ಶಿರಸಿ ಪೊಲೀಸರ ಕಾರ್ಯಾಚರಣೆ ಪಡಿತರ ಅಕ್ಕಿ ಅಕ್ರಮವಾಗಿ ಸಾಗಾಟ, ಇಬ್ಬರು ಆರೋಪಿಗಳು ಮಾಲು ಸಹಿತ ಅಂದರ್..!

Sirsi Police Operation;
ಶಿರಸಿ ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಅನ್ನಭಾಗ್ಯದ ಪಡಿತರ ಅಕ್ಕಿ ಸಂಗ್ರಹಿಸಿ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಮಾಲು ಮತ್ತು ವಾಹನ ಸಮೇತ ಬಂಧಿಸಿದ್ದಾರೆ.

ಶಿರಸಿಯ ಚಿಪಗಿ ನರೇಬೈಲಿನ ಉಬೇದ /ಸಲೀಂ ಜವಳಿ ಈತನು ಪಡಿತರ ಚೀಟಿದಾರರಿಂದ ಕಡಿಮೆ ಬೆಲೆಗೆ ಖರೀದಿಸಿದ ಅನ್ನಬಾಗ್ಯ ಯೋಜನೆಯ ಒಟ್ಟು 40 ಕ್ವಿಂಟಲ್ ಅಕ್ಕಿಯನ್ನು ತನ್ನ ಹಿಟ್ಟಿನ ಗಿರಣಿಯಲ್ಲಿ ಸಂಗ್ರಹಿಸಿಟ್ಟಿದ್ದ, ಹೀಗೆ ಸಂಗ್ರಹಿಸಿಟ್ಟ ಅನ್ನಭಾಗ್ಯದ ಅಕ್ಕಿಯನ್ನು ಈಸಳೂರಿನ ಸುನೀಲ್ ಮಹಾದೇವಪ್ಪ ನಡಗಿ ಎಂಬಾತ ಖರೀದಿಸಿದ್ದ.

ಇನ್ನು, ಹಾಗೆ ಪಡಿತರ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು, ಶಿರಸಿಯಿಂದ ಹುಬ್ಬಳ್ಳಿ ಕಡೆಗೆ ಟಾಟಾ ಕಂಪನಿಯ 407 ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಹೊಗುತ್ತಿದ್ದ. ಈ ವೇಳೆ ಶಿರಸಿಯ ಮಂಗಳೂರ ಹೊಟೆಲ್ ಕ್ರಾಸ್ ಹತ್ತಿರ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

Sirsi Police Operation;

ಈ ವೇಳೆ ಸುನೀಲ್ ಮಹಾದೇವಪ್ಪ ನಾಡಗಿ, ಅಲ್ತಾಫ್ ರೆಹಮತ್ ಉಲ್ಲಾ ಶೇಖ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ಅಂದಾಜು 1 ಲಕ್ಷ 36 ಸಾವಿರ ರೂ ಬೆಲೆಬಾಳುವ 40 ಕ್ವಿಂಟಾಲ್ (50 KG ತೂಕದ ಒಟ್ಟು 80 ಚೀಲ )ಪಡಿತರ ಅಕ್ಕಿಯನ್ನು ಹಾಗೂ ಅಕ್ರಮವಾಗಿ ಅಕ್ಕಿಯನ್ನು ಸಾಗಾಟ ಮಾಡಲು ಬಳಸಿದ ಟಾಟಾ ಕಂಪನಿಯ 407 ವಾಹನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಪಿ ದೀಪನ್ ಎಂ.ಎನ್ ಮಾರ್ಗದರ್ಶನದಲ್ಲಿ ಪಿಎಸ್ಐ ನಾಗಪ್ಪ. ಬಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ಕೈಗೊಂಡಿದ್ದರು.

ಈ ಸುದ್ದಿಗಳನ್ನೂ ಓದಿ👇

Heavy Rain Warning; ಇಂದಿನಿಂದ 2 ದಿನ ಭಾರೀ ಮಳೆ ಎಚ್ಚರಿಕೆ; ಉತ್ತರ ಕನ್ನಡ ಸೇರಿ ಕೆಲ ಜಿಲ್ಲೆಗಳಿಗೆ ರೆಡ್ ಅಲರ್ಟ್..!

ಉತ್ತರ ಕನ್ನಡದಲ್ಲಿ ಭಾರೀ ಮಳೆ ಸಂಭವ, ಎಚ್ಚರವಹಿಸಿ; ಜಿಲ್ಲಾಧಿಕಾರಿ

error: Content is protected !!