Police Transfer News;
ಮುಂಡಗೋಡಿಗೆ PSI ಆಗಿ ಮಹಾಂತೇಶ್ ವಾಲ್ಮೀಕಿ ವರ್ಗಾವಣೆಗೊಂಡಿದ್ದಾರೆ. ಎಲ್ಲವೂ ಸರಿಯಾಗಿದ್ದಿದ್ದರೆ ಇಷ್ಟೊತ್ತಿಗಾಗಲೇ ಅಂದ್ರೆ ನಿನ್ನೆ ಮಂಗಳವಾರವೇ ಅವ್ರು ಮುಂಡಗೋಡಿಗೆ ಬಂದು ಅಧಿಕಾರ ಸ್ವೀಕರಿಸಬೇಕಾಗಿತ್ತು ಆದ್ರೆ, ಮಹಾಂತೇಶ್ ವಾಲ್ಮೀಕಿಯವರಿಗೆ ಇಲ್ಲಿಗೆ ಬರದಂತೆ ತಡೆಯಲು ಕಾಣದ ಕೈಗಳ ತಂಡವೊಂದು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದೆ ಅನ್ನೋ ರೂಮರ್ರು ಇಡೀ ತಾಲೂಕಾಧ್ಯಂತ ಹರಿದಾಡ್ತಿದೆ.
ಅದೇನೋ ಗೊತ್ತಿಲ್ಲ, ಸದ್ಯ ಕೇಳಿ ಬರ್ತಿರೋ ರೋಚಕ ಮಾಹಿತಿ ಆಧಾರದಲ್ಲಿ ಹೇಳೋದಾದ್ರೆ ಮತ್ತದೇ ಹಳಬರೊಬ್ರು ಮುಂಡಗೋಡಿನಲ್ಲಿ ಮತ್ತೊಮ್ಮೆ ಪ್ರತಿಷ್ಟಾಪನೆಗೊಳ್ಳಲು ಹರಸಾಹಸ ಪಡ್ತಿದಾರಂತೆ, ಹೀಗಾಗಿನೇ ಆ ಚೆಂಡು ಈಗ ಶಾಸಕ ಶಿವರಾಮ್ ಹೆಬ್ಬಾರ್ ಅಂಗಳದಲ್ಲಿ ಗಿರಕಿ ಹೊಡೆಯುತ್ತಿದೆ ಎನ್ನಲಾಗ್ತಿದೆ. ಆದ್ರೆ, ಯಲ್ಲಾಪುರ ಕ್ಷೇತ್ರದ ಪ್ರಭುದ್ಧ ಶಾಸಕ, ಎಲ್ಲವನ್ನೂ ಸೂಕ್ಷ್ಮವಾಗೇ ಗಮನಿಸುವ ಗುಣವಿರೋ ಕಾರಣಕ್ಕೆ ಅಳೆದು ತೂಗಿ ತೀರ್ಮಾನಿಸ್ತಾರೆ ಅನ್ನೋ ನಂಬಿಕೆಯಲ್ಲಿದ್ದಾರೆ ಜನ..
ಅವಧಿಗೂ ಮುನ್ನವೇ..!
ಅಸಲು, ಸದ್ಯ ಮುಂಡಗೋಡಿನಿಂದ ವರ್ಗಾವಣೆಗೊಂಡಿರೋ PSI ಪರಶುರಾಮ್ ಮಿರ್ಜಿಗಿ ಒಂದರ್ಥದಲ್ಲಿ ಜನಮನ್ನಣೆ ಗಳಿಸಿಕೊಂಡಿದ್ದರು, ಅವ್ರು ಠಾಣೆಯಲ್ಲಿ ಅದು ಹೇಗಿದ್ರೋ ಗೊತ್ತಿಲ್ಲ, ಆದ್ರೆ ಜನಸಮಾನ್ಯರಲ್ಲಿ ಆತ್ಮೀಯತೆ ಬೆಳೆಸಿಕೊಂಡಿದ್ದರು. ಹೀಗಾಗಿಯೋ ಏನೋ ಗೊತ್ತಿಲ್ಲ, ಮತ್ತದೇ ಕಾಣದ ಕೈಗಳು ಅವಧಿಗೂ ಮುನ್ನವೇ ಎತ್ತಂಗಡಿ ಮಾಡುವ ಎಲ್ಲಾ ಮಸಲತ್ತುಗಳನ್ನು ಮಾಡಿತ್ತು ಅನ್ನೊ ಗುಮಾನಿ ಇತ್ತು. ಹೇಗಾದ್ರೂ ಸರಿ ಪರಶುರಾಮ್ ಮಿರ್ಜಿಗಿಯವರನ್ನು ಸ್ಥಳವನ್ನೂ ಸೂಚಿಸದೇ ಮಂಗಳೂರಿನ IG ಆಫೀಸಲ್ಲಿ “ಕಡ್ಲೆಪುರಿ” ತಿನ್ನುವಂತೆ ಮಾಡಿಸಬೇಕು ಅನ್ನೋ ಜಿದ್ದಿಗೆ ಬಿದ್ದಿದ್ದರು ಎನ್ನಲಾಗಿದೆ. ಆದ್ರೆ, ಚಾಣಾಕ್ಷ ಪರಶುರಾಮ್ ಯಾರಿಗೂ ಕ್ಯಾರೇ ಎನ್ನದೇ ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆಗೆ “ವರ್ಗ” ವಾಗುವಂತೆ ನೋಡಿಕೊಂಡರಂತೆ ಅನ್ನೋದು ಒಂದು ಭಾಗ..!
ಅದ್ರಂತೆ ಆ ಕಡೆಯಿಂದ, ಅಂದ್ರೆ ಚಿತ್ತಾಕುಲ ಠಾಣೆಯಿಂದ ದಕ್ಷ ಪ್ರಮಾಣಿಕ ಹಾಗೂ ಜನಪರವಾಗಿರೋ PSI ಮಹಾಂತೇಶ್ ವಾಲ್ಮೀಕಿ ಮುಂಡಗೋಡಿಗೆ ನಿಯುಕ್ತಿಗೊಂಡಿದ್ದರು. ಆದ್ರೆ, ಹಾಗೆ ಆಗಿರೋ ವರ್ಗಾವಣೆಯನ್ನು ಮತ್ತದೇ ಕಾಣದ ಕೈಗಳು ಈಗ ಕ್ಯಾನ್ಸಲ್ ಮಾಡಿಸಲು “ರಾಜ” ಕೀಯ ಮಾಡ್ತಿವೆ ಅನ್ನೋ ರೂಮರ್ರು ಇಡೀ ಮುಂಡಗೋಡ ತಾಲೂಕಿನ ತುಂಬ ಹರಿದಾಡ್ತಿದೆ. ಬಿಸಿ ಬಿಸಿಯ ಚರ್ಚೆಗೆ ಕಾರಣವಾಗಿದೆ.
ಪ್ರಬುದ್ದ ಹೆಬ್ಬಾರ್ ಸಾಹೇಬ್ರ ಅಂಗಳದಲ್ಲಿ..!
ಅಸಲು, ಎಸ್ಟಿ ಜನಾಂಗಕ್ಕೆ ಸೇರಿರೋ PSI ಮಹಾಂತೇಶ್ ವಾಲ್ಮೀಕಿ ಜೆಂಟಲ್ಮನ್ ಆಫೀಸರ್ ಅನ್ನೋದು ಬಹುತೇಕ ಪೊಲೀಸರೇ ಹೇಳೋ ಮಾತು. ಮೇಲಾಗಿ, ಮುಂಡಗೋಡ ಠಾಣೆಗೆ ಅವ್ರು ಬಂದ್ರೆ ಇಲ್ಲಿನ ಕಾನೂನು ಸುವ್ಯವಸ್ಥೆಗೆ ಪೂರಕವಾಗಿ ನೊಂದವರ ಕಣ್ಣೀರು ಒರೆಸ್ತಾರೆ ಅನ್ನೋ ಭರವಸೆ ಇಟ್ಕೊಂಡಿದ್ದರು ಜನ. ಅಲ್ದೆ, ಅಕ್ರಮಿಗಳಿಗೆ ಕ್ಯಾರೇ ಅನ್ನದೇ ತಮ್ಮ ಪರಿಧಿಯಲ್ಲಿ ಪ್ರಭುದ್ಧ ಪೊಲೀಸಿಂಗ್ ಜಾರಿಗೊಳಿಸ್ತಾರೆ ಅನ್ನೋ ಮಾತು ಖುದ್ದು ಪೊಲೀಸ್ ಇಲಾಖೆಯ ವಲಯದಲ್ಲೇ ಕೇಳಿ ಬಂದಿದೆ. ಆದ್ರೆ, ಅದ್ಯಾಕೋ ಏನೋ ಕಾಣದ ಕೈಗಳು ಅವ್ರನ್ನೂ ಕೂಡ ಮುಂಡಗೋಡಿಗೆ ತರಲೇ ಬಾರದು ಅನ್ನೋ ಜಿದ್ದಿಗೆ ಬಿದ್ದಿದೆಯಂತೆ. ಹೀಗಾಗಿ, ನಿನ್ನೆ ಇಡೀ ದಿನ
ನೂತನವಾಗಿ ವರ್ಗಾವಣೆಗೊಂಡು ಬಂದಿರೋ ಮಹಾಂತೇಶ್ ವಾಲ್ಮೀಕಿ, ಯಲ್ಲಾಪುರದ ಶಾಸಕರ ಕಚೇರಿಯಲ್ಲೇ ಕಾಲ ಕಳೆಯುವಂತಾಗಿದೆಯಂತೆ.
ಛೇ ವ್ಯವಸ್ಥೆ ಹೀಗಿದೆಯಾ..?
ಅಸಲು, ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿರೊ ಮಹಾಂತೇಶ್ ವಾಲ್ಮೀಕಿ, ಯುವ ಪೊಲೀಸ್ ಅಧಿಕಾರಿ, ಹಲವು ಕನಸುಗಳನ್ನು ಇಟ್ಟುಕೊಂಡೇ ಇಲಾಖೆಯಲ್ಲಿ ಕಾರ್ಯ ನಿರ್ವಹಿಸ್ತಿದಾರೆ. ಆದ್ರೆ, ಇಂತಹ ಅಧಿಕಾರಿಗೆ ಈಗಾಗಲೇ ವರ್ಗಾವಣೆ ಆಗಿ, ಸ್ಥಳ ಸೂಚಿಸಿದ್ರು, ಅದನ್ನೇಲ್ಲ ರದ್ದುಗೊಳಿಸುವ ಹುನ್ನಾರ ನಡೆಯತ್ತೆ ಅನ್ನೋದಾದ್ರೆ, ಈ ವ್ಯವಸ್ಥೆ ಇಷ್ಟೊಂದು ಖರಾಬಾಗಿದೆಯಾ ಅನ್ನೊ ಪ್ರಶ್ನೆ ಪ್ರಜ್ಞಾವಂತರಿಗೆ ಕಾಡುತ್ತಿದೆ.
ಅಷ್ಟಕ್ಕೂ ಕಡ್ಡಿ ಆಡಿಸೋರು ಯಾರು..?
ಅಸಲು, ಮುಂಡಗೋಡ ಠಾಣೆಗೆ ಬಂದು ಕೂರಬೇಕಾಗಿದ್ದ PSI ಮಹಾಂತೇಶ್ ವಾಲ್ಮೀಕಿಯವರಿಗೆ ತೊಡರುಗಾಲು ಹಾಕಿದವರು ಯಾವುದೇ ರಾಜಕೀಯ ಪಕ್ಷದ ನಾಯಕರಂತೂ ಅಲ್ಲವೇ ಅಲ್ಲವಂತೆ, ಬದಲಾಗಿ ಅದೇ ಇಲಾಖೆಯಲ್ಲಿನ ಕೆಲವು “ಪ್ರ”ಭಾವಿ ಅನಕೊಂಡವರ ಕಾರುಬಾರಂತೆ. ಆದ್ರೆ, ಅಂತವರ ಪ್ರಭಾವಗಳಿಗೇಲ್ಲ ಶಾಸಕ ಹೆಬ್ಬಾರರು ಮಣೆ ಹಾಕ್ತಾರಾ..? ಇದೇ ಈಗಿನ ಯಕ್ಷ ಪ್ರಶ್ನೆಯಾಗಿದೆ. ಅಲ್ದೇ ಪೊಲೀಸ್ ಇಲಾಖೆಯಲ್ಲಿ ಅಂತವರಿಗೆ ಅಷ್ಟೊಂದು “ಪವರ್” ಇದೆಯಾ..? ಅರ್ಥವೇ ಆಗ್ತಿಲ್ಲ.
ವಿ.ಎಸ್.ಪಾಟೀಲರು ರೇಫರ್ ಮಾಡಿದ್ದಕ್ಕಾ..?
ಹಾಗೆ ನೋಡಿದ್ರೆ ಸದ್ಯ ಮುಂಡಗೋಡಿಗೆ PSI ಆಗಿ ಬಂದಿರೋ ಮಹಾಂತೇಶ್ ವಾಲ್ಮೀಕಿಯವರನ್ನು ಮಾಜಿ ಶಾಸಕ ವಿ.ಎಸ್.ಪಾಟೀಲರು ರೆಫರ್ ಮಾಡಿದ್ರಾ..? ಗೊತ್ತಿಲ್ಲ. ಆದ್ರೆ, ಇದನ್ನೇ ಮುಂದಿಟ್ಟುಕೊಂಡು ಮತ್ತದೇ ಕಾಣದ ಕೈಗಳು “ಕಡ್ಡಿ” ಗೀರುವ ಕೆಲಸ ಮಾಡ್ತಿದೆ ಅನ್ನೋ ಮಾತಿದೆ, ಶಾಸಕ ಹೆಬ್ಬಾರ್ ಹಾಗೂ ಪಾಟೀಲರ ನಡುವೆ ಫಿಟ್ಟಿಂಗ್ ಇಡ್ತಿದೆ ಅಂತಾ ಹೇಳಲಾಗ್ತಿದೆ. ಆದ್ರೆ, ಇಂತಹ ಕಿವಿ ಕಚ್ಚುವ ಹೀನ ಚಾಳಿಯವರಿಗೇಲ್ಲ ಶಿವರಾಮ್ ಹೆಬ್ಬಾರ್ ಸಾಹೇಬ್ರು ಯಾವತ್ತೂ ಮಣೆ ಹಾಕಲ್ಲ ಅಂತಾ ಜನ ಮಾತಾಡಿಕೊಳ್ತಿದಾರೆ.
ದಕ್ಷರು ಬರಲಿ…!
ಅದೇನೇ ಆಗಲಿ, ಅದ್ಯಾರೇ ಇರಲಿ ಮುಂಡಗೋಡಿಗೆ ದಕ್ಷ, ನಿಷ್ಟುರ, ಪ್ರಾಮಾಣಿಕ PSI ಬರಬೇಕು ಅನ್ನೋದು ಸಾರ್ವಜನಿಕರ ಆಶಯವಿದೆ. ಹೆಬ್ಬಾರ್ ಸಾಹೇಬರೂ ಕೂಡ ಗಮನಿಸ್ತಾರೆ ಅನ್ನೋ ನಂಬಿಕೆಯಿದೆ. ಅಷ್ಟೆ..