Murder Case Judgment; ಮುಂಡಗೋಡ ತಾಲೂಕಿನ ಲಕ್ಕೋಳ್ಳಿ ಬಳಿ 2021 ರ ಡಿಸೆಂಬರ್ 31 ರಂದು ನಡೆದಿದ್ದ, ಮೆಹಬೂಬ ಅಲಿ ಜಮಖಂಡಿ ಮರ್ಡರ್ ಕೇಸ್ ನ ತೀರ್ಪು ಹೊರಬಿದ್ದಿದೆ. ಕೊಲೆ ಆರೋಪ ಸಾಭೀತಾಗಿದ್ದು, ಮೂವರೂ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ.

ಶಿರಸಿ ನಗರ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ ಪೀಠಾಸೀನ ಶಿರಸಿ ನ್ಯಾಯದೀಶ ಕಿರಣ್ ಕಿಣಿ ತೀರ್ಪು ಪ್ರಕಟಿಸಿದ್ದಾರೆ.
ಏನು ಶಿಕ್ಷೆ..?
ಅಸಲು, ಪ್ರಮುಖ ಕೊಲೆ ಆರೋಪಿ ಮುಂಡಗೋಡ ತಾಲೂಕಿನ ಲಕ್ಕೊಳ್ಳಿಯ ಇಬ್ರಾಹಿಂ ಗೆ ಜೀವಾವಧಿ ಶಿಕ್ಷೆ, ಹಾಗೂ 10 ಸಾವಿರ ರೂ ದಂಡ ಪ್ರಕಟಿಸಲಾಗಿದೆ. ಅದ್ರಂತೆ, ಕೊಲೆಗೆ ಸಹಕರಿಸಿದ ಆರೋಪಿಗಳಾದ ಶರೀಫ್ ಮತ್ತು ನಾಝಿಯಾಗೆ ತಲಾ 3 ವರ್ಷ ಸಜೆ ಹಾಗು ತಲಾ 3 ಸಾವಿರ ರೂ ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೇ, ಕೊಲೆಯಾದ ಮೆಹಬೂಬ್ ಅಲಿ ಪತ್ನಿ ಬೇಬಿ ಆಯಿಶಾಗೆ 25 ಸಾವಿರ ರೂ ಪರಿಹಾರ ನೀಡುವಂತೆ ಮಹತ್ವದ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಪಬ್ಲಿಕ್ ಪ್ರೊಸಿಕ್ಯೂಟರ್ ರಾಜೇಶ ಎಂ ಮಳಗಿಕರ್ ಸಮರ್ಥವಾಗಿ ತಮ್ಮ ವಾದ ಮಂಡಿಸಿದ್ದರು.