Home CONGRESS

Tag: CONGRESS

Post
ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಮತ್ತೊಮ್ಮೆ ರವಿಗೌಡ ಪಾಟೀಲರೇ ಕಿಂಗ್..!

ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಮತ್ತೊಮ್ಮೆ ರವಿಗೌಡ ಪಾಟೀಲರೇ ಕಿಂಗ್..!

Marketing Society: ಮುಂಡಗೋಡ ತಾಲೂಕಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಹಿರಿಯ ಮುಖಂಡ ರವಿಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಬಾಬುರಾವ್ ಲಾಡನವರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರವಿಗೌಡ್ರಿಗೆ “ಅನಾಯಾಸ” ಪಟ್ಟ..! ಅಸಲು, ಮುಂಡಗೋಡಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್ ಬೆಂಬಲಿತರು, ಬಿಜೆಪಿಯನ್ನು ಧೂಳಿಪಟ ಮಾಡಿದ್ದರು. ಹೀಗಾಗಿ, ಬಹುತೇಕ ಅಧ್ಯಕ್ಷರಾಗಿ ಹಿರಿಯ ದುರೀಣ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವಿಗೌಡ ಪಾಟೀಲರಿಗೆ ಅಧ್ಯಕ್ಷ ಪಟ್ಟ ಬಹುತೇಕ ಫಿಕ್ಸ್ ಆದಂತಾಗಿತ್ತು. ಅಲ್ದೆ,...

Post
ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಅಧ್ಯಕ್ಷರಾಗಿ ರವಿಗೌಡ ಪಾಟೀಲ್ ಅವಿರೋಧ ಆಯ್ಕೆ..? ಎರಡನೇ ಬಾರಿಗೆ ಪಟ್ಟಕ್ಕೇರ್ತಾರಾ ಗೌಡ್ರು..?

ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಅಧ್ಯಕ್ಷರಾಗಿ ರವಿಗೌಡ ಪಾಟೀಲ್ ಅವಿರೋಧ ಆಯ್ಕೆ..? ಎರಡನೇ ಬಾರಿಗೆ ಪಟ್ಟಕ್ಕೇರ್ತಾರಾ ಗೌಡ್ರು..?

Marketing Society: ಮುಂಡಗೋಡ ತಾಲೂಕಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಹಿರಿಯ ಮುಖಂಡ ರವಿಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಬಾಬಣ್ಣ ಲಾಡನವರ್ ಅವಿರೋಧವಾಗಿ ಆಯ್ಕೆಯಾಗೋದು ಬಹುತೇಕ ಖಚಿತವಾದಂತಾಗಿದೆ. ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ್, ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ನೇತೃತ್ವದಲ್ಲಿ ಸೇರಿದ್ದ ನೂತನ ಸದಸ್ಯರ ಸಭೆಯಲ್ಲಿ, ಅಧ್ಯಕ್ಷರನ್ನಾಗಿ ರವಿಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷರನ್ನಾಗಿ ಬಾಬಣ್ಣ ಲಾಡನವರ್ ರನ್ನು ಅವಿರೋಧವಾಗಿ ಆಯ್ಕೆ...

Post
ಉತ್ತರ ಕನ್ನಡ; ಗುಡ್ಡ ಕುಸಿತ, ಕಡಲುಕೊರೆತ ತಡೆಗೆ 800 ಕೋಟಿ ಅನುದಾನ- ಸಚಿವ ಕೃಷ್ಣ ಬೈರೇಗೌಡ

ಉತ್ತರ ಕನ್ನಡ; ಗುಡ್ಡ ಕುಸಿತ, ಕಡಲುಕೊರೆತ ತಡೆಗೆ 800 ಕೋಟಿ ಅನುದಾನ- ಸಚಿವ ಕೃಷ್ಣ ಬೈರೇಗೌಡ

Krishna Byre Gowda; ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಭೂಕುಸಿತ, ಕಡಲ ಕೊರೆತ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ₹800 ಕೋಟಿ ಅನುದಾನಕ್ಕೆ ಶೀಘ್ರವೇ ಅನುಮೋದನೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. ಅವರು ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಭೂ ಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕುಮಟಾದಲ್ಲಿ ಮಾತನಾಡಿದರು. ರಾಜ್ಯದ 6 ಜಿಲ್ಲೆಗಳಲ್ಲಿ ಭೂಕುಸಿತ ಸಮಸ್ಯೆ ತೀವ್ರವಾಗಿದ್ದು, ಈ ಭಾಗದಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿಗಾಗಿ 500...

Post
ಬಿಜೆಪಿಯಿಂದ ಉಚ್ಚಾಟನೆ ಮಾತು..! ಹೆಬ್ಬಾರ್ ಅಂಗಳದಲ್ಲಿ ಸಂಭ್ರಮವೋ ಸಂಭ್ರಮ..!!

ಬಿಜೆಪಿಯಿಂದ ಉಚ್ಚಾಟನೆ ಮಾತು..! ಹೆಬ್ಬಾರ್ ಅಂಗಳದಲ್ಲಿ ಸಂಭ್ರಮವೋ ಸಂಭ್ರಮ..!!

ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಅಕ್ಷರಶಃ ಸಂಭ್ರಮಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಇನ್ನೇನು ಬಿಜೆಪಿಯಿಂದ ಉಚ್ಚಾಟನೆಯೋ ಅಥವಾ ಇನ್ಯಾವುದೋ ಕಠಿಣ ಕ್ರಮದ ಮಾತು ಹೊರಬಿದ್ದ ಗಳಿಗೆಯಿಂದ ಹೆಬ್ಬಾರ್ ಪಡಸಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ‌. ಯಾಕಂದ್ರೆ, ಇಲ್ಲಿ ರೋಗಿ ಬಯಸಿದ್ದು, ಡಾಕ್ಟರ್ ಹೇಳಿದ್ದು, ಎರಡೂ ಒಂದೇಯಾಗುವ ಸಮಯ ಬಹುತೇಕ ಹತ್ತಿರವಾಗಿದೆ ಅಂತಲೇ ಹೆಬ್ಬಾರ್ ಬಳಗದಲ್ಲಿ ಚರ್ಚೆಯಾಗ್ತಿದೆ. STS ಹಾಗೂ ಹೆಬ್ಬಾರ್ ಮೇಲೆ ಕ್ರಮ..! ಅಸಲು, ವಿಜಯಪುರ ಶಾಸಕ, ಬಿಜೆಪಿಯ ಫೈಯರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ...

Post
ರಾಜೀನಾಮೆ ಕೊಡಿ ಅಂದವ್ರಿಗೆ ಹೆಬ್ಬಾರ್ ಬೆಂಬಲಿಗರ ಖಡಕ್ ಉತ್ತರ..! ಅಷ್ಟಕ್ಕೂ ಈ ನೈತಿಕತೆ ಅದ್ಯಾರ ಸ್ವತ್ತು..?

ರಾಜೀನಾಮೆ ಕೊಡಿ ಅಂದವ್ರಿಗೆ ಹೆಬ್ಬಾರ್ ಬೆಂಬಲಿಗರ ಖಡಕ್ ಉತ್ತರ..! ಅಷ್ಟಕ್ಕೂ ಈ ನೈತಿಕತೆ ಅದ್ಯಾರ ಸ್ವತ್ತು..?

ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಮೇಲಾಟಗಳು, ಒದರಾಟಗಳ ಪರ್ವ ಶುರುವಾಗಿದೆ. ರೆಬೆಲ್ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ಮುಗಿಬಿದ್ದಿರೋ ಬಿಜೆಪಿ ಪಾಳಯ, ರಾಜೀನಾಮೆ ಬೀಸಾಕುವಂತೆ ಕಂಡ ಕಂಡಲ್ಲಿ ಕಹಳೆ ಮೊಳಗಿಸಿದೆ. ಮೊನ್ನೆ ಜೂನ್ 11 ರಂದು ಮುಂಡಗೋಡಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಬಿಜೆಪಿ ಮುಂಡಗೋಡ ಮಂಡಳಕ್ಕೆ ಗುರುವಾರ, ಹೆಬ್ಬಾರ್ ಬೆಂಬಲಿಗರು ಠಕ್ಕರ್ ಕೊಟ್ಟಿದ್ದಾರೆ. ಪತ್ರಿಕಾಗೋಷ್ಟಿಯ ಮೂಲಕವೇ ಪ್ರತ್ಯುತ್ತರ ನೀಡಿದ್ದಾರೆ. ನೈತಿಕತೆಯ ಪಾಠ ಮಾಡಿದ್ದಾರೆ. ಬಿಜೆಪಿ, ಪತ್ರಿಕಾಗೋಷ್ಠಿ ಮತ್ತು ಎಚ್ಚರಿಕೆ..! ಅಂದಹಾಗೆ, ಜೂನ್...

Post
ಸಾಮಾಜಿಕ ಜಾಲತಾಣದಲ್ಲಿ ಮರಾಠ ಜಾತಿಗೆ ನಿಂದನೆ: ಬಿಜೆಪಿಗನ ವಿರುದ್ಧ ಕಾಂಗ್ರೆಸ್ ನಿಂದ ದೂರು..!

ಸಾಮಾಜಿಕ ಜಾಲತಾಣದಲ್ಲಿ ಮರಾಠ ಜಾತಿಗೆ ನಿಂದನೆ: ಬಿಜೆಪಿಗನ ವಿರುದ್ಧ ಕಾಂಗ್ರೆಸ್ ನಿಂದ ದೂರು..!

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಮರಾಠ ಜಾತಿ ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದ್ದ ಬಿಜೆಪಿ ಕಾರ್ಯಕರ್ತನ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಮ್ಮ ಅಭ್ಯರ್ಥಿಯನ್ನ ಬೆಂಬಲಿಸಿ ವಿಡಿಯೋವೊಂದನ್ನು ಫೇಸ್‌ಬುಕ್‌ ನಲ್ಲಿ ಕಾಂಗ್ರೆಸ್ ಸಾಮಾಜಿಕ ತಾಣಗಳ ವಿಭಾಗದ ಸೂರಜ್ ನಾಯ್ಕ ಅವರು ಹಂಚಿಕೊಂಡಿದ್ದರು. ಅದಕ್ಕೆ ಬಿಜೆಪಿ ಕಾರ್ಯಕರ್ತನೆನ್ನಲಾದ ಕುಮಟಾದ ಶ್ರೀಕಾಂತ್ ಹೆಗಡೆ ಅಂತ್ರವಳ್ಳಿ ಎಂಬಾತ ತನ್ನ ಫೇಸ್‌ಬುಕ್ ಖಾತೆಯಿಂದ ನಿಂದನಾತ್ಮಕವಾಗಿ ಕಮೆಂಟ್ ಮಾಡಿದ್ದ. ಈ ಬಗ್ಗೆ ಗಮನಿಸಿದ...

Post
ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಗೆ ವಿರೋಧ, ಜಿಲ್ಲಾ ಅಲ್ಪಸಂಖ್ಯಾತ ಮುಖಂಡರು ಕಾಂಗ್ರೆಸ್ ಸೇರ್ಪಡೆ- ಮುನಾಫ್ ಮಿರ್ಜಾನಕರ್

ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಗೆ ವಿರೋಧ, ಜಿಲ್ಲಾ ಅಲ್ಪಸಂಖ್ಯಾತ ಮುಖಂಡರು ಕಾಂಗ್ರೆಸ್ ಸೇರ್ಪಡೆ- ಮುನಾಫ್ ಮಿರ್ಜಾನಕರ್

 ಮುಂಡಗೋಡ: ಬಿಜೆಪಿಯೊಂದಿಗೆ ಮೈತ್ರಿ ಹಿನ್ನೆಲೆಯಲ್ಲಿ JDS ವಿರುದ್ಧ ಉತ್ತರ ಕನ್ನಡದ ಬಹುತೇಕ ಅಲ್ಪಸಂಖ್ಯಾತ ಮುಖಂಡರು ಆಕ್ರೋಶಗೊಂಡಿದ್ದಾರೆ. ಜಾತ್ಯಾತೀತ ಜನತಾದಳದಲ್ಲಿದ್ದ ಹಲವು ಮುಖಂಡರು ಹೆಚ್ ಡಿಕೆ ವಿರುದ್ಧ ತಿರುಗಿ ಬಿದ್ದಿದ್ದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಮುಂಡಗೋಡಿನಲ್ಲಿ ಪಬ್ಲಿಕ್ ಫಸ್ಟ್ ನೊಂದಿಗೆ ಮಾತನಾಡಿದ ಜೆಡಿಎಸ್ ಮುಖಂಡ ಮುನಾಫ್ ಮಿರ್ಜಾನಕರ್, ಕುಮಾರಸ್ವಾಮಿಯವರ ಜೊತೆ ನಾವೇಲ್ಲ ನಿಕಟ ಸಂಪರ್ಕ ಹೊಂದಿದ್ದೇವು, ಅಲ್ಪಸಂಖ್ಯಾತರು ಜೆಡಿಎಸ್ ಜೊತೆ ಪಕ್ಷಕ್ಕಾಗಿ ದುಡಿದಿದ್ದೇವು. ಆದ್ರೆ, ನಮಗೆ ಹೇಳದೇ ಕೇಳದೇ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ನಮಗೆ ಬೇಸರ ತರಿಸಿದೆ....

Post
ಗೆದ್ದುಬಂದು ಜಿಲ್ಲೆಗೆ ಚಿಕಿತ್ಸೆ ನೀಡಬೇಕು: ಕೈ ಅಭ್ಯರ್ಥಿ ಡಾ.ಅಂಜಲಿಗೆ ರಾಘವೇಶ್ವರ ಶ್ರೀ ಆಶೀರ್ವಾದ

ಗೆದ್ದುಬಂದು ಜಿಲ್ಲೆಗೆ ಚಿಕಿತ್ಸೆ ನೀಡಬೇಕು: ಕೈ ಅಭ್ಯರ್ಥಿ ಡಾ.ಅಂಜಲಿಗೆ ರಾಘವೇಶ್ವರ ಶ್ರೀ ಆಶೀರ್ವಾದ

ಗೋಕರ್ಣ: ‘ಆರಿಸಿ ಬಂದು ಜಿಲ್ಲೆಗೆ ಚಿಕಿತ್ಸೆ ನೀಡಬೇಕು’ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಆಶೀರ್ವಾದ ನೀಡಿದರು. ಗೋಕರ್ಣದ ಅಶೋಕೆಯಲ್ಲಿ ಡಾ.ಅಂಜಲಿ ಅವರು ರಾಘವೇಶ್ವರ ಶ್ರೀಗಳನ್ನ ಭೇಟಿಯಾದರು. ಈ ವೇಳೆ ಫಲಪುಷ್ಪ ನೀಡಿ ಗುರು ಗೌರವ ಸಲ್ಲಿಸಿದರು. ಶ್ರೀಗಳು ಕೆಲ ಹೊತ್ತು ಚುನಾವಣೆ ಹಾಗೂ ಜಿಲ್ಲೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು‌. ಕೊನೆಯಲ್ಲಿ ಡಾ.ಅಂಜಲಿ ಅವರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದ ಅವರು, ‘ಮನಃಪೂರ್ವಕವಾಗಿ ಆಶೀರ್ವದಿಸುವೆ....

Post
ಇವತ್ತೇ ಬಿಜೆಪಿಗೆ ಗುಡ್ ಬೈ ಹೇಳ್ತಾರಾ ಶಾಸಕ ಶಿವರಾಮ್ ಹೆಬ್ಬಾರ್..? ಶಾಸಕರ ಚಾಣಾಕ್ಷ ನಡೆ ಇನ್ನೂ ನಿಗೂಢ..!

ಇವತ್ತೇ ಬಿಜೆಪಿಗೆ ಗುಡ್ ಬೈ ಹೇಳ್ತಾರಾ ಶಾಸಕ ಶಿವರಾಮ್ ಹೆಬ್ಬಾರ್..? ಶಾಸಕರ ಚಾಣಾಕ್ಷ ನಡೆ ಇನ್ನೂ ನಿಗೂಢ..!

ಇದು ಯಲ್ಲಾಪುರ ಕ್ಷೇತ್ರದ ಮಟ್ಟಿಗೆ ಬಿಗ್ ಬ್ರೇಕಿಂಗ್ ಸುದ್ದಿ.. ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಇಂದು ಸಂಜೆಯೇ ಬಿಜೆಪಿಗೆ ಗುಡ್ ಬೈ ಹೇಳ್ತಾರಾ..? ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದಾರೆ..? ಅನ್ನೋ ಅನುಮಾನಗಳು ಶುರುವಾಗಿವೆ. ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಕರ್ ಹಾಗೂ ಶಿವರಾಮ್ ಹೆಬ್ಬಾರ್ ಇಂದು ಸಂಜೆಯೇ ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಬೀಸಾಕಿ, ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಅನ್ನೋ ಮಾಹಿತಿಗಳು ಲಭ್ಯವಾಗ್ತಿವೆ. ಇನ್ನು, ಇವತ್ತು ನಡೆಯುತ್ತಿರೋ ರಾಜ್ಯಸಭಾ ಚುನಾವಣೆಯಲ್ಲಿ...

Post
ಜಗದೀಶ್ ಶೆಟ್ಟರ್ ಸೇರಿ‌ ಮೂವರಿಗೆ ಪರಿಷತ್ ಟಿಕೆಟ್, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ..!

ಜಗದೀಶ್ ಶೆಟ್ಟರ್ ಸೇರಿ‌ ಮೂವರಿಗೆ ಪರಿಷತ್ ಟಿಕೆಟ್, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ..!

ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಎನ್.ಎಸ್. ಬೋಸರಾಜ್ ಹಾಗೂ ತಿಪ್ಪಣ್ಣಪ್ಪ ಕಮಕನೂರ್ ಸೇರಿ ಮೂವರನ್ನು ಕಣಕ್ಕಿಳಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾಜು೯ನ ಖಗೆ೯ ಅವರು ಅಭ್ಯಥಿ೯ಗಳ ಆಯ್ಕೆ ಮಾಡಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ. ತಿಂಗಳಾಂತ್ಯದಲ್ಲಿ ನಡೆಯಲಿರುವ ಮೇಲ್ಮನೆ ಸದಸ್ಯತನಕ್ಕಾಗಿ ಚುನಾವಣೆ ನಡೆಯಲಿದ್ದು, ಶಾಸಕರಿಂದ ಮತದಾನ ನಡೆಯಲಿದೆ, ಹೀಗಾಗಿ ಬಹುತೇಕ ಕಾಂಗ್ರೆಸ್ ಅಭ್ಯಥಿ೯ಗಳಿಗೆ ಸುಲಭದ ಜಯ ಸಿಗುವ ಸಾಧ್ಯತೆ ಇದೆ.

error: Content is protected !!