Parents Appeal;
ಇತ್ತಿಚೆಗಷ್ಟೇ ಅಮಾನತ್ತಾಗಿರೋ ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ ಎ. ರ ಅಮಾನತ್ತು ಆದೇಶ ಹಿಂಪಡೆಯಬೇಕು ಅಂತಾ ಆಗ್ರಹಿಸಿ, ಚಿಗಳ್ಳಿ ಪ್ರೌಢಶಾಲೆಯ ಕೆಲ ಪೋಷಕರು ಡಿಡಿಪಿಐರಿಗೆ ಮನವಿ ಸಲ್ಲಿಸಿದ್ದಾರೆ.

ಮನವಿಯಲ್ಲಿ ಇದ್ದಿದ್ದು ಇಷ್ಟು..!
ಶಿರಸಿ ಡಿಡಿಪಿಐ ತವರಿಗೆ ಚಿಗಳ್ಳಿ ಪ್ರೌಢಶಾಲೆಯ ಕೆಲ ಪಾಲಕರು ಮನವಿ ಅರ್ಪಿಸಿದ್ದು, ಮನವಿಯಲ್ಲಿ ಅಮಾನತ್ತುಗೊಂಡ ಶಿಕ್ಷಕ ದಾಸಪ್ಪ ಎ. ಪರವಾಗಿ ಹೇಳಿಕೊಂಡಿದ್ದಾರೆ. ದಾಸಪ್ಪರವರು ಸುಮಾರು 15 ವರ್ಷದಿಂದ ನಮ್ಮ ಶಾಲೆಯಲ್ಲಿ ಪಾಠಮಾಡುತ್ತಾ ಬಂದಿರುತ್ತಾರೆ. ಮತ್ತು 2 ವರ್ಷದ ಹಿಂದೆ ಮುಖ್ಯಶಿಕ್ಷಕರಾಗಿ ಆಯ್ಕೆಯಾಗಿ ಶಾಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ.
ಅವರು ನಮ್ಮೂರ ಶಾಲೆಗೆ ಬಂದಾಗಿನಿಂದ ಮಕ್ಕಳಲ್ಲಿ ಶಿಸ್ತು, ಶಾಂತಿ, ಮತ್ತು ಒಳ್ಳೆಯ ಪಲಿತಾಂಶವನ್ನು ಕೊಡುತ್ತಾ ಬಂದಿರುತ್ತಾರೆ. ಶಾಲೆಯ ಕಂಪೌಂಡ ಸಮಸ್ಯೆ ಬಹಳ ಇತ್ತು ಕಂಪೌಂಡ ಒಡೆದು ಶಾಲೆಯ ಜಾಗವನ್ನು ಒತ್ತುವರಿ ಮಾಡುತ್ತಿದ್ದರು, ಅದು ಪೋಲೀಸ್ ಠಾಣೆಯ ಮೆಟ್ಟಿಲೇರಿತ್ತಯ, ಅವತ್ತು ಮುಖ್ಯ ಶಿಕ್ಷಕರಾಗಿ ದಾಸಪ್ಪ ರವರೆ ಇದ್ದರು. ಶಾಲೆಯ ಆಸ್ತಿಯನ್ನು ಉಳಿಸುವ ಸಲುವಾಗಿ ಅವತ್ತಿನ SDMC ಕಮೀಟಿಯವರನ್ನು ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಕರೆದುಕೊಂಡು ಕಂಪೌಂಡ್ ಕಟ್ಟಿಸಿದರು.

ಹೀಗಾಗಿ, ಆ ಉದ್ದೇಶ ಇಟ್ಟುಕೊಂಡು ತಮಗೆ ಬೇಕಾದವರನ್ನ ಸೇರಿಸಿಕೊಂಡು SDMC ಕಮೀಟಿಯನ್ನು ರಚನೆ ಮಾಡಿ ತಮಗೆ ಬೇಕಾದವರನ್ನ ಮುಖ್ಯಶಿಕ್ಷಕರಾಗಿ ಮಾಡಿ, ದಾಸಪ್ಪರವರನ್ನ ಈ ಶಾಲೆಯಿಂದ ಹೇಗಾದರು ಮಾಡಿ ಕಳಿಸಬೇಕೆಂದು ಅವರ ಮೇಲೆ ಇಲ್ಲ ಸಲ್ಲದ ಅಪವಾದಗಳನ್ನು ಹೊರಸಿ ಅವರನ್ನು ಅಮಾನತು ಮಾಡಬೇಕೆಂದು ರಾಜಕೀಯವಾಗಿ ಒತ್ತಾಯ ಮಾಡಿಸಿ ಅಮಾನತುಗೊಳಿಸಲಾಗಿದೆ.

ದಾಸಪ್ಪ ಮುಖ್ಯ ಶಿಕ್ಷಕರಾಗಿದ್ದಾಗ ಶಾಲೆಯ ಪಲಿತಾಂಶ ತಾಲೂಕಿಗೆ 1 ನಂಬರ 2 ನಂಬರ ಬರುತಿತ್ತು. 2 ವರ್ಷದಿಂದ ಶಾಲೆಯ ಪಲಿತಾಂಷ 0 ಆಗಿದೆ. 50% ಮಕ್ಕಳು ಫೇಲ್ ಆಗುತ್ತಿದ್ದಾರೆ ಇದರ ಬಗ್ಗೆ ಮೊದಲು ಬಿಇಒ ಆಫಿಸಿಗೆ ಮನವಿ ಸಲ್ಲಿಸಲಾಗಿತ್ತು. ಇನ್ನು, ಕಾನೂನು ಬಾಹಿರವಾಗಿ ಪೀ ಟೀಚರನ್ನು ಮುಖ್ಯ ಶಿಕ್ಷಕರನ್ನಾಗಿ ಮಾಡಿದರ ಬಗ್ಗೆನೂ ಬಿಇಒ ಆಫೀಸಿಗೆ ಮನವಿಯನ್ನು ನೀಡಲಾಗಿತ್ತು ಆದರೂ ಏನೂ ಕ್ರಮ ತೆಗೆದುಕೊಳ್ಳದೇ ಇರುವುದು ಪಾಲಕರಿಗೆ ಬೇಸರ ತರಿಸಿದೆ. ಶಾಲೆಯಲ್ಲಿ ಪಾಲಕರು ಅಲ್ಲದವರನ್ನು ಕರೆದುಕೊಂಡು ಮೀಟಿಂಗ್ ಮಾಡುತ್ತಾರೆ ಇದನ್ನು ಕಾನೂನ ಬದ್ಧವಾಗಿ ಬಂದ ಮಾಡಿಸಬೇಕು ನಮ್ಮ ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸ ಸಿಗುವ ಹಾಗೇ ಮಾಡಬೇಕು ಮತ್ತು ದಾಸಪ್ಪರವರನ್ನು ಉದ್ದೇಶಪೂರ್ವಕವಾಗಿ ಅಮಾನತು ಮಾಡಿದ್ದನ್ನು ರದ್ದುಗೊಳಿಸಿ ನಮ್ಮ ಮಕ್ಕಳಿಗೆ ಅವರಿಂದ ಪಾಠ ಮಾಡುವ ಹಾಗೆ ಮಾಡಬೇಕು. ಇಲ್ಲವಾದರೆ ನಾವು ನಮ್ಮ ಮಕ್ಕಳನ್ನ ಕರೆದುಕೊಂಡು ಶಾಲೆ ಬಂದ್ ಮಾಡಿ ಶಾಲೆಯ ಎದುರುಗಡೆ ಪ್ರತಿಭಟನೆ ಮಾಡುತ್ತೇವೆ ಅಂತಾ ಎಚ್ಚರಿಸಿದ್ದಾರೆ.