Lingayat News; ಮುಂಡಗೋಡ : ಯಾರಾದರೂ ಆಸಕ್ತಿಯಿಂದ ಸಂಘಟನೆಯಲ್ಲಿ ತೊಡಗಿಕೊಂಡಾಗ ರಾಜಕೀಯ ಲಾಭಕ್ಕಾಗಿ ಮಾಡುತ್ತಿದ್ದಾರೆ ಎಂದು ಭಾವಿಸದೆ ಸಂಘಟನೆಯಿಂದ ಸಮಾಜ ಸದೃಢ ವಾಗುತ್ತದೆ ಎನ್ನುವದನ್ನು ಅರಿತು ಎಲ್ಲರೂ ಒಗ್ಗಟ್ಟಾಗಿ ಸದಸ್ಯತ್ವ ಹೆಚ್ಚು ಮಾಡಿ ರಾಜ್ಯ ಸಂಘದ ಗಮನ ಸೆಳೆಯುವಂತೆ ಮಾಡಬೇಕು ಎಂದು ಮಾಜಿ ಶಾಸಕ ವಿ ಎಸ್ ಪಾಟೀಲ ಕರೆ ನೀಡಿದ್ರು.
ಅವರು ಮುಂಡಗೋಡ ಟ್ರಿನಿಟಿ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಮಾಜ ಸಂಘಟನೆ ವಿಶೇಷ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮಂಚೂಣಿಯಲ್ಲಿದ್ದು ಸದಸ್ಯತ್ವ ಅಭಿಯಾನಕ್ಕೆ ಕೈಜೋಡಿಸಬೇಕು ಎಂದರಲ್ಲದೆ ಮಕ್ಕಳಿಗೆ ವಿಭೂತಿ ಧಾರಣೆ, ಲಿಂಗ ಪೂಜೆ ಯಂತಹ ನಮ್ಮ ಧಾರ್ಮಿಕ ಆಚರಣೆ ಪಾಲಿಸುವಂತೆ ಪ್ರೆರೇಪಿಸಬೇಕು ಎಂದರು.
ಜಿಲ್ಲಾ ಮಾಜಿ ಕಾರ್ಯ ದರ್ಶಿ ಪ್ರವೀಣ ಪಾಟೀಲ ಮಾತನಾಡಿ ನಮ್ಮ ಸಮಾಜದಲ್ಲಿರುವ ತಳಮಟ್ಟದವರಿಂದ ಹಿಡಿದು ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದಾರೆ ಎಲ್ಲರೂ ಸಂಘಟನೆಯಲ್ಲಿ ಕೈಜೋಡಿಸಿ ನಮ್ಮ ಬಲ ಪ್ರದರ್ಶನ ಮಾಡಿದರೆ ಮತ್ತೊಮ್ಮೆ ವಿ ಎಸ್ ಪಾಟೀಲ ಅವರನ್ನು ವಿಧಾನಸಭೆಗೆ ಕಳಿಸಲು ಸಾಧ್ಯ ಎಂದರು.
ಶಿರಸಿಯ ತಾಲೂಕಾಧ್ಯಕ್ಷ ಬಸವರಾಜ್ ಚಕ್ರಸಾಲಿ ಮಾತನಾಡಿ ಕೇವಲ ನಮ್ಮ ನಮ್ಮ ಗ್ರಾಮಗಳಲ್ಲಿ ಸೀಮಿತವಾಗಿ ಸಭೆ ಸೇರುತ್ತಿದ್ದ ನಾವು ಇಂದು ಜಿಲ್ಲೆಯ ವಿವಿಧ ತಾಲೂಕಿನವರೆಲ್ಲರೂ ಇಲ್ಲಿ ಸಮಾವೇಶಗೊಂಡಿದ್ದು ಉತ್ತಮ ಬೆಳವಣಿಗೆ. ಅನಿರೀಕ್ಷಿತ ಬೆಳವಣಿಗೆ ಮೂಲಕ ಅಡಾಕ್ ಸಮಿತಿ ಅಧ್ಯಕ್ಷರ ನೇಮಕ ಮಾಡಿರುವದು ಹಲವರಲ್ಲಿ ಅಸಮಾಧಾನ ವಾಗಿದ್ದರೂ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಜಿಲ್ಲಾ ಘಟಕ ರಚನೆ ಮಾಡುವದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಶಿರಸಿಯ ಜಗದೀಶ್ ಹಿರೇಮಠ ಮಾತನಾಡಿ
ಸಂಘಟನೆ ಬೆಳೆದು ಬಂದಿರುವ ಕುರಿತು ಮಾಹಿತಿ ನೀಡಿ ಮುಂದಿನ ದಿನದಲ್ಲಿ ಬಹು ಮತದ ಅಧ್ಯಕ್ಷ ರಿಗಿಂತ ಒಮ್ಮತದ ಅಧ್ಯಕ್ಷರನ್ನು ಆಯ್ಕೆ ಮಾಡೋಣ ಎಂದರು.
ಹಳಿಯಾಳ ತಾಲೂಕು ಅಧ್ಯಕ್ಷ ಶಿವು ದೇಸಾಯಿ ಮಾತನಾಡಿ ಸತತವಾಗಿ ಹಳಿಯಾಳದವರೇ ಅಧ್ಯಕ್ಷರಾಗುತ್ತಾ ಬಂದಿರುವದು ಹೆಮ್ಮೆಯ ಸಂಗತಿ.ಈ ಬಾರಿ ರಾಜ್ಯ ಸಮಿತಿ ಯಿಂದ ಅಧ್ಯಕ್ಷ ಸ್ಥಾನ ನಾಮ ನಿರ್ದೇಶನ ಗೊಂಡಿದ್ದು ತಪ್ಪೇ ನಿಸಿದರೂ ಕೂಡ ಆಗುವದೆಲ್ಲ ಒಳ್ಳೆಯದಕ್ಕೆ ಎಂಬಂತೆ ನಾವೆಲ್ಲ ಇನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿತರಾಗುವದಕ್ಕೆಕಾರಣ ವಾಗಿದೆ ಎಂದರು.
ಪತ್ರಕರ್ತೆ ಪ್ರಭಾವತಿ ಗೋವಿ ಮಾತನಾಡಿ ಸಮಾಜದವರು ಸಂಘ ಟಣೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳುವದರೊಂದಿಗೆ ವಿವಿಧ ಕ್ಷೇತ್ರ ದಲ್ಲಿರುವವರಕಾರ್ಯವನ್ನುಸಮಾಜಗುರುತಿಸುವಂತಾಗಬೇಕು ಎಂದರು. ಬನವಾಸಿಯ ಶೋಭಾ ಉಳ್ಳಾಗಡ್ಡಿ ಮಾತನಾಡಿ ಇಂದಿನ ಸಭೆ ನೋಡಿದರೆ ನಾವು ಜಾಗೃತ ರಾಗಿದ್ದೇವೆ ಎಂದು ನಮ್ಮ ಬೆನ್ನನ್ನು ನಾವು ತಟ್ಟಿಕೊಳ್ಳಲೇ ಬೇಕುಎಂದರಲ್ಲದೆ ನಮ್ಮಲ್ಲಿನ ಒಳಪಂಗಡವನ್ನು ತಲೆಯಿಂದ ಹೊರಗಿಟ್ಟು ನಾವೆಲ್ಲ ವೀರಶೈವ ಲಿಂಗಾಯತ ಒಂದೇ ಎಂದು ಮುನ್ನಡೆಯೋಣ ಎಂದರು.
ಬನವಾಸಿಯ ಜಯಶೀಲ ಗೌಡ ಮಾತನಾಡಿ ಸಮಾಜದಲ್ಲಿ ಶಿಸ್ತು ಇರಬೇಕು.ಪ್ರಭಾವ ಬೀರಿ ಹುದ್ದೆ ಪಡೆಯುವದು ಸಮಾಜಕ್ಕೆ ಕಂಟಕ ವಾಗುತ್ತದೆ.ಸಮಾಜದಲ್ಲಿ,ಬಲಿಷ್ಠ ರು, ಕಟ್ಟಕಡೆಯ ಬಡವರು ಇದ್ದಾರೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಬೆಳೆಸಬೇಕುಎಂದರು.
Lingayat News;
ಮುಂಡಗೋಡದ ಬಸವರಾಜ್ ಓಶಿಮಠ, ಮಹೇಶಹೊಸಕೊಪ್ಪ, ರಾಮಣ್ಣ, ವೀಣಾ ಓಶಿಮಠ ಮಾತನಾಡಿದರು. ಮಹೇಶ ದಾವಣಗೆರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ 1000ಕ್ಕಿಂತಲೂ ಅಧಿಕ ಸದಸ್ಯರಾಗಿದ್ದರೆ ಇದೀಗ ಅಧಿಕೃತ ವಾಗಿ ಜಿಲ್ಲಾ ಘಟಕವಾಗಿದ್ದು,ತಕ್ಷಣ ವೇ ಜಿಲ್ಲಾ ಘಟಕದ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿಸುವಂತೆ ರಾಜ್ಯ ಘಟಕಕ್ಕೆ ಹಾಕ್ಕೋತ್ತಾಯದ ನಿರ್ಣಯ ಮಂಡಿಸಿದರು.
ಹಾಗೂ ಪ್ರತಿ ಮನೆಗೊಂದು ಸದಸ್ಯತ್ವ ಘೋಷಣೆಯಾಗಬೇಕು ಎಂದರು.
ಕರಡು ಪ್ರತಿ ನಿರ್ಣಯಗಳನ್ನು ಸಭೆಯಲ್ಲಿ ಓದಿದ ನಂತರ ರಾಜ್ಯ ಘಟಕಕ್ಕೆ ಕಳಿಸಲು ಎಲ್ಲರೂ ಒಮ್ಮತದಿಂದ ಒಪ್ಪಿದರು.
ವೇದಿಕೆಯಲ್ಲಿ ಪ್ರಮುಖರಾದ ಬನವಾಸಿಯ ಗಣೇಶ ಸಣ್ಣಲಿಂಗಣ್ಣ ನವರ,ಶಿರಸಿಯ ಶಿವಯೋಗಿ ಹಂದ್ರಾಳ,ರೇವಣಸಿದ್ಧ ಯ್ಯ,ರಾಜೇಂದ್ರ ಗೌಡ,ಪ್ರಶಾಂತ ಗೌಡ,ಯಲ್ಲಾಪುರದ ಜಯರಾಜ್ ಗೋವಿ,ದಾಕ್ಷಾಯಣಿ ಓಶಿಮಠ, ಇತರರು ಇದ್ದರು. ಶಿರಸಿ ಅಕ್ಕನಬಳಗ ಅಧ್ಯಕ್ಷೆ ಶಶಿ ಕಲಾ ಚಂದ್ರಾಪಟ್ಟಣ ಹಾಗೂ ಸದಸ್ಯರು ಪ್ರಾರ್ಥಿಸಿದರು. ಮುಂಡಗೋಡ ತಾಲೂಕಾಧ್ಯಕ್ಷ ಬಸವರಾಜ ಪಾಟೀಲ ಪ್ರಸ್ತಾವಿಕಮಾತನಾಡಿದರು. ಮಂಜುನಾಥ ಪಾಟೀಲ ನಿರ್ವಹಿಸಿದರು.