ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ತಲೆಗೆ ರಾಡ್​ನಿಂದ ಹೊಡೆದು ಮಹಿಳೆಯ ಕೊಲೆ..!

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ತಲೆಗೆ ರಾಡ್​ನಿಂದ ಹೊಡೆದು ಮಹಿಳೆಯ ಕೊಲೆ..!

Crime News: ಬೆಳಗಾವಿ: ಕೆಲಸ ಮುಗಿಸಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆಯೊಬ್ಬರನ್ನು ನಡುರಸ್ತೆಯಲ್ಲಿ ರಾಡ್​ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ಬೆಳಗಾವಿಯ ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್‌ ಬಳಿ ನಡೆದಿದೆ. ವಡ್ಡರವಾಡಿಯ ರಾಮನಗರದ ನಿವಾಸಿ ಮಹಾದೇವಿ ಕರೆನ್ನವರ್​​ (45) ಕೊಲೆಯಾದ ದುರ್ದೈವಿ. ಮೆಸ್​ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ, ರಾತ್ರಿ ಎಂದಿನಂತೆ ನಡೆದುಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಆಗಂತುಕ ವ್ಯಕ್ತಿ ಕಬ್ಬಿಣದ ರಾಡ್​ನಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಗಂಭೀರ ಗಾಯಗೊಂಡ ಮಹಾದೇವಿ ಅವರು ಪ್ರಜ್ಞಾಹೀನರಾಗಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ಬಳಿಕ ತೀವ್ರ ರಕ್ತಸ್ರಾವವಾಗಿ ಅಲ್ಲಿಯೇ ಉಸಿರು ಚೆಲ್ಲಿದ್ದಾರೆ. ಅದೇ ಮಾರ್ಗವಾಗಿ ಹೋಗುತ್ತಿದ್ದ ದಾರಿಹೋಕರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಗರ ಪೊಲೀಸ್ ಕಮಿಷನ‌ರ್ ಭೂಷಣ್ ಬೊರಸೆ, ಡಿಸಿಪಿ ನಾರಾಯಣ್‌ ಭರಮನಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಎಫ್‌ಎಸ್ಎಲ್ ಮತ್ತು ಶ್ವಾನದಳ ಸಿಬ್ಬಂದಿ ಕೂಡ ಪರಿಶೀಲಿಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದಿಲ್ಲವಾದರೂ, ಹಣಕಾಸಿನ ವ್ಯವಹಾರದ ಬಗ್ಗೆ ಶಂಕೆ...

ಆರ್‌ಬಿಐ ರೆಪೋ ದರ ಶೇ.5.5ರಲ್ಲಿ ಸ್ಥಿರ; ನಿಮ್ಮ ಲೋನ್ EMI ಹೊರೆ ಇಳಿಸಲು ಈ ವಿಧಾನ ಅನುಸರಿಸಿ..!

ಆರ್‌ಬಿಐ ರೆಪೋ ದರ ಶೇ.5.5ರಲ್ಲಿ ಸ್ಥಿರ; ನಿಮ್ಮ ಲೋನ್ EMI ಹೊರೆ ಇಳಿಸಲು ಈ ವಿಧಾನ ಅನುಸರಿಸಿ..!

Loan Transfer to Reduce EMI: ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ವಿತ್ತ ನೀತಿ ಸಮಿತಿ (MPC) ಸಭೆ ಇಂದು ಬುಧವಾರ ಮುಕ್ತಾಯಗೊಂಡಿದ್ದು, ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಸಭೆಯ ನಿರ್ಣಯಗಳನ್ನು ಪ್ರಕಟಿಸಿದ್ದಾರೆ. ಈ ಬಾರಿ ಆರ್‌ಬಿಐ ತನ್ನ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ, 5.50% ರಲ್ಲಿ ಸ್ಥಿರವಾಗಿರಿಸಿದೆ. ಹೀಗಾಗಿ, ಆರ್‌ಬಿಐನ ಈ ನಿರ್ಧಾರದಿಂದ ಸಾಲ ಪಡೆಯುವವರು ಅಥವಾ ಇಎಂಐ ಪಾವತಿಸುವವರಿಗೆ ಯಾವುದೇ ರಿಲೀಫ್‌ ಸಿಕ್ಕಿಲ್ಲ. ಆದರೂ ಕೂಡ ನಿಮ್ಮ ಸಾಲದ EMI ಹೊರೆ ಹೆಚ್ಚಿದ್ದರೆ, ಅದನ್ನು ಕಡಿಮೆ ಮಾಡಿಕೊಳ್ಳಲು ಅವಾಕಾಶವಿದೆ. ನಿಮ್ಮ ಇಎಂಐ ಕಡಿಮೆ ಮಾಡಲು ಮತ್ತು ಹಣ ಉಳಿಸಲು ಸಹಾಯ ಮಾಡುವ ಒಂದು ಸುಲಭ ಮಾರ್ಗವಿದೆ. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ. ಇಎಂಐ ಕಡಿಮೆ ಮಾಡಲು ಲೋನ್ ವರ್ಗಾವಣೆ ಲೋನ್ ವರ್ಗಾವಣೆ (Loan Transfer) ಮೂಲಕ ನಿಮ್ಮ EMI ಹೊರೆ ಇಳಿಕೆ ಮಾಡಬಹುದು. ನಿಮ್ಮ ಲೋನ್‌ ಇಎಂಐ ಕಡಿಮೆ ಮಾಡಲು, ನಿಮ್ಮ ಸಾಲವನ್ನು ಪ್ರಸ್ತುತ ಬ್ಯಾಂಕ್‌ಗಿಂತ...

ಚಿನ್ನದ ಬೆಲೆ ಸತತ ಏರಿಕೆ: ಬುಧವಾರ ಬೆಂಗಳೂರಿನಲ್ಲಿ 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ?

ಚಿನ್ನದ ಬೆಲೆ ಸತತ ಏರಿಕೆ: ಬುಧವಾರ ಬೆಂಗಳೂರಿನಲ್ಲಿ 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ?

Gold Price Today: ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಮತ್ತೊಮ್ಮೆ ಗಗನಕುಸುಮವಾಗತೊಡಗಿದೆ. ಮುಂಬರುವ ವರಮಮಹಾಲಕ್ಷ್ಮೀ ಹಬ್ಬಕ್ಕೂ ಮುನ್ನ ಬಂಗಾರ ಖರೀದಿಸಬೇಕು ಎಂದುಕೊಂಡಿದ್ದವರಿಗೆ ದುಬಾರಿಯಾಗಿ ಪರಿಣಮಿಸಿದೆ. ಕಳೆದ ವಾರ ಇಳಿಕೆಯಾಗಿದ್ದ ಹಳದಿ ಲೋಹವು ಕೊನೆಯ ವೀಕೆಂಡ್‌ನಿಂದ ಸತತ ಏರಿಕೆಯಾಗ್ತಲೇ ಇದೆ. 22 ಕ್ಯಾರೆಟ್ ಆಭರಣ ಚಿನ್ನ ಹಾಗೂ 24 ಕ್ಯಾರೆಟ್‌ ಶುದ್ಧ ಬಂಗಾರಗಳೆರಡು ಸಹ ಬೆಲೆ ಹೆಚ್ಚಳಕ್ಕೆ ಸಾಕ್ಷಿಯಾಗಿದ್ದು, ಖರೀದಿದಾರರ ಬಜೆಟ್‌ಗೆ ಹೊಡೆತ ಬಿದ್ದಿದೆ. ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವೇನು? ಜಾಗತಿಕ ಮಟ್ಟದಲ್ಲಿ ರಷ್ಯಾ-ಉಕ್ರೇನ್ ಯುದ್ಧದ ನಡುವೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಸುಂಕದ ಬೆದರಿಕೆಗಳು ಮಾರುಕಟ್ಟೆಯಲ್ಲಿ ಕರೆಕ್ಷನ್‌ಗೆ ಕಾರಣವಾಗಿದೆ. ಭಾರತವು ರಷ್ಯಾದಿಂದ ಅಗ್ಗದ ಬೆಲೆಗೆ ತೈಲ ಖರೀದಿಸುತ್ತಿದೆ ಎಂಬ ಕಾರಣವನ್ನಿಟ್ಟುಕೊಂಡು ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದಾಗುವ ಸರಕುಗಳ ಮೇಲೆ ಸುಂಕವನ್ನು ಮುಂದಿನ 24ಗಂಟೆಯಲ್ಲಿ ಏರಿಕೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು. ಮುಂದಿನ ದಿನಗಳಲ್ಲಿ ಭಾರತದ ರಫ್ತುಗಳ ಮೇಲೆ ಸುಂಕವನ್ನು ಗಣನೀಯ ಏರಿಕೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಭಾರತವು ತಕ್ಕ ತಿರುಗೇಟು ನೀಡಿದ್ದರೂ...

ಕೊಪ್ಪ ಬಳಿ ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿ,ಇಂದೂರಿನ ದಂಪತಿ ಸೇರಿ ಮೂವರಿಗೆ  ಗಾಯ..!

ಕೊಪ್ಪ ಬಳಿ ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿ,ಇಂದೂರಿನ ದಂಪತಿ ಸೇರಿ ಮೂವರಿಗೆ ಗಾಯ..!

Accident News; ಮುಂಡಗೋಡ ತಾಲೂಕಿನ ಕೊಪ್ಪ ಬಳಿ ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ದಂಪತಿ ಸೇರಿ ಮೂವರಿಗೆ ಗಾಯವಾಗಿದೆ. ಇಂದೂರು ಗ್ರಾಮದ ಶರಣು ನಿಂಗಯ್ಯ ಸುರಗಿಮಠ್ ಹಾಗೂ ಇವರ ಪತ್ನಿ ಸುಪ್ರೀತ ಸುರಗಿಮಠ ಎಂಬುವವರಿಗೆ ಗಾಯವಾಗಿದೆ. ಹುನಗುಂದದ ಪೊಸ್ಟಮೆನ್ ಸುನಿಲ್ ಹರಿಜನ್ ಎಂಬುವವರಿಗೂ ಗಾಯವಾಗಿದೆ.  ಗಾಯಾಳಯಗಳನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜಿ.ಪಂ ಸಿಇಒ ದಿಲೀಷ್ ರಿಂದ ಮುಂಡಗೋಡ ಹಾಗೂ ಶಿರಸಿ ತಾಲೂಕಿನ ಜೆಜೆಎಮ್ ಕಾಮಗಾರಿ ಪರಿಶೀಲನೆ..!

ಜಿ.ಪಂ ಸಿಇಒ ದಿಲೀಷ್ ರಿಂದ ಮುಂಡಗೋಡ ಹಾಗೂ ಶಿರಸಿ ತಾಲೂಕಿನ ಜೆಜೆಎಮ್ ಕಾಮಗಾರಿ ಪರಿಶೀಲನೆ..!

ZP CEO VISIT; ಮುಂಡಗೋಡ/ಶಿರಸಿ; ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಮುಂಡಗೋಡ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ಅನುಷ್ಠಾನಗೊಳಿಸಲಾದ ಜೆಜೆಎಮ್ ಕಾಮಗಾರಿ ಸ್ಥಳಗಳಿಗೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದಿಲೀಷ್ ಶಶಿ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಮಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಧರ್ಮಾ ಜಲಾಶಯದಲ್ಲಿ ಬಹು ಗ್ರಾಮ ಕುಡಿಯುವ ನೀರು ಯೋಜನೆಯನ್ನು ಪರಿಶೀಲಿಸಿದರು. ಬಳಿಕ ಕಾತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಲಳ್ಳಿ, ಚವಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೇಗಿನಕೊಪ್ಪ, ಬಾಚಣಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯಾಸರ್ಗಿ ಮಲಬಾರ್ ಕಾಲೋನಿ ಮತ್ತು ನಂದಿಗಟ್ಟಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಸನಾಳ ಗ್ರಾಮದಲ್ಲಿ ಜೆಜೆಎಮ್ ಯೋಜನೆಯಡಿ ಕುಡಿಯುವ ನೀರಿನ ಸಂಪರ್ಕ ಪಡೆದುಕೊಂಡ ಮನೆಗಳಿಗೆ ಭೇಟಿ ನೀಡಿ, ನೀರಿನ ಪೂರೈಕೆ, ಶುದ್ಧತೆ ಮತ್ತು ಉಪಯೋಗದ ಕುರಿತು ಫಲಾನುಭವಿಗಳಿಂದ ಮಾಹಿತಿ ಪಡೆದರು. ಬಾಚಣಕಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಜಲಾಶಯಕ್ಕೆ ಭೇಟಿ ನೀಡಿ, ಬಹು ಗ್ರಾಮ ಕುಡಿಯುವ ನೀರು ಯೋಜನೆಯ...

ಬೈಕ್ ಅಪಘಾತ, ರಜೆಗೆ ಬಂದಿದ್ದ ಯೋಧ ಸ್ಥಳದಲ್ಲೇ ಸಾ*ವು..!

ಬೈಕ್ ಅಪಘಾತ, ರಜೆಗೆ ಬಂದಿದ್ದ ಯೋಧ ಸ್ಥಳದಲ್ಲೇ ಸಾ*ವು..!

Soldier Dies News; ರಸ್ತೆ ಅಪಘಾತದಲ್ಲಿ ರಜೆಗೆ ಬಂದಿದ್ದ ಯೋಧ ಸ್ಥಳದಲ್ಲೇ ಸಾವು ಕಂಡ ಘಟನೆ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪ್ರಭುನಗರದ ಬಳಿಯ ರಾಷ್ಟ್ರೀಯ ಹೆದ್ದಾರಿ 4(A)ನಲ್ಲಿ ನಡೆದಿದೆ. ಖಾನಾಪುರ ತಾಲೂಕಿನ ಸೂರಜ್ ದ್ರೌಪದ್ಕರ್ (29) ಎಂಬುವನೇ ಮೃತ ಯೋಧನಾಗಿದ್ದಾನೆ. ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ ಗುದ್ದಿದ‌ ಪರಿಣಾಮ, ಬಿದ್ದು ತಲೆಗೆ ಗಂಭೀರ ಗಾಯವಾಗಿದೆ. ತೀವ್ರ ರಕ್ತಸ್ರಾವ ಹಿನ್ನೆಲೆ ಸ್ಥಳದಲ್ಲೇ ಯೋಧ ಸೂರಜ್ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಖಾನಾಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ👇 ಕಾತೂರು| ಓರಲಗಿ ಗದ್ದೆಯ ಪೈಪಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರಹಾವಿನ ರಕ್ಷಣೆ..! ಧರ್ಮಸ್ಥಳ ಶವ ಪ್ರಕರಣ; SIT ತನಿಖೆ ಉದ್ದೇಶ ಸತ್ಯ ಹೊರ ಬರಲಿ ಎಂಬುದಷ್ಟೆ, ಕಾರವಾರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ..!

ಕಾತೂರು| ಓರಲಗಿ ಗದ್ದೆಯ ಪೈಪಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರಹಾವಿನ ರಕ್ಷಣೆ..!

ಕಾತೂರು| ಓರಲಗಿ ಗದ್ದೆಯ ಪೈಪಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರಹಾವಿನ ರಕ್ಷಣೆ..!

 Cobra Trapped In Pipe Rescued; ಮುಂಡಗೋಡ ತಾಲೂಕಿನ ಕಾತುರ ಅರಣ್ಯ ವಲಯದಲ್ಲಿ ಪೈಪಿನಲ್ಲಿ ಸಿಲುಕಿ ಸಾಚು ಬದುಕಿನ ನಡುವೆ ಹೋರಾಡುತ್ತಿದ್ದ, ನಾಗರಹಾವನ್ನು ರಕ್ಷಣೆ ಮಾಡಲಾಗಿದೆ. ಓರಲಗಿ ಗಸ್ತಿನ ಮಾಲತೇಶ ಗೊಂದಿ ಅವರ ಗದ್ದೆದಲ್ಲಿ ಪೈಪ್ ನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತಿದ್ದ ನಾಗರಹಾವನ್ನು ಮುತ್ತುರಾಜ ಹಳ್ಳಿ, ಹುಡೇಲಕೊಪ್ಪ ಗಸ್ತು ವನಪಾಲಕರು ಹಾವನ್ನು ಪೈಪ್ ನಿಂದ ಹೊರ ತೆಗೆದು, ಗಾಯಕ್ಕೆ ನ್ಯಾಚುರಲ್ (Anti Septic) ಆದ ಅರಶಿಣ ಹಚ್ಚಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಕಾರ್ಯಾಚರಣೆಯಲ್ಲಿ ಮಳಗಿ ಗಸ್ತು ವನಪಾಲಕ ಮಂಜುನಾಥ್ ಕೆ. ವಿ., ಮಾನ್ಸೂರ್ ಮತ್ತು ಮುಂತಾದವರು ಇದ್ದರು. ಮುಂಡಗೋಡ ತಾಲೂಕಾಸ್ಪತ್ರೆ ಆವರಣದಲ್ಲೇ ಆರೋಗ್ಯ ಅಧಿಕಾರಿಗಳ ದಿಢೀರ್ ದಾಳಿ..! ಕ್ಯಾಂಟೀನ್, ಜನೌಷಧಿ ಕೇಂದ್ರದಲ್ಲಿ ಏನದು ಸಮಸ್ಯೆ..? ಆಕಸ್ಮಿಕವಾಗಿ ಕಳೆನಾಶಕ ಸೇವಿಸಿದ್ದ (ಕೊಪ್ಪ) ಇಂದಿರಾನಗರದ ವ್ಯಕ್ತಿ ಸಾವು..!

ಸತತ 7 ದಿನ 170 ಗಂಟೆಗಳ ಕಾಲ ಭರತನಾಟ್ಯ ಮಾಡಿ ವಿಶ್ವದಾಖಲೆ ಬರೆದ ರೆಮೋನಾ ಪಿರೇರಾ..!

ಸತತ 7 ದಿನ 170 ಗಂಟೆಗಳ ಕಾಲ ಭರತನಾಟ್ಯ ಮಾಡಿ ವಿಶ್ವದಾಖಲೆ ಬರೆದ ರೆಮೋನಾ ಪಿರೇರಾ..!

Achievement News : ಮಂಗಳೂರು : ಮಂಗಳೂರಿನ ಸೇಂಟ್ ಅಲೋಶಿಯಸ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಬಿಎ ವಿದ್ಯಾರ್ಥಿನಿ ರೆಮೋನಾ ಎವೆಟ್ ಪಿರೇರಾ, 170 ಗಂಟೆಗಳ ಭರತನಾಟ್ಯದ ನೃತ್ಯ ಪ್ರದರ್ಶಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್​ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ. ಇದು ವಿಶ್ವದಲ್ಲೇ ಮೊದಲನೆಯದು. ಈ ದಾಖಲೆಯ ಪ್ರಯಾಣವು ಜುಲೈ 21 ರಂದು ಆರಂಭವಾಯಿತು. ಜುಲೈ 21 ರಂದು ಬೆಳಿಗ್ಗೆ 10:30ರಿಂದ ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೆರಾ ಹಾಲ್‌ನಲ್ಲಿ ಭರತನಾಟ್ಯ ಪ್ರದರ್ಶನ ಆರಂಭಿಸಿದ್ದ ರೆಮೋನಾ ಅವರು ಜುಲೈ 28ರ ವರೆಗೆ ನಿರಂತರವಾಗಿ ನಾಟ್ಯ ಪ್ರದರ್ಶನ ನೀಡಿದ್ದಾರೆ. ಭರತನಾಟ್ಯದ ವಿವಿಧ ಪ್ರಕಾರಗಳಾದ ಅಲೆರಿಪ್ಪು, ಜತಿಸ್ವರಂ, ಶಬ್ದಂ, ವರ್ಣಂ, ಪದಂ, ತಿಲ್ಲಾನಗಳು, ಅಲ್ಲದೆ, ಸೆಮಿಕ್ಲಾಸಿಕ್, ದೇವರ ನಾಮಗಳನ್ನು ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. 61 ಪದ್ಯವನ್ನು 3 ಗಂಟೆಗಳಿಗೊಂದರಂತೆ ಜೋಡಿಸಲಾಗುತಿತ್ತು. ಗಣೇಶನಿಗೆ ಸಾಂಪ್ರದಾಯಿಕ ಪ್ರಾರ್ಥನೆಯೊಂದಿಗೆ ಆರಂಭವಾದ ಭರತನಾಟ್ಯ ಪ್ರದರ್ಶನ ನಿರಂತರ ಏಳು ದಿನಗಳ ನಂತರ, ಸೋಮವಾರ ಮಧ್ಯಾಹ್ನ, ಶಕ್ತಿಯನ್ನು ಸಂಕೇತಿಸುವ ದುರ್ಗಾ ದೇವಿಗೆ...

ಧರ್ಮಸ್ಥಳ ಶವ ಪ್ರಕರಣ; SIT ತನಿಖೆ ಉದ್ದೇಶ ಸತ್ಯ ಹೊರ ಬರಲಿ ಎಂಬುದಷ್ಟೆ,  ಕಾರವಾರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ..!

ಧರ್ಮಸ್ಥಳ ಶವ ಪ್ರಕರಣ; SIT ತನಿಖೆ ಉದ್ದೇಶ ಸತ್ಯ ಹೊರ ಬರಲಿ ಎಂಬುದಷ್ಟೆ, ಕಾರವಾರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ..!

Dharmasthala body case; ಕಾರವಾರ; ಧರ್ಮಸ್ಥಳ ಶವ ಪ್ರಕರಣದಲ್ಲಿ ನಾವು ಸತ್ಯ ಹೊರಬರಲಿ ಎಂಬ ಉದ್ದೇಶ ಮಾತ್ರ ಇದೆ. ಬಲಪಂಥೀಯರದ್ದೇ ಒಂದು ವಾದ, ಎಡಪಂಥೀಯರದ್ದೇ ಒಂದು ವಾದ, ಈ ಕಾರಣ ಎಸ್ ಐಟಿ ರಚನೆಯಾಗಿದೆ‌. ತನಿಖೆ ಆರಂಭವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಕಾರವಾರದಲ್ಲಿ ಜಿಲ್ಲಾ ಪಂಚಾಯತ ಸಭೆಯ ನಂತರ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಅವ್ರು ಮಾತನಾಡುತ್ತಿದ್ದರು, ಕೆಲವರು ಇದರಲ್ಲಿ ರಾಜಕೀಯ ಹುಡುಕುತ್ತಿದ್ದಾರೆ‌. ವಾಸ್ತವವಾಗಿ ಎಸ್ ಐ ಟಿ ಅವಶ್ಯಕತೆ ಇರಲಿಲ್ಲ. ದ.ಕ. ಜಿಲ್ಲಾ ಪೊಲೀಸರು ಈ ಪ್ರಕರಣ ಹೊರಗೆ ತರಲು ಸಮರ್ಥರಿದ್ದರು‌ ‌ ಎಸ್ ಐಟಿ ಯಲ್ಲಿ ಇರುವವರು ಸಹ ನಮ್ಮ ಪೊಲೀಸ್ ಅಧಿಕಾರಿಗಳೆ‌. ಅವರನ್ನು ಅನುಮಾನಿಸಬೇಡಿ ಎಂದರು‌. ಮೊಹಂತಿ ಕೇಂದ್ರ ಸೇವೆಗೆ ಆಯ್ಕೆಯಾಗಿದ್ದಾರಲ್ಲ ಎಂಬ ಪ್ರಶ್ನೆಗೆ, ಇದು ನೌಕರಿಯಲ್ಲಿ ಸಹಜ ಪ್ರಕ್ರಿಯೆ‌, ಅವರು ಕೇಂದ್ರಕ್ಕೆ ತೆರಳಿದರೆ, ಮತ್ತೆ ಸಮರ್ಥ ಅಧಿಕಾರಿಗಳನ್ನು ನಿಯೋಜಿಸುತ್ತದೆ ಎಂದರು‌ . ಅಂಬುಲೆನ್ಸ ಸೌಲಭ್ಯಕ್ಕೆ ಹೊಸ ಕಾನೂನು..! ಸರ್ಕಾರಿ ಅಂಬುಲೆನ್ಸ108 ಸರ್ಕಾರದ...

‘ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ..ʼ ; ಹನುಮಂತ ದೇವರ ಕಾರ್ಣಿಕ..!

‘ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ..ʼ ; ಹನುಮಂತ ದೇವರ ಕಾರ್ಣಿಕ..!

God Astrology : ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಶ್ರಾವಣ ಮಾಸದ ನಾಗರ ಪಂಚಮಿಯಂದು ನಡೆದ ಹನುಮಂತ ದೇವರ ಕಾರ್ಣಿಕೋತ್ಸವದಲ್ಲಿ “ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ, ಎಚ್ಚರ” ಎಂದು ಕಾರ್ಣಿಕ ನುಡಿಯಲಾಗಿದೆ. ಮಂಗಳವಾರ ಸಂಜೆ ಗೋಧೂಳಿ ಲಗ್ನದಲ್ಲಿ ಗಂಗೆ ಪೂಜೆ ನೆರವೇರಿಸಿದ ನಂತರ ಹನುಮಂತ ದೇವರನ್ನು ಮೈಮೇಲೆ ಆಹ್ವಾನ ಮಾಡಿಕೊಂಡ ಗಣಮಗ ಪಿಳ್ಳೆಮಟ್ಟಿ ಗುಡ್ಡದಲ್ಲಿ ಎತ್ತರ ಕಂಬವನ್ನೇರಿ ಕಾರ್ಣಿಕ ನುಡಿದಿದ್ದಾರೆ. ಈ ಬಾರಿ ಶಿವನ ತುರುಬಿಗೆ ಪಂಜರದ ಗಿಳಿ ಹಾರಿತ್ತು ಎಚ್ಚರ ಎಂದು ಕಾರ್ಣಿಕ ಹೇಳಿದ್ದಾರೆ. ಹನುಮಂತ ದೇವರ ಕಾರ್ಣಿಕವನ್ನು ಆಧರಿಸಿ ಈ ಭಾಗದ ರೈತಾಪಿ ಜನರು ಇಡೀ ವರ್ಷದ ಮಳೆ, ಬೆಳೆ ಸೇರಿದಂತೆ ಕೃಷಿ ಚಟುವಟಿಕೆಗಳು, ರಾಜಕೀಯ ವಿದ್ಯಮಾನಗಳು, ಪ್ರಕೃತಿ ವೈಪರೀತ್ಯ ಸೇರಿದಂತೆ ರೈತಾಪಿ ಬದುಕಿನ ಭವಿಷ್ಯದ ಆಗುಹೋಗುಗಳನ್ನು ಲೆಕ್ಕಾಚಾರ ಹಾಕುತ್ತಾರೆ. “ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ ” ಎಂಬ ಕಾರ್ಣಿಕದ “ಕೊನೆಯಲ್ಲಿ ಎಚ್ಚರ ಎಂದು ಹೇಳಿರುವುದರಿಂದ ಈ ಬಾರಿ ರೈತಾಪಿ...

error: Content is protected !!