ಮುಂಡಗೋಡ ತಾಲೂಕಿನ ಚಿಗಳ್ಳಿ ಪ್ರೌಢಶಾಲೆಯ ರಾದ್ಧಾಂತಗಳು ಸದ್ಯಕ್ಕೆ ನಿಲ್ಲುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಇನ್ನೇನು ನಾಡಿದ್ದು ಡಿಸೆಂಬರ್ 26 ರಂದು ದಲಿತ ಹಾಗೂ ರೈತ ಮುಖಂಡ ಚಿದಾನಂದ ಹರಿಜನ ಧರಣಿ ಸತ್ಯಾಗ್ರಹ ನಡೆಸುವ ಘೋಷಣೆ ಮಾಡಿದ್ದಾರೆ.

ಇತ್ತಿಚೆಗಷ್ಟೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಅಮಾನತ್ತುಗೊಂಡಿರೋ ಶಿಕ್ಷಕ ದಾಸಪ್ಪ ಎಂಬುವವರ ಪರವಾಗಿ ಸತ್ಯಾಗ್ರಹ ಮಾಡಲು ಚಿದಾನಂದ ಹರಿಜನ್ ಮುಂದಾಗಿದ್ದು ಚಿಗಳ್ಳಿ ಕೆಲ ಗ್ರಾಮಸ್ಥರು ಹಾಗೂ SDMC ಅಧ್ಯಕ್ಷರು, ಸದಸ್ಯರಿಗೆ ಫೋಷಕರಿಗೆ ಬೇಸರ ತರಿಸಿದೆ. ಹೀಗಾಗಿ, ನಿನ್ನೆ ಅವ್ರೇಲ್ಲ ಸೇರಿಕೊಂಡು ಮುಂಡಗೋಡಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಪೊಲೀಸ್ ಇಲಾಖೆಗೆ, ತಹಶೀಲ್ದಾರ ರಿಗೆ ಮನವಿ ಸಲ್ಲಿಸಿದ್ದಾರೆ. ಶಾಲಾ ಆವರಣದಲ್ಲಿ ಧರಣಿ ಸತ್ಯಾಗ್ರಹಗಳನ್ನು ಮಾಡದಂತೆ ಕೇಳಿಕೊಂಡಿದ್ದಾರೆ.

ಒಂದು ವೇಳೆ ದಲಿತ ಮುಖಂಡ ಚಿದಾನಂದ ಹರಿಜನ್ ರವರು ಡಿಸೆಂಬರ್ 26 ರಂದು ಧರಣಿ ಸತ್ಯಾಗ್ರಹ ಮಾಡಿದರೆ, ನಾವೂ ಕೂಡ ಅದೇ ಸ್ಥಳದಲ್ಲಿ ಪ್ರತಿಭಟನೆ, ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ. ಮುಂದೇ ಅದೇನೇ ಸಮಸ್ಯೆ ಆದ್ರೂ ಅವ್ರೇ ಜವಾಬ್ದಾರರು ಅಂತಾ ಮನವಿಯಲ್ಲಿ ತಿಳಿಸಿದ್ದಾರೆ.
ಈ ಕುರಿತು SDMC ಸದಸ್ಯ ಹಾಗೂ ಮಾರ್ಕೆಟಿಂಗ್ ಸೊಸೈಟಿಯ ಮಾಜಿ ಸದಸ್ಯ ತಿರುಪತಿ ವಡ್ಡರ್ ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ಮಾತಾಡಿ ಮಾಹಿತಿ ನೀಡಿದ್ದಾರೆ.
