Home crime news

Tag: crime news

Post
ಮಗಳ‌ ಮದುವೆಗೆ ಮಾಡಿದ್ದ ಸಾಲ ತೀರಿಸಲಾಗದೇ ಒಂದೇ ಕುಟುಂಬದ ಮೂವರು ಆತ್ಮಹತ್ಯೆ..! ಎಲ್ಲಿ ಗೊತ್ತಾ..?

ಮಗಳ‌ ಮದುವೆಗೆ ಮಾಡಿದ್ದ ಸಾಲ ತೀರಿಸಲಾಗದೇ ಒಂದೇ ಕುಟುಂಬದ ಮೂವರು ಆತ್ಮಹತ್ಯೆ..! ಎಲ್ಲಿ ಗೊತ್ತಾ..?

ಸವಣೂರಿನಲ್ಲಿ ಕರುಳು ಹಿಂಡುವ, ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಸಾಲ‌ಮಾಡಿ ಮಗಳ‌ಮದುವೆ ಮಾಡಿದ್ದ ದಂಪತಿಗಳು ಸಾಲ ತೀರಿಸಲಾಗದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ, ತಂದೆ, ತಾಯಿಯ ಸಾವು ಕಂಡ ಮಗಳೂ ಕೂಡ ನೇಣಿಗೆ ಶರಣಾಗಿದ್ದಾಳೆ. ಇದ್ರೊಂದಿಗೆ ಒಂದೇ ಕುಟುಂಬ ಮೂವರು ಸಾವಿನ ಹಾದಿ ಹಿಡಿದಿದ್ದಾರೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ಘಟಮೆ ನಡೆದಿದೆ. ತಂದೆ ಹನುಮಂತಗೌಡ ಪಾಟೀಲ (54) ತಾಯಿ ಲಲಿತಾ ಪಾಟೀಲ(50) ಮತ್ತು ಮಗಳು ನೇತ್ರಾ ಪಾಟೀಲ(22) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲ...

Post
ಅಗಡಿ ಸಮೀಪದ ನೆಲ್ಲಿಹರವಿ ಕ್ರಾಸ್ ಬಳಿ ಭೀಕರ ಅಪಘಾತ, ನಂದಿಕಟ್ಟಾದ ಇಬ್ಬರು ಸೇರಿ, ನಾಲ್ವರಿಗೆ ಗಂಭೀರ ಗಾಯ..!

ಅಗಡಿ ಸಮೀಪದ ನೆಲ್ಲಿಹರವಿ ಕ್ರಾಸ್ ಬಳಿ ಭೀಕರ ಅಪಘಾತ, ನಂದಿಕಟ್ಟಾದ ಇಬ್ಬರು ಸೇರಿ, ನಾಲ್ವರಿಗೆ ಗಂಭೀರ ಗಾಯ..!

ಮುಂಡಗೋಡ ತಾಲೂಕಿನ ಗಡಿಭಾಗ ಅಗಡಿ ಮಿಲ್ ಸಮೀಪದ ನೆಲ್ಲಿಹರವಿ ಕ್ರಾಸ್ ಬಳಿ ಭೀಕರ ಅಪಘಾತವಾಗಿದೆ. ಪರಿಣಾಮ ನಾಲ್ವರಿಗೆ ಗಂಭೀರ ಗಾಯವಾಗಿದೆ. ಬೈಕ್ ಗಳ‌ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಘಟನೆ ನಡೆದಿದೆ. ಅಗಡಿ ಶಾಂತಿನಗರದ ಸುರೇಶ್ ಎಂಬುವ ಯುವಕ, ನಂದಿಕಟ್ಟಾ ಗ್ರಾಮದ ಮಹಮದ್ ದುಂಡಸಿ (37), ಈಸಾಕ್ ಯಲ್ಲಾಪುರ (35) ಇಬ್ಬರು ಯುವಕರಿಗೆ ಹಾಗೂ ಕಲಘಟಗಿ ತಾಲೂಕಿನ ಓರ್ವ ಯುವಕನಿಗೆ ಗಂಭೀರ ಗಾಯವಾಗಿದೆ. ನೆಲ್ಲಿಹರವಿ ಕ್ರಾಸ್ ಬಳಿ ಘಟನೆ ನಡೆದಿದ್ದು, ಸ್ಥಳೀಯರು ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ....

Post
ಅಗಡಿ ಮಿಲ್ ಬಳಿ ಬೈಕ್ ಅಪಘಾತ, ಓರ್ವ ಯುವಕನಿಗೆ ಗಾಯ, ಆಸ್ಪತ್ರೆಗೆ ರವಾನೆ..!

ಅಗಡಿ ಮಿಲ್ ಬಳಿ ಬೈಕ್ ಅಪಘಾತ, ಓರ್ವ ಯುವಕನಿಗೆ ಗಾಯ, ಆಸ್ಪತ್ರೆಗೆ ರವಾನೆ..!

ಮುಂಡಗೋಡ ತಾಲೂಕಿನ ಅಗಡಿ ಮಿಲ್ ಬಳಿ ಮತ್ತೊಂದು ಬೈಕ್ ಅಪಘಾತವಾಗಿದೆ. ಪರಿಣಾಮ ಓರ್ವ ಯುವಕನಿಗೆ ಗಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿವೆ. ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದ ಮಲ್ಲಿಕಜಾನ್ ವಾಲೀಕಾರ್ ಎಂಬುವವನೇ ಬೈಕ್‌ಅಪಘಾತದಲ್ಲಿ ಗಾಯಗೊಂಡ ಯುವಕನಾಗಿದ್ದಾನೆ. ಈತ ಅಗಡಿ ಸಮೀಪದ ಪೆಟ್ರೊಲ್ ಬಂಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಇಂದು ಕೆಲಸ ಮುಗಿಸಿ ಹೊರಟಿದ್ದಾಗ ಘಟನೆ ನಡೆದಿದೆ. ಇನ್ನು ಗಾಯಾಳುವನ್ನು ಅಂಬುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್ ಆಗಿ ಗಾಯಗೊಂಡಿದ್ದ ಅಗಡಿಯ ಯುವಕ ಸಾವು..!

ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್ ಆಗಿ ಗಾಯಗೊಂಡಿದ್ದ ಅಗಡಿಯ ಯುವಕ ಸಾವು..!

ಮುಂಡಗೋಡ ತಾಲೂಕಿನ ಕಲಘಟಗಿ ರಸ್ತೆಯ ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡಿದ್ದ ಅಗಡಿಯ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಸಂಜು ಸಿದ್ದಪ್ಪ ಗಳಗಿ (23) ಮೃತಪಟ್ಟ ಯುವಕನಾಗಿದ್ದಾನೆ. ಈತ ಮೊನ್ನೆ ಶಿವರಾತ್ರಿಯ ದಿನ ಗದ್ದೆಗೆ ಹೋಗಿ ವಾಪಸ್ ಅಗಡಿ ಕಡೆಗೆ ಬರುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದಿದ್ದ. ಪರಿಣಾಮ ಯುವಕನ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ...

Post
ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್, ಅಗಡಿಯ ಯುವಕನಿಗೆ ಗಂಭೀರ ಗಾಯ..!

ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್, ಅಗಡಿಯ ಯುವಕನಿಗೆ ಗಂಭೀರ ಗಾಯ..!

ಮುಂಡಗೋಡ ತಾಲೂಕಿನ ಕಲಘಟಗಿ ರಸ್ತೆಯಲ್ಲಿ ಅಪಘಾತವಾಗಿದೆ. ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್ ಆಗಿ ಬಿದ್ದು ಅಗಡಿಯ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಸಂಜು ಸಿದ್ದಪ್ಪ ಗಳಗಿ (23) ಗಂಭೀರ ಗಾಯಗೊಂಡ ಯುವಕನಾಗಿದ್ದಾನೆ. ಈತ ಗದ್ದೆಗೆ ಹೋಗಿ ವಾಪಸ್ ಅಗಡಿಗೆ ಬರುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾನೆ. ಪರಿಣಾಮ ಯುವಕನ ತಲೆಗೆ ಪೆಟ್ಟಾಗಿದ್ದು, ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು...

Post
ಮುಂಡಗೋಡ ಹೊಸ ಓಣಿಯಲ್ಲಿ ಮನೆಗೆ ಆಕಸ್ಮಿಕ ಬೆಂಕಿ, ಅಪಾರ ಹಾನಿ..!

ಮುಂಡಗೋಡ ಹೊಸ ಓಣಿಯಲ್ಲಿ ಮನೆಗೆ ಆಕಸ್ಮಿಕ ಬೆಂಕಿ, ಅಪಾರ ಹಾನಿ..!

 ಮುಂಡಗೋಡ ಪಟ್ಟಣದ ಹೊಸ ಓಣಿಯಲ್ಲಿ ಬೆಂಕಿ ಅವಘಡವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ‌. ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳ ಮುಂಜಾಗ್ರತೆಯಿಂದ ಆಗಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ. ಹೊಸ ಓಣಿಯ ರಾಜು ಹಿರೇಮಠ ಎಂಬುವವರಿಗೆ ಸೇರಿದ ಮನೆಯಲ್ಲಿ, ವೀಣಾ ಬಾಳಂಬೀಡ ಎನ್ಹುವವರು ಬಾಡಿಗೆ ಇದ್ದರು. ಇಂದು ಬೆಳಿಗ್ಗೆ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋದ ನಂತರ ಕೆಲವೇ ಹೊತ್ತಲ್ಲಿ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಹೀಗಾಗಿ, ಸ್ಥಳೀಯರು ತಕ್ಷಣವೇ...

Post
ಸವಣೂರು ಜಿಪಂ AEE ಲೋಕಾಯುಕ್ತ ಬಲೆಗೆ, 30 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿ..!

ಸವಣೂರು ಜಿಪಂ AEE ಲೋಕಾಯುಕ್ತ ಬಲೆಗೆ, 30 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿ..!

ಸವಣೂರು: ತಾಲೂಕಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ಉಪವಿಭಾಗದ ಎಇಇ ನಿಂಬಣ್ಣ ಹೊಸಮನಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಾಮಗಾರಿಯ ಹಣ ಬಿಡುಗಡೆಗಾಗಿ ಲಂಚಕ್ಕೆ ಬೇಡಿಕೆಯಿಟ್ಟು ಅಧಿಕಾರಿ ತಗಲಾಕ್ಕೊಂಡಿದ್ದಾರೆ. ಲಚ್ಚಪ್ಪ ದುರ್ಗಪ್ಪ ಕನವಳ್ಳಿ ಎಂಬುವವರಿಂದ ಅವರಿಂದ ರೂ 40, ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟು, ರೂ 30 ಸಾವಿರ ಹಣವನ್ನು ಸ್ವೀಕರಿಸುವಾಗ, ಹಾವೇರಿ ಜಿಲ್ಲೆಯ ಲೋಕಾಯುಕ್ತ ಅಧಿಕಾರಿ ಹಾಗೂ ಸಿಬ್ಬಂದಿಗಳು ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ.. ಅಂದಹಾಗೆ, ಲಚ್ಚಪ್ಪ ದುರ್ಗಪ್ಪ ಕನವಳ್ಳಿ RDPR ಸವಣೂರು ಉಪವಿಭಾಗ ವ್ಯಾಪ್ತಿಯಲ್ಲಿ 2 ಕಾಮಗಾರಿಗಳನ್ನು...

Post
ಎಣ್ಣೆ ಏಟಲ್ಲಿ ಮಲಗಿದ್ದವನ ಜೇಬಿಗೆ ಕನ್ನ ಹಾಕಿದ ಅಜ್ಜಿ, ಹಣ ಎಗರಿಸಿ ಪರಾರಿ..!

ಎಣ್ಣೆ ಏಟಲ್ಲಿ ಮಲಗಿದ್ದವನ ಜೇಬಿಗೆ ಕನ್ನ ಹಾಕಿದ ಅಜ್ಜಿ, ಹಣ ಎಗರಿಸಿ ಪರಾರಿ..!

 ಯಲ್ಲಾಪುರ: ಎಣ್ಣೆ ಹೊಡೆದು ಟೈಟ್ ಆಗಿ ಮಲಗಿದ್ದವನ ಜೇಬಿನಿಂದ ವೃದ್ದೆಯೋರ್ವಳು ಹಣ ಎಗರಿಸಿದ್ದಾಳೆ. ಹಾಡಹಗಲೇ ಯಲ್ಲಾಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು ಸ್ಥಳೀಯರ ಮೊಬೈಲ್ ಕೆಮೇರಾದಲ್ಲಿ ಸೆರೆಯಾಗಿದೆ. ಯಲ್ಲಾಪುರ ಬಸ್ ನಿಲ್ದಾಣದ ನಂದಿನ ಹಾಲಿನ ಕೌಂಟರ್ ಬಳಿ ಓರ್ವ ವ್ಯಕ್ತಿ, ಫುಲ್ ಟೈಟ್ ಆಗಿ ನಶೆಯಲ್ಲೇ ಮಲಗಿರ್ತಾನೆ. ಈ ವೇಳೆ ಅಲ್ಲಿಗೆ ಬಂದ ವೃದ್ದೆಯೋರ್ವಳು, ಏಕಾಏಕಿ ನಶೆಯಲ್ಲಿ ಮಲಗಿದ್ದವನ ಜೇವಿಗೆ ಕೈ ಹಾಕಿದ್ದಾಳೆ. ಕೈಗೆ ಸಿಕ್ಕಷ್ಟು ಹಣ ಎಗರಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾಳೆ‌. ಇದನ್ನೇಲ್ಲ ಅಲ್ಲೇ...

Post
ಹಾನಗಲ್ ಬಳಿಯ ಜಿಗಳಿಕೊಪ್ಪದಲ್ಲಿ ಭೀಕರ ಹತ್ಯೆ, ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ, ಬೆಚ್ಚಿಬಿದ್ದ ಗ್ರಾಮಸ್ಥರು..!

ಹಾನಗಲ್ ಬಳಿಯ ಜಿಗಳಿಕೊಪ್ಪದಲ್ಲಿ ಭೀಕರ ಹತ್ಯೆ, ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ, ಬೆಚ್ಚಿಬಿದ್ದ ಗ್ರಾಮಸ್ಥರು..!

ಬೆಳ್ಳಂಬೆಳಿಗ್ಗೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಜಿಗಳಿಕೊಪ್ಪ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆಮಾಡಿ, ಚಾಪೆ, ಹಾಗೂ ರಗ್ಗಿನಲ್ಲಿ ಸುತ್ತಿ ಗೋವಿನಜೋಳದ ಜಮೀನಿನಲ್ಲಿ ಬಿಸಾಕಿ ಹೋಗಿದ್ದಾರೆ ದುಷ್ಕರ್ಮಿಗಳು. ಮೃತ ವ್ಯಕ್ತಿ ಸುಮಾರು 35 ವರ್ಷ ಪ್ರಾಯದವನಾಗಿದ್ದು, ಯಾರು, ಎಲ್ಲಿಯವನು ಅನ್ನೊ ಮಾಹಿತಿ ಇನ್ನೂ ಸಿಕ್ಕಿಲ್ಲ. ಗುಪ್ತಾಂಗಕ್ಕೆ ಹೊಡೆದು ಕೊಲೆ..! ಇನ್ನು ಅದೇಲ್ಲೊ ಕೊಲೆ ಮಾಡಿ, ಶವವನ್ನು ಚಾಪೆಯಲ್ಲಿ ಸುತ್ತಿ, ಜಿಗಳಿಕೊಪ್ಪ ಗ್ರಾಮದ ಹೊರವಲಯದಲ್ಲಿ ಬೀಸಾಕಿ ಹೋಗಿರೋ ಶವದ ಮುಖ, ತಲೆ ಹಾಗೂ ಗುಪ್ತಾಂಗಕ್ಕೆ ಏಟುಗಳು ಬಿದ್ದು...

Post
ರೈಲಿನಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ವ್ಯಕ್ತಿ ಬಂಧನ, ಕಾರವಾರ ರೈಲ್ವೆ ಪೊಲೀಸರ ಭರ್ಜರಿ ಕಾರ್ಯಾಚರಣೆ..!

ರೈಲಿನಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ವ್ಯಕ್ತಿ ಬಂಧನ, ಕಾರವಾರ ರೈಲ್ವೆ ಪೊಲೀಸರ ಭರ್ಜರಿ ಕಾರ್ಯಾಚರಣೆ..!

ಕಾರವಾರ: ಕೇರಳಕ್ಕೆ ಅಕ್ರಮವಾಗಿ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಕಾರವಾರ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ, ಮಂಗಳ ಎಕ್ಸ್ ಪ್ರೆಸ್ ರೈಲಿನಲ್ಲಿ ದಾಖಲೆ ರಹಿತ ಹಣ ಸಾಗಿಸುತ್ತಿದ್ದ ವೇಳೆ ಬಂಧಿಸಲಾಗಿದೆ. ಮಹಾರಾಷ್ಟ್ರ ಮೂಲದ ವಿಕಾಸ್ ರಮೇಶ್ ದೋಕಲೆ ಬಂಧಿತ ವ್ಯಕ್ತಿಯಾಗಿದ್ದು, ಬಂಧಿತನಿಂದ ದಾಖಲೆ ರಹಿತ ರೂ.20,09,720 ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರ ದಿಂದ ಕೇರಳಕ್ಕೆ ಹಣ ಕೊಂಡೊಯ್ಯುತಿದ್ದನು ಎನ್ನಲಾಗಿದ್ದು, ರೈಲ್ವೆ ಪೊಲೀಸರಿಂದ ಕಾರವಾರ ನಗರ ಠಾಣೆ ಪೊಲೀಸರಿಗೆ ಪ್ರಕರಣ ಹಸ್ತಾಂತರವಾಗಿದೆ.

error: Content is protected !!