ಮುಂಡಗೋಡ: ಪಟ್ಟಣದ ಗಾಂಧಿನಗರದಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ನಡೆದಿದೆ. ಗಾಂಧಿನಗರದ ದೇವಪುತ್ರ ಗೋರ್ನಾಳ (35) ಎಂಬ ಯುವಕನೇ ನೇಣಿಗೆ ಶರಣಾಗಿದ್ದು, ಮನೆಯ ಜಂತಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Top Stories
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಮತ್ತೊಮ್ಮೆ ರವಿಗೌಡ ಪಾಟೀಲರೇ ಕಿಂಗ್..!
Tag: mundgod news
ನಂದಿಕಟ್ಟಾದಲ್ಲಿ ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹ, ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ..!
ಮುಂಡಗೋಡ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆದ್ಯಕ್ಷ ವಿ.ಎಸ್. ಪಾಟೀಲರ ತವರಲ್ಲಿ ನಿತ್ಯವೂ ವಿದ್ಯಾರ್ಥಿಗಳು ಗೋಳು ಅನುಭವಿಸ್ತಿದಾರೆ. ಶಾಲಾ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಇವ್ರ ಗೋಳು ಹೇಳತೀರದ್ದಾಗಿದೆ. ಹೀಗಾಗಿ, ಇವತ್ತು ನಂದಿಕಟ್ಟಾ ಗ್ರಾಮದಲ್ಲಿ ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಬಸ್ ತಡೆ ನಡೆಸಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ. ಅಂದಹಾಗೆ..! ನಂದಿಕಟ್ಟಾ ಗ್ರಾಮದಿಂದ ಮುಂಡಗೋಡಿಗೆ ಪ್ರತಿದಿನ 150 ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ತೆರಳುತ್ತಾರೆ. ಹಾಗೆ ತೆರಳುವ ಮಕ್ಕಳಿಗೆ ನಿತ್ಯವೂ ಸರಿಯಾದ ಸಮಯಕ್ಕೆ ಬಸ್ ಬರೋದೋ ಇಲ್ಲ....
ಮುಂಡಗೋಡ ಪಟ್ಟಣದಲ್ಲಿ ಮಳೆ ಬಂದ್ರೆ ಬದುಕೇ ದುಸ್ತರವಾಗ್ತಿದೆ, ಘನತೆವೆತ್ತ “ಚೀಫ್” ಆಫೀಸರ್ರೇ ಎಲ್ಲಿದ್ದೀರಿ..?
ಮುಂಡಗೋಡ: ಪಟ್ಟಣ ಪಂಚಾಯತಿಯ ಅಧಿಕಾರಿಗಳಿಗೆ ಅದ್ಯಾವ ಭಾಷೆಯಲ್ಲಿ ಹೇಳಬೇಕೋ ಅರ್ಥವೇ ಆಗ್ತಿಲ್ಲ. ಪಟ್ಟಣದಲ್ಲಿನ ಸಮಸ್ಯೆಗಳ ಬಗ್ಗೆ ಕಣ್ಣೆತ್ತಿಯೂ ನೋಡ್ತಿಲ್ಲ. ಯಾಕಂದ್ರೆ, ಪಟ್ಟಣದ ಬಂಕಾಪುರ ರಸ್ತೆಯ ನಿವಾಸಿಗಳಿಗೆ ಮಳೆ ಬಂದ್ರೆ ಸಾಕು ಜೀವ ಅಂಗೈಯಲ್ಲೇ ಹಿಡಿದು ಬದುಕಬೇಕಾದ ಸ್ಥಿತಿ ಇದೆ. ಚೀಪ್ ಆಫೀಸರ್ ಅನ್ನೋ ಹುದ್ದೆ ನೆತ್ತಿಗೇರಿಸಿಕೊಂಡು ಅದೇನು ಕಡೆದು ಗುಡ್ಡೆ ಹಾಕ್ತಿದಾರೋ ಆ “ಆಫಿ” ಸರ್ರು..! ಇಡೀ ಪಟ್ಟಣವೇ ಗಬ್ಬೆದ್ದು ಹೋಗಿಸಿದ್ದಾರೆ. ಥೇಟು ಶಿಗ್ಗಾವಿ ಪಟ್ಟಣದ ರೀತಿಯಲ್ಲೇ ಮುಂಡಗೋಡನ್ನೂ ಬದಲಾಯಿಸಿ ಬಿಡ್ತಾರಾ..? ಅನ್ನುವ ಅನುಮಾನ ಶುರುವಾಗಿದೆ....
ಮುಂಡಗೋಡ APMC ಸಮೀಪ ಜಿಂಕೆಗೆ ಡಿಕ್ಕಿ ಹೊಡೆದ KSRTC ಬಸ್, ಜಿಂಕೆ ಸಾವು..!
ಮುಂಡಗೋಡ: ಪಟ್ಟಣದ APMC ಹತ್ತಿರ KSRTC ಬಸ್ ಡಿಕ್ಕಿಯಾಗಿ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಹೊರಟಿದ್ದ KSRTC ಬಸ್ APMC ಸಮೀಪದ ರಸ್ತೆಯಲ್ಲಿ ಏಕಾಏಕಿ ಜಿಂಕೆ ಅಡ್ಡ ಬಂದ ಪರಿಣಾಮ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು ಜಿಂಕೆ ಸ್ಥಳದಲ್ಲೇ ಮೃತಪಟ್ಟಿದೆ. ಇನ್ನು, ಮೃತಪಟ್ಟ ಜಿಂಕೆ ರಸ್ತೆಯಲ್ಲೇ ಬಿದ್ದಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕಿದೆ.
ಚೌಡಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಮಂಜುನಾಥ್ ಕಟಗಿ ಅವಿರೋಧ ಆಯ್ಕೆ ಫಿಕ್ಸ್..!
ಮುಂಡಗೋಡ: ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚೌಡಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಗಾದಿಯ ಫೈಟ್ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ನೇತ್ರಾವತಿ ಬಿಸವಣ್ಣವರ್ ರಾಜೀನಾಮೆಯಿಂದ ಖಾಲಿಯಾಗಿದ್ದ ಅಧ್ಯಕ್ಷ ಖುರ್ಚಿಗೆ ಮಂಜುನಾಥ್ ಕಟಗಿ ನೂತನ ಅಧ್ಯಕ್ಷರಾಗಿ ಪಟ್ಟಕ್ಕೆ ಏರೋದು ಬಹುತೇಕ ಕನ್ಫರ್ಮ್ ಆದಂತಾಗಿದೆ. ಅವಿರೋಧ ಆಯ್ಕೆನಾ..? ಬಿಜೆಪಿಯಲ್ಲೇ ಎರಡೆರಡು ಬಣಗಳಾಗಿ ಕಚ್ಚಾಡಿಕೊಂಡಿದ್ದ ಚೌಡಳ್ಳಿ ಪಂಚಾಯತಿಯ ಅಧಿಕಾರದ ತಿಕ್ಕಾಟ, ಇಡೀ ತಾಲೂಕಿನ ಬಿಜೆಪಿ ಮುಖಂಡರುಗಳಿಗೆ ಮುಜುಗರ ತಂದಿಟ್ಟಿತ್ತು. ಕೋರ್ಟ್ ಅಂಗಳಕ್ಕೂ ಹೋಗಿ ಬಂದಿದ್ದ ಅಧ್ಯಕ್ಷರ ಬದಲಾವಣೆ ಪ್ರಹಸನಗಳು ಖುದ್ದು ಸಚಿವ ಶಿವರಾಮ್...
ತಾಲೂಕಿನಲ್ಲಿ ಮತ್ತೆ ಮಹಾಮಳೆ ಕಂಟಕ, ಬಡ್ಡಿಗೇರಿ ಹಳ್ಳದ ಬ್ರಿಡ್ಜ್ ಜಲಾವೃತ, ಸಂಚಾರ ಬಂದ್..!
ಮುಂಡಗೋಡ: ತಾಲೂಕಿನ ಹಲವು ಕಡೆ ಭರ್ಜರಿ ಮಳೆಯಾಗಿದೆ. ಸಂಜೆಯಿಂದ ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಮಳೆಯಾಗಿದೆ. ಇದ್ರಿಂದ ಯಲ್ಲಾಪುರ ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿದೆ. ಮುಂಡಗೋಡ ತಾಲೂಕಿನ ಬಡ್ಡಿಗೇರಿ ಹಾಗೂ ಗುಂಜಾವತಿ ಮದ್ಯೆ ಬಡ್ಡಿಗೇರಿ ಹಳ್ಳ ತುಂಬಿದ ಪರಿಣಾಮ ಹಳ್ಳದ ನೀರು ರಸ್ತೆಯ ಮೇಲೆ ಹರಿದು, ಕಿರು ಸೇತುವೆ ಮುಳುಗಡೆಯಾಗಿದೆ. ಹೀಗಾಗಿ, ರಸ್ತೆ ಮೇಲೆ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಯಲ್ಲಾಪುರ ರಸ್ತೆಯ ಬಹುತೇಕ ಕಡೆ ಭಾರಿ ಮಳೆಯಾಗಿದ್ದು ,ಹಲವು ಹಳ್ಳಗಳಲ್ಲಿ ನೀರು ಭರ್ತಿಯಾಗಿ ಹರಿಯುತ್ತಿದೆ.
ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಲಕ್ಕೊಳ್ಳಿಯ ಯುವ ಕ್ರೀಡಾಪಟು ಎನ್.ಎಸ್. ಸಿಮಿ ಸಂಭ್ರಮದ ಹೆಜ್ಜೆ..!
ಮುಂಡಗೋಡ: ತಾಲೂಕಿನ ಚೌಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಲಕ್ಕೊಳ್ಳಿ ಗ್ರಾಮದ ಯುವ ಕ್ರೀಡಾಪಟು ಎನ್.ಎಸ್.ಸಿಮಿ, ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ 4×100 ಮೀ ರಿಲೇ ಓಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅಲ್ಲಿಂದಲೇ, ವಿಡಿಯೋ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ಗೆ ಆಯ್ಕೆಯಾಗಿ ಮುಂಡಗೋಡ ತಾಲೂಕಿನ ಕೀರ್ತಿಯನ್ನು ಹಾಗೂ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಸದ್ಯ ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿರೊ ಎನ್.ಎಸ್.ಸಿಮಿ, ಹುರುಪಿನಿಂದಲೇ ಭಾರತ ಧ್ವಜ ಹಿಡಿದು ಸಂಭ್ರಮಿಸಿದ್ದಾರೆ....
ಗೌರವಧನ ಹೆಚ್ಚಳ ಸೇರಿ, ವಿವಿಧ ಬೇಡಿಕೆ ಈಡೇರಿಸುವಂತೆ ಅತಿಥಿ ಶಿಕ್ಷಕರಿಂದ ಸರ್ಕಾರಕ್ಕೆ ಮನವಿ..!
ಮುಂಡಗೋಡ: ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಇಂದು ಅತಿಥಿ ಶಿಕ್ಷಕರು, ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದ್ರು. ಶಿಕ್ಷಣ ಇಲಾಖೆಯ ಗುರಿ ಸಾಧನೆಗಾಗಿ ಹಾಗೂ ಮಕ್ಕಳ ಕಲಿಕಾ ಹಿತ ದೃಷ್ಠಿಯಿಂದ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ. ಸದ್ಯ, ಸರ್ಕಾರವು ನಿಗಧಿಪಡಿಸಿದ ಗೌರವಧನದಿಂದ ದೈನಂದಿನ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಹೀಗಾಗಿ, ಕನಿಷ್ಠ 25 ಸಾವಿರ ರೂ. ಗೌರವಧನ ನಿಗಧಿ ಮಾಡಬೇಕು. ಅಲ್ಲದೆ, ಸರ್ಕಾರ ನೀಡುತ್ತಿರೋ ಗೌರವಧನ, ನೇಮಕಗೊಂಡು 2 ತಿಂಗಳು ಕಳೆಯುತ್ತಿದ್ದರೂ ಇದುವರೆಗೂ ಕೈ ಸೇರಿಲ್ಲ....
ನಂದಿಪುರ ಬಳಿ ಬೊಲೆರೋ ವಾಹನ ತಪ್ಪಿಸಲು ಹೋಗಿ ರಸ್ತೆ ಬದಿಗೆ ಜಾರಿದ KSRTC ಬಸ್..!
ಮುಂಡಗೋಡ: ತಾಲೂಕಿನ ನಂದಿಪುರ ಸಮೀಪ KSRTC ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದಿದೆ. ಪರಿಣಾಮ ಮೂರ್ನಾಲು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಎದುರಿಗೆ ಬಂದ ಬುಲೆರೋ ತಪ್ಪಿಸಲು ಹೋಗಿ ಬಸ್ ನಿಯಂತ್ರಣ ತಪ್ಪಿದೆ. ಪರಿಣಾಮ ರಸ್ತೆ ಬದಿಗೆ ತಾಗಿ ನಿಂತಿದೆ. ರಸ್ತೆ ಬದಿಯಲ್ಲಿದ್ದ ಮರಕ್ಕೆ ತಾಗಿ ನಿಂತ ಪರಿಣಾಮ ಬಸ್ ಮುಂಬದಿಯ ಗ್ಲಾಸ್ ಜಖಂ ಗೊಂಡಿದೆ. ಇನ್ನು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಎಮರ್ಜೆನ್ಸಿ ಬಾಗಿಲು ತೆರೆದು ಹೊರ ಬಂದಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...
ಮರಗಡಿಯಲ್ಲಿ ರೈತನ ಮೇಲೆ ಕರಡಿಯಿಂದ ಮಾರಣಾಂತಿಕ ದಾಳಿ, ರೈತ ಗಂಭೀರ..!
ಮುಂಡಗೋಡ: ತಾಲೂಕಿನ ಕಾತೂರು ಅರಣ್ಯ ವ್ಯಾಪ್ತಿಯಲ್ಲಿ ಅನ್ನದಾತನ ಮೇಲೆ ಕರಡಿ ದಾಳಿ ಮಾಡಿದೆ. ಮರಗಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಫಕ್ಕಿರೇಶ ರಾಮಣ್ಣ ಗೊಲ್ಲರ್ ಎಂಬುವನ ಮೇಲೆ ಮಾರಣಾಂತಿಕ ದಾಳಿ ಮಾಡಿದೆ. ಮರಿಗಳೊಂದಿಗೆ ಆಹಾರ ಅರಸಿ ಬಂದಿದ್ದ ಕರಡಿ ರೈತನನ್ನು ನೋಡಿ ಪ್ರಾಣಭಯದಿಂದ ದಾಳಿ ಮಾಡಿದೆ ಎನ್ನಲಾಗಿದೆ. ಅಂದಹಾಗೆ, ಗದ್ದೆಯಲ್ಲಿ ಮಂಗಗಳ ಹಾವಳಿ ಕಾರಣಕ್ಕೆ ಗೋವಿನಜೋಳ ರಕ್ಷಣೆಗಾಗಿ ಕಟ್ಟಿದ್ದ ಶ್ವಾನಗಳಿಗೆ ಆಹಾರ ಕೊಡಲು ಹೋದಾಗ ಘಟನೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ತಕ್ಷಣವೇ ಸ್ಥಳೀಯರು ರೈತನ ನೆರವಿಗೆ ಬಂದಿದ್ದಾರೆ....









