Home crime news

Tag: crime news

Post
ಭೀಕರ ರಸ್ತೆ ಅಪಘಾತ 8 ಜನರ ದುರ್ಮರಣ, 25 ಕ್ಕೂ ಹೆಚ್ಚು ಜನ್ರಿಗೆ ಗಾಯ, ಹಲವರ ಸ್ಥಿತಿ ಚಿಂತಾಜನಕ..!

ಭೀಕರ ರಸ್ತೆ ಅಪಘಾತ 8 ಜನರ ದುರ್ಮರಣ, 25 ಕ್ಕೂ ಹೆಚ್ಚು ಜನ್ರಿಗೆ ಗಾಯ, ಹಲವರ ಸ್ಥಿತಿ ಚಿಂತಾಜನಕ..!

ಹುಬ್ಬಳ್ಳಿ; ಹುಬ್ಬಳ್ಳಿ – ಧಾರವಾಡ ಬೈಪಾಸ್ ರಸ್ತೆ ಸಾವಿನ ಹೆದ್ದಾರಿ ಎಂದು ಬಿಂಬಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯೂ ಆಗಿರೋ ಇಲ್ಲಿ, ಆಗಾಗ ಅಪಘಾತಗಳು ಸಂಭವಿಸುತ್ತಲೇ ಇರುತ್ತೆ. ಈ ಹಿನ್ನೆಲೆಯಲ್ಲಿ ಇದನ್ನು ದಶ ಪಥ ರಸ್ತೆಯನ್ನಾಗಿಸೋಕೆ ಶಿಲನ್ಯಾಸ ನೆರವೇರಿಸಲಾಗಿತ್ತು. ಇದರ ಬೆನ್ನ ಹಿಂದೆಯೇ ಇದೇ ರಸ್ತೆಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಹಾಗೂ ಲಾರಿಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಏಂಟು ಜನ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ಹೊರವಲಯದಲ್ಲಿ ನಡೆದಿದೆ. ಖಾಸಗಿ ಬಸ್ ಮತ್ತು...

Post
ಮುಂಡಗೋಡಿನ ಮೈನಳ್ಳಿ ಬಳಿ ಮಾರುತಿ ಇಕೊ ವಾಹನ ಪಲ್ಟಿ, ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು..!

ಮುಂಡಗೋಡಿನ ಮೈನಳ್ಳಿ ಬಳಿ ಮಾರುತಿ ಇಕೊ ವಾಹನ ಪಲ್ಟಿ, ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು..!

ಮುಂಡಗೋಡ: ತಾಲೂಕಿನ ಯಲ್ಲಾಪುರ ರಸ್ತೆಯ ಮೈನಳ್ಳಿ ಹಾಗೂ ಗುಂಜಾವತಿ ನಡುವೆ ಅಪಘಾತವಾಗಿದೆ. ಮಾರುತಿ ಇಕೋ ಸ್ಕಿಡ್ ಆಗಿ ಬಿದ್ದ ಪರಿಣಾಮ ಮೂವರಿಗೆ ಗಾಯವಾಗಿದೆ. ದಾವಣಗೇರೆಯ ಪರಶುರಾಮ R ಆಲದಕಟ್ಟಿ (53), ಬಾಪೂಜಿ N ಕಾಳೆ (42), ಗುರುರಾಜ್ ಸಾಳಂಕಿ (35) ಗಾಯಗೊಂಡವರು. ದಾವಣಗೆರೆಯಿಂದ ಕಾರವಾರಗೆ ಮದುವೆಗೆಂದು ಹೋಗುತ್ತಿದ್ದ ದಾವಣಗೆರೆ ಮೂಲದ ಇಕೋ ವಾಹನ, ಗುಂಜಾವತಿ ಮೈನಳ್ಳಿ ಮದ್ಯೆ ಸ್ಕಿಡ್ ಆಗಿ ಅಪಘಾತವಾಗಿದೆ.‌ ಘಟನೆಯಲ್ಲಿ ಒಬ್ಬರ ಬಲಗಾಲಿಗೆ ಗಾಯವಾಗಿದೆ. ಒಬ್ಬರಿಗೆ ಬಲಗೈಗೆ ಗಾಯ ಆಗಿದೆ. ಇನ್ನೊಬ್ಬರಿಗೆ ಮೈಮೇಲೆ ಅಲ್ಲಲ್ಲಿ...

Post
ಕಾತೂರಿನಲ್ಲಿ ಮಟ್ಕಾ ಅಡ್ಡೆಯ ಮೇಲೆ ಪೊಲೀಸರ ದಾಳಿ, ಮೂವರ ಮೇಲೆ ಕೇಸ್..!

ಕಾತೂರಿನಲ್ಲಿ ಮಟ್ಕಾ ಅಡ್ಡೆಯ ಮೇಲೆ ಪೊಲೀಸರ ದಾಳಿ, ಮೂವರ ಮೇಲೆ ಕೇಸ್..!

ಮುಂಡಗೋಡ: ತಾಲೂಕಿನ ಕಾತೂರಿನಲ್ಲಿ ಮಟ್ಕಾ ಅಡ್ಡೆಯ ಮೇಲೆ ಮುಂಡಗೋಡ ಪೊಲೀಸರು ದಾಳಿ ಮಾಡಿ ಮೂವರನ್ನ ವಶಕ್ಕೆ ಪಡೆದಿದ್ದಾರೆ. ಹಿರೇಕೆರೂರಿನಿಂದ ಬಂದು ಮಟ್ಕಾ ಆಡಿಸುತ್ತಿದ್ದ ಬುಕ್ಕಿ ಸೇರಿದಂತೆ ಮೂವರ ಮೇಲೆ ಕೇಸು ದಾಖಲಾಗಿದೆ. ಕಾತೂರಿನಲ್ಲಿ ಟೀ ಅಂಗಡಿ ನಡೆಸುತ್ತಿರೊ ಮಹಮ್ಮದ್ ಜಾಫರ್ ಮಹಮ್ಮದ ಹುಸೇನ ಮರಗಡಿ (48) ಎಂಬುವವನು ಮುಂಡಗೋಡ ತಾಲೂಕಿನ ಕಾತೂರ ಗ್ರಾಮದ ಆಲಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಮೀನು ಮಾರ್ಕೆಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು, ಮಟ್ಕಾ ಬರೆಯುತ್ತಿದ್ದ. ಈ ವೇಳೆ ಮುಂಡಗೋಡ ಪಿಎಸ್ಐ ಬಸವರಾಜ್...

Post
ಮುಂಡಗೋಡ ಸುಭಾಷ್ ‌ನಗರದಲ್ಲಿ ವ್ಯಕ್ತಿ ನೇಣಿಗೆ ಶರಣು, ಸಾವಿನ ಹಿಂದೆ ನೂರಾರು ಪ್ರಶ್ನೆ..?

ಮುಂಡಗೋಡ ಸುಭಾಷ್ ‌ನಗರದಲ್ಲಿ ವ್ಯಕ್ತಿ ನೇಣಿಗೆ ಶರಣು, ಸಾವಿನ ಹಿಂದೆ ನೂರಾರು ಪ್ರಶ್ನೆ..?

ಮುಂಡಗೋಡ: ಪಟ್ಟಣದ ಸುಭಾಷ್ ನಗರದಲ್ಲಿ ಓರ್ವ ವ್ಯಕ್ತಿ ನೇಣಿಗೆ ಶರಣಾಗಿದ್ದಾನೆ. ನಾರಾಯಣ ಲಮಾಣಿ ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಇಂದು ಮದ್ಯಾನ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ‌ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಅಂತಾ ಮಾಹಿತಿ ತಿಳಿದು ಬಂದಿದೆ. ಅಂದಹಾಗೆ, ನಾರಾಯಣ ಲಮಾಣಿ, ಸಣ್ಣಪುಟ್ಟ ಗುತ್ತಿಗೆ ಕೆಲಸಗಳನ್ನು ಮಾಡಿಕೊಂಡಿದ್ದ. ಆದ್ರೆ ಇತ್ತಿಚೆಗೆ ಯಾಕೊ ಅದೇನೋ ಟೆನ್ಶೆನ್ ನಲ್ಲಿ ಇರುತ್ತಿದ್ದ ಅಂತಾ ಆತನ ಸ್ನೇಹಿತರ ಮೂಲಗಳಿಂದ ಮಾಹಿತಿ ಬಂದಿದೆ. ಆದ್ರೆ, ದಿಢೀರ್ ಆತನ ಆತ್ಮಹತ್ಯೆಗೆ ಕಾರಣವಾದ್ರೂ ಏನು ಅನ್ನೋ...

Post
ಅನೈತಿಕ ಸಂಬಂಧಕ್ಕೆ ಅಡ್ಡಿ ಅಂತಾ ತಮ್ಮನನ್ನೇ ಕೊಂದ್ಲಾ ಪಾಪಿ ಅಕ್ಕ..? ನೂಲ್ವಿ ಗ್ರಾಮದಲ್ಲೊಂದು ಅಮಾನವೀಯ ಘಟನೆ..!!

ಅನೈತಿಕ ಸಂಬಂಧಕ್ಕೆ ಅಡ್ಡಿ ಅಂತಾ ತಮ್ಮನನ್ನೇ ಕೊಂದ್ಲಾ ಪಾಪಿ ಅಕ್ಕ..? ನೂಲ್ವಿ ಗ್ರಾಮದಲ್ಲೊಂದು ಅಮಾನವೀಯ ಘಟನೆ..!!

ಹುಬ್ಬಳ್ಳಿ: ನೂಲ್ವಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣವನ್ನು 24 ಗಂಟೆಯಲ್ಲಿ ಬೇಧಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಎಂಬ ಕಾರಣಕ್ಕೆ ಸಹೋದರಿಯೇ ತನ್ನ ಪ್ರಿಯಕರನ ಜೊತೆ ಸೇರಿ ತಮ್ಮನನ್ನು ಕೊಲೆ ಮಾಡಿರುವುದು ಬಹಿರಂಗವಾಗಿದೆ. ಕಳೆದ ಎರಡು ದಿನಗಳ ಹಿಂದೆ ಶಂಭುಲಿಂಗ ಕಮಡೊಳ್ಳಿ(35) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕುರಿತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ 24 ಗಂಟೆಯಲ್ಲೇ ಕೊಲೆ ಮಾಡಿದ...

Post
ಮುಂಡಗೋಡಿನಲ್ಲಿ ರಾತ್ರೋ ರಾತ್ರಿ IPL ಬೆಟ್ಟಿಂಗ್ ಅಡ್ಡೆ ಮೇಲೆ ಎಸ್ಪಿ ಟೀಂ ದಾಳಿ, ನಾಲ್ವರು ಅರೆಸ್ಟ್..!

ಮುಂಡಗೋಡಿನಲ್ಲಿ ರಾತ್ರೋ ರಾತ್ರಿ IPL ಬೆಟ್ಟಿಂಗ್ ಅಡ್ಡೆ ಮೇಲೆ ಎಸ್ಪಿ ಟೀಂ ದಾಳಿ, ನಾಲ್ವರು ಅರೆಸ್ಟ್..!

ಇದು ಮುಂಡಗೋಡ ಮಟ್ಟಿಗೆ ಬಹುದೊಡ್ಡ ಬ್ರೇಕಿಂಗ್ ನ್ಯೂಸ್. ಯಸ್, ಉತ್ತರ ಕನ್ನಡದ ಖಡಕ್ ಎಸ್ಪಿ ಸುಮನಾ ಫನ್ನೇಕರ್ ಮೇಡಂ ಈಗಷ್ಟೇ ತಮ್ಮ ಅಸಲೀ ಆಟಗಳನ್ನು ಶುರು ಮಾಡಿ ಆಯ್ತು. ಇನ್ನೇನಿದ್ರು ಜಿಲ್ಲೆಯಲ್ಲಿ ಅಕ್ರಮಗಳಿಗೆ ಜಾಗವಿಲ್ಲ ಅನ್ನೋದು ಪಕ್ಕಾ. ಅದ್ರ ಭಾಗವಾಗೇ ನಿನ್ನೆ ತಡರಾತ್ರಿ ಮುಂಡಗೋಡಿನಲ್ಲಿ ಅದೊಂದು ಸ್ಪೇಷಲ್ ಟೀಂ ಬೃಹತ್ ಕಾರ್ಯಾಚರಣೆ ಮಾಡಿ ನಾಲ್ವರನ್ನ ಅನಾಮತ್ತಾಗಿ ವಶಕ್ಕೆ ಪಡೆದುಕೊಂಡು ಹೋಗಿದೆ. ಅಸಲು, ಈ ಕಾರ್ಯಚರಣೆ ಖುದ್ದು ಮುಂಡಗೋಡ ಪೊಲೀಸರಿಗೂ ಬೆವರು ಇಳಿಸಿದೆ. ಯಾಕಂದ್ರೆ ಅಲ್ಲೇನಾಗ್ತಿದೆ ಅನ್ನೋ ಸಣ್ಣದೊಂದು...

Post
ಮುಂಡಗೋಡ ಪೊಲೀಸರ ಕಾರ್ಯಾಚರಣೆ,  ಅಕ್ರಮ ಗಾಂಜಾ ಮಾರುತ್ತಿದ್ದ ವ್ಯಕ್ತಿಯ ಬಂಧನ..!

ಮುಂಡಗೋಡ ಪೊಲೀಸರ ಕಾರ್ಯಾಚರಣೆ, ಅಕ್ರಮ ಗಾಂಜಾ ಮಾರುತ್ತಿದ್ದ ವ್ಯಕ್ತಿಯ ಬಂಧನ..!

ಮುಂಡಗೋಡ: ಪಟ್ಟಣದ ನ್ಯಾಸರ್ಗಿ ರಸ್ತೆಯ ಮೈಲಾರಲಿಂಗ ದೇವಸ್ಥಾನದ ಹತ್ತಿರ ವ್ಯಕ್ತಿಯೋರ್ವ ಗಾಂಜಾ‌ ಮಾರಾಟ ಮಾಡುತ್ತಿದ್ದ ವೇಳೆ ಮುಂಡಗೋಡ ಪೊಲೀಸರು ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡ ಘಟನೆ ನಡೆದಿದೆ. ಶಿಗ್ಗಾವಿ ತಾಲೂಕಿನ ಜೊಂಡಲಗಟ್ಟಿಯ ಮಾಧುರಾವ್ ಶಂಕರ್ ರಾವ್ ಭೋಸ್ಲೆ (26) ಎಂಬುವವನೇ ಆರೋಪಿಯಾಗಿದ್ದಾನೆ. ಈತ ಇಂದು ನ್ಯಾಸರ್ಗಿ ರಸ್ತೆಯ ಮೈಲಾರಲಿಂಗ ದೇವಸ್ಥಾನದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ಮತ್ತವರ ತಂಡ ದಾಳಿ ಮಾಡಿದೆ. ಸುಮಾರು 4 ಸಾವಿರ...

Post
“ಟಿಕ್ ಟಾಕ್” ನಲ್ಲೇ ರೀಲು ಬಿಟ್ಟ ನಂದಿಕಟ್ಟಾ ಹುಡುಗ, ಬೆಂಗಳೂರಿನಿಂದ್ಲೇ “ಲವ್ ಯೂ” ಅಂದ್ಲು ಹುಡುಗಿ..! ಮುಂದೆ ಆಗಿದ್ದೇನು..?

“ಟಿಕ್ ಟಾಕ್” ನಲ್ಲೇ ರೀಲು ಬಿಟ್ಟ ನಂದಿಕಟ್ಟಾ ಹುಡುಗ, ಬೆಂಗಳೂರಿನಿಂದ್ಲೇ “ಲವ್ ಯೂ” ಅಂದ್ಲು ಹುಡುಗಿ..! ಮುಂದೆ ಆಗಿದ್ದೇನು..?

ಅದು ಅಪ್ಪಟ ಒಂದೂವರೇ ವರ್ಷದ ಪ್ರೇಮ್ ಕಹಾನಿ. ಆಕೆ ದೂರದ ಬೆಂಗಳೂರಿನವಳು, ಈತ ಮುಂಡಗೋಡ ತಾಲೂಕಿನ ನಂದಿಕಟ್ಟಾದವನು. ಟಿಕ್ ಟಾಕ್ ನಲ್ಲೇ ಶುರುವಾದ ಪ್ರೇಮ ಎರಡು ಮಕ್ಕಳ ತಾಯಿಯೊಂದಿಗೆ ಪ್ರೀತಿ, ಪ್ರೇಮದ ಹೆಸರಲ್ಲಿ ಕೊನೆಗೆ ಮದುವೆಯ ಮೂರು ಗಂಟು ಬೀಳುವಂತೆ ಮಾಡಿತ್ತು. ಆದ್ರೀಗ ಆ ಸಂಬಂಧ ಅಕ್ಷರಶಃ ಮೂರಾಬಟ್ಟೆಯಾಗಿದೆ. ಹಾಗಂತ, ಆ ಮಹಿಳೆ ಬೆಂಗಳೂರಿನ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ತನ್ನ ನೂತನ ಪತಿಯ ವಿರುದ್ಧ ಕೇಸು ದಾಖಲಿಸಿದ್ದಾಳೆ. ಅದ್ರ ಜೊತೆ ನಂಗೆ ನನ್ನ ಪತಿಯನ್ನ ಹುಡುಕಿ ಕೊಡಿ...

Post
ಹುನಗುಂದ ಗ್ರಾಮದಲ್ಲಿ ಸರಾಯಿ ನಿಷೇಧ, ಗ್ರಾಮಸ್ಥರ ತೀರ್ಮಾನ, ಸರಾಯಿ ಮಾರಿದ್ರೆ 50 ಸಾವಿರ ದಂಡ..!

ಹುನಗುಂದ ಗ್ರಾಮದಲ್ಲಿ ಸರಾಯಿ ನಿಷೇಧ, ಗ್ರಾಮಸ್ಥರ ತೀರ್ಮಾನ, ಸರಾಯಿ ಮಾರಿದ್ರೆ 50 ಸಾವಿರ ದಂಡ..!

ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದಲ್ಲಿ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ. ಗ್ರಾಮವನ್ನು ಸರಾಯಿ ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಲಾಗಿದ್ದು, ಗ್ರಾಮದಲ್ಲಿ ಸರಾಯಿ ನಿಷೇಧ ಮಾಡಲಾಗಿದೆ. ಈ ಮೂಲಕ ಅದೇಷ್ಟೋ ಬಡ ಮಹಿಳೆಯರ ಬಹುದಿನದ ಆಸೆ ನೆರವೇರಿದಂತಾಗಿದೆ. ಗ್ರಾಮದಲ್ಲಿ ಇಂದು ಸಭೆ ಸೇರಿದ್ದ ಗ್ರಾಮಸ್ಥರು, ಮುಖಂಡರು ಈ ಬಗ್ಗೆ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಇಂದಿನಿಂದ ಗ್ರಾಮದಲ್ಲಿ ಸರಾಯಿ ನಿಷೇಧಿಸಿ ಠರಾವು ಬರೆದಿದ್ದಾರೆ. ಒಂದುವೇಳೆ ಗ್ರಾಮದಲ್ಲಿ ಸರಾಯಿ ಮಾರಾಟ ಮಾಡಿದ್ರೆ 50 ಸಾವಿರ ದಂಡ ವಿಧಿಸುವ ನಿರ್ಣಯ ಕೈಗೊಂಡಿದ್ದಾರೆ.

Post
ವಡಗಟ್ಟಾ ಬಳಿ ಬೈಕ್ ಅಪಘಾತ: ಗಾಯಗೊಂಡಿದ್ದ ಅರಶಿಣಗೇರಿಯ ಉಮೇಶ್ ಲಮಾಣಿ ಸಾವು..!

ವಡಗಟ್ಟಾ ಬಳಿ ಬೈಕ್ ಅಪಘಾತ: ಗಾಯಗೊಂಡಿದ್ದ ಅರಶಿಣಗೇರಿಯ ಉಮೇಶ್ ಲಮಾಣಿ ಸಾವು..!

ಮುಂಡಗೋಡ: ತಾಲೂಕಿನ ವಡಗಟ್ಟಾ ಸಮೀಪದ ಬೀರವಳ್ಳಿ ಕ್ರಾಸ್ ಬಳಿ, ಏ.29 ರಂದು ನಡೆದಿದ್ದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅರಶಿಣಗೇರಿ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾನೆ. ಮುಂಡಗೋಡ ತಾಲೂಕಿನ ಅರಶಿಣಗೇರಿಯ ಉಮೇಶ್ ಶೇಖಪ್ಪಾ ಲಮಾಣಿ(55) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಕಳೆದ ಏ.29 ರಂದು ಬೀರವಳ್ಳಿ ಕ್ರಾಸ್ ಬಳಿ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮಹಿಳೆಯರೂ ಸೇರಿ ನಾಲ್ವರು ಗಂಭೀರ ಗಾಯಗೊಂಡಿದ್ದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು.

error: Content is protected !!