Education Department News;
ಮುಂಡಗೋಡ ತಾಲೂಕಿನ ಚಿಗಳ್ಳಿ ಸರ್ಕಾರಿ ಪ್ರೌಢಶಾಲೆಯ ಹಕೀಕತ್ತುಗಳು ದಿನಕ್ಕೊಂದು ತಿರುವು ಪಡೆದುಕೊಳ್ತಿವೆ. ಕಳೆದ ಎರಡು ದಿನಗಳ ಹಿಂದಷ್ಟೇ, ಈ ಶಾಲೆಯ ಕೆಲವು ಪಾಲಕರು, ಹಲವು ವಿಷಯಗಳ ಒಕ್ಕಣಿಕೆ ಬರೆದು ಬಿಇಓ, ಡಿಡಿಪಿಐ ಸೇರಿದಂತೆ ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳಿಗೆ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ ಪಬ್ಲಿಕ್ ಫಸ್ಟ್ ನ್ಯೂಸ್ ಕೂಡ ವರದಿ ಮಾಡಿತ್ತು.
ಇದು ದೂರಿಗೆ, ಪ್ರತಿದೂರು..!
ಆದ್ರೆ ಇದೀಗ, ಅದೇ ಪ್ರೌಢಶಾಲೆಯ ಅಂಗಳದಿಂದ ಮತ್ತೊಂದು ಪ್ರತಿದೂರು ಬಂದಿದೆ. ಅಸಲು ಸದ್ಯ ಬಂದಿರೋ ಪ್ರತಿದೂರಿನಲ್ಲಿ ಹಲವು ಆರೋಪಗಳನ್ನು ಮಾಡಲಾಗಿದೆ. ಎರಡು ದಿನದ ಹಿಂದೆ ನೀಡಿರೋ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ, ಬದಲಾಗಿ ಅದೇಲ್ಲ ಸುಳ್ಳು ಆರೋಪವಾಗಿದೆ. ಶಾಲೆಯ ಪರಿಸರವನ್ನು ಹಾಳು ಮಾಡಲು ಕೆಲವರು ಕುತಂತ್ರ ಮಾಡ್ತಿದಾರೆ ಅಂತಾ ಸದ್ಯ ಅದೇ ಶಾಲೆಯ ಕೆಲ ಪಾಲಕರು ಆರೋಪಿಸಿದ್ದಾರೆ. ಇನ್ನು, ಬಿಇಓ, ಡಿಡಿಪಿಐ ಗೆ ಮನವಿ ಪತ್ರ ಬರೆದು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದಾರೆ.
ಸುಳ್ಳು ಹೇಳಿ ಸಹಿ ಪಡೆದ್ರಾ..?
ಅಸಲು, ಮೊನ್ನೆ ನೀಡಿದ್ದ ದೂರಿನಲ್ಲಿ ಸಹಿ ಮಾಡಿದ್ದ ಕೆಲವು ಪಾಲಕರು, ಅವತ್ತು ನೀಡಿರೋ ದೂರಿನಲ್ಲಿ ನಮ್ಮ ಸಹಿ ಇರೋದು ನಿಜ, ಆದ್ರೆ, ಅವ್ರು ನಮಗೆ ಬೇರೆ ಕಾರಣವನ್ನು ಹೇಳಿ ಸಹಿ ಮಾಡಿಸಿಕೊಂಡಿದ್ದಾರೆ, ಅವ್ರು ಅವತ್ತಿನ ದೂರಿನಲ್ಲಿ ಮಾಡಿರೋ ಆರೋಪಗಳು ಸುಳ್ಳು, ನಮ್ಮ ಪ್ರೌಢಶಾಲೆಯಲ್ಲಿ ಎಲ್ಲವೂ ಸರಿಯಾಗಿದೆ ಅಂತಾ ಲಿಖಿತವಾಗೇ ಸ್ಪಷ್ಟನೆ ನೀಡಿದ್ದಾರೆ.
ಆರೋಪವೇನು..?
ಸದ್ಯ ಮನವಿ ಪತ್ರದಲ್ಲಿ ಆರೋಪಿಸಿರುವಂತೆ,
2022-23, 2023-24 ರಲ್ಲಿ ಮುಖ್ಯ ಶಿಕ್ಷಕರ ಹುದ್ದೆಯ ಪ್ರಭಾರವನ್ನು ವಹಿಸಿದ್ದ ಶಿಕ್ಷಕರು ಮತ್ತು ಆ ಅವಧಿಯ ಎಸ್ ಡಿ ಎಂ ಸಿ ಅಧ್ಯಕ್ಷರು, ಹಲವು ಅಕ್ರಮಗಳನ್ನು ಮಾಡಿದ್ದಾರೆ. ಅವರು ಶಾಲೆಯ ವಿಶೇಷ ಚೇತನ ಮಕ್ಕಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಮತ್ತು ಇಕೋ ಕ್ಲಬ್ಬಿನ ಹಣವೂ ಕೂಡ ದುರ್ಬಳಕೆಯಾಗಿದೆ ಅಂತಾ ಆರೋಪಿಸಿದ್ದಾರೆ.
ಮಾಜಿ ಅಧ್ಯಕ್ಷರೇ ಏನಿದೇಲ್ಲ..?
ಮಾಜಿ ಎಸ್ ಡಿಎಂಸಿ ಅಧ್ಯಕ್ಷರು ಅವರ ಅವಧಿ ಮುಗಿದರೂ ಕೆಲವು ವೋಚರ್ಸ ಗಳಿಗೆ ಸಹಿ ಮಾಡಿ ಹಣವನ್ನು ತೆಗೆದುಕೊಂಡಿದ್ದಾರೆ. ಇವತ್ತಿನವರೆಗೂ ಶಾಲೆಯ ನಗದು ಪುಸ್ತಕವನ್ನು ಒದಗಿಸಿಲ್ಲ ಮತ್ತು ಎರಡು ಶೌಚಾಲಯಗಳನ್ನು ಅನುಮತಿ ಇಲ್ಲದೆ ಒಡೆದಿದ್ದಾರೆ. ಮಾಜಿ ಎಸ್‌ಡಿಎಂಸಿ ಸಮಿತಿ ಇದ್ದಾಗ ಶಾಲೆಯ ಹಳೆಯ ವಸ್ತುಗಳನ್ನು ಮಾರಿದ್ದಾರೆ. ಶಾಲೆಯನ್ನು ಅಭಿವೃದ್ಧಿ ಮಾಡದೆ ಹಣವನ್ನು ತೆಗೆದಿದ್ದಾರೆ. ನಮ್ಮ ಶಾಲೆಯ ವಾತಾವರಣ ಹಾಳಾಗುವುದಕ್ಕೆ ಕಾರಣ ಹಳೆ SDMC ಅಧ್ಯಕ್ಷರು ಮತ್ತು ಆಗಿನ ಪ್ರಭಾರ ಶಿಕ್ಷಕರು ಅಂತಾ ಚಿಗಳ್ಳಿ ಪ್ರೌಢಶಾಲೆಯ ಕೆಲ ಪಾಲಕರು ಆರೋಪಿಸಿದ್ದಾರೆ.
Education Department News;
ಹೀಗಾಗಿ, ಈ ಎಲ್ಲ ವಿಷಯಗಳನ್ನು ಗಮನಿಸಿ ದಾಖಲೆಗಳನ್ನು ಪರಿಶೀಲಿಸಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಬಿಇಓ ಗೆ ಪಾಲಕರು ಲಿಖಿತವಾಗಿ ಆಗ್ರಹಿಸಿದ್ದಾರೆ. ಅಲ್ದೆ, ಈಗಿನ ಪ್ರಭಾರ ಮುಖ್ಯೋಪಾಧ್ಯಾಯರು ಮತ್ತು SDMC ಸಮಿತಿಯವರು, ಹಳೆಯ ಮುಖ್ಯೋಪಾಧ್ಯಾಯರು ಹಾಗೂ SDMC ಅಧ್ಯಕ್ಷರು ಮಾಡಿದ ಹಗರಣಗಳನ್ನು ಬಯಲಿಗೆ ಎಳೆಯುತ್ತಿರುವುದರಿಂದ, ಪೋಷಕರಲ್ಲಿ ನೈಜ ವಿಷಯವನ್ನು ಹೇಳಿರುವುದಿಲ್ಲ. ಸುಳ್ಳು ಸುಳ್ಳು ವಿಷಯಗಳನ್ನು ಹಬ್ಬಿಸುತ್ತಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೀಗಾಗಿ, ಈ ಎಲ್ಲಾ ವಿಷಯಗಳನ್ನು ತನಿಖೆ ಮಾಡಿಸಿ ಆ ಹಣವನ್ನು ಶಾಲೆಗೆ ಮರಳಿಸಬೇಕು. ಅವರ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕೆಂದು ಅಂತಾ ಪಾಲಕರು ಬಿಇಓ ಹಾಗೂ ಡಿಡಿಪಿಐ ರವರಿಗೆ ಆಗ್ರಹಿಸಿದ್ದಾರೆ.
ಒದನ್ನೂ ಓದಿ,👉 ಮುಂಡಗೋಡಿನ ಇಂದಿರಾನಗರ ಬಳಿ ಬೈಕ್ ಅಪಘಾತ, ಇಂದೂರಿನ ವ್ಯಕ್ತಿಗೆ ಗಂಭೀರ ಗಾಯ..!
ಅಸಲು, ಇಷ್ಟೇಲ್ಲ ಹಕೀಕತ್ತುಗಳಿಗೆ ಕಾರಣವಾಗಿರೋ ಅದ್ಯಾರೇ ಇರಲಿ, ಅಂತವರ ಮೇಲೆ ಸೂಕ್ತ ಕ್ರಮಗಳು ನಡೆಯಬೇಕಿದೆ. ಪಾಲಕರು ಆರೋಪಿಸಿರುವ ಪ್ರಕಾರ, ಹಳೆಯ SDMC ಹಾಗೂ ಮುಖ್ಯಶಿಕ್ಷಕರಿಂದ ಅಕ್ರಮ ನಡೆದಿದ್ದರೆ ತಕ್ಷಣವೇ ಇಲಾಖೆಯ ಅಧಿಕಾರಿಗಳು ಸೂಕ್ತ ತನಿಖೆ ಕೈಗೊಂಡು, ಕ್ರಮ ಕೈಗೊಳ್ಳಬೇಕಿದೆ. ಅಂದಾಗ ಮಾತ್ರ ಚಿಗಳ್ಳಿ ಪ್ರೌಢಶಾಲೆಯ ಪರಿಸರದಲ್ಲಿ ಕುತಂತ್ರಗಳಿಗೆ ಕಡಿವಾಣ ಹಾಕಬಹುದೇನೋ..!