Home ಮುಂಡಗೋಡ ಸುದ್ದಿ

Tag: ಮುಂಡಗೋಡ ಸುದ್ದಿ

Post
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!

ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!

 Car Accident; ಮುಂಡಗೋಡ ಹೊರವಲಯದ ಕಲಘಟಗಿ ರಸ್ತೆಯ ಖಬರಸ್ಥಾನ ಬಳಿ ಭಯಾನಕ ಕಾರ್ ಅಪಘಾತವಾಗಿದೆ. ಪವಾಡಸದೃಷ ರೀತಿಯಲ್ಲಿ ಕಾರ್ ಚಾಲಕ ಬಚಾವ್ ಆಗಿದ್ದಾನೆ. ಕಲಘಟಗಿ ಕಡೆಯಿಂದ ಬರುತ್ತಿದ್ದ ಬ್ರಿಜಾ ಕಾರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಲ್ಟಿಯಾಗಿದೆ. ಏನಿಲ್ಲವೆಂದರೂ 30 ಮೀಟರ್ ದೂರದವರೆಗೂ ರಸ್ತೆ ಬದಿಯಲ್ಲಿ ಪಲ್ಟಿ ಹೊಡೆಯುತ್ತಾ ಹೋಗಿರೋ ಕಾರ್ ತೋಟದ ಬೇಲಿಯ ಬಳಿ ಪಲ್ಟಿ ಹೊಡೆದು ನಿಂತಿದೆ. ಇನ್ನು ಚಾಲಕ ಮುಂಡಗೋಡಿನ ಸಂದೇಶ ಕೋಕರೆ ಎಂಬುವನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ...

Post
ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಮತ್ತೊಮ್ಮೆ ರವಿಗೌಡ ಪಾಟೀಲರೇ ಕಿಂಗ್..!

ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಮತ್ತೊಮ್ಮೆ ರವಿಗೌಡ ಪಾಟೀಲರೇ ಕಿಂಗ್..!

Marketing Society: ಮುಂಡಗೋಡ ತಾಲೂಕಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಹಿರಿಯ ಮುಖಂಡ ರವಿಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಬಾಬುರಾವ್ ಲಾಡನವರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರವಿಗೌಡ್ರಿಗೆ “ಅನಾಯಾಸ” ಪಟ್ಟ..! ಅಸಲು, ಮುಂಡಗೋಡಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್ ಬೆಂಬಲಿತರು, ಬಿಜೆಪಿಯನ್ನು ಧೂಳಿಪಟ ಮಾಡಿದ್ದರು. ಹೀಗಾಗಿ, ಬಹುತೇಕ ಅಧ್ಯಕ್ಷರಾಗಿ ಹಿರಿಯ ದುರೀಣ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವಿಗೌಡ ಪಾಟೀಲರಿಗೆ ಅಧ್ಯಕ್ಷ ಪಟ್ಟ ಬಹುತೇಕ ಫಿಕ್ಸ್ ಆದಂತಾಗಿತ್ತು. ಅಲ್ದೆ,...

Post
ಮುಂಡಗೋಡಿಗೆ ಮತ್ತೊಮ್ಮೆ PSI ಆಗಿ ಯಲ್ಲಾಲಿಂಗ್ ಕುನ್ನೂರು, ಮಹಾಂತೇಶ್ ವಾಲ್ಮೀಕಿ ವರ್ಗಾವಣೆ ಕ್ಯಾನ್ಸಲ್..!

ಮುಂಡಗೋಡಿಗೆ ಮತ್ತೊಮ್ಮೆ PSI ಆಗಿ ಯಲ್ಲಾಲಿಂಗ್ ಕುನ್ನೂರು, ಮಹಾಂತೇಶ್ ವಾಲ್ಮೀಕಿ ವರ್ಗಾವಣೆ ಕ್ಯಾನ್ಸಲ್..!

Police Transfer News; ಮುಂಡಗೋಡಿಗೆ PSI ಆಗಿ ವರ್ಗಾವಣೆಗೊಂಡಿದ್ದ ಮಹಾಂತೇಶ್ ವಾಲ್ಮೀಕಿಯವರ ವರ್ಗಾವಣೆ ಆದೇಶ ಕೊನೆಗೂ ರದ್ದಾಗಿದೆ. ಈಗ ಹೊಸ ಆದೇಶದ ಪ್ರಕಾರ ಯಲ್ಲಾಲಿಂಗ್ ಕುನ್ನೂರ್ ಮುಂಡಗೋಡಿಗೆ ಮತ್ತೊಮ್ಮೆ PSI ಆಗಿ ಬರಲಿದ್ದಾರೆ. ಸೋಮವಾರವಷ್ಟೇ ಮುಂಡಗೋಡಿಗೆ ನೂತನ PSI ಆಗಿ ಮಹಾಂತೇಶ್ ವಾಲ್ಮೀಕಿ ಎಂಬುವವರು, ಚಿತ್ತಾಕುಲ ಪೊಲೀಸ್ ಠಾಣೆಯಿಂದ ವರ್ಗವಾಗಿದ್ದ ಆದೇಶ ಹೊರಬಿದ್ದಿತ್ತು. ಆದ್ರೆ, ಅದಾದ ಎರಡೇ ದಿನದಲ್ಲಿ ಮತ್ತೆ ಆದೇಶ ಬದಲಾಗಿದೆ. ಇದೀಗ ಈ ಮೊದಲು ಇಲ್ಲೇ ಕೆಲಸ ಮಾಡಿ ಹೋಗಿದ್ದ ಯಲ್ಲಾಲಿಂಗ ಕುನ್ನೂರು ಮತ್ತೊಮ್ಮೆ...

Post
ಲೊಯೋಲಾ ಪ್ರೌಢಶಾಲೆಯ ಶಿಕ್ಷಕ ವಿನಾಯಕ್ ಶೇಟ್ ನಾಪತ್ತೆ, ಹುಡುಕಿ ಕೊಡುವಂತೆ ಪತ್ನಿಯಿಂದ ಮುಂಡಗೋಡ ಠಾಣೆಯಲ್ಲಿ ದೂರು..!

ಲೊಯೋಲಾ ಪ್ರೌಢಶಾಲೆಯ ಶಿಕ್ಷಕ ವಿನಾಯಕ್ ಶೇಟ್ ನಾಪತ್ತೆ, ಹುಡುಕಿ ಕೊಡುವಂತೆ ಪತ್ನಿಯಿಂದ ಮುಂಡಗೋಡ ಠಾಣೆಯಲ್ಲಿ ದೂರು..!

Teacher Missing; ಮುಂಡಗೋಡಿನ ಪ್ರತಿಷ್ಟಿತ ಲೊಯೋಲಾ ವಿದ್ಯಾ ಸಂಸ್ಥೆಯ ಪ್ರೌಢಶಾಲೆಯ ಪ್ರತಿಭಾನ್ವಿತ ಹಿಂದಿ ಶಿಕ್ಷಕ ವಿನಾಯಕ ಶೇಟ್ ನಿನ್ನೆಯಿಂದ ಕಾಣೆಯಾಗಿದ್ದಾರೆ ಅಂತಾ ಅವರ ಪತ್ನಿ ಪದ್ಮಶ್ರೀ ವಿನಾಯಕ್ ಶೇಟ್ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಿನಾಂಕ 12.08.2025 ರಂದು ಅಂದ್ರೆ ಮಂಗಳವಾರ ಸಾಯಂಕಾಲ 5 ಗಂಟೆಯಿಂದ ರಾತ್ರಿ 8 ಗಂಟೆಯ ನಡುವಿನ ಅವಧಿಯಲ್ಲಿ, “ನಾನು ಸ್ವಲ್ಪ ಹೊರಗಡೆ ಹೋಗಿ ಬರ್ತಿನಿ” ಅಂತಾ ಹೇಳಿ ಮನೆಯಿಂದ ಹೋದವರು, ಮರಳಿ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಪರಿಚಯಸ್ಥರು...

Post
ಮುಂಡಗೋಡ ಪೊಲೀಸರ ಭರ್ಜರಿ ದಾಳಿ, ಪಾಳಾ ಕ್ರಾಸ್ ಬಳಿ ಗಾಂಜಾ ಸಾಗಿಸ್ತಿದ್ದ ಹಾನಗಲ್ಲಿ‌ನ ಇಬ್ಬರ ಬಂಧನ..!

ಮುಂಡಗೋಡ ಪೊಲೀಸರ ಭರ್ಜರಿ ದಾಳಿ, ಪಾಳಾ ಕ್ರಾಸ್ ಬಳಿ ಗಾಂಜಾ ಸಾಗಿಸ್ತಿದ್ದ ಹಾನಗಲ್ಲಿ‌ನ ಇಬ್ಬರ ಬಂಧನ..!

Mundgod Police Raid; ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬೈಕಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮಾಲು ಸಮೇತ, ಬೈಕಿನೊಂದಿಗೆ ಬಂಧಿಸಿದ್ದಾರೆ. ಈ ಕೇಸಲ್ಲಿ ಇನ್ನುಳಿದಂತೆ ಪ್ರಮುಖ ಡ್ರಗ್ ಪೆಡ್ಲರ್ ಗಾಗಿ ಬಲೆ ಬೀಸಿದ್ದಾರೆ‌. ಅಂದಹಾಗೆ, ಮುಂಡಗೋಡ ತಾಲೂಕಿನ ಪಾಳಾ ಕ್ರಾಸ್ ಹತ್ತಿರ ಆರೋಪಿಗಳಾದ ಹಾವೇರಿ ಜಿಲ್ಲೆಯ ಹಾನಗಲ್ಲಿನ ಮುಜಾಫರ್ ಅಹ್ಮದ್ ಮಕ್ಖೂಲ್ ಅಹ್ಮದ್ ಬ್ಯಾಡಗಿ (28) ಹಾಗೂ ಪ್ರಶಾಂತ ಮಾರ್ತಾಂಡಪ್ಪ ಅಕ್ಕಿವಳಿ(20) ಎಂಬುವವರನ್ನು ಬಂಧಿಸಲಾಗಿದೆ. ಆತ ಚೋರ್ ಇಮ್ರಾನ್.! ಅಸಲು, ಹಾನಗಲ್ ನಿಂದ...

Post
ಜಿ.ಪಂ ಸಿಇಒ ದಿಲೀಷ್ ರಿಂದ ಮುಂಡಗೋಡ ಹಾಗೂ ಶಿರಸಿ ತಾಲೂಕಿನ ಜೆಜೆಎಮ್ ಕಾಮಗಾರಿ ಪರಿಶೀಲನೆ..!

ಜಿ.ಪಂ ಸಿಇಒ ದಿಲೀಷ್ ರಿಂದ ಮುಂಡಗೋಡ ಹಾಗೂ ಶಿರಸಿ ತಾಲೂಕಿನ ಜೆಜೆಎಮ್ ಕಾಮಗಾರಿ ಪರಿಶೀಲನೆ..!

ZP CEO VISIT; ಮುಂಡಗೋಡ/ಶಿರಸಿ; ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಮುಂಡಗೋಡ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ಅನುಷ್ಠಾನಗೊಳಿಸಲಾದ ಜೆಜೆಎಮ್ ಕಾಮಗಾರಿ ಸ್ಥಳಗಳಿಗೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದಿಲೀಷ್ ಶಶಿ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಮಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಧರ್ಮಾ ಜಲಾಶಯದಲ್ಲಿ ಬಹು ಗ್ರಾಮ ಕುಡಿಯುವ ನೀರು ಯೋಜನೆಯನ್ನು ಪರಿಶೀಲಿಸಿದರು. ಬಳಿಕ ಕಾತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಲಳ್ಳಿ, ಚವಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ...

Post
ಕಾತೂರು| ಓರಲಗಿ ಗದ್ದೆಯ ಪೈಪಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರಹಾವಿನ ರಕ್ಷಣೆ..!

ಕಾತೂರು| ಓರಲಗಿ ಗದ್ದೆಯ ಪೈಪಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರಹಾವಿನ ರಕ್ಷಣೆ..!

 Cobra Trapped In Pipe Rescued; ಮುಂಡಗೋಡ ತಾಲೂಕಿನ ಕಾತುರ ಅರಣ್ಯ ವಲಯದಲ್ಲಿ ಪೈಪಿನಲ್ಲಿ ಸಿಲುಕಿ ಸಾಚು ಬದುಕಿನ ನಡುವೆ ಹೋರಾಡುತ್ತಿದ್ದ, ನಾಗರಹಾವನ್ನು ರಕ್ಷಣೆ ಮಾಡಲಾಗಿದೆ. ಓರಲಗಿ ಗಸ್ತಿನ ಮಾಲತೇಶ ಗೊಂದಿ ಅವರ ಗದ್ದೆದಲ್ಲಿ ಪೈಪ್ ನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತಿದ್ದ ನಾಗರಹಾವನ್ನು ಮುತ್ತುರಾಜ ಹಳ್ಳಿ, ಹುಡೇಲಕೊಪ್ಪ ಗಸ್ತು ವನಪಾಲಕರು ಹಾವನ್ನು ಪೈಪ್ ನಿಂದ ಹೊರ ತೆಗೆದು, ಗಾಯಕ್ಕೆ ನ್ಯಾಚುರಲ್ (Anti Septic) ಆದ ಅರಶಿಣ ಹಚ್ಚಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಕಾರ್ಯಾಚರಣೆಯಲ್ಲಿ ಮಳಗಿ ಗಸ್ತು ವನಪಾಲಕ...

Post
ಮುಂಡಗೋಡ ತಾಲೂಕಾಸ್ಪತ್ರೆ ಆವರಣದಲ್ಲೇ ಆರೋಗ್ಯ ಅಧಿಕಾರಿಗಳ ದಿಢೀರ್ ದಾಳಿ..! ಕ್ಯಾಂಟೀನ್, ಜನೌಷಧಿ ಕೇಂದ್ರದಲ್ಲಿ ಏನದು ಸಮಸ್ಯೆ..?

ಮುಂಡಗೋಡ ತಾಲೂಕಾಸ್ಪತ್ರೆ ಆವರಣದಲ್ಲೇ ಆರೋಗ್ಯ ಅಧಿಕಾರಿಗಳ ದಿಢೀರ್ ದಾಳಿ..! ಕ್ಯಾಂಟೀನ್, ಜನೌಷಧಿ ಕೇಂದ್ರದಲ್ಲಿ ಏನದು ಸಮಸ್ಯೆ..?

Doctor Raid; ಮುಂಡಗೋಡ ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಮತ್ತವರ ಟೀಂ “ಏಕದಂ” ಕಾರ್ಯಾಚರಣೆ ನಡೆಸಿದ್ದಾರೆ. ಆಸ್ಪತ್ರೆಯ ಆವರಣದಲ್ಲಿರೋ ಕ್ಯಾಂಟೀನ್ ಹಾಗೂ ಜನೌಷಧಿ ಕೇಂದ್ರದ ಮೇಲೆ ದಾಳಿ ಮಾಡಿ ಬಿಸಿ ಮುಟ್ಟಿಸಿದ್ದಾರೆ‌. ಕ್ಯಾಂಟೀನ್ ಮೇಲೆ..! ಆಸ್ಪತ್ರೆಯ ಆವರಣದಲ್ಲಿರೋ ಕ್ಯಾಂಟೀನ್ ನಲ್ಲಿ ಅಧಿಕಾರಿಗಳ ತಂಡ ದಾಳಿ ‌ಮಾಡಿದಾಗ ಅಲ್ಲಿ ಸ್ವಚ್ಚತೆಯ ಕೊರತೆ ಕಂಡುಬಂದಿದೆ ಎನ್ನಲಾಗಿದೆ. ಅಲ್ದೆ, ಅಸಲೀ ಟೆಂಡರದಾರರನ್ನು ಬಿಟ್ಟು ಬೇರೆಯವರು ಕ್ಯಾಂಟೀನ್ ನಡೆಸುತ್ತಿರುವುದು ಕಂಡು ಬಂದಿದೆಯಂತೆ ಹಾಗೂ ಬೇರೆಯವರ ಫೋನ್ ಪೇ ಸ್ಕ್ಯಾನರ್ ಇರುವುದನ್ನು ಪ್ರಶ್ನೆ ಮಾಡಿ, ಅಸಲೀ...

Post
ಆಕಸ್ಮಿಕವಾಗಿ ಕಳೆನಾಶಕ ಸೇವಿಸಿದ್ದ (ಕೊಪ್ಪ) ಇಂದಿರಾನಗರದ ವ್ಯಕ್ತಿ ಸಾವು..!

ಆಕಸ್ಮಿಕವಾಗಿ ಕಳೆನಾಶಕ ಸೇವಿಸಿದ್ದ (ಕೊಪ್ಪ) ಇಂದಿರಾನಗರದ ವ್ಯಕ್ತಿ ಸಾವು..!

Death News; ಮುಂಡಗೋಡ ತಾಲೂಕಿನ ಕೊಪ್ಪ ಇಂದಿರಾನಗರದಲ್ಲಿ ಆಕಸ್ಮಿಕವಾಗಿ ಕಳೆನಾಶಕ ಸೇವಿಸಿದ್ದ ವ್ಯಕ್ತಿಯೊಬ್ಬ 20 ದಿನದ ನಂತ್ರ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃಪಟ್ಟಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ಕೊಪ್ಪ ಇಂದಿರಾನಗರದ ನಾಗಯ್ಯ ಈರಯ್ಯ ಹಿರೇಮಠ (42), ಎಂಬಾತನೇ ಸದ್ಯ ವಿಷಸೇವಿಸಿ ಮೃತಪಟ್ಟ ವ್ಯಕ್ತಿಯಾಗಿದ್ದು, ಈತ ಜುಲೈ 4 ರಂದು ಮನೆಯಲ್ಲೇ ಕಳೆನಾಶಕ ಸೇವಿಸಿದ್ದ, ಹೀಗಾಗಿ ತಕ್ಷಣವೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ನಂತರ ಕೆಲ ದಿನಗಳ‌ ಹಿಂದೆ ಮನೆಗೆ ಕರೆ ತರಲಾಗಿತ್ತು. ಮನೆಗೆ...

Post
ಕಾತೂರು ಪ್ರೌಢಶಾಲೆಯಲ್ಲಿ ಆ “ಹುಡುಗ”ನ ಭಯಕ್ಕೆ, ತರಗತಿಯನ್ನೇ ಬಹಿಷ್ಕರಿಸಿದ ವಿದ್ಯಾರ್ಥಿಗಳು..! ದೈರ್ಯ ತುಂಬಿದ ಪಿಐ ರಂಗನಾಥ್..!

ಕಾತೂರು ಪ್ರೌಢಶಾಲೆಯಲ್ಲಿ ಆ “ಹುಡುಗ”ನ ಭಯಕ್ಕೆ, ತರಗತಿಯನ್ನೇ ಬಹಿಷ್ಕರಿಸಿದ ವಿದ್ಯಾರ್ಥಿಗಳು..! ದೈರ್ಯ ತುಂಬಿದ ಪಿಐ ರಂಗನಾಥ್..!

 Students boycott class; ಮುಂಡಗೋಡ: SSLC ವಿದ್ಯಾರ್ಥಿಯೊಬ್ಬ ಬಸ್ಸಿನಲ್ಲಿ ತಣ್ಣನೆಯ “ರೌಡಿಸಂ” ಮಾಡ್ತಿರೋ ಆರೋಪ ಕೇಳಿ ಬಂದಿದೆ. ಅದೇ ಶಾಲೆಯಲ್ಲಿ ವ್ಯಾಸಂಗ ಮಾಡ್ತಿರೋ ವಿದ್ಯಾರ್ಥಿಗಳಿಗೆ ಅವಾಚ್ಯವಾಗಿ ನಿಂಧಿಸಿ, ಧಮ್ಕಿ ಹಾಕ್ತಿದಾನೆ ಅನ್ನೋ ಕಾರಣಕ್ಕೆ, 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರೌಢಶಾಲೆಯನ್ನೇ ಬಹಿಷ್ಕರಿಸಿದ ಘಟನೆ ತಾಲೂಕಿನ ಕಾತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಆತ ಚಿಪಗೇರಿ ಹುಡುಗ..! ಅಂದಹಾಗೆ, ಮುಂಡಗೋಡ ತಾಲೂಕಿ‌ನ ಚಿಪಗೇರಿ ಗ್ರಾಮದಿಂದ ಕಾತೂರು ಪ್ರೌಢಶಾಲೆಗೆ ನಿತ್ಯವೂ ವ್ಯಾಸಂಗಕ್ಕಾಗಿ ಏನಿಲ್ಲವೆಂದರೂ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುತ್ತಾರೆ....

  • 1
  • 2
error: Content is protected !!