ಮುಂಡಗೋಡ; ತಾಲೂಕಿನಲ್ಲಿ ಈಗ ಬದಲಾವಣೆ ಗಾಳಿ ಬೀಸಿದೆ. ಬಹುತೇಕ ಕೋರ್ಟ್ ಆದೇಶದಂತೆ ಇನ್ನೇರಡು ತಿಂಗಳಲ್ಲಿ ಜಿಪಂ, ತಾಪಂ ಚುನಾವಣೆ ನಡಿಯೋದು ಬಹುತೇಕ ಫಿಕ್ಸ್ ಆದಂತಾಗಿದೆ. ಈ ಕಾರಣಕ್ಕಾಗೇ ಮುಂಡಗೋಡ ತಾಲೂಕಿನಲ್ಲಿ ಮೂರು ಇದ್ದ ಜಿಪಂ ಕ್ಷೇತ್ರಗಳನ್ನ ಮರು ವಿಂಗಡನೆ ಮಾಡಲಾಗಿದೆ. ಮತ್ತೊಂದು ಕ್ಷೇತ್ರವನ್ನು ಹುಟ್ಟು ಹಾಕುವ ಕಾರ್ಯ ಚಾಲ್ತಿ ಪಡೆದುಕೊಂಡಿದೆ. ಹಾಗಂತ, ಬಲ್ಲ ಮೂಲಗಳಿಂದ ಪಬ್ಲಿಕ್ ಫಸ್ಟ್ ಗೆ ಮಾಹಿತಿ ಸಿಕ್ಕಿದೆ. ಮುಂಡಗೋಡ ತಾಲೂಕಿನಲ್ಲಿ ಒಟ್ಟೂ 16 ಗ್ರಾಮ ಪಂಚಾಯತಿಗಳಿವೆ. ಇದುವರೆಗೂ ಚಿಗಳ್ಳಿ, ಪಾಳಾ ಹಾಗೂ ಇಂದೂರು,...
Top Stories
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಮತ್ತೊಮ್ಮೆ ರವಿಗೌಡ ಪಾಟೀಲರೇ ಕಿಂಗ್..!
Tag: mundgod news
ಶಂಕರ್ ಗೌಡಿ ಮುಂಡಗೋಡಿನ ನೂತನ ತಹಶೀಲ್ದಾರ್ ಆಗಿ ವರ್ಗಾವಣೆ..!
ಮುಂಡಗೋಡಿಗೆ ನೂತನ ತಹಶೀಲ್ದಾರ್ ಆಗಿ ಶಂಕರ ಗೌಡಿ ವರ್ಗಾವಣೆಯಾಗಿದ್ದಾರೆ. ಸದ್ಯ ಬಾಗಲಕೋಟೆ ಜಿಲ್ಲೆ ಬೀಳಗಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಶಂಕರ್ ಗೌಡಿಯವರನ್ನು ಮುಂಡಗೋಡಿಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಶ್ರೀಧರ್ ಮುಂದಲಮನಿಯವರನ್ನು ಶಿರಸಿಗೆ ವರ್ಗಾವಣೆಗೊಳಿಸಿದ್ದರಿಂದ ಮುಂಡಗೋಡ ತಹಶೀಲ್ದಾರ್ ಹುದ್ದೆ ಖಾಲಿಯಾಗಿತ್ತು. ನಿನ್ನೆಯಷ್ಟೇ ಶ್ರೀಧರ್ ಮುಂದಲಮನಿ ಮುಂಡಗೋಡಿನಿಂದ ಬಿಡುಗಡೆಗೊಂಡು ಶಿರಸಿಗೆ ವರ್ಗಾವಣೆಯಾಗಿದ್ದರು. ಹೀಗಾಗಿ, ಇಂದು ನೂತನ ತಹಶಿಲ್ದಾರ್ ಶಂಕರ್ ಗೌಡಿಯವರನ್ನು ಸರ್ಕಾರ ಮುಂಡಗೋಡಿಗೆ ವರ್ಗಾವಣೆಗೊಳಿಸಿ ಆದೇಶಿಸಿದೆ.
ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಮುಂಡಗೋಡಿನಿಂದ ಇಂದು ಬಿಡುಗಡೆ, ಡೀಸಿ ಆದೇಶ..!
ಮುಂಡಗೋಡ: ಶಿರಸಿಗೆ ವರ್ಗಾವಣೆಗೊಂಡಿರೋ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಮುಂಡಗೋಡದಿಂದ ಬಿಡುಗಡೆಗೊಂಡಿದ್ದಾರೆ. ಬಿಡುಗಡೆಗೊಳಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲಿನ್ ಆದೇಶ ಹೊರಡಿಸಿದ್ದಾರೆ. ಇವತ್ತೇ ಮುಂಡಗೋಡದಿಂದ ಶಿರಸಿಗೆ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಬಿಡುಗಡೆಗೊಂಡಿದ್ದು, ಮುಂದಿನ ತಹಶೀಲ್ದಾರ್ ಹುದ್ದೆ ಭರ್ತಿ ಆಗುವವರೆಗೂ ಮುಂಡಗೋಡಿಗೆ ಹೆಚ್ಚುವರಿ ಪ್ರಭಾರಿಯಾಗಿ ಶ್ರೀಧರ್ ಮುಂದಲಮನಿಯವರೇ ಕಾರ್ಯ ನಿರ್ವಹಿಸಲಿದ್ದಾರೆ ಅಂತಾ ಜಿಲ್ಲಾಧಿಕಾರಿಗಳು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಮುಂಡಗೋಡ ತಾಲೂಕಿನ ಗಲ್ಲಿಗಳಲ್ಲಿ ಅಕ್ರಮ ಮದ್ಯಮಾರಾಟ, ಅಬಕಾರಿಗಳ ನೆರಳಲ್ಲೇ ನಡಿತಿದೆಯಾ ದಂಧೆ..?
ಮುಂಡಗೋಡ: ತಾಲೂಕಿನಲ್ಲಿ ಈಗ ಎಲ್ಲೆಂದರಲ್ಲಿ ಸರಾಯಿ ಮಾರಾಟದ ಅಕ್ರಮ ಅಡ್ಡೆಗಳು ತಲೆ ಎತ್ತಿವೆ. ಅಧಿಕೃತ ಮದ್ಯದಂಗಡಿಗಳು ಮುಂಡಗೋಡಿಗಷ್ಟೇ ಸೀಮಿತವಾಗಿವೆ. ಆದ್ರೆ ಅದ್ಯಾರ ಕೃಪಾಕಟಾಕ್ಷವೋ ಗೊತ್ತಿಲ್ಲ, ಇಡೀ ತಾಲೂಕಿನ ಗಲ್ಲಿ ಗಲ್ಲಿಗಳಲ್ಲಿ ಅಕ್ರಮ ದಂಧೆಕೋರರನ್ನು ಹುಟ್ಟು ಹಾಕಲಾಗಿದೆ. ಹೀಗಾಗಿ, ತಾಲೂಕಿನ ಮಹಿಳೆಯರು, ಪ್ರಜ್ಞಾವಂತರು ಸಂಬಂಧಪಟ್ಟವರಿಗೆ ಹಿಡಿಶಾಪ ಹಾಕ್ತಿದಾರೆ. ಅದ್ರಲ್ಲೂ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಹಾಮಂಗಳಾರತಿ ಮಾಡ್ತಿದಾರೆ. ಅಬಕಾರಿಗಳದ್ದೇ ಆಟ..? ನಿಜ ಅಂದ್ರೆ ಮುಂಡಗೋಡ ತಾಲೂಕಿನಲ್ಲಿ ಈಗ ಕೆಲವು ಕಿರಾಣಿ ಅಂಗಡಿಗಳಲ್ಲೂ ಮದ್ಯ ಹೇರಳವಾಗಿ ಸಿಗುತ್ತಿದೆ. ಇನ್ನು ತಾಲೂಕಿನ ಟಿಬೇಟಿಯನ್...
ಕೆಂದಲಗೇರಿಯಲ್ಲಿ ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ, ಮೂವರು ವಶಕ್ಕೆ..!
ಮುಂಡಗೋಡ: ತಾಲೂಕಿನ ಕೆಂದಲಗೇರಿಯಲ್ಲಿ ಇಸ್ಪೀಟು ಆಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಇಸ್ಪೀಟು ಆಡುತ್ತಿದ್ದ ಮೂವರನ್ನು ವಶಕ್ಕೆ ಪಡೆದು, ಐವರ ಮೇಲೆ ಕೇಸು ದಾಖಲಿಸಲಾಗಿದೆ. ನಾಗರಾಜ ಹನುಮಂತ ಚವ್ಹಾಣ(45), ಆಶೋಕ ನಿಂಗಪ್ಪ ಮಂಜಣ್ಣನವರ್(28), ಫಕ್ಕೀರಾ ಸಾಕಪ್ಪ ಕಟ್ಟಿಮನಿ(30), ರುದ್ರಪ್ಪ ತಂದೆ ಗುಳುವಪ್ಪ ಸುಣಗಾರ(38) ಹಾಗೂ ಅಲಿ ಹುಸನ್ ಸಾಬ ಮುಜಾವರ್(35) ಎಂಬುವವರ ಮೇಲೆ ಕೇಸು ದಾಖಲಿಸಲಾಗಿದೆ. ಇದ್ರಲ್ಲಿ ಮೂವರು ಆರೋಪಿಗಳು ಪೊಲೀಸರ ದಾಳಿ ವೇಳೆ ಸಿಕ್ಕಿಬಿದ್ದಿದ್ದಾರೆ, ಇನ್ನುಳಿದವರು ಪರಾರಿಯಾಗಿದ್ದಾರೆ.
ನ್ಯಾಸರ್ಗಿಯಲ್ಲಿ ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ ಓಸಿ ಅಡ್ಡೆಯ ಮೇಲೆ ಪೊಲೀಸರ ದಾಳಿ, ಓರ್ವ ವಶಕ್ಕೆ..!
ಮುಂಡಗೋಡ: ತಾಲೂಕಿನ ನ್ಯಾಸರ್ಗಿಯಲ್ಲಿ ಮಟ್ಕಾ ಅಡ್ಡೆಯ ಮೇಲೆ ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದ ತಂಡ ದಾಳಿ ಮಾಡಿದೆ. ಮಟ್ಕಾ ದಂಧೆ ನಡೆಸುತ್ತಿದ್ದ ಓರ್ವನನ್ನು ವಶಕ್ಕೆ ಪಡೆದು ಕೇಸು ದಾಖಲಿಸಿದ್ದಾರೆ ಪೊಲೀಸ್ರು. ನ್ಯಾಸರ್ಗಿಯ ಪ್ರಕಾಶ ಉದಯ ಹರಿಜನ(32) ಎಂಬುವವನ ಮೇಲೆ ಕೇಸು ದಾಖಲಿಸಲಾಗಿದೆ. ಈತ ನ್ಯಾಸರ್ಗಿ ಗ್ರಾಮದ ಕಲಿಯಮ್ಮಾ ದೇವಸ್ಥಾನದ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಓಸಿ ಬರೆಯುತ್ತಿದ್ದ, ಅದೇ ವೇಳೆ ದಾಳಿ ಮಾಡಿರೋ ಪಿಐ ಸಿದ್ದಪ್ಪ ಸಿಮಾನಿ ಮತ್ತವರ ತಂಡ, ಮಟ್ಕಾ ನಡೆಸುತ್ತಿದ್ದವರ ಛಳಿ ಬಿಡಿಸಿದೆ. ದಾಳಿ ವೇಳೆ...
ಪತಿಯ ಕಿರುಕುಳ ಆರೋಪ, ಬಾಚಣಕಿಯಲ್ಲಿ 6 ತಿಂಗಳ ಗರ್ಭಿಣಿ ನೇಣಿಗೆ ಶರಣು..!
ಮುಂಡಗೋಡ: ತಾಲೂಕಿನ ಬಾಚಣಕಿಯಲ್ಲಿ ಆರು ತಿಂಗಳ ಗರ್ಭಿಣಿ ನೇಣಿಗೆ ಶರಣಾಗಿರೋ ಘಟನೆ ನಡೆದಿದೆ. ಚೇತನಾ ಗುತ್ತೆಪ್ಪ ಸಣ್ಣಮನಿ(32) ನೇಣಿಗೆ ಶರಣಾದ ಗರ್ಭಿಣಿಯಾಗಿದ್ದು ಪತಿಯ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿರೋ ಆರೋಪ ಕೇಳಿ ಬಂದಿದೆ. ಪತಿ ಗುತ್ತೆಪ್ಪ ಸಣ್ಣಮನಿ ಎಂಬುವವನ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2 ಮಕ್ಕಳ ತಾಯಿಯಾಗಿದ್ದ ಚೇತನಾ, ಈಗ ಮತ್ತೆ 6 ತಿಂಗಳ ಗರ್ಭಿಣಿಯಾಗಿದ್ದಾಳೆ. ಆದ್ರೆ ಪತಿ ಗುತ್ತೆಪ್ಪ ಮಾನಸಿಕ ಹಾಗೂ ದೈಹಿಕ ಕಿರುಕುಳನೀಡುತ್ತಿದ್ದ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಆರೋಪಿಸಲಾಗಿದ್ದು,...
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಗೋಮಾಂಸ ಸಾಗಿಸುತ್ತಿದ್ದ ವಾಹನ ಸಮೇತ, ಓರ್ವ ವಶಕ್ಕೆ..!
ಮುಂಡಗೋಡ:ಪಿಎಸ್ಐ ಬಸವರಾಜ್ ಮಬನೂರು ಮತ್ತವರ ತಂಡ ಬೆಳ್ಳಂ ಬೆಳಿಗ್ಗೆ ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದೆ. ಅಕ್ರಮವಾಗಿ ಬಂಕಾಪುರದಿಂದ ಗೋಮಾಂಸ ಸಾಗಾಟ ಮಾಡುತ್ತಿದ್ದ ಓಮಿನಿ ವಾಹನ ಸಮೇತ ಓರ್ವ ಆರೋಪಿಯ ಹೆಡೆಮುರಿ ಕಟ್ಟಲಾಗಿದೆ. ಟಿಬೇಟಿಯನ್ ಕಾಲೋನಿಗೆ..? ಇಂದು ಬೆಳಿಗ್ಗೆ, ಹಾವೇರಿ ಜಿಲ್ಲೆಯ ಬಂಕಾಪುರದಿಂದ ಓಮಿನಿ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಆಧಾರದಲ್ಲಿ ಬಂಕಾಪುರ ರಸ್ತೆಯಲ್ಲಿ ದಾಳಿ ಮಾಡಿರೋ ಪೊಲೀಸರು, ಬರೋಬ್ಬರಿ 2 ಕ್ವಿಂಟಾಲ್ ಗೋಮಾಂಸ ವಶಕ್ಕೆ ಪಡೆಸಿಕೊಂಡಿದ್ದಾರೆ. ಜೊತೆಗೆ ಅಕ್ರಮ ದಂಧೆ ನಡೆಸುತ್ತಿದ್ದ ಆರೋಪಿ ಸಮೇತ...
ನಾಪತ್ತೆಯಾಗಿದ್ದ ಮುಂಡಗೋಡಿನ ಆನಂದ್ ಕಡಗಿ ಶವ ಕುಂದರ್ಗಿ ಕ್ರಾಸ್ ಬಳಿ ಪತ್ತೆ, ಅಷ್ಟಕ್ಕೂ ಸಾವು ಹೇಗಾಯ್ತು..?
ಮುಂಡಗೋಡ: ನಾಪತ್ತೆಯಾಗಿದ್ದ ಪಟ್ಟಣದ ಖಾಸಗಿ ಶಾಲೆಯ ಶಿಕ್ಷಕ ಆನಂದ ಕಡಗಿ ಶವ, ಬರೋಬ್ಬರಿ 21 ದಿನಗಳ ಬಳಿಕ ಪತ್ತೆಯಾಗಿದೆ. ಮುಂಡಗೋಡ ತಾಲೂಕಿನ ಕುಂದರ್ಗಿ ಕ್ರಾಸ್ ಬಳಿ ಶವ ಪತ್ತೆಯಾಗಿದೆ. ಈ ಮೂಲಕ ಉಟ್ಟುಡುಗೆಯಲ್ಲೇ ಮನೆಬಿಟ್ಟು ನಡೆದಿದ್ದ ಆನಂದ್ ಕಡಗಿಯ ಶವ ಕಂಡು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಸ್ನೇಹಿತರಲ್ಲಿ ದುಃಖ ಮಡುಗಟ್ಟಿದೆ. ಬರಿಗಾಲಲ್ಲೇ ನಡೆದಿದ್ದ ಶಿಕ್ಷಕ..! ಅವತ್ತು, ಮೇ 29 ರ ರವಿವಾರ, ಬೆಳಿಗ್ಗೆ 11 ಗಂಟೆಯಷ್ಟೊತ್ತಿಗೆ ಬರಿಗಾಲಲ್ಲೇ ಮನೆ ಬಿಟ್ಟು ಹೋಗಿದ್ದ ಆನಂದ್, ಹಸಿರು ಬಣ್ಣದ...
25 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿ, ಇಂದೂರ ಸೊಸೈಟಿಯ ಸಿಬ್ಬಂದಿ ವಸಂತ್ ವರೂರ್ ಗೆ ಬೀಳ್ಕೊಡುಗೆ..!
ಮುಂಡಗೋಡ: ತಾಲೂಕಿನ ಇಂದೂರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸಿ, ನಿವೃತ್ತಿಯಾಗಿರೋ ಸಿಬ್ಬಂದಿ ವಸಂತ ವರೂರವರಿಗೆ ಇಂದು ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಬೀಳ್ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ರು. ವಸಂತ ವರೂರ ದಂಪತಿಗೆ ಶಾಲು ಹೊದಿಸಿ, ಹಾರ ಹಾಕಿ ಫಲ ಪುಷ್ಪ ನೀಡಿ ಸನ್ಮಾನಿಸಿದ ಆಡಳಿತ ಮಂಡಳಿ ಸದಸ್ಯರು, ನೆನಪಿನ ಕಾಣಿಕೆ ನೀಡಿ ವಸಂತ್ ವರೂರರವರ ಸೇವೆಯನ್ನು ಶ್ಲಾಘಿಸಿದ್ರು. ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದ್ರು.









