Home ಉರಿಮಂಡಲ

Tag: ಉರಿಮಂಡಲ

Post
ನಂದಿಕಟ್ಟಾ ಗ್ರಾಮದಲ್ಲಿ ಬಾಲಕನಿಗೆ ಕಚ್ಚಿದ ಉರಿಮಂಡಲ ಹಾವು, ಕಿಮ್ಸ್ ಗೆ ದಾಖಲು..!

ನಂದಿಕಟ್ಟಾ ಗ್ರಾಮದಲ್ಲಿ ಬಾಲಕನಿಗೆ ಕಚ್ಚಿದ ಉರಿಮಂಡಲ ಹಾವು, ಕಿಮ್ಸ್ ಗೆ ದಾಖಲು..!

ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ 16 ವರ್ಷದ ಬಾಲಕನಿಗೆ ಉರಿಮಂಡಲ ಹಾವು ಕಚ್ಚಿದೆ. ಪರಿಣಾಮ ಗಾಯಗೊಂಡ ಬಾಲಕನಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ‌. ನಂದಿಕಟ್ಟಾ ಗ್ರಾಮದಲ್ಲಿ ಸಂಜೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ, ಕಟ್ಟಿಗೆ ಮೇಲೆ ಕಾಲಿಟ್ಟ ಬಾಲಕ ನಂದನ್ ರವಿ ತೇರಗಾಂವ್(16) ಎಂಬುವವನಿಗೆ ಕಟ್ಟಿಗೆಯಡಿ ಇದ್ದ ಹಾವು ಕಾಲಿಗೆ ಕಚ್ಚಿದೆ‌. ತಕ್ಷಣವೇ ಬಾಲಕನನ್ನು ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ‌. ಅಲ್ಲಿಂದ ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಬಾಲಕನ ಆರೋಗ್ಯ ಸ್ಥಿರವಾಗಿದೆ ಅಂತಾ ಕುಟುಂಬದ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ....