ ಮಾಡಿರೋ ಆರೋಪ ಕೇಳಿಬಂದಿದೆ. ಸೋಮವಾರ ಬೆಳಗ್ಗೆ ಘಟನೆ ನಡೆದಿದ್ದು ಸದ್ಯ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಬಸ್ ನಿಲ್ಲಿಸಿದ್ರೂ ಹಲ್ಲೆ..? ಬೆಳಿಗ್ಗೆ ಬಸಾಪುರದಿಂದ ಮುಂಡಗೋಡಿಗೆ ಹೊರಟಿದ್ದ, “ಮುಂಡಗೋಡ ಹುಲಿಹೊಂಡ ಮುಂಡಗೋಡ” ಬಸ್, KA-42-F-1309 ಸಂಖ್ಯೆಯ KSRTC ಬಸ್ ನಲ್ಲಿ ಓರ್ವ ಯುವಕ ಬಸ್ ಹತ್ತಲು ಬಂದಿದ್ದ ಎನ್ನಲಾಗಿದೆ. ಅಷ್ಟೊತ್ತಿಗಾಗಲೇ ಹೊರಟಿದ್ದ ಬಸ್ ಗೆ ಕೂಗಿ ನಿಲ್ಲಿಸಿದ್ದಾರೆ. ಆದ್ರೆ ಬಸ್ ನಿಲ್ಲಿಸಿದ್ರೂ...
Top Stories
ತಟ್ಟಿಹಳ್ಳಿ ಶಿವಾನಂದನ ಹತ್ಯೆಗೆ ಸಜ್ಜಾಗಿದ್ದವನ ಹೆಸರು ಶಿವರಾಜ್.. ಅಷ್ಟಕ್ಕೂ ಆತ 3ನೇ ಹೆಂಡತಿಯ ಮೊದಲನೇ ಗಂಡನ ಮಗ..!
ತಟ್ಟಿಹಳ್ಳಿಯಲ್ಲಿ ಮಗನಿಂದಲೇ ತಂದೆಯ ಭೀಕರ ಹತ್ಯೆಗೆ ಯತ್ನ..? ಕಂದಲಿಯಿಂದ ಕುತ್ತಿಗೆಗೆ ಕೊಯ್ದ ಶಿವರಾಜ್ ಪರಾರಿ..!
ವಿ.ಎಸ್.ಪಾಟೀಲರ “ಬಂದೂಕು” ನಾಪತ್ತೆ, ಹುಡಿಕಿಕೊಡುವಂತೆ ಮುಂಡಗೋಡ ಠಾಣೆಯಲ್ಲಿ ದೂರು..!
ಕಾತೂರು ನಾಗನೂರು ರಸ್ತೆಯಲ್ಲಿ ಬೈಕುಗಳ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರಿಗೆ ಗಾಯ
ಹೊನ್ನಾವರದಲ್ಲಿ ಭೀಕರ ಅಗ್ನಿ ದುರಂತ, ಸುಟ್ಟು ಕರಕಲಾದ ಕಾರು, ಕಾರಲ್ಲಿದ್ದ ಇಬ್ಬರು ಸಜೀವ ದಹನ..!
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು..!
ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿ ಕಬ್ಬು ತುಂಬಿದ ಟ್ರಾಕ್ಟರ್ ಪಲ್ಟಿ, ತಪ್ಪಿದ ಭಾರೀ ಅನಾಹುತ..!
ಯಲ್ಲಾಪುರ ರಂಜಿತಾ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್, ನಿಸರ್ಗ ಮನೆ ಜಂಗಲ್ ನಲ್ಲಿ ಹೆಣವಾಗಿ ಪತ್ತೆಯಾದ ಆರೋಪಿ ರಫೀಕ್, ಆತ್ಮಹತ್ಯೆ ಮಾಡಿಕೊಂಡ್ನಂತೆ..!
ಯಲ್ಲಾಪುರ ರಂಜಿತಾ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್, ನಿಸರ್ಗ ಮನೆ ಜಂಗಲ್ ನಲ್ಲಿ ಹೆಣವಾಗಿ ಪತ್ತೆಯಾದ ಆರೋಪಿ ರಫೀಕ್, ಆತ್ಮಹತ್ಯೆ ಮಾಡಿಕೊಂಡ್ನಂತೆ..!
ಮುಂಡಗೋಡ ತಾಲೂಕಿನ ಪ.ಪಂಗಡದ ಮೀನುಗಾರರಿಗೆ ವಾಹನ ಖರೀದಿಗೆ ಸಹಾಯಧನಕ್ಕೆ ಅರ್ಜಿ ಅಹ್ವಾನ..!
ತಟ್ಟಿಹಳ್ಳಿ ಬಳಿ ಕಾರ್, ಟ್ರಾಕ್ಟರ್ ನಡುವೆ ಮುಖಾಮುಕಿ ಡಿಕ್ಕಿ, ಕಾರ್ ಪಲ್ಟಿ, ಮಗುವಿಗೆ ಗಾಯ..!
ಜಸ್ಟ್ ಅದೊಂದು ವಾಟ್ಸಾಪ್ ಕಾಲ್, ಈ ಟಿಬೇಟಿಗನಿಂದ ಆ ವಂಚಕರು ದೋಚಿದ್ದು ಬರೋಬ್ಬರಿ 1 ಕೋಟಿ 61 ಲಕ್ಷ..!
ಪ.ಜಾತಿ, ಪಂಗಡ ಯೋಜನೆಗಳಲ್ಲಿ 100% ಗುರಿ ಸಾಧಿಸಲು ಅಧಿಕಾರಿಗಳಿಗೆ ಡೀಸಿ ಕಟ್ಟುನಿಟ್ಟಿನ ಸೂಚನೆ..!
ಪೌರಕಾರ್ಮಿಕರಿಗೆ ಆದ್ಯತೆಯಲ್ಲಿ ಮನೆಗಳನ್ನು ಒದಗಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸೂಚನೆ..!
ಪೊಲೀಸ್ ಇಲಾಖೆ ವತಿಯಿಂದ ಪ್ರತಿ ತಿಂಗಳು ಪ.ಜಾತಿ ಪಂಗಡದವರ ಕುಂದುಕೊರತೆ ಸಭೆ: ಎಸ್ಪಿ ದೀಪನ್
ಖಾಸಗಿ ಆಸ್ಪತ್ರೆ, ಆರೋಗ್ಯ ಸಂಸ್ಥೆಗಳಲ್ಲಿ ನಕಲಿ ವೈದ್ಯರು ಕಂಡುಬಂದಲ್ಲಿ ಕಠಿಣ ಕ್ರಮ: ಡೀಸಿ ಖಡಕ್ ಎಚ್ಚರಿಕೆ..!
ಉತ್ತರ ಕನ್ನಡದಲ್ಲಿ ಹೊಸ ವರ್ಷ ಆಚರಣೆಗೆ ಡೀಸಿ ರೂಲ್ಸ್: ಈ ಸೂಚನೆ ಪಾಲಿಸಲೇಬೇಕು ಅಂದ್ರು ಜಿಲ್ಲಾಧಿಕಾರಿ..!
ಹುಬ್ಬಳ್ಳಿಯ ಅಂಚಟಗೇರಿ ಬಳಿ ಭೀಕರ ಅಪಘಾತ- ತಂದೆ, ಎರಡು ಮಕ್ಕಳು ದುರಂತ ಸಾವು..!
ಹುನಗುಂದದಲ್ಲಿ ಬೆಂಕಿ ಅವಘಡ, ಸಿಲಿಂಡರ ಸ್ಪೋಟಗೊಂಡು ಹೊತ್ತಿಉರಿದ ಆಟೋ ರಿಕ್ಷಾ, ಮನೆಗೂ ಹಾನಿ..!
Tag: mundgod news
ಅಜ್ಜಳ್ಳಿಯಲ್ಲಿ ತೋಟಕ್ಕೆ ನುಗ್ಗಿ ಹಲ್ಲೆ ಆರೋಪ ಇಬ್ಬರ ವಿರುದ್ಧ ದೂರು ದಾಖಲು..!
ಮುಂಡಗೋಡ: ತಾಲೂಕಿನ ಅಜ್ಜಳ್ಳಿಯಲ್ಲಿ ತೋಟದ ಜಮೀನಿನಲ್ಲಿ ಬಂದು ಅವಾಚ್ಯವಾಗಿ ಬೈದು ಹಲ್ಲೆ ಮಾಡಲಾಗಿದೆ ಅಂತಾ ಆರೋಪಿಸಿ ಮುಂಡಗೋಡ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಹರೀಶ್ ವೆಂಕಟೇಶ ಪಾಟೀಲ ಎಂಬುವವರು ದೂರು ನೀಡಿದ್ದು, ಹನುಮಂತ ತಿಪ್ಪಣ್ಣ ಪಾಟೀಲ, ಪ್ರವೀಣ ತಿಪ್ಪಣ್ಣ ಪಾಟೀಲ್ ಎಂಬುವವರ ವಿರುದ್ಧ ದೂರು ದಾಖಲಿಸಿದ್ದಾರೆ. ಅಜ್ಜಳ್ಳಿ ಗ್ರಾಮ ಸರ್ವೆ ನಂ. 33 ರಲ್ಲಿಯ ಜಾಗದ ಹಕ್ಕಿನ ವಿಷಯದಲ್ಲಿ 2016 ರಿಂದಲೂ ತಂಟೆ ತಕರಾರು ಮಾಡುತ್ತಾ ಬಂದಿರೋ ಆರೋಪಿತರಿಬ್ಬರೂ ಅಕ್ರಮವಾಗಿ ತೋಟಕ್ಕೆ ನುಗ್ಗಿ ಅವಾಚ್ಯವಾಗಿ ಬೈದು ಕುಡುಗೋಲಿನಿಂದ ಹಲ್ಲೆ...
ಪಾಳಾದಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ..!
ಮುಂಡಗೋಡ: ತಾಲೂಕಿನ ಪಾಳಾ ಗ್ರಾಮದಲ್ಲಿ ಮಾನಸಿಕ ವೇದನೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪಾಳಾ ಗ್ರಾಮದ ಗಂಗವ್ವ ಕೋಂ ಇಂದ್ರಪ್ಪ ಇಂಗಳೆ (60), ಎಂಬುವವಳೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ ಇವಳು ಕಳೆದ 17 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದವಳು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜ. 19 ರಂದು ಬೆಳಿಗ್ಗೆ, ಮನೆಯಲ್ಲಿ ತಂದಿಟ್ಟಿದ್ದ ಅಡಿಕೆ ಗಿಡಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಔಷಧಿಯನ್ನು ಸೇವಿಸಿ ಅಸ್ವಸ್ಥಳಾಗಿದ್ದಳು. ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ...
ಟಿಬೇಟಿಯನ್ ಕಾಲೋನಿಯಲ್ಲಿ ಕೋವಿಡ್ ಭೀತಿ, ಬಿಕೋ ಅಂತಿವೆ ರಸ್ತೆಗಳು..!
ಮುಂಡಗೋಡ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರೋ ಟಿಬೇಟಿಯನ್ ಕಾಲೋನಿಗಳಲ್ಲಿ ಕೋವಿಡ್ ಸದ್ಯ ಮತ್ತೆ ತನ್ನ ಅಟ್ಟಹಾಸ ಶುರು ಮಾಡಿದೆ.. ಹೀಗಾಗಿ, ಸದ್ಯ ಕಾಲೋನಿಯಲ್ಲಿ ಬಹುತೇಕ ಸ್ತಬ್ದ ವಾತಾವರಣ ನಿರ್ಮಾಣವಾಗಿದೆ. ಕಳೆದ ಕೆಲ ವಾರದ ಹಿಂದೆ ಮೊದಲೇಲ್ಲ ವಾರಕ್ಕೆ ಕಡಿಮೆ ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದ್ದವು. ಆದ್ರೆ ಸದ್ಯ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ. ಇಲ್ಲಿ ಈಗ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಅರ್ಧಶತಕ ದಾಟಿದೆ. ಅದ್ರಲ್ಲೂ ಟಿಬೇಟಿಯನ್ ಕಾಲೋನಿಯ STS ಶಾಲೆಯಲ್ಲಿ 16 ವಿದ್ಯಾರ್ಥಿಗಳಿಗೆ ಪಾಸಿಟಿವ್ ದೃಢಪಟ್ಟಿರೋದು...
ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಹನುಮಾಪುರ ಗ್ರಾ. ಪಂಚಾಯತಿ..!
ಮುಂಡಗೋಡ: ತಾಲೂಕಿನ ಹನುಮಾಪುರ ಗ್ರಾಮ ಪಂಚಾಯತಿಯಲ್ಲಿ ಶನಿವಾರ ರಾತ್ರಿ ಎಂಟು ಗಂಟೆ ಯಾದ್ರೂ ಗ್ರಾಮ ಪಂಚಾಯತದ ಎದುರಿಗೆ ಏರಿಸಿದ್ದ ರಾಷ್ಟ್ರಧ್ವಜವನ್ನು ಇಳಿಸದೇ, ಗ್ರಾ.ಪಂ. ಸಿಬ್ಬಂದಿ ಅಗೌರವ ತೋರಿದ ಘಟನೆ ನಡೆದಿದೆ. ಪ್ರತಿ ದಿನದ ಬೆಳಿಗ್ಗೆ ರಾಷ್ಟ್ರಧ್ವಜವನ್ನು ಏರಿಸಿ, ಸೂರ್ಯಾಸ್ತದ ವೇಳೆಗೆ ಇಳಿಸಬೇಕೆಂಬ ನಿಯಮವಿದೆ. ಆದರೆ, ರಾಷ್ಟ್ರಧ್ವಜವನ್ನು ಪ್ರತಿದಿನ ಇಳಿಸುವ ಬದಲು, ಕೆಲವು ಸಿಬ್ಬಂದಿಗಳು ಬೆಳಿಗ್ಗೆ ಏರಿಸಿ ಹಾಗೆ ಬಿಡುತ್ತಾರಂತೆ. ಹನುಮಾಪುರ ಗ್ರಾ.ಪಂ.ದಲ್ಲಿಯೂ ಶನಿವಾರ ರಾತ್ರಿ ಎಂಟು ಗಂಟೆಯಾದರೂ, ರಾಷ್ಟ್ರಧ್ವಜವನ್ನು ಇಳಿಸಿಲ್ಲ. ಈ ಬಗ್ಗೆ ಗ್ರಾಮಸ್ಥರು ಮೊಬೈಲ್ ನಲ್ಲಿ...
ಮುಂಡಗೋಡಿನಲ್ಲಿ ಬಂಜಾರಾ ಕಲಾ ಪ್ರತಿಭಾನ್ವೇಷಣಾ ಕಾರ್ಯಕ್ರಮ..!
ಮುಂಡಗೋಡಿನಲ್ಲಿ ಬಂಜಾರಾ ಕಲಾ ಪ್ರತಿಭಾನ್ವೇಷಣಾ ಕಾರ್ಯಕ್ರಮ..! ಮುಂಡಗೋಡ: ಪಟ್ಟಣದ ಲೊಯೊಲಾ ವಿಕಾಸ ಕೇಂದ್ರದ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಬಂಜಾರಾ ಕಲಾ ಪ್ರತಿಭಾನ್ವೇಷಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಂಡಗೋಡ ಮತ್ತು ಹಳಿಯಾಳ ಭಾಗದ ಬಂಜಾರಾ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿದ್ರು. ವಿಶೇಷ ಜನಪದ ಗೀತೆಗಳನ್ನು ವಾದ್ಯ ಸಮೇತ ಹಾಡಿ ರಂಜಿಸಿದ್ರು, ಪಾರಂಪರಿಕ ಸೊಗಡಿನ ಗೀತ ನೃತ್ಯಗಳನ್ನು ಪ್ರದರ್ಶಿಸಿದ್ರು. ಈ ವೇಳೆ ತೀರ್ಪುಗಾರರಾಗಿ ಖ್ಯಾತ ಬಂಜಾರಾ ಕಲಾವಿದರು ಆಗಮಿಸಿದ್ದರು. ಸ್ಥಳೀಯ ಬಂಜಾರಾ ಸಮಾಜದ ಮುಖಂಡರುಗಳು, ಕಲಾಭಿಮಾನಿಗಳು ಹಾಜರಿದ್ದರು.





