Home ಅಪಘಾತ

Tag: ಅಪಘಾತ

Post
ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್, ಅಗಡಿಯ ಯುವಕನಿಗೆ ಗಂಭೀರ ಗಾಯ..!

ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್, ಅಗಡಿಯ ಯುವಕನಿಗೆ ಗಂಭೀರ ಗಾಯ..!

ಮುಂಡಗೋಡ ತಾಲೂಕಿನ ಕಲಘಟಗಿ ರಸ್ತೆಯಲ್ಲಿ ಅಪಘಾತವಾಗಿದೆ. ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್ ಆಗಿ ಬಿದ್ದು ಅಗಡಿಯ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಸಂಜು ಸಿದ್ದಪ್ಪ ಗಳಗಿ (23) ಗಂಭೀರ ಗಾಯಗೊಂಡ ಯುವಕನಾಗಿದ್ದಾನೆ. ಈತ ಗದ್ದೆಗೆ ಹೋಗಿ ವಾಪಸ್ ಅಗಡಿಗೆ ಬರುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾನೆ. ಪರಿಣಾಮ ಯುವಕನ ತಲೆಗೆ ಪೆಟ್ಟಾಗಿದ್ದು, ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು...

Post
ಇಂದೂರು ಕೊಪ್ಪ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಹೆಸ್ಕಾಂ ಸಿಬ್ಬಂದಿಗೆ ಗಾಯ, ಕಿಮ್ಸ್ ಗೆ ರವಾನೆ.!

ಇಂದೂರು ಕೊಪ್ಪ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಹೆಸ್ಕಾಂ ಸಿಬ್ಬಂದಿಗೆ ಗಾಯ, ಕಿಮ್ಸ್ ಗೆ ರವಾನೆ.!

ಮುಂಡಗೋಡ ತಾಲೂಕಿನ ಇಂದೂರು ಹಾಗೂ ಕೊಪ್ಪ ನಡುವೆ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಹೆಸ್ಕಾಂ ನಲ್ಲಿ ಕಾರ್ಯನಿರ್ವಹಿಸುತ್ತಿರೊ ಬೆಳಗಾವಿ ಮೂಲದ ಮಂಜುನಾಥ್ ದಡ್ಡಿ ಎಂಬುವವನೇ ಗಾಯಗೊಂಡ ಬೈಕ್ ಸವಾರನಾಗಿದ್ದಾನೆ. ಇಂದು ಈತ ಬೈಕ್‌ ಮೇಲೆ ಬರುತ್ತಿದ್ದಾಗ, ಕೊಪ್ಪ ಬಳಿಯಲ್ಲಿ ಸ್ಕಿಡ್ ಆಗಿ ಬಿದ್ದಿದೆ. ಹೀಗಾಗಿ, ತಲೆಗೆ, ಹಾಗೂ ಮುಖಕ್ಕೆ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಾಳುವನ್ನು ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ‌. ಮುಂಡಗೋಡ...

Post
ಮಳಗಿ ಟ್ರಾಕ್ಟರ್ ಪಲ್ಟಿ, ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು, ಅಷ್ಟಕ್ಕೂ ಈ ಸಾವಿಗೆ ಯಾರು ಹೊಣೆ..? ಪ್ರಿನ್ಸಿಪಾಲಾ..? ಅಥವಾ ಅತಿಥಿ ಶಿಕ್ಷಕನಾ..?

ಮಳಗಿ ಟ್ರಾಕ್ಟರ್ ಪಲ್ಟಿ, ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು, ಅಷ್ಟಕ್ಕೂ ಈ ಸಾವಿಗೆ ಯಾರು ಹೊಣೆ..? ಪ್ರಿನ್ಸಿಪಾಲಾ..? ಅಥವಾ ಅತಿಥಿ ಶಿಕ್ಷಕನಾ..?

ಮುಂಡಗೋಡ ತಾಲೂಕಿನ ಮಳಗಿಯಲ್ಲಿ ವಿದ್ಯಾರ್ಥಿಗಳನ್ನು ಪಿಕ್ ನಿಕ್ ಗೆ ಕರೆದೊಯ್ಯುತ್ತಿದ್ದ ಟ್ರಾಕ್ಟರ್ ಪಲ್ಟಿಯಾದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಶಿರಸಿ TSS ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಅನ್ನೊ ಮಾಹಿತಿ ಲಭ್ಯವಾಗಿದೆ. ಮಳಗಿ ಸಮೀಪದ ಕಲ್ಲಹಕ್ಕಲ ಗ್ರಾಮದ ಕಾವ್ಯ ಬರಮಪ್ಪ ಬ್ಯಾಡಗಿ(17) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ. ಟ್ರಾಕ್ಟರ್ ಪಲ್ಟಿಯಾದ ಹಿನ್ನೆಲೆಯಲ್ಲಿ ಕಾವ್ಯಾಗೆ ಗಂಭೀರ ಗಾಯವಾಗಿತ್ತು. ಹೀಗಾಗಿ, ಶಿರಸಿಯ TSS ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕಾವ್ಯಾ ಮೃತಪಟ್ಟಿದ್ದಾಳೆ ಅಂತಾ ಮಾಹಿತಿ ಲಭ್ಯವಾಗಿದೆ. ಇನ್ನು ಮೃತ ವಿದ್ಯಾರ್ಥಿನಿಯ...

Post
ಮುಂಡಗೋಡ ಹೊರವಲಯದಲ್ಲಿ ಭೀಕರ ಅಪಘಾತ, ಸ್ಕಾರ್ಪಿಯೋ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮುಂಡಗೋಡ ಹೊರವಲಯದಲ್ಲಿ ಭೀಕರ ಅಪಘಾತ, ಸ್ಕಾರ್ಪಿಯೋ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮುಂಡಗೋಡ: ಹೊರವಲಯದ ಶಿರಸಿ ರಸ್ತೆಯಲ್ಲಿ ಭೀಕರ ಅಪಘಾತವಾಗಿದೆ. ಓವರ್ ಟೇಕ್ ಮಾಡಲು ಹೋದ ಸ್ಕಾರ್ಪಿಯೊ ಬೈಕ್ ಗೆ ಗುದ್ದಿ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಶಿರಸಿ ರಸ್ತೆಯ ದೇಶಪಾಂಡೆ ರೂಡಿಸೇಟಿ ಕಚೇರಿ ಬಳಿ ಘಟನೆ ನಡೆದಿದೆ. ಶಿರಸಿ ಕಡೆಯಿಂದ ಮುಂಡಗೋಡು ಕಡೆಗೆ ಬರುತ್ತಿದ್ದ ಬೈಕ್ ಗೆ, ಅದೇ ಮಾರ್ಗವಾಗಿ ಹೊರಟಿದ್ದ ಸ್ಕಾರ್ಪಿಯೊ ಕಾರು ಓವರ್ ಟೇಕ್ ಮಾಡಲು ಹೋಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ‌. ಬೈಕ್ ಸವಾರನ ಗುರುತು ಪತ್ತೆಯಾಗಿಲ್ಲ. ಆದ್ರೆ, ಬೈಕ್ ಮಾಲೀಕ ಧಾರವಾಡ ಜಿಲ್ಲೆಯ...

Post
ಟಿಬೇಟಿಯ‌ನ್ ಕಾಲೋನಿ ಬಳಿ‌ ಮರಕ್ಕೆ ಡಿಕ್ಕಿ ಹೊಡೆದ KTM ಬೈಕ್, ಮುಂಡಗೋಡಿನ ಯುವಕ ಸ್ಥಳದಲ್ಲೇ ಸಾವು..!

ಟಿಬೇಟಿಯ‌ನ್ ಕಾಲೋನಿ ಬಳಿ‌ ಮರಕ್ಕೆ ಡಿಕ್ಕಿ ಹೊಡೆದ KTM ಬೈಕ್, ಮುಂಡಗೋಡಿನ ಯುವಕ ಸ್ಥಳದಲ್ಲೇ ಸಾವು..!

ಮುಂಡಗೋಡ ಸಮೀಪದ ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕ್ಯಾಂಪ್ ನಂಬರ್ 1 ರ ಬಳಿ ಬೈಕ್ ಅಪಘಾತವಾಗಿದೆ. ಕೆಟಿಎಂ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮುಂಡಗೋಡ ಪಟ್ಟಣದ ಸಂಜು ನರಸಪ್ಪ ಕಳಲಕೊಂಡ(32) ಮೃತ ಬೈಕ್ ಸವಾರ. ಯಲ್ಲಾಪುರ ಕಡೆಯಿಂದ ಮುಂಡಗೋಡ ಕಡೆ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ನಿಯಂತ್ರಣ ತಪ್ಪಿದ ಕೆಟಿಎಂ ಬೈಕ್ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಕೂಡ ನುಜ್ಜುಗುಜ್ಜಾಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು...

Post
ಹುಬ್ಬಳ್ಳಿಯ ವರೂರು ಬಳಿ ಭೀಕರ ಕಾರು ಅಪಘಾತ ಮೂವರು ಸಾವು, ಓರ್ವ ಗಂಭೀರ..!

ಹುಬ್ಬಳ್ಳಿಯ ವರೂರು ಬಳಿ ಭೀಕರ ಕಾರು ಅಪಘಾತ ಮೂವರು ಸಾವು, ಓರ್ವ ಗಂಭೀರ..!

ಹುಬ್ಬಳ್ಳಿ: ವರೂರು ಬಳಿ ಭೀಕರ ರಸ್ತೆ ಅಪಘಾತವಾಗಿದೆ. ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ‌. ಹುಬ್ಬಳ್ಳಿ ತಾಲೂಕಿನ ವರೂರು ಗ್ರಾಮದ ಗಣೇಶ ಹೋಟೆಲ್ ಬಳಿ ಘಟನೆ ನಡೆದಿದೆ. ವೇಗವಾಗಿ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರು ಪಲ್ಟಿಯಾದ ಪರಿಣಾಮ ಚಾಲಕ, ಮಹಿಳೆ ಸೇರಿ ಮೂವರು ಸಾವನ್ನಪ್ಪಿದ್ದಾರೆ. ದಾವಣಗೆರೆ ಮೂಲದ ಚಾಲಕ ಶಾರೂಖ್ (27), ಸೊಹೇಲ್ (26), ಚಿಕ್ಕಮಗಳೂರು ಜಿಲ್ಲೆ ಆಲದೂರಿನ ಎಚ್.ಕೆ. ಸುಶೀಲಾ (35) ಮೃತಪಟ್ಟವರು. ಘಟನೆಯಲ್ಲಿ...

Post
ಮುಂಡಗೋಡ ಬಳಿ ಬೈಕ್- ಕಾರ್ ನಡುವೆ ಮುಖಾಮುಕಿ ಡಿಕ್ಕಿ, ಲಕ್ಕೊಳ್ಳಿಯ ಬೈಕ್ ಸವಾರ ಗಂಭೀರ..!

ಮುಂಡಗೋಡ ಬಳಿ ಬೈಕ್- ಕಾರ್ ನಡುವೆ ಮುಖಾಮುಕಿ ಡಿಕ್ಕಿ, ಲಕ್ಕೊಳ್ಳಿಯ ಬೈಕ್ ಸವಾರ ಗಂಭೀರ..!

ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ಹೊಂಡಾ ಶೋ ರೂಂ ಬಳಿ ಭೀಕರ ಅಪಘಾತವಾಗಿದೆ‌. ಕಾರ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಮುಂಡಗೋಡ ತಾಲೂಕಿನ ಲಕ್ಕೊಳ್ಳಿ ಗ್ರಾಮದ ಮಹೇಶ್ ಪುಂಡಲೀಕ್ ಅರ್ಕಸಾಲಿ(53) ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳು ಸ್ಥಿತಿ ಚಿಂತಾಜನಕವಾಗಿದ್ದು ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಿಒಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಶಿರಸಿ ಕಡೆಯಿಂದ ಬರುತ್ತಿದ್ದ ಕಾರ್ ಹಾಗೂ ಮುಂಡಗೋಡ ಕಡೆಯಿಂದ ಹೊರಟಿದ್ದ ಬೈಕ್ ನಡುವೆ ಮುಖಾಮುಕಿ ಡಿಕ್ಕಿಯಾಗಿದೆ....

Post
ಮುಂಡಗೋಡಿನಲ್ಲಿ ಕಾರ್ ಡಿಕ್ಕಿಯಾಗಿ ಆಕಳ ಕರು ಸ್ಥಳದಲ್ಲೇ ಸಾವು..!

ಮುಂಡಗೋಡಿನಲ್ಲಿ ಕಾರ್ ಡಿಕ್ಕಿಯಾಗಿ ಆಕಳ ಕರು ಸ್ಥಳದಲ್ಲೇ ಸಾವು..!

ಮುಂಡಗೋಡ: ಪಟ್ಟಣದ ಹುಬ್ಬಳ್ಳಿ ರಸ್ತೆಯ ಪಟ್ಟಣ ಪಂಚಾಯತ ಎದುರಿನಲ್ಲಿ ಇಂಡಿಕಾ ಕಾರ್ ಡಿಕ್ಕಿಯಾದ ಪರಿಣಾಮ ಆಕಳ ಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹುಬ್ಬಳ್ಳಿ ರಸ್ತೆ ಕಡೆಗೆ ಹೊರಟಿದ್ದ ಇಂಡಿಕಾ ಕಾರು, ರಸ್ತೆಯಲ್ಲಿದ್ದ ಕರುವಿನ ಮುಖಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಕರು ರಕ್ತದ ಮಡುವಿನಲ್ಲಿ ಬಿದ್ದಿದೆ. ಹೀಗಾಗಿ, ಸ್ಥಳೀಯರು ತಕ್ಷಣವೇ ಪಶುವೈದ್ಯ ಅವಿನಾಶ್ ಪೂಜಾರ್ ಗೆ ಕರೆ ಮಾಡಿದ್ದಾರೆ. ಆದ್ರೆ, ಪಶುವೈದ್ಯರು ಚಿಕಿತ್ಸೆ ನೀಡುವಷ್ಟರಲ್ಲೇ ಕರು ಸಾವನ್ನಪ್ಪಿದೆ ಅಂತಾ ಮಾಹಿತಿ‌ ಲಭ್ಯವಾಗಿದೆ. ಸದ್ಯ ರಕ್ತದ ಮಡುವಿನಲ್ಲಿ...

Post
ಮುಂಡಗೋಡ APMC ಸಮೀಪ ಜಿಂಕೆಗೆ ಡಿಕ್ಕಿ ಹೊಡೆದ KSRTC ಬಸ್, ಜಿಂಕೆ ಸಾವು..!

ಮುಂಡಗೋಡ APMC ಸಮೀಪ ಜಿಂಕೆಗೆ ಡಿಕ್ಕಿ ಹೊಡೆದ KSRTC ಬಸ್, ಜಿಂಕೆ ಸಾವು..!

ಮುಂಡಗೋಡ: ಪಟ್ಟಣದ APMC ಹತ್ತಿರ KSRTC ಬಸ್ ಡಿಕ್ಕಿಯಾಗಿ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಹೊರಟಿದ್ದ KSRTC ಬಸ್ APMC ಸಮೀಪದ ರಸ್ತೆಯಲ್ಲಿ ಏಕಾಏಕಿ ಜಿಂಕೆ ಅಡ್ಡ ಬಂದ ಪರಿಣಾಮ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು ಜಿಂಕೆ ಸ್ಥಳದಲ್ಲೇ‌ ಮೃತಪಟ್ಟಿದೆ. ಇನ್ನು, ಮೃತಪಟ್ಟ ಜಿಂಕೆ ರಸ್ತೆಯಲ್ಲೇ ಬಿದ್ದಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕಿದೆ.

  • 1
  • 2
error: Content is protected !!