ತಟ್ಟಿಹಳ್ಳಿ ಶಿವಾನಂದನ ಹತ್ಯೆ ಯತ್ನ ಕೇಸ್, ಆರೋಪಿಯ ಹೆಡೆಮುರಿ ಕಟ್ಟಿದ ಮುಂಡಗೋಡಿನ ಚಾಣಾಕ್ಷ ಪೊಲೀಸ್ರು..!

ಮುಂಡಗೋಡ ತಾಲೂಕಿನ ತಟ್ಟಿಹಳ್ಳಿ ಶಿವಾನಂದನ ಕೊಲೆಯತ್ನ ಕೇಸಿನಲ್ಲಿ ಮುಂಡಗೋಡ ಪೊಲೀಸ್ರು ಭರ್ಜರಿ ಕಾರ್ಯ ಮಾಡಿದ್ದಾರೆ‌. ಘಟನೆ ನಡೆದ ಕೆಲವೇ ಕೆಲವು ಘಂಟೆಗಳಲ್ಲಿ ಆರೋಪಿಯನ್ನ ಹೆಡೆಮುರಿ ಕಟ್ಟಿದ್ದಾರೆ. ಕೃತ್ಯ ನಡೆಸಿ ಪರಾರಿಯಾಗಿದ್ದ ಶಿವರಾಜನನ್ನ ಎಳೆದು ತಂದಿದ್ದಾರೆ‌. ಹೀಗಾಗಿ, ಬೆಂಗಳೂರಿಗೆ ಪರಾರಿಯಾಗಲು ಹೊಂಚು ಹಾಕಿದ್ದವ, ಮುಂಡಗೋಡ ಠಾಣೆಯ ಪಿಐ ರಂಗನಾಥ್ ನೀಲಮ್ಮನವರ್ ಸಾರಥ್ಯದ ಕ್ರೈಂ ಟೀಮಿನ ಚಾಣಾಕ್ಷತನದ ಬಲೆಗೆ ರೋಚಕವಾಗಿ ಬಿದ್ದು ಬಿಟ್ಟಿದ್ದಾನೆ.

ಅದು ಗುರುವಾರ ಸಂಜೆ..!
ಯಸ್, ತಟ್ಟಿಹಳ್ಳಿಯಲ್ಲಿ ತನ್ನ ತಾಯಿಗೆ ಕಿರುಕುಳ ನೀಡುತ್ತಿದ್ದ ಶಿವಾನಂದನಿಗೆ ಒಂದು ಗತಿ ಕಾಣಿಸಲು ರೆಡಿಯಾಗಿದ್ದ ಶಿವರಾಜ, ಅವತ್ತು ತನ್ನ ತಾಯಿ ಫೋನ್ ಕಾಲ್ ಮಾಡಿ ಬಂದುಬಿಡು ಅಂತಾ ಕರೆದಿದ್ದಾಗಲೇ ನೇರವಾಗಿ ತಟ್ಟಿಹಳ್ಳಿಗೆ ಬಂದಿದ್ದ, ನನ್ನ ತಾಯಿಗೆ ಹಂಗ್ಯಾಕೆ ಕಿರುಕುಳ ಕೊಡ್ತಿದಿಯ..? ಅಂತಾ ತನ್ನ ಎರಡನೇ ತಂದೆ ಶಿವಾನಂದನಿಗೆ ಏರುದನಿಯಲ್ಲಿ ಪ್ರಶ್ನಿಸಿದ್ದ. ಅಷ್ಟೆ, ಮಾತಿಗೆ ಮಾತು ಬೆಳೆದು ಮಚ್ಚಿನಿಂದ ಶಿವಾನಂದನಿಗೆ ಮನಸೋ ಇಚ್ಚೆ ಚಚ್ಚಿ ಬಿಟ್ಟಿದ್ದ. ಪರಿಣಾಮ ಶಿವಾನಂದ ರಕ್ತದ ಮಡುವಿನಲ್ಲಿ ಬಿದ್ದು ಇನ್ನೇನು ಸತ್ತೇ ಹೋಗ್ತಾನೆ ಅಂತಾ ಅನಿಸಿದ ತಕ್ಷಣವೇ ಆರೋಪಿ ಶಿವರಾಜ್ ಅಲ್ಲಿಂದ ಎಸ್ಕೇಪ್ ಆಗಿದ್ದ.

ಎಸ್ಕೇಪ್ ಆಗ್ತಿದ್ದವನು ಸಿಕ್ಕಿದ್ದೇ ರೋಚಕ..!
ಹಾಗೆ ಕೃತ್ಯ ನಡೆಸಿದ್ದ ಶಿವರಾಜ್ ತಕ್ಷಣವೇ ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಎಸ್ಕೇಪ್ ಆಗಲು ಪ್ಯಾನ್ ಮಾಡಿದ್ದ. ಅಸಲು, ಯಾವಾಗ ತನ್ನ ಮಲತಂದೆಯನ್ನ ಕೊಚ್ಚಿ ಕಾಲ್ಕಿತ್ತಿದ್ದನೋ ಅದೇ ಹೊತ್ತಲ್ಲಿ ತನ್ನ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡು ನೇರವಾಗಿ ತನ್ನೂರಿಗೆ ಹೋಗಿದ್ದ. ಅಲ್ಲಿಂದ, ಹಾಗೆಯೇ ತನ್ನ ಕಾರಿನಲ್ಲಿ ತನ್ನ ಹೆಂಡ್ತಿ ಮಕ್ಕಳೊಂದಿಗೆ ಹಾನಗಲ್ ತಾಲೂಕಿನ ಮಳಗುಂದಕ್ಕೆ ತಮ್ಮ ರಿಲೇಟಿವ್ ಮನೆಗೆ ಪರಾರಿಯಾಗಿದ್ದ. ಹೆಂಡ್ತಿ ಮಕ್ಕಳನ್ನು ಅಲ್ಲೇ ಬಿಟ್ಟು, ಬೆಂಗಳೂರು ಬಸ್ ಹತ್ತಿದ್ದ. ಇತ್ತ ಮುಂಡಗೋಡ ಪೊಲೀಸ್ರು ಮತ್ತೋರ್ವ ಆರೋಪಿ ಶಿವರಾಜನ ತಾಯಿ ನಾಗಮ್ಮಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ದೆ, ಶಿವರಾಜನ ಸುಳಿವು ಪಡೆದುಕೊಂಡು ಆತನ ಹೆಡೆಮುರಿ ಕಟ್ಟಲು ಬೆನ್ನು ಹತ್ತಿದ್ದಾರೆ.

ಹಲ್ಲೆಗೊಳಗಾದ ಶಿವಾನಂದ

ರಾಣೆಬೆನ್ನೂರಿನಿಂದಲೇ..?
ಅಸಲು, ಬೆಂಗಳೂರಿನೆಡೆ ಹೆಜ್ಜೆ ಹಾಕಿದ್ದ ಆರೋಪಿ ಶಿವರಾಜ್ ತನ್ನ ಬೆನ್ನು ಹತ್ತಿದ್ದ ಮುಂಡಗೋಡ ಪೊಲೀಸ್ರಿಗೆ ಚಳ್ಳೆಹಣ್ಣು ತಿನ್ನಿಸಿದ್ದ. ಆದ್ರೆ ಅಷ್ಟೇ ಚಾಣಾಕ್ಷತನ ಬಳಸಿ ಆತನಿಗೆ ಖೆಡ್ಡಾ ತೋಡಿದ್ದ ಪೊಲೀಸರು ಹಾವೇರಿಯ ರಾಣೆಬೆನ್ನೂರು ಸಮೀಪ ಆತನ ಓಟಕ್ಕೆ ಬ್ರೇಕ್ ಹಾಕಿದ್ದರು. ಆ ಮೂಲಕ ಅಕ್ಷರಶಃ ಆರೋಪಿ ಶಿವರಾಜನನ್ನು ಲಾಕ್ ಮಾಡಿದ್ದರು. ಹೀಗಾಗಿ, ಆರೋಪಿ ಅದೇಷ್ಟೇ “ಕ್ರಿಮಿ”ನಲ್‌ ಮೈಂಡ್ ಯೂಸ್ ಮಾಡಿದ್ರೂ, ಪೊಲೀಸ್ರ ಕಣ್ಣೇಟಲ್ಲಿ ತಪ್ಪಿಸಿಕೊಳ್ಳೊಕೆ ಸಾಧ್ಯವೇ ಆಗಿಲ್ಲ ಅನ್ನೋದು ವಾಸ್ತವ..!

ತಟ್ಟಿಹಳ್ಳಿ ಶಿವಾನಂದನ ಹತ್ಯೆಗೆ ಸಜ್ಜಾಗಿದ್ದವನ ಹೆಸರು ಶಿವರಾಜ್.. ಅಷ್ಟಕ್ಕೂ ಆತ 3ನೇ ಹೆಂಡತಿಯ ಮೊದಲನೇ ಗಂಡನ ಮಗ..!