ಕ್ಷೇತ್ರ ಸಮನ್ವಯಾಧಿಕಾರಿ ಹುದ್ದೆಯಿಂದ ರಮೇಶ್ ಅಂಬಿಗೇರಗೆ ಕೋಕ್..! ಪರಶುರಾಮ್ ಅಟ್ಟಣಗಿ ನೂತನ ಸಮನ್ವಯಾಧಿಕಾರಿ, DDPI ಆದೇಶ..!

Education Department: ಮುಂಡಗೋಡ: ಕಾತೂರಿನ ಪ್ರೌಢ ಶಾಲೆಯಲ್ಲಿ ಕ್ರೀಡಾ ಸಾಮಗ್ರಿ ಸೇರಿದಂತೆ ವಿವಿಧ ಅನುದಾನವನ್ನು ಸಮರ್ಪಕವಾಗಿ ನಿರ್ವಹಿಸದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಪ್ರಬಾರ ಹುದ್ದೆಯಲ್ಲಿದ್ದ  ಸನ್ಮಾನ್ಯ ಶ್ರೀ ರಮೇಶ್ ಅಂಬಿಗೇರ ಅವರನ್ನು ಆ ಸ್ಥಾನದಿಂದ ತೆರವುಗೊಳಿಸಿ ಕಾತೂರಿನ ಸಹ ಶಿಕ್ಷಕ ಪರಶುರಾಮ ಅಟ್ಟಣಗಿ ಅವರನ್ನು ಆ ಹುದ್ದೆಗೆ ನೇಮಿಸಿ ಶಿರಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

DDPI ರವರ ಆದೇಶ ಪ್ರತಿ

ಈ ಹಿಂದೆಯಿಂದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಹುದ್ದೆಯಲ್ಲಿದ್ದ ಜಿ.ಎನ್ ನಾಯ್ಕ ಅವರು ನಿವೃತ್ತಿ ಆಗಿದ್ದರಿಂದ ತೆರವುವಾಗಿದ್ದ ಹುದ್ದೆಗೆ ಕಾತೂರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಮೇಶ ಅಂಬಿಗೇರ ಅವರಿಗೆ ಹೆಚ್ಚುವರಿಯಾಗಿ ಪ್ರಭಾರ ಹುದ್ದೆ ನೀಡಲಾಗಿತ್ತು. ಆದರೆ ಕಾತೂರಿನ ಸರಕಾರಿ ಪ್ರೌಡ ಶಾಲೆಯಲ್ಲಿ 2024 -25 ರ ಸಾಲಿನಲ್ಲಿ ಅಟಲ್ ಟೆಂಕರಿಂಗ್ ಲ್ಯಾಬ್ ಅನುದಾನ, ಕರಾಟೆ, ಕ್ರೀಡಾ ಸಾಮಗ್ರಿ ರಂಗೋತ್ಸವ, ಗ್ರಂಥಾಲಯ ಅನುದಾನದ ಹಣಕಾಸಿನ ವ್ಯವಹಾರವನ್ನು ವ್ಯವಸ್ಥಿತವಾಗಿ ನಿರ್ವಹಿಸದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿ ಹಿನ್ನೆಲೆಯಲ್ಲಿ ತಾಲೂಕಾ ಮಟ್ಟದ ಹುದ್ದೆಯಾದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಹುದ್ದೆಗೆ ಪ್ರಮುಖ ಹುದ್ದೆಯಲ್ಲಿ ಮುಂದುವರಿದುವುದು ಸಮಂಜಸ ಅಲ್ಲವೆಂದು‌ ಪರಿಗಣಿಸಿ ಈ ಕಛೇರಿಯ ಆದೇಶವನ್ನು ಹಿಂಪಡೆಯಲಾಗಿದೆ.

ಇದೀಗ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಹುದ್ದೆಯ ಪ್ರಭಾರಿಯಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಕಾತೂರಿನ ಸಹ ಶಿಕ್ಷಕ ಪರಶುರಾಮ ಅಟ್ಟಣಗಿ ಅವರನ್ನು ನೇಮಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.

error: Content is protected !!