Home ರಾಜಕೀಯ

Tag: ರಾಜಕೀಯ

Post
ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಮತ್ತೊಮ್ಮೆ ರವಿಗೌಡ ಪಾಟೀಲರೇ ಕಿಂಗ್..!

ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಮತ್ತೊಮ್ಮೆ ರವಿಗೌಡ ಪಾಟೀಲರೇ ಕಿಂಗ್..!

Marketing Society: ಮುಂಡಗೋಡ ತಾಲೂಕಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಹಿರಿಯ ಮುಖಂಡ ರವಿಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಬಾಬುರಾವ್ ಲಾಡನವರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರವಿಗೌಡ್ರಿಗೆ “ಅನಾಯಾಸ” ಪಟ್ಟ..! ಅಸಲು, ಮುಂಡಗೋಡಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್ ಬೆಂಬಲಿತರು, ಬಿಜೆಪಿಯನ್ನು ಧೂಳಿಪಟ ಮಾಡಿದ್ದರು. ಹೀಗಾಗಿ, ಬಹುತೇಕ ಅಧ್ಯಕ್ಷರಾಗಿ ಹಿರಿಯ ದುರೀಣ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವಿಗೌಡ ಪಾಟೀಲರಿಗೆ ಅಧ್ಯಕ್ಷ ಪಟ್ಟ ಬಹುತೇಕ ಫಿಕ್ಸ್ ಆದಂತಾಗಿತ್ತು. ಅಲ್ದೆ,...

Post
ವಿಧಾನಸಭೆ ಚುನಾವಣೆಗೆ ಇವತ್ತೇ ಮುಹೂರ್ತ ಫಿಕ್ಸ್: ಇವತ್ತಿನಿಂದಲೇ ನೀತಿ ಸಂಹಿತೆ ಜಾರಿ..!

ವಿಧಾನಸಭೆ ಚುನಾವಣೆಗೆ ಇವತ್ತೇ ಮುಹೂರ್ತ ಫಿಕ್ಸ್: ಇವತ್ತಿನಿಂದಲೇ ನೀತಿ ಸಂಹಿತೆ ಜಾರಿ..!

ಇಂದೇ ವಿಧಾನಸಭೆ ಚುನಾವಣೆಗೆ ಮುಹೂರ್ತ ಪಿಕ್ಸ್ ಆಗಲಿದೆ. ಇಂದು ಬೆಳಿಗ್ಗೆ 11.30 ಕ್ಕೆ ಕೇಂದ್ರ ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಿ ಚುನಾವಣೆ ದಿನಾಂಕ ಘೋಷಣೆ‌ ಮಾಡುವ ಸಾಧ್ಯತೆ ಇದೆ. ಬೆಳಿಗ್ಗೆ 11.30 ಕ್ಕೆ ದೆಹಲಿಯ ವಿಜ್ಞಾನ ಭವನದಲ್ಲಿ ಚುನಾವಣಾ ಆಯೋಗ ಸುದ್ದಿಗೋಷ್ಠಿ ಕರೆದಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಚುನಾವಣೆ ದಿನಾಂಕ ಘೋಷಣೆ ಮಾಡಲಿದ್ದಾರೆ. ಹೀಗಾಗಿ, ಇಂದಿನಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಎಲ್ಲಾ ಸಾಧ್ಯತೆ ಇದೆ.

Post
ಯಲ್ಲಾಪುರ ಕ್ಷೇತ್ರದ ಕೇಸರಿ ಪಡೆಯಲ್ಲಿ ಇದೇನಿದು “ಆಲೆಮನೆ” ಮೀಟಿಂಗು..? ಅಷ್ಟಕ್ಕೂ, ಬಂಡೇದ್ದ ಬಳಗದ ಲೀಡರ್ ಯಾರು..?

ಯಲ್ಲಾಪುರ ಕ್ಷೇತ್ರದ ಕೇಸರಿ ಪಡೆಯಲ್ಲಿ ಇದೇನಿದು “ಆಲೆಮನೆ” ಮೀಟಿಂಗು..? ಅಷ್ಟಕ್ಕೂ, ಬಂಡೇದ್ದ ಬಳಗದ ಲೀಡರ್ ಯಾರು..?

ಯಲ್ಲಾಪುರ ಬಿಜೆಪಿಗೆ ಅದೇನಾಗಿದೆಯೋ ಗೊತ್ತಿಲ್ಲ. ಪಂಚರಾಜ್ಯಗಳ ಚುನಾವಣೆಲಿ ಅಭೂತಪೂರ್ವ ಯಶಸ್ಸು ಪಡೆದ ಸಂಭ್ರಮದ‌ ಮದ್ಯೆಯೂ, ಒಳಗೊಳಗೇ ಯಾರೂ ನಿರೀಕ್ಷಿಸದ ಲೋಕಲ್ ಬೆಳವಣಿಗೆಗಳು ನಡೆಯುತ್ತಿವೆ. ಸದ್ಯದ ಪರಿಸ್ಥಿತಿಗಳು ಹಾಗೂ ಒಳಗೊಳಗಿನ ಚಟುವಟಿಕೆಗಳು ಬಲಿಷ್ಟವಾಗುತ್ತ ಹೋದರೆ ಇನ್ನೇನು ಚುನಾವಣೆ ಹೊತ್ತಿಗೇಲ್ಲ ಭರ್ಜರಿ ಬದಲಾವಣೆಗಳು ಆಗಲಿವೆ ಅನ್ನೋದು ಅದೇ ಪಕ್ಷದ ದೊಡ್ಡ ಮಂದಿಯೇ ಹೇಳುತ್ತಿರೋ ಬಹುದೊಡ್ಡ ಮಾತುಗಳು. ಆ ಆರು ತಿಂಗಳು..! ನಿಜ ಕಳೆದ ಆರು ತಿಂಗಳಿಂದ ಯಲ್ಲಾಪುರ, ಮುಂಡಗೋಡ ಬಿಜೆಪಿಯಲ್ಲಿ ಅದೊಂದು ಬಣ ಇನ್ನಿಲ್ಲದಂತೆ ಆ್ಯಕ್ಟಿವ್ ಆಗಿದೆಯಂತೆ. ಮೇಲಿಂದ‌ ಮೇಲೆ...

Post
ಉತ್ತರ ಕನ್ನಡಕ್ಕೆ ನೂತನ ಉಸ್ತುವಾರಿ ಸಚಿವರ ನೇಮಕ, ಹೆಬ್ಬಾರ್ ಸಾಹೇಬ್ರಿಗೆ ಹಾವೇರಿ ಹೊಣೆ..!!

ಉತ್ತರ ಕನ್ನಡಕ್ಕೆ ನೂತನ ಉಸ್ತುವಾರಿ ಸಚಿವರ ನೇಮಕ, ಹೆಬ್ಬಾರ್ ಸಾಹೇಬ್ರಿಗೆ ಹಾವೇರಿ ಹೊಣೆ..!!

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರ ಬದಲಾವಣೆಯಾಗಿದೆ. ಈ ಮೊದಲು ಉಸ್ತುವಾರಿಯಾಗಿದ್ದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಗೆ ಕೋಕ್ ನೀಡಿ, ಕೋಟಾ ಶ್ರೀನಿವಾಸ್ ಪೂಜಾರಿಯವರನ್ನ ಉತ್ತರ ಕನ್ನಡಕ್ಕೆ ಉಸ್ತುವಾರಿ ಸಚಿವರನ್ನಾಗಿಸಿದ್ದಾರೆ. ಹಾಗೇ, ಶಿವರಾಮ್ ಹೆಬ್ಬಾರ್ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿದ್ದಾರೆ.

error: Content is protected !!