Police shoot News; ಯಲ್ಲಾಪುರದಲ್ಲಿ ಮತ್ತೊಂದು ಫೈರಿಂಗ್ ದಾಖಲಾಗಿದೆ. ಈ ಬಾರಿ ರಾಮನಗರದ ಕುಖ್ಯಾತ ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಹಲವು ಪ್ರಕರಣದಲ್ಲಿ ಬೇಕಾಗಿದ್ದು, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗಲು ಯತ್ನಿಸಿದವನ ಕಾಲಿಗೆ ಗುಂಡು ಹಾಕಲಾಗಿದೆ. ಈ ಮೂಲಕ ಅಕ್ರಮ ಹಾಗೂ ಅಂದಾ ದರ್ಬಾರ್ ಮಾಡುವ ಅಡ್ನಾಡಿಗಳಿಗೆ ಜಿಲ್ಲೆಯಲ್ಲಿ ಜಾಗ ಇಲ್ಲಾ ಅಂತಾ ಪೊಲೀಸ್ರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಅಂದಹಾಗೆ, ರಾಮನಗರದ ತುಕಾರಾಮ್ @ ಪ್ರವೀಣ ಮನೋಹರ ಸುಧೀರ್( 37) ಅನ್ನೋ ರೌಡಿಶೀಟರ್ ಗೆ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಸಮೀಪದಲ್ಲಿ ಫೈರಿಂಗ್ ಮಾಡಲಾಗಿದೆ. ಪೊಲೀಸರ ಮೇಲೆಯೇ ಹಲ್ಲೆಮಾಡಿ, ಧಮ್ಕಿ ಹಾಕಿದ್ದ ಈ ರೌಡಿಶೀಟರ್ ಈಗ ಖಾಕಿ ಬಲೆಯಲ್ಲಿ ತಗಲಾಕ್ಕೊಂಡಿದ್ದಾನೆ.
2015 ರಿಂದಲೂ….!
ಅಂದಹಾಗೆ, ಪ್ರವೀಣ ತಂದೆ ಮನೋಹರ ಸುಧೀರ ಎಂಬುವ 37 ವರ್ಷದ ವ್ಯಕ್ತಿ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಆ ಭಾಗದಲ್ಲಿ ಕುಖ್ಯಾತಿ ಪಡೆದಿದ್ದ. ಹೀಗಾಗಿ, 2015 ನೇ ಸಾಲಿನಿಂದ ಸತತವಾಗಿ ಪೊಲೀಸರು ನಿಗಾ ವಹಿಸಿರ್ತಾರೆ. ಗೂಂಡಾ ಅಸಾಮಿ ಪ್ರವೀಣ ಮನೋಹರ ಸುಧೀರ ಇತನು ತನ್ನ ಗುಂಡಾ ಪ್ರವೃತ್ತಿಯಿಂದ ಸಾರ್ವಜನಿಕ ಶಾಂತಿ ಸುವ್ಯವಸ್ಥೆಯ ನಿರ್ವಹಣೆಗೆ ತೀರಾ ಪ್ರತಿಕೂಲ ಪರಿಣಾಮ ಉಂಟುಮಾಡುವ ಶಾಂತಿಯುತ ಜೀವನ ನಡೆಸುವ ನಾಗರೀಕರಿಗೆ ಸಮಾಜಕ್ಕೆ ಮತ್ತು ಸ್ವತ್ತಿಗೆ ಹಾನಿಯುಂಟುಮಾಡುವ ವ್ಯಕ್ತಿಯಾಗಿರುತ್ತಾನೆ. ಅಲ್ಲದೇ ತನ್ನ ಹುಂಬ ಹಾಗೂ ಕ್ರೂರ ಸ್ವಭಾವದ ನಡುವಳಿಕೆಯಿಂದ ಗಂಭೀರ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟುಮಾಡುವ ಪ್ರವೃತ್ತಿಯವನಾಗಿದ್ದ.
ಪೊಲೀಸರ ಮೇಲೂ ದಾಳಿ ಮಾಡಿದ್ದ.!
ನಟೋರಿಯಸ್ ರೌಡಿ ಪೊಲೀಸರ ಮೇಲೆ 13 ಮಾರ್ಚ 2025 ರಲ್ಲಿ ದಾಳಿ ಮಾಡಿದ ನಂತರ ತಲೆ ಮರೆಸಿಕೊಂಡಿದ್ದ. ಭಗವತಿ ಕಣ್ಣಿಗೇರಿ ಕಾಡಿನಲ್ಲಿ ಅಡಗಿಕೊಂಡಿದ್ದ. ಅಡಗುತಾಣದ ಬಗ್ಗೆ ಪೊಲೀಸರಿಗೆ ಖಚಿತ ಸುಳಿವು ಪತ್ತೆಯಾಗಿತ್ತು . ಕಣ್ಣಿಗೇರಿ ಬಳಿ ರೌಡಿಯನ್ನು ಬಂಧಿಸಲು ಮುಂದದಾಗ ಆತ ಕಲ್ಲು ಮತ್ತು ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ. ಆತ್ಮ ರಕ್ಷಣೆಗೆ ಪೋಲಿಸರು ಆತನ ಕಾಲಿಗೆ ಗುಂಡು ಹಾರಿಸಿ, ಆವನನ್ನು ವಶಕ್ಕೆ ಪಡೆದಿದ್ದಾರೆ.
Police shoot News;
ರಾಮನಗರ ನಿವಾಸಿ ಪ್ರವೀಣ ಸುಧೀರ್ ಮೇಲೆ ಹಲ್ಲೆ ಸೇರಿದಂತೆ 16 ಪ್ರಕರಣ ದಾಖಲಾಗಿವೆ. ಕೊಲೆ ಯತ್ನ,ಜೀವ ಬೆದರಿಕೆ, ಮಾನಭಂಗ, ಜಾತಿ ನಿಂದನೆ, ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಹಲವು ಪ್ರಕರಣಗಳು ಈತನ ಮೇಲಿವೆ . ತಲೆಮರೆಸಿ ಕೊಂಡು ತಿರುಗಾಡುತ್ತಿದ್ದ. ಸೋಮವಾರ ಕಣ್ಣಿಗೇರಿ ಬಳಿ ಈತ ಪೋಲಿಸ್ ಬಲೆಗೆ ಸಿಕ್ಕಿದ್ದಾನೆ. ಈ ಸಂದರ್ಭದಲ್ಲಿ ಯಲ್ಲಾಪುರ ಠಾಣೆಯ ಮೂವರು ಪೋಲಿಸರು, ಸಿಬ್ಬಂದಿಗೆ ಪಿಎಸ್ಐ ಮಹಾಂತೇಶ್ ನಾಯಕಗೆ ಗಾಯಗಳಗಿವೆ. ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿದೆ .ಉ.ಕ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಾರಾಯಣ್ ಆಸ್ಪತ್ರೆಗೆ ಭೇಟಿ ನೀಡಿದರು. ಡಿಎಸ್ ಪಿ, ಶಿವಾನಂದ ಮದರಕಂಡಿ, ಡಿಎಸ್ಪಿ ಗೀತಾ ಪಾಟೀಲ್ , ಸ್ಥಳದಲ್ಲಿದ್ದು, ಪೊಲೀಸರ ಚಿಕಿತ್ಸೆಗೆ ನೆರವಾಗಿದ್ದಾರೆ. ರೌಡಿ ಪ್ರವೀಣ ಸುಧೀರನನ್ನು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ👉 ಉತ್ತರ ಕನ್ನಡದ ಖಡಕ್ ಎಸ್ಪಿ ಎಂ.ನಾರಾಯಣ್ ಏಕಾಏಕಿ ವರ್ಗಾವಣೆ, ನೂತನ ಎಸ್ಪಿಯಾಗಿ ದೀಪನ್ ಎಂ.ಎನ್..!