Home KSRTC BUS

Tag: KSRTC BUS

Post
ಯಲ್ಲಾಪುರ ಬಳಿ ಭೀಕರ ಅಪಘಾತ, ನಿಂತಿದ್ದ ಲಾರಿಗೆ ಬಸ್ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು, 7 ಜನರಿಗೆ ಗಂಭೀರ ಗಾಯ..!

ಯಲ್ಲಾಪುರ ಬಳಿ ಭೀಕರ ಅಪಘಾತ, ನಿಂತಿದ್ದ ಲಾರಿಗೆ ಬಸ್ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು, 7 ಜನರಿಗೆ ಗಂಭೀರ ಗಾಯ..!

Yallapur Accident News; ಯಲ್ಲಾಪುರ ತಾಲೂಕಿನ ಹಿಟ್ಟಿನಬೈಲ್ ಸಮೀಪದ ಯಲ್ಲಾಪುರ ಹುಬ್ಬಳ್ಳಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ KSRTC ಬಸ್‌ ಡಿಕ್ಕಿ ಹೊಡೆದ ಪರಿಣಾಮ, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ನೀಲವ್ವಾ (38), ಗಿರಿಜವ್ವಾ (43) ಹಾಗೂ ಇನ್ನೋರ್ವ ಪುರುಷ ಎಂದು ಗುರುತಿಸಲಾಗಿದ್ದು, ಪುರುಷನ ಗುರುತು ಇನ್ನೂ ಪತ್ತೆಯಾಗಿಲ್ಲ. ಕೆಎಸ್‌ಆರ್‌ಟಿಸಿ ಬಸ್ ಬಾಗಲಕೋಟೆ ಜಿಲ್ಲೆಯ ಅಮ್ಮನಗುಡ್ಡದಿಂದ ಮಂಗಳೂರಿಗೆ ಹೊರಟಿತ್ತು ಎನ್ನಲಾಗಿದೆ. ಹೆದ್ದಾರಿ ಪಕ್ಕದಲ್ಲಿ ಕೆಟ್ಟು ನಿಂತಿದ್ದ ಕೇರಳ ಮೂಲದ ಲಾರಿಗೆ ಬಸ್ ಡಿಕ್ಕಿಯಾಗಿದೆ....

Post
ಉಗ್ರ ಸ್ವರೂಪಕ್ಕಿಳಿದ ವಿದ್ಯಾರ್ಥಿಗಳ ಹೋರಾಟ, ಮುಂಡಗೋಡಿನಲ್ಲೇ ರಸ್ತೆ ತಡೆದ ನಂದಿಕಟ್ಟಾ ಗ್ರಾಮಸ್ಥರು..!

ಉಗ್ರ ಸ್ವರೂಪಕ್ಕಿಳಿದ ವಿದ್ಯಾರ್ಥಿಗಳ ಹೋರಾಟ, ಮುಂಡಗೋಡಿನಲ್ಲೇ ರಸ್ತೆ ತಡೆದ ನಂದಿಕಟ್ಟಾ ಗ್ರಾಮಸ್ಥರು..!

 ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮಸ್ಥರ ಆಕ್ರೋಶ ತಣ್ಣಗಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ವಿದ್ಯಾರ್ಥಿಗಳಿಗೆ ನಿತ್ಯವೂ ಉಂಟಾಗ್ತಿರೊ ಬಸ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲೇ ಬೇಕು. ನಮಗೆ ಬಸ್ ಬೇಕೆ ಬೇಕು ಅಂತಾ ಸತತವಾಗಿ ಪ್ರತಿಭಟನೆ ಕೈಗೊಂಡಿರೋ ನಂದಿಕಟ್ಟ ಭಾಗದ ವಿದ್ಯಾರ್ಥಿಗಳು, ಪೋಷಕರು ಇವತ್ತು ಮುಂಡಗೋಡಿನಲ್ಲಿ ಬೃಹತ್ ಪ್ರತಿಭಟನೆ ಕೈಗೊಂಡ್ರು. ನಾಲಾಯಕ ಸಾರಿಗೆ ಅಧಿಕಾರಿಗಳೇ..! ಅಸಲು, ನಿನ್ನೆ ಸಂಜೆ 4.30 ರಿಂದ ಇಂದೂರಿನ ಸಮೀಪ ಪ್ರೌಢಶಾಲೆಯ ಹತ್ತಿರ ಬಸ್ ತಡೆದು ಪ್ರತಿಭಟಿಸಿದ್ದ ವಿದ್ಯಾರ್ಥಿಗಳಿಗೆ ಯಾರೂ ಕ್ಯಾರೇ ಅಂದಿರಲಿಲ್ಲ....

Post
ನಮಗೆ ಬಸ್ ಬೇಕೇ ಬೇಕು..!  ಇಂದೂರಿನಲ್ಲಿ ವಿದ್ಯಾರ್ಥಿಗಳಿಂದ ಮಳೆಯಲ್ಲೇ ಬಸ್ ತಡೆದು ಪ್ರತಿಭಟನೆ..!

ನಮಗೆ ಬಸ್ ಬೇಕೇ ಬೇಕು..! ಇಂದೂರಿನಲ್ಲಿ ವಿದ್ಯಾರ್ಥಿಗಳಿಂದ ಮಳೆಯಲ್ಲೇ ಬಸ್ ತಡೆದು ಪ್ರತಿಭಟನೆ..!

 ಮುಂಡಗೋಡ: ತಾಲೂಕಿನ ಇಂದೂರು ಪ್ರೌಢಶಾಲೆ ಹತ್ತಿರ ಸುರಿವ ಮಳೆಯಲ್ಲೇ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ಮಾಡಿದ್ರು. ಅಸಲು, ಶಾಲಾ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಇವ್ರ ಗೋಳು ಹೇಳತೀರದ್ದಾಗಿದೆ. ಹೀಗಾಗಿ, ಇವತ್ತು ನಂದಿಕಟ್ಟಾ ಕೆಂದಲಗೇರಿ, ಹುಲಿಹೊಂಡ, ಬಸಾಪುರ ಗ್ರಾಮದ ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಬಸ್ ತಡೆ ನಡೆಸಿ ಪ್ರತಿಭಟಿಸಿದ್ದಾರೆ.  ಇಂದೂರುಹೈಸ್ಕೂಲ್ ಹತ್ತಿರ.. ಅಂದಹಾಗೆ, ಇಂದು ಸಂಜೆ ಶಾಲೆ ಬಿಟ್ಟ ನಂತರ ವಿದ್ಯಾರ್ಥಿಗಳು ಬಸ್ ಗಾಗಿ ಕಾಯುತ್ತಿದ್ದರು. ಈ ವೇಳೆ ಸುಮಾರು...

Post
ಮುಂಡಗೋಡ APMC ಸಮೀಪ ಜಿಂಕೆಗೆ ಡಿಕ್ಕಿ ಹೊಡೆದ KSRTC ಬಸ್, ಜಿಂಕೆ ಸಾವು..!

ಮುಂಡಗೋಡ APMC ಸಮೀಪ ಜಿಂಕೆಗೆ ಡಿಕ್ಕಿ ಹೊಡೆದ KSRTC ಬಸ್, ಜಿಂಕೆ ಸಾವು..!

ಮುಂಡಗೋಡ: ಪಟ್ಟಣದ APMC ಹತ್ತಿರ KSRTC ಬಸ್ ಡಿಕ್ಕಿಯಾಗಿ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಹೊರಟಿದ್ದ KSRTC ಬಸ್ APMC ಸಮೀಪದ ರಸ್ತೆಯಲ್ಲಿ ಏಕಾಏಕಿ ಜಿಂಕೆ ಅಡ್ಡ ಬಂದ ಪರಿಣಾಮ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು ಜಿಂಕೆ ಸ್ಥಳದಲ್ಲೇ‌ ಮೃತಪಟ್ಟಿದೆ. ಇನ್ನು, ಮೃತಪಟ್ಟ ಜಿಂಕೆ ರಸ್ತೆಯಲ್ಲೇ ಬಿದ್ದಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕಿದೆ.

error: Content is protected !!