Doctor Raid; ಮುಂಡಗೋಡ ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಮತ್ತವರ ಟೀಂ “ಏಕದಂ” ಕಾರ್ಯಾಚರಣೆ ನಡೆಸಿದ್ದಾರೆ. ಆಸ್ಪತ್ರೆಯ ಆವರಣದಲ್ಲಿರೋ ಕ್ಯಾಂಟೀನ್ ಹಾಗೂ ಜನೌಷಧಿ ಕೇಂದ್ರದ ಮೇಲೆ ದಾಳಿ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಕ್ಯಾಂಟೀನ್ ಮೇಲೆ..! ಆಸ್ಪತ್ರೆಯ ಆವರಣದಲ್ಲಿರೋ ಕ್ಯಾಂಟೀನ್ ನಲ್ಲಿ ಅಧಿಕಾರಿಗಳ ತಂಡ ದಾಳಿ ಮಾಡಿದಾಗ ಅಲ್ಲಿ ಸ್ವಚ್ಚತೆಯ ಕೊರತೆ ಕಂಡುಬಂದಿದೆ ಎನ್ನಲಾಗಿದೆ. ಅಲ್ದೆ, ಅಸಲೀ ಟೆಂಡರದಾರರನ್ನು ಬಿಟ್ಟು ಬೇರೆಯವರು ಕ್ಯಾಂಟೀನ್ ನಡೆಸುತ್ತಿರುವುದು ಕಂಡು ಬಂದಿದೆಯಂತೆ ಹಾಗೂ ಬೇರೆಯವರ ಫೋನ್ ಪೇ ಸ್ಕ್ಯಾನರ್ ಇರುವುದನ್ನು ಪ್ರಶ್ನೆ ಮಾಡಿ, ಅಸಲೀ ಟೆಂಡರ್ ದಾರರಿಗೆ ನೋಟಿಸ್ ಜಾರಿಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಜನೌಷಧಿ ಕೇಂದ್ರದಲ್ಲೂ ಅಕ್ರಮ..? ಇನ್ನು ಇದೇ ಆಸ್ಪತ್ರೆ ಆವರಣದಲ್ಲಿರೋ ಜನಔಷಧಿ ಕೇಂದ್ರದಲ್ಲಿಯೂ ಅಕ್ರಮ ನಡೀತಿದೆಯಾ ಅನ್ನೋ ಅನುಮಾನದಲ್ಲಿ ದಾಳಿ ಮಾಡಿದ ಅಧಿಕಾರಿಗಳಿಗೆ, ಜನೌಷಧಿ ಕೇಂದ್ರದಲ್ಲಿ ಬ್ರಾಂಡೆಡ್ ಔಷಧಿ ಇರುವುದು ಪತ್ತೆಯಾಗಿದೆ. ಹೀಗಾಗಿ, ಸಂಬಂಧಪಟ್ಟವರಿಗೆ ನೋಟಿಸ್ ನೀಡಲು ತಿಳಿಸಿದ್ದಾರೆ ಎನ್ನಲಾಗಿದೆ. ಸಾರ್ವಜನಿಕರಿಂದ ದೂರು..! ಅಸಲು, ಮುಂಡಗೋಡ ತಾಲೂಕಾಸ್ಪತ್ರೆಯ ಆವರಣದಲ್ಲಿನ ಕ್ಯಾಂಟೀನ್ ಹಾಗೂ ಜನೌಷಧಿ ಕೇಂದ್ರದ ವಿರುದ್ಧ...
Top Stories
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ, ಸಸ್ಪೆಂಡ್..! ಹಲವು ದಿನಗಳ ಗುದುಮುರುಗಿ ಬಳಿಕ ಶಿರಸಿ ಡಿಡಿಪಿಐ ಖಡಕ್ ಆದೇಶ..!
ಮುಂಡಗೋಡ ಮಾದರಿ ಶಾಲೆಯ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ..! ಆಸ್ಪತ್ರೆಗೆ ದಾಖಲು..!
ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ..! ಮೊಮ್ಮಕ್ಕಳು, ಮಗನೊಂದಿಗೆ ಸಾವು ಕಂಡ ತಂದೆ..!
ಮುಂಡಗೋಡ ಪೊಲೀಸರ ತಡರಾತ್ರಿ ಕಾರ್ಯಾಚರಣೆ..! “ಚರಸ್” ದಂಧೆಯಲ್ಲಿ ತೊಡಗಿದ್ದ ಇಂಜಿನೀಯರ್ ಅಂದರ್..!
ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!
ಯಲ್ಲಾಪುರ ಪೊಲೀಸ್ರ ಸಿನಿಮಿಯ ರೀತಿ ದಾಳಿ..!! ಉಮ್ಮಚಗಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಕಳ್ಳನ ಗ್ಯಾಂಗ್ ಅಂದರ್..!
ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!
ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಇದೇಂಥ ಸ್ಥಿತಿ..? ಈ ಮಕ್ಕಳಿಗೆ ನುಸಿ ತುಂಬಿರೋ ದವಸದ ಆಹಾರವೇ ಗತಿಯಾ..?
ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಡಗೋಡಿನ ಮಹದೇಶ್ವರ ಲಿಂಗದಾಳ, RTI ಹೆಸ್ರಲ್ಲಿ ಈ ವಂಚಕ ಪಡೆ ಮಾಡಿದ್ದೇನು..?
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಇಸ್ರೋ-ನಾಸಾ ಜಂಟಿ ಸಹಭಾಗಿತ್ವದ ನಿಸಾರ್ ಉಪಗ್ರಹ ಉಡಾವಣೆ..!
Nisar Mission: ಭೂ ವೀಕ್ಷಣಾ ಉಪಗ್ರಹ ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಅನ್ನು ಇಂದು ಇಸ್ರೋ ತನ್ನ GSLV-F16 ರಾಕೆಟ್ ಮೂಲಕ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡುತ್ತಿದೆ. ಈ ಉಪಗ್ರಹವನ್ನು ಸನ್-ಸಿಂಕ್ರೋನಸ್ ಆರ್ಬಿಟ್‌ನಲ್ಲಿ ಇರಿಸಲಾಗುತ್ತದೆ. ಇದು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಡೆಯುತ್ತಿರುವ 102ನೇ ಉಡಾವಣೆ. ಅಷ್ಟೇ ಅಲ್ಲದೇ, GSLV-F16ರ 18ನೇ ಉಡಾವಣೆಯೂ ಹೌದು. ಸನ್-ಸಿಂಕ್ರೋನಸ್ ಆರ್ಬಿಟ್‌ಗೆ ಹೋಗಲು ಇದು GSLV ರಾಕೆಟ್‌ನ ಮೊದಲ ಯೋಜನೆಯಾಗಿದೆ. ನಿಸಾರ್ 2,392 ಕೆ.ಜಿ ತೂಕ ಹೊಂದಿದೆ.ಇಸ್ರೋ ಈ ಹಿಂದೆ ರಿಸೋರ್ಸ್‌ಸ್ಯಾಟ್ ಮತ್ತು RISAT ಸೇರಿದಂತೆ ಭೂ ವೀಕ್ಷಣಾ ಉಪಗ್ರಹಗಳನ್ನು ಉಡಾವಣೆ ಮಾಡಿದ್ದರೂ, ಈ ಉಪಗ್ರಹಗಳಿಂದ ಸಂಗ್ರಹಿಸಿದ ದತ್ತಾಂಶ ಭಾರತದ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಇಸ್ರೋ ಮತ್ತು ನಾಸಾ ಜಂಟಿಯಾಗಿ ಇದೇ ಮೊದಲ ಬಾರಿಗೆ ಇಡೀ ಭೂಮಿಯ ಮೇಲೆ ಕಣ್ಗಾವಲಿಡುವ ಉಪಗ್ರಹದ ಉಡಾವಣೆ ಮಾಡುತ್ತಿವೆ. ನಿಸಾರ್ ಪ್ರತಿ 12 ದಿನಗಳಿಗೊಮ್ಮೆ ಭೂ ಮೇಲ್ಮೈ ಮತ್ತು ಹಿಮಾವೃತ ಪ್ರದೇಶಗಳ ಮೇಲ್ಮೈಯನ್ನು...
ಆಕಸ್ಮಿಕವಾಗಿ ಕಳೆನಾಶಕ ಸೇವಿಸಿದ್ದ (ಕೊಪ್ಪ) ಇಂದಿರಾನಗರದ ವ್ಯಕ್ತಿ ಸಾವು..!
Death News; ಮುಂಡಗೋಡ ತಾಲೂಕಿನ ಕೊಪ್ಪ ಇಂದಿರಾನಗರದಲ್ಲಿ ಆಕಸ್ಮಿಕವಾಗಿ ಕಳೆನಾಶಕ ಸೇವಿಸಿದ್ದ ವ್ಯಕ್ತಿಯೊಬ್ಬ 20 ದಿನದ ನಂತ್ರ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃಪಟ್ಟಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ಕೊಪ್ಪ ಇಂದಿರಾನಗರದ ನಾಗಯ್ಯ ಈರಯ್ಯ ಹಿರೇಮಠ (42), ಎಂಬಾತನೇ ಸದ್ಯ ವಿಷಸೇವಿಸಿ ಮೃತಪಟ್ಟ ವ್ಯಕ್ತಿಯಾಗಿದ್ದು, ಈತ ಜುಲೈ 4 ರಂದು ಮನೆಯಲ್ಲೇ ಕಳೆನಾಶಕ ಸೇವಿಸಿದ್ದ, ಹೀಗಾಗಿ ತಕ್ಷಣವೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ನಂತರ ಕೆಲ ದಿನಗಳ ಹಿಂದೆ ಮನೆಗೆ ಕರೆ ತರಲಾಗಿತ್ತು. ಮನೆಗೆ ಬಂದ ಕೆಲವೇ ದಿನಗಳಲ್ಲಿ ವ್ಯಕ್ತಿಗೆ ಮತ್ತೆ ವಿಷದ ಪ್ರಭಾವ ಹೆಚ್ಚಾಗಿ, ಇಂದು ಅಂದ್ರೆ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾತೂರು ಪ್ರೌಢಶಾಲೆಯಲ್ಲಿ ಆ “ಹುಡುಗ”ನ ಭಯಕ್ಕೆ, ತರಗತಿಯನ್ನೇ ಬಹಿಷ್ಕರಿಸಿದ ವಿದ್ಯಾರ್ಥಿಗಳು..! ದೈರ್ಯ ತುಂಬಿದ ಪಿಐ ರಂಗನಾಥ್..!
Students boycott class; ಮುಂಡಗೋಡ: SSLC ವಿದ್ಯಾರ್ಥಿಯೊಬ್ಬ ಬಸ್ಸಿನಲ್ಲಿ ತಣ್ಣನೆಯ “ರೌಡಿಸಂ” ಮಾಡ್ತಿರೋ ಆರೋಪ ಕೇಳಿ ಬಂದಿದೆ. ಅದೇ ಶಾಲೆಯಲ್ಲಿ ವ್ಯಾಸಂಗ ಮಾಡ್ತಿರೋ ವಿದ್ಯಾರ್ಥಿಗಳಿಗೆ ಅವಾಚ್ಯವಾಗಿ ನಿಂಧಿಸಿ, ಧಮ್ಕಿ ಹಾಕ್ತಿದಾನೆ ಅನ್ನೋ ಕಾರಣಕ್ಕೆ, 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರೌಢಶಾಲೆಯನ್ನೇ ಬಹಿಷ್ಕರಿಸಿದ ಘಟನೆ ತಾಲೂಕಿನ ಕಾತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಆತ ಚಿಪಗೇರಿ ಹುಡುಗ..! ಅಂದಹಾಗೆ, ಮುಂಡಗೋಡ ತಾಲೂಕಿನ ಚಿಪಗೇರಿ ಗ್ರಾಮದಿಂದ ಕಾತೂರು ಪ್ರೌಢಶಾಲೆಗೆ ನಿತ್ಯವೂ ವ್ಯಾಸಂಗಕ್ಕಾಗಿ ಏನಿಲ್ಲವೆಂದರೂ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುತ್ತಾರೆ. ಹಾಗೆ ಬರುವ ವಿದ್ಯಾರ್ಥಿಗಳಿಗೆ, ಅವರಲ್ಲಿನ ಓರ್ವ ವಿದ್ಯಾರ್ಥಿ ಬಸ್ ನಲ್ಲಿ ನಿತ್ಯವೂ ಅವಾಚ್ಯವಾಗಿ ನಿಂಧಿಸಿ, ಚಾಕು, ಸೈಕಲ್ ಚೈನ್ ತೋರಿಸಿ ಬೆದರಿಸುತ್ತಿದ್ದನಂತೆ. ಇದು ಕಳೆದ ಮೂರು ತಿಂಗಳಿನಿಂದಲೂ ನಿತ್ಯವೂ ನಿರಂತರವಾಗಿ ನಡೆಯುತ್ತಿದ್ದು, ವಿದ್ಯಾರ್ಥಿನಿಯರಿಗೆ ಭಾರಿ ಆತಂಕ ಮೂಡಿಸಿತ್ತು. ಹೀಗಾಗಿ, ಆತಂಕಗೊಂಡ ಸುಮಾರು 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಿಷಯವನ್ನು ತಮ್ಮ ಪಾಲಕರಿಗೆ ಮುಟ್ಟಿಸಿದ್ದಾರೆ. ನಂತ್ರ ಜುಲೈ 24 ರಂದು ಶಾಲಾ ಶಿಕ್ಷಕರಿಗೆ...
ಚಿಗಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ರಹೀಮಾಬಿ ಮಕ್ತೇಸರ್, ಉಪಾಧ್ಯಕ್ಷರಾಗಿ ರತ್ನವ್ವ ಅವಿರೋಧ ಆಯ್ಕೆ..!
Gram Panchayat; ಚಿಗಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ರಹೀಮಾಬಿ ನೂರ್ ಅಹ್ಮದ್ ಮಕ್ತೇಸರ್, ಉಪಾಧ್ಯಕ್ಷೆಯಾಗಿ ರತ್ನವ್ವ ಪಾಂಡಪ್ಪ ತಡಸದ ಅವಿರೋಧ ಆಯ್ಕೆಯಾಗಿದ್ದಾರೆ. ಇದ್ರೊಂದಿಗೆ ಭಾರೀ ಗುದುಮುರಿಗಿಗೆ ಬಿದ್ದಿದ್ದ ಆದ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದು, ಅನಾಯಾಸವಾಗಿ “ಕಾಂಗ್ರೆಸ್” ಬೆಂಬಲಿತರಿಗೆ ಅಧ್ಯಕ್ಷ ಗಾದಿ ದಕ್ಕಿದಂತಾಗಿದೆ. ಅಂದಹಾಗೆ, 13 ಸದಸ್ಯ ಬಲದ ಚಿಗಳ್ಳಿ ಗ್ರಾಮ ಪಂಚಾಯತಿಯಲ್ಲಿ, 9 ಸದಸ್ಯರು ಕೈ ಬೆಂಬಲಿತರಾಗಿದ್ದರು. ಇನ್ನುಳಿದಂತೆ, 4 ಜನ ಮಾತ್ರ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದರು. ಆದ್ರೆ, ಈ ಹಿಂದೆ ಅಧ್ಯಕ್ಷೆಯಾಗಿದ್ದ ಪುಷ್ಪಾ ಕಲ್ಮೇಶ್ ಗೋಸಾವಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿತ್ತು. ಹೀಗಾಗಿ, ಮತ್ತೊಮ್ಮೆ ಅಧ್ಯಕ್ಷರ ಆಯ್ಕೆಗಾಗಿ ಇಂದು ಚುನಾವಣೆ ನಡೆಯಿತು. ಇದ್ರಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿರೋದ್ರಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ವೇಳೆ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಬ್ಲಾಕ್ ಕಾಂಗ್ರೆಸ್ ಅಧ್ತಕ್ಷ ಕೃಷ್ಣ ಹಿರೇಹಳ್ಳಿ, ಮುಖಂಡ ಗುಡ್ಡಪ್ಪ ಕಾತೂರು, ರಾಜಶೇಖರ್ ಹಿರೇಮಠ, ಜ್ಞಾನದೇವ ಗುಡಿಹಾಳ, ನಾಗಭೂಷಣ ಹಾವಣಗಿ, ಮೋಹನ್...
ಇಸ್ಪೀಟು ಅಡ್ಡೆಯ ಮೇಲೆ ಭರ್ಜರಿ ದಾಳಿ ಕೇಸ್..! ಮುಂಡಗೋಡ ಪೊಲೀಸ್ರಿಗೆ ಬಂದಿತ್ತು ಅದೊಂದು ಪೋನ್ ಕಾಲ್, ಬೆನ್ನತ್ತಿ ಹೋದವರದ್ದೇ ರೋಚ”ಕತೆ”..!
Police Raid; ಶಿರಸಿ ಸಮೀಪದ ಹೋಂ ಸ್ಟೇ ನಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಹೆಡೆಮುರಿ ಕಟ್ಟಿರೋ ಕೇಸ್ ಹಿಂದೆ ಮುಂಡಗೋಡ ಪೊಲೀಸ್ರ ಬ್ರಿಲ್ಲಿಯಂಟ್ ಟ್ರೇಸಿಂಗ್ ಕಹಾನಿ ಇದೆ, ಹಾವೇರಿಯಿಂದ ಬಂದಿದ್ದ ಅದೊಂದು ಫೋನ್ ಕಾಲ್ ಬೆನ್ನತ್ತಿ ಹೋದ ರೋಚ”ಕತೆ”ಯಿದೆ. ಡಿವೈಎಸ್ಪಿ ಮೇಡಮ್ಮ ರವರ ದಕ್ಷತೆ ಇದೆ. ಈ ಕಾರಣಕ್ಕಾಗೆ ಎರಡು ವರ್ಷಗಳಿಂದ ಯಾರೂ ಕಂಡರಿಯದ ಬೃಹತ್ ಪೊಲೀಸ್ ದಾಳಿ ಯಶಸ್ವಿಯಾಗಿ ನಡೆದು ಹೋಗಿದೆ. ಅಸಲು, ದಾಳಿಯ ಕೆಲವು ರೋಚಕ ಕಹಾನಿಯನ್ನು ನಾವಿಲ್ಲಿ ನಿಮ್ಮ ಮುಂದೆ ಇಡ್ತಿದಿವಿ ಓದಿ.. ಅವ್ರೇಲ್ಲ ಇಲ್ಲಿಯವರಲ್ಲ…! ಶಿರಸಿ ಸಮೀಪದ ಬೈರುಂಬೆ ಬಳಿಯ ಹೋಂ ಸ್ಟೇ ನಲ್ಲಿ ಅಂದರ್ ಬಾಹರ್ ಆಟದಲ್ಲಿ ಮೈ ಮರೆತಿದ್ದವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಂದಹಾಗೆ, ಅಲ್ಲಿ ಪೊಲೀಸರ ಬಲೆಗೆ ಬಿದ್ದವರೇಲ್ಲ ಇಲ್ಲಿಯವರಲ್ಲ, ಬಹುತೇಕ ಹಾವೇರಿ, ಶಿಗ್ಗಾವಿ, ಹಾನಗಲ್, ರಾಣೇಬೆನ್ನೂರು, ದಾವಣಗೇರೆಯವರೇ ತಗಲ್ಲಾಕ್ಕೊಂಡಿದ್ದಾರೆ. ಅಸಲು, ಬಹುತೇಕ ಇವ್ರೇಲ್ಲ ಹಾವೇರಿ ಜಿಲ್ಲೆಯ ಇಸ್ಪೀಟು “ಅಡ್ಡೆಗಳ” ಖಾಯಂ ರಹವಾಸಿಗಳು ಎನ್ನಲಾಗ್ತಿದೆ. ಆದ್ರೆ, ಹಾವೇರಿಗೆ ಇತ್ತಿಚೆಗಷ್ಟೇ ನೂತನ ಎಸ್ಪಿ...
ಶಿರಸಿ ಬಳಿ ಹೋಂ ಸ್ಟೇಯಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಬಂಧನ, ಬಂಧಿತರು ಯಾರ್ಯಾರು ಗೊತ್ತಾ..? ವಿವರ ಇಲ್ಲಿದೆ ನೋಡಿ..!
Police Raid; ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಭೈರುಂಬೆ ಗ್ರಾಮ ಪಂಚಾಯತನ ಅಗಸಾಲ ಗ್ರಾಮದ ವಿ.ಆರ್.ಆರ್ ಹೋಂ ಸ್ಟೇ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಂದರ್ ಬಾಹರ್ ಆಟ ಆಡುತ್ತಿದ್ದವರನ್ನು ಬಂಧಿಸಿದ್ದಾರೆ. ಬಂಧಿತರೇಲ್ಲರೂ ಬಹುತೇಕ ಹಾವೇರಿ, ದಾವಣಗೇರೆ, ಶಿವಮೊಗ್ಗ ಜಿಲ್ಲೆಯವರಾಗಿದ್ದು, ಹಾವೇರಿ ಮೂಲದ ವೈದ್ಯರೊಬ್ಬರ ಮಾಲೀಕತ್ವದ ಹೋಂ ಸ್ಟೇ ಹೆಸರಲ್ಲಿ ಇಂತಹದ್ದೊಂದು ಅಕ್ರಮ ದಂಧೆ ನಡೀತಿತ್ತು ಎನ್ನಲಾಗಿದೆ. ಇವ್ರೇ ಬಂಧಿತರಾದ ಆರೋಪಿಗಳು.! 1.ದಾವಣಗೇರೆ ಜಿಲ್ಲೆಯ ಹರಿಹರ ತಾಲೂಕಿನ ಅನೀಲಕುಮಾರ ಜಿ.ಆರ್. ರುದ್ರಪ್ಪ ರೆಡ್ಡಿ(30), 2. ಹಾವೇರಿ ಕನಕಾಪುರದ ಭೀರಪ್ಪ ಪಕೀರಪ್ಪ ಕೇರೆಗೌಡರ(42), 3.ದಾವಣಗೇರೆ ದುಗ್ಗಮ್ಮನಪೇಟೆಯ ವಿದ್ಯಾರ್ಥಿ, ಬೀರೇಶ ತಂದೆ ಗೋಣಿಪ್ಪ(26), 4. ಹಾನಗಲ್ ತಾಲೂಕು ಮಾಸನಕಟ್ಟಿಯ ಶಂಕರಗೌಡ ವಿರುಪಾಕ್ಷ ಗೌಡ ಪಾಟೀಲ್(48), 5.ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿ ತಿಮ್ಮಾಪುರದ ನಾಗರಾಜ ಈರಪ್ಪ ರಿತ್ತಿ(44), 6.ಹಾವೇರಿ ಸಂಗೂರಿನ, ಪ್ರದೀಪ ರುದ್ರಪ್ಪ ಅರಿಕೇರೆ(48), 7.ಶಿಗ್ಗಾವಿ ತಾಲೂಕಿ ಶಡಗರವಳ್ಳಿಯ ಪ್ರಶಾಂತ ರಾಮಣ್ಣ ಹಸನಾಬಾದಿ(35), 8. ದಾವಣಗೇರೆಯ ಜಬಿವುಲ್ಲಾ ತಂದೆ ಮಾಲೂ ಸಾಬ್(38), 9.ಹಾವೇರಿ...
ವಾಯುಭಾರ ಕುಸಿತ ಹಿನ್ನೆಲೆ; ಜು.29 ರವರೆಗೆ ಅತೀ ಭಾರೀ ಮಳೆ ಮುನ್ಸೂಚನೆ..!
Very Heavy Rain Forecast; ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜುಲೈ 29ರ ವರೆಗೂ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಭಾರೀ ಮಳೆಯಾಗುತ್ತಿದ್ದು, ಜುಲೈ 24ರಿಂದ ಜುಲೈ 26ವರೆಗೂ ಈ ಮೂರು ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ನಂತರ ಜುಲೈ 27ರಿಂದ 29ರ ವರೆಗೆ ಅತಿ ಭಾರಿ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯಲ್ಲಿ ಗಂಟೆಗೆ 40ರಿಂದ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ. Very Heavy Rain Forecast; ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಬೆಂಗಳೂರು ಮತ್ತು ಅಕ್ಕಪಕ್ಕದ ಜಿಲ್ಲೆಗಳಿಗೆ ಹಳದಿ ಅಲರ್ಟ್ ನೀಡಲಾಗಿದೆ. ಇನ್ನುಳಿದ ಜಿಲ್ಲೆಗಳಿಗೆ...
ಶಿರಸಿ ಡಿವೈಎಸ್ಪಿ ನೇತೃತ್ವದಲ್ಲಿ ಭರ್ಜರಿ ದಾಳಿ, ಇಸ್ಪೀಟು ಆಟದಲ್ಲಿ ತೊಡಗಿದ್ದ 19 ಜನರ ಬಂಧನ, ಸಿಕ್ಕ ಹಣವೆಷ್ಟು..? ಹಾವೇರಿ ವೈದ್ಯನ ರೆಸಾರ್ಟಿನಲ್ಲಿ ದಂಧೆ..!?
ಶಿರಸಿ-ಇಡೀ ಜಿಲ್ಲೆಯಲ್ಲೇ ಎರಡು ವರ್ಷಗಳಿಂದೀಚೆ ನಡೆಯದ ಭರ್ಜರಿ ಪೊಲೀಸ್ ದಾಳಿ ನಡೆದಿದೆ. ಇಸ್ಪೀಟು ಅಡ್ಡೆಯ ಮೇಲೆ ದಾಳಿ ನಡೆಸಿರೋ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ನೇತೃತ್ವದ ತಂಡ, 49 ಲಕ್ಷ ಹಣ, ನಾಲಕ್ಉ ಕಾರು ಸೇರಿ 19 ಜನರನ್ನ ಬಂಧಿಸಿದೆ. ಅಲ್ಲಿ ಕೈ ಬದಲಾಯಿದ್ದು ಲಕ್ಷ ಲಕ್ಷ ಹಣ..! ಶಿರಸಿ ತಾಲೂಕಿನ ಬೈರುಂಬೆ ಸಮೀಪದ ರೆಸಾರ್ಟ್ ಒಂದರಲ್ಲಿ ಭರ್ಜರಿಯಾಗಿ ನಡೆಯುತ್ತಿದ್ದ ಇಸ್ಪೀಟ್ ದಂಧೆ ಮಾಹಿತಿ ಖುದ್ದು ಡಿವೈಎಸ್ಪಿ ಮೇಡಮಮ್ಮಿಗೆ ಹೋಗಿದೆ. ಹೀಗಾಗಿ, ಭರ್ಜರಿ ಪ್ಲಾನ್ ಮೂಲಕ ದಾಳಿ ನಡೆಸಿರೋ ಡಿವೈಎಸ್ಪಿ ಟೀಂ, ಬಹುದೊಡ್ಡ ಅಡ್ಡೆಯನ್ನೇ ನಿರ್ನಾಮ ಮಾಡಿದೆ. ಲಕ್ಷ ,ಲಕ್ಷ ಹಣ ಕೈ ಬದಲಾಯಿಸುತ್ತಿದ್ದ ಅಂದರ್ ಬಾಹರ್ ನಲ್ಲಿ ತೊಡಗಿದ್ದವರ ಹೆಡೆಮುರಿ ಕಟ್ಟಿದ್ದಾರೆ ಪೊಲೀಸ್ರು. ಅದು ಹಾವೇರಿ ವೈದ್ಯನ ರೆಸಾರ್ಟ್..!? ಅಸಲು, ಹಾವೇರಿಯಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಇಟ್ಟುಕೊಂಡಿದ್ದ ವೈದ್ಯನೊಬ್ಬ, ಬೈರುಂಬೆ ಸಮೀಪದಲ್ಲಿ ರೆಸಾರ್ಟ್ ಪ್ರಾರಂಭಿಸಿದ್ದ. ಇಲ್ಲಿಯೇ ಇಂತಹದ್ದೊಂದು ಬೃಹತ್ ಗಾತ್ರದ ಅಕ್ರಮ ಇಸ್ಪೀಟು ಅಡ್ಡೆ ನಡೆಸುತ್ತಿದ್ದ ಎನ್ನಾಲಾಗಿದೆ. ಹೀಗಾಗಿ, ಶಿರಸಿ ಡಿವೈಎಸ್ಪಿ...
ವಾಣಿಜ್ಯ ತೆರಿಗೆ ಉಪನಿರ್ದೇಶಕನ ಮನೆಗೆ ಲೋಕಾ ದಾಳಿ – ಅಪಾರ ಪ್ರಮಾಣದ ನಗದು, ಬಂಗಾರ, ಬೆಳ್ಳಿ ಪತ್ತೆ..!
Lokayukta Raid; ಹುಬ್ಬಳ್ಳಿ: ಕೊಪ್ಪಳ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ತೆರಿಗೆ ಉಪನಿರ್ದೇಶಕ ಎಸ್.ಎಂ ಚವ್ಹಾಣ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು, ಬಂಗಾರ ಹಾಗೂ ಬೆಳ್ಳಿ ಪತ್ತೆಯಾಗಿದೆ. ಹುಬ್ಬಳ್ಳಿಯ ವಿದ್ಯಾನಗರದ ದತ್ತನಗರದಲ್ಲಿನ ನಿವಾಸದಲ್ಲಿ ಅಪಾರ ಪ್ರಮಾಣದ ನಗದು, ಬಂಗಾರ ಹಾಗೂ ಬೆಳ್ಳಿ ಪತ್ತೆಯಾಗಿದೆ. ಅಲ್ಲದೇ ವಿವಿಧ ಕಡೆ ಇರುವ 12 ಸೈಟ್, ಮೂರು ಮನೆ, ಆರು ಎಕರೆ ಜಮೀನಿನ ದಾಖಲೆ ಸಹ ಲಭ್ಯವಾಗಿದೆ. ಭಾರೀ ಪ್ರಮಾಣದ ನಗದು ಪತ್ತೆಯಾದ ಹಿನ್ನೆಲೆ ಅಧಿಕಾರಿಗಳು ಹಣ ಎಣಿಕೆ ಯಂತ್ರ ತಂದಿದ್ದಾರೆ. ಸ್ಥಳೀಯ ಅಧಿಕಾರಿಗಳ ಸಹಾಯದಿಂದ ಹಣ ಎಣಿಕೆ ಯಂತ್ರದ ವ್ಯವಸ್ಥೆ ಮಾಡಿದ್ದು, ಇದರೊಂದಿಗೆ ಮತ್ತೊಂದು ಪ್ರಿಂಟಿಂಗ್ ಯಂತ್ರ ಕೂಡ ತರಲಾಗಿದೆ. ಹಣ ತೆಗೆದುಕೊಂಡು ಹೋಗಲು ಟ್ರಂಕ್ ಸಹ ತರಲಾಗಿದೆ. ಲೋಕಾ ಸಿಬ್ಬಂದಿ ಸೈಟ್ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ವೇಳೆ ಬೆಳ್ಳಿ ದೇವರ ಮಂಟಪ, ಬಂಗಾರದ ಗಣೇಶ ಮೂರ್ತಿ ಸಹ ಪತ್ತೆಯಾಗಿದೆ. ಡಿವೈಎಸ್‌ಪಿ ಆರ್ ವಸಂತ್ ಕುಮಾರ್ ತಂಡದಿಂದ...









