Jan-Dhan Account re-KYC News: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಬುಧವಾರ ಮುಕ್ತಾಯಗೊಂಡ ಹಣಕಾಸು ಸಮಿತಿ ಸಭೆಯಲ್ಲಿ ರೆಪೋ ದರ ಯಥಾಸ್ಥಿತಿ ಕಾಯ್ದುಕೊಂಡಿದ್ದು ಅಷ್ಟೇ ಅಲ್ಲದೆ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದೆ. ಇದೇ ವೇಳೆಯಲ್ಲಿ ಪ್ರಧಾನ ಮಂತ್ರಿ ಜನ ಧನ್ ಯೋಜನೆಯು 10 ವರ್ಷ ಪೂರೈಸಿರವುದರ ಹಿನ್ನೆಲೆ ಗ್ರಾಹಕರ ಅಕೌಂಟ್‌ ರಿ-ಕೆವೈಸಿ ಮಾಡಬೇಕೆದು ಹೇಳಿದೆ.

ಹಣಕಾಸು ಸಮಿತಿಯ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಬ್ಯಾಂಕ್‌ಗಳು ಗ್ರಾಹಕರ ರಿ-ಕೆವೈಸಿ ಕುರಿತು ಕ್ಯಾಂಪ್ಸ್ ಶುರುಮಾಡಿವೆ ಎಂದು ತಿಳಿಸಿದ್ದಾರೆ.

2014ರಲ್ಲಿ ಶುರುವಾದ ಪ್ರಧಾನ ಮಂತ್ರಿ ಜನ ಧನ್ ಯೋಜನೆ(PMJDY) ಸುಾರ 56 ಕೋಟಿ ಗ್ರಾಹಕರ ಅಕೌಂಟ್‌ಗಳನ್ನು ಇದರಡಿ ಹೊಂದಿದೆ. ಈ ಅಕೌಂಟ್‌ಗಳು 2014 ರಿಂದ 2015ರ ನಡುವೆ ಓಪನ್ ಆಗಿದ್ದು, ಇದೀಗ 10 ವರ್ಷ ತಲುಪಿರುವ ಹಿನ್ನೆಲೆಯಲ್ಲಿ ಅಕೌಂಟ್‌ದಾರರ ರಿ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ.

” ಜನ-ಧನ್ ಯೋಜನೆಯು 10 ವರ್ಷಗಳನ್ನು ಪೂರೈಸಿದೆ, ತುಂಬಾ ಸಂಖ್ಯೆಯ ಅಕೌಂಟ್‌ಗಳು ಮರು-ಕೆವೈಸಿಗೆ ಒಳಗಾಗಿವೆ” ಎಂದು ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

ಪಿಎಂ ಜನ-ಧನ್‌ ಅಕೌಂಟ್‌ ರಿ-ಕೆವೈಸಿ ಮಾಡುವುದು ಹೇಗೆ?
ಗವರ್ನರ್ ಮಲ್ಹೋತ್ರಾ ತಿಳಿಸಿರುವಂತೆ ಬ್ಯಾಂಕ್‌ಗಳು ಮೂರು ತಿಂಗಳ ಅವಧಗೆ ಜುಲೈ 1ರಿಂದ ಸೆಪ್ಟೆಂಬರ್ 30ರವರೆಗೆ ಜನ-ಧನ್ ಅಕೌಂಟ್‌ಗಳ ರಿ-ಕೆವೈಸಿ ಮಾಡಲು ಕ್ಯಾಂಪ್‌ಗಳನ್ನು ತೆರೆದಿವೆ.

” ಬ್ಯಾಂಕ್‌ಗಳು ಪಂಚಾಯಿತಿ ಹಂತದಲ್ಲಿ ಜುಲೈ 1 ರಿಂದ 30 ಸೆಪ್ಟೆಂಬರ್‌ವರೆಗೆ ಕ್ಯಾಂಪ್‌ಗಳನ್ನು ತೆರೆದಿದ್ದು, ಗ್ರಾಹಕರಿಗೆ ಮನೆ ಬಾಗಿಲಿಗೆ ಸೇವೆಯನ್ನು ಒದಗಿಸುತ್ತಾ ಸೇವೆ ಸಲ್ಲಿಸುತ್ತಿವೆ” ಎಂದು ಮಲ್ಹೋತ್ರಾ ತಿಳಿಸಿದ್ದಾರೆ.

ಹೀಗಾಗಿ ಜನ ಧನ್‌ ಅಕೌಂಟ್‌ ಹೋಲ್ಡರ್ಸ್ ತಮ್ಮ ಕೆವೈಸಿ ಅಪ್‌ಡೇಟ್ ಮಾಡಲು ತಮ್ಮ ಹತ್ತಿರದ ಕ್ಯಾಂಪ್‌ಗಳಿಗೆ ತೆರಲಿ ಮಾಹಿತಿಯನ್ನು ಅಪ್‌ಡೇಟ್ ಮಾಡಬೇಕಿದೆ.

ಇದನ್ನು ಹೊರತುಪಡಿಸಿ ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ರಿ-ಕೆವೈಸಿ ಮಾಡುವುದರ ಹೊರತಾಗಿ, ಹಣಕಾಸು ಸೇರ್ಪಡೆ ಹಾಗೂ ಗ್ರಾಹಕರ ಕುದು ಕೊರತೆ ಪರಿಹಾರಕ್ಕಾಗಿ ಸೂಕ್ಷ್ಮ ವಿಮೆ ಮತ್ತು ಪಿಂಚಣಿ ಯೋಜನೆಗಳ ಮೇಲೆ ಶಿಬಿರಗಳು ಗಮನಹರಿಸಲವೆ ಎಂದು ಆರ್‌ಬಿಐ ಗವರ್ನರ್ ಮಲ್ಹೋತ್ರಾ ತಿಳಿಸಿದ್ದಾರೆ.

ರಿ-ಕೆವೈಸಿ ಎಂದರೇನು?
ರಿ-ಕೆವೈಸಿ ಅಥವಾ ನಿಮ್ಮ ಗ್ರಾಹಕರ ವಿವರಗಳನ್ನು ತಿಳಿದುಕೊಳ್ಳಿ ಎಂಬುದನ್ನು ಇಂತಿಷ್ಟು ಅವಧಿಯ ಬಳಿಕ ನವೀಕರಿಸುವುದಾಗಿದೆ. ಇದರಲ್ಲಿ ನಿಮ್ಮ ಇತ್ತೀಚಿನ ವಿಳಾಸ ಮತ್ತು ವೈಯಕ್ತಿಕ ವಿವರಗನ್ನು ನಿಮ್ಮ ಬ್ಯಾಂಕ್‌ನೊಂದಿಗೆ ಹಂಚಿಕೊಳ್ಳುವ ಪ್ರಕ್ರಿಯೆಯಾಗಿದೆ.

ಒಂದು ವೇಳೆ ನಿಮ್ಮ ಕೆವೈಸಿ ಅವಧಿ ಮೀರಿದ್ರೆ ಅಥವಾ ನೀವು ಯಾವುದಾದ್ರೂ ಮಾಹಿತಿ ಅಪ್‌ಡೇಟ್ ಮಾಡಬೇಕಿದ್ರೆ, ನೀವು ಬ್ಯಾಂಕ್‌ಗೆ ನೇರವಾಗಿ ಭೇಟಿ ಮಾಡಿ ರಿ-ಕೆವೈಸಿ ಮಾಡಿಸಿ.

ಜನ-ಧನ್ ಅಕೌಂಟ್ ಬೆನೆಫಿಟ್ಸ್‌
ಪ್ರಧಾನ ಮಂತ್ರಿ ಜನ-ಧನ್ ಅಕೌಂಟ್‌ ಅನೇಕ ಬೆನಿಫಿಟ್ಸ್ ಹೊಂದಿದ್ದು, ಇವುಗಳಲ್ಲಿ ಶೂನ್ಯ ಬ್ಯಾಲೆನ್ಸ್ ಹೊಂದಿರುವ ಸೇವಿಂಗ್ಸ್‌ ಅಕೌಂಟ್‌, ಡೆಪಾಸಿಟ್ ಮೇಲೆ ಬಡ್ಡಿ, ರುಪೇ ಡೆಬಿಟ್ ಕಾರ್ಡ್ ಜೊತೆಗೆ ಅಪಘಾತ ವಿಮೆ ಮತ್ತು 10,000 ರೂಪಾಯಿವರೆ ಓವರ್‌ಡ್ರಾಫ್ಟ್ ಸೌಲಭ್ಯವು ಹೊಂದಿದೆ. ಜನ-ಧನ್ ಅಕೌಂಟ್‌ಗಳನ್ನ ಹೆಚ್ಚಾಗಿ ಸಬ್ಸಿಡಿಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಲು ಬಳಸಲಾಗಿದೆ.

 

error: Content is protected !!