ಕಾತೂರು ಪ್ರೌಢಶಾಲೆಯಲ್ಲಿ ಆ “ಹುಡುಗ”ನ ಭಯಕ್ಕೆ, ತರಗತಿಯನ್ನೇ ಬಹಿಷ್ಕರಿಸಿದ ವಿದ್ಯಾರ್ಥಿಗಳು..! ದೈರ್ಯ ತುಂಬಿದ ಪಿಐ ರಂಗನಾಥ್..!


Students boycott class;
ಮುಂಡಗೋಡ: SSLC ವಿದ್ಯಾರ್ಥಿಯೊಬ್ಬ ಬಸ್ಸಿನಲ್ಲಿ ತಣ್ಣನೆಯ “ರೌಡಿಸಂ” ಮಾಡ್ತಿರೋ ಆರೋಪ ಕೇಳಿ ಬಂದಿದೆ. ಅದೇ ಶಾಲೆಯಲ್ಲಿ ವ್ಯಾಸಂಗ ಮಾಡ್ತಿರೋ ವಿದ್ಯಾರ್ಥಿಗಳಿಗೆ ಅವಾಚ್ಯವಾಗಿ ನಿಂಧಿಸಿ, ಧಮ್ಕಿ ಹಾಕ್ತಿದಾನೆ ಅನ್ನೋ ಕಾರಣಕ್ಕೆ, 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರೌಢಶಾಲೆಯನ್ನೇ ಬಹಿಷ್ಕರಿಸಿದ ಘಟನೆ ತಾಲೂಕಿನ ಕಾತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಆತ ಚಿಪಗೇರಿ ಹುಡುಗ..!
ಅಂದಹಾಗೆ, ಮುಂಡಗೋಡ ತಾಲೂಕಿ‌ನ ಚಿಪಗೇರಿ ಗ್ರಾಮದಿಂದ ಕಾತೂರು ಪ್ರೌಢಶಾಲೆಗೆ ನಿತ್ಯವೂ ವ್ಯಾಸಂಗಕ್ಕಾಗಿ ಏನಿಲ್ಲವೆಂದರೂ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುತ್ತಾರೆ. ಹಾಗೆ ಬರುವ ವಿದ್ಯಾರ್ಥಿಗಳಿಗೆ, ಅವರಲ್ಲಿನ ಓರ್ವ ವಿದ್ಯಾರ್ಥಿ ಬಸ್ ನಲ್ಲಿ ನಿತ್ಯವೂ ಅವಾಚ್ಯವಾಗಿ ನಿಂಧಿಸಿ, ಚಾಕು, ಸೈಕಲ್ ಚೈನ್ ತೋರಿಸಿ ಬೆದರಿಸುತ್ತಿದ್ದನಂತೆ. ಇದು ಕಳೆದ‌ ಮೂರು ತಿಂಗಳಿನಿಂದಲೂ ನಿತ್ಯವೂ ನಿರಂತರವಾಗಿ ನಡೆಯುತ್ತಿದ್ದು, ವಿದ್ಯಾರ್ಥಿನಿಯರಿಗೆ ಭಾರಿ ಆತಂಕ ಮೂಡಿಸಿತ್ತು. ಹೀಗಾಗಿ, ಆತಂಕಗೊಂಡ ಸುಮಾರು 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಿಷಯವನ್ನು ತಮ್ಮ‌ ಪಾಲಕರಿಗೆ ಮುಟ್ಟಿಸಿದ್ದಾರೆ. ನಂತ್ರ ಜುಲೈ 24 ರಂದು ಶಾಲಾ ಶಿಕ್ಷಕರಿಗೆ ಈ ಮಾಹಿತಿ ನೀಡಿದ್ದಾರೆ.

ಮೂರು ತಿಂಗಳು, ಆತಂಕ, ಆತಂಕ..!
ನಾವು ಕಳೆದ ಮೂರು ತಿಂಗಳಿನಿಂದ, ಆ ವಿದ್ಯಾರ್ಥಿಯಿಂದ ಸಾಕಷ್ಟು ಆತಂಕಕ್ಕೊಳಗಾಗಿದ್ದೇವೆ. ದಯವಿಟ್ಟು ಕೂಡಲೇ ಆ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಗೆ ಕಳಿಸಿ, ಇಲ್ಲವಾದ್ರೆ ನಮಗೆ ವರ್ಗಾವಣೆ ಪತ್ರ ನೀಡಿ, ನಾವು ಬೇರೆ ಪ್ರೌಢಶಾಲೆಗೆ ಹೋಗುತ್ತೇವೆ ಅಂತಾ ಶಿಕ್ಷಕರಿಗೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಇನ್ನು, ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ವಿದ್ಯಾರ್ಥಿಗಳ ಪಾಲಕರು ಮುಂಡಗೋಡ ಪೊಲೀಸ್ ಠಾಣೆಗೂ ಮಾಹಿತಿ ನೀಡಿ, ನಮ್ಮ ಮಕ್ಕಳ ಆತಂಕವನ್ನು ದೂರು ಮಾಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ.

ಪಿಐ ಅಧ್ಯಕ್ಷತೆಯಲ್ಲಿ ಪಾಲಕರ ಸಭೆ..!
ಇನ್ನು, ಈ ವಿಷಯ ತಿಳಿಯುತ್ತಿದ್ದಂತೆ ಮುಂಡಗೋಡ ಪಿಐ ರಂಗನಾಥ್ ನೀಲಮ್ಮವರ್, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಜಿ. ರವರು ಶಾಲೆಗೆ ಭೇಟಿ ನೀಡಿ, ಪಾಲಕರು ಹಾಗೂ ವಿದ್ಯಾರ್ಥಿಗಳ‌ ಸಭೆ ನಡೆಸಿದರು. ಈ ವೇಳೆಯಲ್ಲಿ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡರು. ಇಂದು ನಡೆಯಬೇಕಿದ್ದ ಪರೀಕ್ಷೆ ಬಹಿಷ್ಕರಿದ್ರು‌. ನಂತರ ಸಿಪಿಐ ವಿದ್ಯಾರ್ಥಿಗಳಿಗೆ ದೈರ್ಯ ತುಂಬಿ ಯಾವುದಕ್ಕೂ ಹೆದರಬೇಡಿ, ನಿಮಗೇನಾದ್ರೂ ಆತನಿಂದ ತೊಂದರೆ ಆದರೆ, ನಮಗೆ ಅಥವಾ ನಿಮ್ಮ ಶಿಕ್ಷಕರಿಗೆ ತಕ್ಷಣವೇ ಮಾಹಿತಿ ನೀಡಿ, ನಾವು ಅದನ್ನು ಬಗೆಹರಿಸುತ್ತೇವೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಭಯ ಪಡುವ ಅವಶ್ಯಕತೆ ಇಲ್ಲ. ನಾಳೆಯಿಂದ ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ವಿನಂತಿಸಿದರು.

BEO ಮನವಿ..!
ಇನ್ನು, ಇದೇ ವೇಳೆ ಹಾಜರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ, ಇಂತಹ ಘಟನೆಗಳು ನಡೆಯಬಾರದು. ಪ್ರತಿಯೊಬ್ಬ ಮಕ್ಕಳ ಪಾಲಕರೂ ಸಹ ತಮ್ಮ ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು, ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ತಿಂಗಳಿಗೊಮ್ಮೆ ಆದ್ರೂ ಶಾಲೆಗೆ ಬಂದು ಗಮನಿಸಬೇಕು ಅಂತಾ ಬಿಇಓ ವಿನಂತಿಸಿದರು. ಹಾಗೇಯೇ, ವಿದ್ಯಾರ್ಥಿಗಳು ನಾಳೆಯಿಂದ ಶಾಲೆಗೆ ಹಾಜರಾಗುವಂತೆ ವಿನಂತಿಸಿದರು.

ಪರೀಕ್ಷೆಯಿಂದ ಹೊರಗುಳಿದ ಮಕ್ಕಳು.!
ಶುಕ್ರವಾರ ವಿದ್ಯಾರ್ಥಿಗಳಿಗೆ ಮಾಸಿಕ ಪರೀಕ್ಷೆ ನಡೆಯುತ್ತಿದ್ದು, ಈ ಘಟನೆಯಿಂದ ಆತಂಕಗೊಂಡಿದ್ದ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬಹಿಷ್ಕರಿಸಿ ಹೊರಗುಳಿದರು. ನಂತರ, ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾರ್ಥಿಗಳ ಮನವೊಲಿಸಿದರಾದರೂ, ವಿದ್ಯಾರ್ಥಿಗಳು ಪಠ್ಯ ಪುಸ್ತಕ ಏನನ್ನೂ ತರದೆ ಇರೋ ಕಾರಣಕ್ಕೆ ಇಂದು ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ.

ಸಿಡಿಪಿಒ ಗೆ ಪತ್ರ..! ವಿದ್ಯಾರ್ಥಿಯ ಆಪ್ತ ಸಮಾಲೋಚನೆ ಮಾಡುವಂತೆ, ಮುಖ್ಯಾಧ್ಯಾಪಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದು, ಮಕ್ಕಳ ಹಿತದೃಷ್ಟಿಯಿಂದ ಭಯಗೊಳಿಸಿದ ವಿದ್ಯಾರ್ಥಿಗೆ ಆಪ್ತ ಸಮಾಲೋಚನೆ ನಡೆಸಿ ವರದಿ ನೀಡುವಂತೆ ಪತ್ರ ಬರೆಯಲಾಗಿದೆ.

ಬಿಇಓ ಮೇಡಂ ಹೇಳಿದ್ದಿಷ್ಟು..!
SSLC ವಿದ್ಯಾರ್ಥಿಯೊಬ್ಬನಿಂದ ಬಸ್ಸಿನಲ್ಲಿ ಬರುವಾಗಿ ತನ್ನ ಜೊತೆಗೆ ಬರುವ ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿದ್ದ ಅನ್ನೋ ಆರೋಪ ಬಂದಿದೆ. ಆ ಬಸ್ಸಿನಲ್ಲಿ ಬರುವ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತನ ವಿರುದ್ಧ ಆಕ್ರೋಶಗೊಂಡಿದ್ದರು. ಅವ್ರನ್ನು ಸಮಾಧಾನ ಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದೇವೆ. ಭಯಗೊಳಿಸಿದ ವಿದ್ಯಾರ್ಥಿಗೆ ಆಪ್ತ ಸಮಾಲೋಚನೆ ಮೂಲಕ ಸರಿಪಡಿಸಲು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗಿದೆ ಅಂತಾ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಜಿ. ಮಾಹಿತಿ ನೀಡಿದರು.

ಪಿಐ ರಂಗನಾಥ್ ಸಾಹೇಬ್ರು ಹೇಳಿದ್ದು..!
ವಿದ್ಯಾರ್ಥಿಗಳು ಹಾಗೂ ಪಾಲಕರ ಸಭೆ ಮಾಡಿದ್ದೇವೆ. ವಿದ್ಯಾರ್ಥಿಗಳಿಗೆ ದೈರ್ಯ ತುಂಬಿದ್ದೇವೆ. ಜೊತೆಗೆ, ಭಯಪಡಿಸಿದ ವಿದ್ಯಾರ್ಥಿಗೆ ಆಪ್ತ ಸಮಾಲೋಚನೆ ಮಾಡಿ ವರದಿ ನೀಡುವಂತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇವೆ. ಹೀಗಾಗಿ, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಶಾಲೆಗೆ ಹಾಜರಾಗುವಂತೆ ಮನವೊಲಿಸಿದ್ದೇವೆ ಅಂತಾ ಮುಂಡಗೋಡ ಸಿಪಿಐ ರಂಗನಾಥ್ ನೀಲಮ್ಮನವರ್ ಹೇಳಿದರು‌.

ಚಿಗಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ರಹೀಮಾಬಿ ಮಕ್ತೇಸರ್, ಉಪಾಧ್ಯಕ್ಷರಾಗಿ ರತ್ನವ್ವ ಅವಿರೋಧ ಆಯ್ಕೆ..!

 

error: Content is protected !!