Home mundgod news

Tag: mundgod news

Post
ಮುಂಡಗೋಡ ತಾಲೂಕಿನಲ್ಲಿ ಮನೆ ಕಳೆದುಕೊಂಡ ಬಡವ್ರಿಗೆ ಲಂಚಬಾಕರದ್ದೇ ಕಾಟ, ಸಚಿವರ ಪಿಎ ಹೆಸರಲ್ಲೂ ವಸೂಲಿ..? ಹಿಂಗಾದ್ರೆ ಹೆಂಗೆ ಗುರೂ..?

ಮುಂಡಗೋಡ ತಾಲೂಕಿನಲ್ಲಿ ಮನೆ ಕಳೆದುಕೊಂಡ ಬಡವ್ರಿಗೆ ಲಂಚಬಾಕರದ್ದೇ ಕಾಟ, ಸಚಿವರ ಪಿಎ ಹೆಸರಲ್ಲೂ ವಸೂಲಿ..? ಹಿಂಗಾದ್ರೆ ಹೆಂಗೆ ಗುರೂ..?

   ಮುಂಡಗೋಡ: ತಾಲೂಕಿನಲ್ಲಿ ಮಹಾಮಳೆ ಅನ್ನೋದು ಅದೇಷ್ಟೋ ಬಡವರನ್ನು ಬೀದಿಗೆ ತಂದಿದೆ. ಗ್ರಾಮೀಣ ಭಾಗದಲ್ಲಿ ಮಹಾಮಳೆಯಿಂದ ಅದೇಷ್ಟೋ ಬಡಕುಟುಂಬಗಳು ಸೂರು ಕಳೆದುಕೊಂಡು ಅಕ್ಷರಶಃ ನಲುಗಿ ಹೋಗಿವೆ. ಹೀಗಿದ್ದಾಗ, ಸರ್ಕಾರ ಅಂತಹ ಕುಟುಂಬಗಳಿಗೆ ಆಸರೆಯಾಗಲು, ಪರಿಹಾರದ ರೂಪದಲ್ಲಿ ಮನೆಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಳ್ಳಲು ನೆರವು ನೀಡ್ತಿದೆ. ಸಂಪೂರ್ಣವಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಹಣ ಕಂತುಗಳ ಮೂಲಕ ಬಿಡುಗಡೆ ಮಾಡ್ತಿದೆ. ಆದ್ರೆ, ಹೀಗೆ ಬರುವ ಹಣದಲ್ಲಿ ಕೆಲವು ಬ್ರಷ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಹಾರದ...

Post
ಮುಂಡಗೋಡಿನಲ್ಲಿ ವೆಲ್ಡಿಂಗ್ ವರ್ಕ್ ಶಾಪ್ ದೋಚಿದ ಕಳ್ಳರು, 1.30 ಲಕ್ಷ ಮೌಲ್ಯದ ವಸ್ತುಗಳ ಕಳ್ಳತನ..!

ಮುಂಡಗೋಡಿನಲ್ಲಿ ವೆಲ್ಡಿಂಗ್ ವರ್ಕ್ ಶಾಪ್ ದೋಚಿದ ಕಳ್ಳರು, 1.30 ಲಕ್ಷ ಮೌಲ್ಯದ ವಸ್ತುಗಳ ಕಳ್ಳತನ..!

ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ವೆಲ್ಡಿಂಗ್ ವರ್ಕ್ ಶಾಪ್ ನಲ್ಲಿ ಕಳ್ಳತನವಾಗಿದೆ. ಒಟ್ಟೂ 1 ಲಕ್ಷ 30 ಸಾವಿರ ಮೌಲ್ಯದ ಕಬ್ಬಿಣದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಖದೀಮರು. ವೆಲ್ಡಿಂಗ್ ವರ್ಕ್ ಶಾಪ್ ನ ಮಾಲೀಕ ಎಜಾಜ್ ನವಾಜ ಮಹ್ಮದ್ ರಫೀಕ ನರೇಗಲ್ ಎಂಬುವವರು ಮುಂಡಗೋಡ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ. ಸೆಪ್ಟೆಂಬರ್ 16 ರಂದು ರಾತ್ರಿ ಘಟನೆ ನಡೆದಿದ್ದು, ನವರಂಗ್ ವೆಲ್ಡಿಂಗ ವರ್ಕ್ಸ್ ಶಾಪ್ ನ ಮುಂದೆ ಇಟ್ಟಿದ್ದ ಕಬ್ಬಿಣದ ಟೇಬಲ್ಲುಗಳು, ದೊಡ್ಡದಾದ ಕಬ್ಬಿಣದ...

Post
ಮುಂಡಗೋಡಿನಲ್ಲಿ ವಿಶ್ವಕರ್ಮ ಜಯಂತಿ ಸರಳ ಉತ್ಸವ..!

ಮುಂಡಗೋಡಿನಲ್ಲಿ ವಿಶ್ವಕರ್ಮ ಜಯಂತಿ ಸರಳ ಉತ್ಸವ..!

ಮುಂಡಗೋಡ: ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕಾಡಳಿತ ಹಾಗೂ ಮುಂಡಗೋಡ ತಾಲೂಕ ವಿಶ್ವಕರ್ಮ ಸಮಾಜ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವಕರ್ಮ ಜಯಂತಿ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು. ವಿಶ್ವಕರ್ಮ ಭಗವಾನರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಗೌರವ ಸಮರ್ಪಣೆ ಮಾಡಲಾಯಿತು. ನಂತರ ಇಲಾಖೆಯ ವತಿಯಿಂದ, ಇಂದೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆ, ವಿಶ್ವಕರ್ಮ ಸಮಾಜದ ಶ್ರೀಮತಿ ರೇಣುಕಾ ಬಡಿಗೇರ, ಈಶ್ವರಪ್ಪ ಬಡಿಗೇರ ಇಂದೂರು, ಮೌನೇಶ ಬಡಿಗೇರ ಉಗ್ಗಿನಕೇರಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿಇಓ...

Post
ಇಂದು “ನಮೋ ಜನ್ಮದಿನ” ಹಡಪದ ಸಮಾಜದಿಂದ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ..!

ಇಂದು “ನಮೋ ಜನ್ಮದಿನ” ಹಡಪದ ಸಮಾಜದಿಂದ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ..!

ಮುಂಡಗೋಡ: ಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 72 ನೇ ಜನ್ಮ ದಿನಾಚರಣೆಯ ಸಂಭ್ರಮ ಜೋರಾಗಿತ್ತು. ಇಲ್ಲಿನ ಹಡಪದ ಅಪ್ಪಣ್ಣ ಸಮಾಜದಿಂದ ವಿಶೇಷವಾಗಿ ಮೋದಿಯವರ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಜ್ಞಾನಪ್ರಜ್ಞಾ ಅಂಧಮಕ್ಕಳ ವಿಶೇಷ ವಸತಿ ಶಾಲೆಯಲ್ಲಿ ಅಂಧ ಮಕ್ಕಳಿಗೆ ಕ್ಷೌರ ಸೇವೆ ಸಲ್ಲಿಸಲಾಯಿತು. ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ ನೇತೃತ್ವದಲ್ಲಿ ಸುಮಾರು 35 ಅಂಧ ಮಕ್ಕಳಿಗೆ ಉಚಿತವಾಗಿ ಕ್ಷೌರ ಮಾಡಲಾಯಿತು. ಕದಂಬ ಹೇರ್ ಡ್ರೆಸಸ್ ನ ಕ್ಷೌರಿಕ ಬಾಂಧವರು ಅಂಧ ಮಕ್ಕಳಿಗೆ ಬೆಳಿಗಿನಿಂದಲೇ ಕ್ಷೌರ...

Post
ಮುಂಡಗೋಡಿನಲ್ಲಿ ಮಾನಸಿಕ ಅಸ್ವಸ್ಥೆಯ ಮೇಲೆ ಅಮಾನುಷ ಹಲ್ಲೆ, ರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದ “ಲೇಡಿ” ಯಾರು..?

ಮುಂಡಗೋಡಿನಲ್ಲಿ ಮಾನಸಿಕ ಅಸ್ವಸ್ಥೆಯ ಮೇಲೆ ಅಮಾನುಷ ಹಲ್ಲೆ, ರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದ “ಲೇಡಿ” ಯಾರು..?

 ಮುಂಡಗೋಡ ಪಟ್ಟಣದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮಾನಸಿಕ ಅಸ್ವಸ್ಥಳೊಬ್ಬಳನ್ನು ಮಹಿಳೆಯೋರ್ವಳು ಮನಬಂದಂತೆ ಥಳಿಸಿದ್ದಾಳೆ. ಮನಸೋ ಇಚ್ಚೆ ಚಪ್ಪಲಿಯಿಂದ ನಡುರಸ್ತೆಯಲ್ಲೇ ಥಳಿಸಿರೋದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ‌. ಅಸ್ವಸ್ಥೆಯ ನರಳಾಟ..! ನಿಜ ಅಂದ್ರೆ, ಇದು ನಡೆದದ್ದು ಮುಂಡಗೋಡ ಪಟ್ಟಣದ ಪಟ್ಟಣ ಪಂಚಾಯತಿ ಎದುರಗಡೆ. ಮಾನಸಿಕ ಅಸ್ವಸ್ಥೆಯನ್ನು ಅಟ್ಟಾಡಿಸಿ ಹೊಡೆದಿರೋ ಮಹಿಳೆ ಥೇಟು ರೌಡಿಯಂತೆ ನಡೆದುಕೊಂಡಿದ್ದಾಳೆ. ರಸ್ತೆಯಲ್ಲಿ ಹೊಡೆತ ತಾಳಲಾರದೇ ಮಾನಸಿಕ ಅಸ್ವಸ್ಥೆ ಚೀರಾಟ ಮಾಡುತ್ತಿದ್ದರೂ ಕರುಣೆ ಬಾರದೇ ಆ ಮಹಿಳೆ ಚಪ್ಪಲಿಯಿಂದ ಥಳಿಸಿದ್ದಾಳೆ. ಇನ್ನು ಘಟನೆ ಕಂಡ ದಾರಿಹೋಕನೊಬ್ಬ...

Post
ಕೊಪ್ಪದ “ಉತ್ತಮ ಶಿಕ್ಷಕಿ” ಗೆ ಹಳೆಯ ವಿದ್ಯಾರ್ಥಿಗಳು ಹಾಗೂ SDMC ಸದಸ್ಯರಿಂದ ಗೌರವ ಸನ್ಮಾನ..!

ಕೊಪ್ಪದ “ಉತ್ತಮ ಶಿಕ್ಷಕಿ” ಗೆ ಹಳೆಯ ವಿದ್ಯಾರ್ಥಿಗಳು ಹಾಗೂ SDMC ಸದಸ್ಯರಿಂದ ಗೌರವ ಸನ್ಮಾನ..!

 ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಗೀತಾ ಪಟಗಾರ ಅವರಿಗೆ ಶಿರಸಿ ಶೈಕ್ಷಣಿಕ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ. ಹೀಗಾಗಿ, ಇಂದು ಕೊಪ್ಪದ ಹಳೆಯ ವಿದ್ಯಾರ್ಥಿಗಳಿಂದ ಹಾಗೂ SDMC ಸದಸ್ಯರುಗಳಿಂದ ಗೌರವ ಸನ್ಮಾನ ಮಾಡಲಾಯಿತು. ಅಂದಹಾಗೆ, 26 ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೆಂದಲಗೇರಿ ಶಾಲೆಯಲ್ಲಿ 9 ವರ್ಷ ಹಾಗೂ ಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 17 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿರಸಿ...

Post
ಕರ್ನಾಟಕದಲ್ಲಿ “ಹಿಂದಿ ದಿವಸ್” ಆಚರಣೆ ಬೇಡವೇ ಬೇಡ, ಸರ್ಕಾರಕ್ಕೆ ಮುಂಡಗೋಡ ರಾಯಣ್ಣ ಬಳಗದಿಂದ ಹಕ್ಕೊತ್ತಾಯ..!

ಕರ್ನಾಟಕದಲ್ಲಿ “ಹಿಂದಿ ದಿವಸ್” ಆಚರಣೆ ಬೇಡವೇ ಬೇಡ, ಸರ್ಕಾರಕ್ಕೆ ಮುಂಡಗೋಡ ರಾಯಣ್ಣ ಬಳಗದಿಂದ ಹಕ್ಕೊತ್ತಾಯ..!

ಮುಂಡಗೋಡ: ಪಟ್ಟಣದಲ್ಲಿ ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಹಿಂದಿ ದಿವಸ್ ಆಚರಣೆಗೆ ವಿರೋಧಿಸಿ ಮನವಿ ಅರ್ಪಿಸಲಾಯಿತು. ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿರೋ ಅಭಿಮಾನಿ ಬಳಗ ಹಿಂದಿ ದಿವಸ್ ಆಚರಣೆ ಬೇಡ ಅಂತಾ ಆಗ್ರಹಿಸಿದ್ದಾರೆ. ಕನ್ನಡ ಒಕ್ಕೂಟ ವ್ಯವಸ್ಥೆ ಮಾರಕವಾಗಿರುವ ಭಾರತದ ಐಕ್ಯತೆಯನ್ನು ಒಡೆಯುತ್ತಿರುವ ಹಿಂದಿ ದಿವಸ ಆಚರಣೆಯನ್ನು ಸ್ಥಗಿತಗೊಳಿಸಬೇಕು, ಒಕ್ಕೂಟ ಭಾರತ ಸಂವಿಧಾನದಲ್ಲಿ 22 ಭಾಷೆಗಳಿಗೂ ಸರಿ ಸಮಾನತೆಯಿದೆ. ಹೀಗಾಗಿ, ಹಿಂದಿ ಭಾಷೆಗೆ ಅಷ್ಟೆ ಪ್ರಾಮುಖ್ಯತೆ ಕೊಡುವುದು ಸರಿಯಲ್ಲ. ನಮ್ಮ ಕನ್ನಡಿಗರ ತೆರಿಗೆ...

Post
ಪಾಳಾ ಕಲಕೊಪ್ಪದಲ್ಲಿ ನಾಯಿ ದಾಳಿಗೆ ಬಲಿಯಾಗುತ್ತಿದ್ದ ಜಿಂಕೆ ರಕ್ಷಣೆ, ಮಾನವೀಯತೆ ತೋರಿದ ಗ್ರಾಮಸ್ಥರು..!

ಪಾಳಾ ಕಲಕೊಪ್ಪದಲ್ಲಿ ನಾಯಿ ದಾಳಿಗೆ ಬಲಿಯಾಗುತ್ತಿದ್ದ ಜಿಂಕೆ ರಕ್ಷಣೆ, ಮಾನವೀಯತೆ ತೋರಿದ ಗ್ರಾಮಸ್ಥರು..!

 ಮುಂಡಗೋಡ: ತಾಲೂಕಿನ ಪಾಳಾ ಗ್ರಾಮದ ಕಲಕೊಪ್ಪದ ಪೆಟ್ರೋಲ್ ಬಂಕ್ ಸಮೀಪ ನಾಯಿಗಳ ದಾಳಿಯಿಂದ ಜಿಂಕೆಯನ್ನ ರಕ್ಷಣೆ ಮಾಡಲಾಗಿದೆ. ಈ ಮೂಲಕ ಗ್ರಾಮಸ್ಥರು ಮಾನವೀಯತೆ ತೋರಿದ್ದಾರೆ. ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದಿದ್ದ ಜಿಂಕೆಯನ್ನು, ಗ್ರಾಮದ ನಾಯಿಗಳು ಅಟ್ಟಿಸಿಕೊಂಡು ಹೋಗುತಿದ್ದವು, ಅದನ್ನು ಕಂಡ ಗ್ರಾಮಸ್ಥರು ನಾಯಿಗಳಿಂದ ಜಿಂಕೆಯನ್ನು ಬಚಾವ್ ಮಾಡಿದ್ದಾರೆ. ನಂತರ ಅರಣ್ಯ ರಕ್ಷಕ ನಾರಾಯಣ ಒಣಿಕೇರಿ, ಯಲ್ಲಪ್ಪ ಬಳ್ಳಾರಿ ಹಾಗೂ ಸಿಬ್ಬಂದಿಗಳು ಮತ್ತು ಗ್ರಾಮದ ಕುಮಾರ್, ಜಗದೀಶ್, ಅಶೋಕ್ ಮುಂತಾದವರು ಸೇರಿ ಜಿಂಕೆಯನ್ನು ರಕ್ಷಿಸಿ ನಾಯಿಗಳ...

Post
ಮಜ್ಜಿಗೇರಿ ಕ್ರಾಸ್ ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ಜೇನುಮುರಿಯ ಬೈಕ್ ಸವಾರ ಸಾವು..!

ಮಜ್ಜಿಗೇರಿ ಕ್ರಾಸ್ ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ಜೇನುಮುರಿಯ ಬೈಕ್ ಸವಾರ ಸಾವು..!

ಮುಂಡಗೋಡ ತಾಲೂಕಿನ ಬಾಚಣಕಿ ಡ್ಯಾಂ ಬಳಿಯ ಮಜ್ಜಿಗೇರಿ ಕ್ರಾಸ್ ಹತ್ತಿರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಅಂತಾ ತಿಳಿದು ಬಂದಿದೆ. ಕಾರು ಹಾಗೂ ಬೈಕ್ ನಡುವೆ ಮುಖಾ ಮುಕಿ ಡಿಕ್ಕಿಯಾದ ಪರಿಣಾಮ, ಜೇನಮುರಿ ಗ್ರಾಮದ ಬಸವರಾಜ್ ಯಲ್ಲಪ್ಪ ಶ್ಯಾಡಂಬಿ(36) ಎಂಬುವವ ಗಂಭೀರ ಗಾಯಗೊಂಡಿದ್ದ. ಗಾಯಾಳುವನ್ನು 108 ಅಂಬ್ಯಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿತ್ತು. ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ, ಹುಬ್ಬಳ್ಳಿಯ ಕಿಮ್ಸ್...

Post
ಬಾಚಣಕಿಯ ಮಜ್ಜಿಗೇರಿ ಕ್ರಾಸ್ ಬಳಿ ಕಾರು ಬೈಕ್ ನಡುವೆ ಅಪಘಾತ, ಬೈಕ್ ಸವಾರ ಗಂಭೀರ..!

ಬಾಚಣಕಿಯ ಮಜ್ಜಿಗೇರಿ ಕ್ರಾಸ್ ಬಳಿ ಕಾರು ಬೈಕ್ ನಡುವೆ ಅಪಘಾತ, ಬೈಕ್ ಸವಾರ ಗಂಭೀರ..!

ಮುಂಡಗೋಡ ತಾಲೂಕಿನ ಬಾಚಣಕಿ ಡ್ಯಾಂ ಬಳಿಯ ಮಜ್ಜಿಗೇರಿ ಕ್ರಾಸ್ ಹತ್ತಿರ ಅಪಘಾತವಾಗಿದೆ. ಕಾರು ಹಾಗೂ ಬೈಕ್ ನಡುವೆ ಮುಖಾ ಮುಕಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಜೇನಮುರಿ ಗ್ರಾಮದ ಬಸವರಾಜ್ ಯಲ್ಲಪ್ಪ ಶ್ಯಾಡಂಬಿ(36) ಎಂಬುವವನಿಗೆ ಗಂಭೀರ ಗಾಯವಾಗಿದೆ. ಸದ್ಯ ಗಾಯಾಳುವನ್ನು 108 ಅಂಬ್ಯುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿತ್ತು. ಪ್ರಥಮ ಚಿಕಿತ್ಸೆ ನಂತರ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಇನ್ನು ಗಾಯಾಳುವಿನ ಬಳಿಯಿದ್ದ 1450 ರೂ. ಹಾಗೂ ಮೊಬೈಲ್ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. 108 ಅಂಬ್ಯಲೆನ್ಸ್...

error: Content is protected !!