ಜೂನ್ 4 ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಫಲಿತಾಂಶ ಪ್ರಕಟವಾದ ನಂತರ ಜಿಲ್ಲಾ ಪಂಚಾಯತ ಚುನಾವಣೆ ನಡೆಸುವಾದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜಿಲ್ಲಾ ಹಾಗೂ ತಾಲೂಕಾ ಪಂಚಾಯತಿ, ಬಿ ಬಿ ಎಮ್ ಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ. ಕ್ಷೇತ್ರ ಪುನರವಿಂಗಡಣೆಯಾದ ಬಳಿಕ ಮೀಸಲಾತಿ ಪ್ರಕಟಿಸಲಾಗುವದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Top Stories
ಮನೆಯಲ್ಲಿ ಮಲಗಿದ್ದವನನ್ನು ಕರೆದು ರಾಡ್, ತಲ್ವಾರನಿಂದ ಹಲ್ಲೆ..!
ಶಿರಸಿ ಶೈಕ್ಷಣಿಕ ಜಿಲ್ಲೆಯ 18 ಶಿಕ್ಷಕರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ, ಮುಂಡಗೋಡಿನ ಈ ಮೂವರಿಗೂ “ಪ್ರಶಸ್ತಿಯ ಗರಿ”..!
ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು, ಮಹದೇವ ಸಾಹುಕಾರ್ ಪರಮಾಪ್ತನ ಭೀಕರ ಹತ್ಯೆ..!
ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ..! ಅಷ್ಟಕ್ಕೂ, ಪೊಲೀಸ್ ಅಧಿಕಾರಿಯ ಮಗಳಿಗೆ ಏನಾಯ್ತು..?
ಇದು “ಜಬರ್ದಸ್ತ್ ಜಮಖಂಡಿ”ಯ ಮರ್ಡರ್ ಮಿಸ್ಟರಿ..! “ಮಾಯಾಂಗನೆ”ಯ ನೆರಳಲ್ಲಿ ನಡೆದಿತ್ತು ಆ ಭೀಕರ ಹತ್ಯೆ..!
ಇಂದ್ರಾ ನಗರದ ಮೆಹೆಬೂಬ್ ಅಲಿ ಜಮಖಂಡಿ ಮರ್ಡರ್ ಕೇಸ್ ಆರೋಪಿಗಳಿಗೆ ಶಿಕ್ಷೆ ಪ್ರಕಟ..! ಓರ್ವನಿಗೆ ಜೀವಾವಧಿ ಶಿಕ್ಷೆ..!
ಶಿಗ್ಗಾವಿ BEO ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಮುಂಡಗೋಡ ಚಿಗಳ್ಳಿಯ ಪ್ರಸನ್ನ ಜಾಧವ್ ವಿಧಿವಶ, ಹಲವರ ಸಂತಾಪ..!
ಡ್ರಗ್ಸ್ ದಂಧೆ ಮಾಡುತಿದ್ದ 9 ದಂಧೆಕೋರರ ಬಂಧನ, 30 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶಕ್ಕೆ..!
ಮುಂಡಗೋಡ ತಾಲೂಕು ಸೇರಿ ಜಿಲ್ಲೆಯ ಹಲವು ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ರಜೆ..!
ನಾಳೆ ಮುಂಡಗೋಡ ತಾಲೂಕಿನಲ್ಲೂ ಶಾಲೆಗಳಿಗೆ ಮಳೆಯ ರಜೆ..!
ಮುಂಡಗೋಡ ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ “ಮಳೆಯ” ರಜೆ..!
School holiday News; ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ 10 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ ರಜೆ..!
ಯಲ್ಲಾಪುರ ಬಳಿ ಭೀಕರ ಅಪಘಾತ, ನಿಂತಿದ್ದ ಲಾರಿಗೆ ಬಸ್ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು, 7 ಜನರಿಗೆ ಗಂಭೀರ ಗಾಯ..!
ಶಿಗ್ಗಾವಿಯಲ್ಲಿ ಹಾಡಹಗಲೇ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ..!
ಹೆಂಡತಿಯ ಅಪ್ಪ, ತಮ್ಮನ ಕಾಟ, ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಮುಂಡಗೋಡ ಕಾಳಗನಕೊಪ್ಪದ ವ್ಯಕ್ತಿ..!
ಲೊಯೋಲಾ ಪ್ರೌಢಶಾಲೆಯ ಶಿಕ್ಷಕ ವಿನಾಯಕ್ ಶೇಟ್ ನಾಪತ್ತೆ, ಹುಡುಕಿ ಕೊಡುವಂತೆ ಪತ್ನಿಯಿಂದ ಮುಂಡಗೋಡ ಠಾಣೆಯಲ್ಲಿ ದೂರು..!
ಕಾರವಾರ ಶಾಸಕ ಸತೀಶ್ ಶೈಲ್ ಮನೆ ಮೇಲೆ ಇಡಿ ದಾಳಿ, ದಾಖಲೆ ಪರಿಶೀಲನೆ..!
ಮುಂಡಗೋಡ ಪೊಲೀಸರ ಭರ್ಜರಿ ದಾಳಿ, ಪಾಳಾ ಕ್ರಾಸ್ ಬಳಿ ಗಾಂಜಾ ಸಾಗಿಸ್ತಿದ್ದ ಹಾನಗಲ್ಲಿನ ಇಬ್ಬರ ಬಂಧನ..!
ಜನ-ಧನ್ ಅಕೌಂಟ್ಗೆ ಮರು ಕೆವೈಸಿ : ಸೆ.30ಕ್ಕೆ ಡೆಡ್ಲೈನ್ ಫಿಕ್ಸ್ ಮಾಡಿದೆ RBI, ಅಪ್ಡೇಟ್ ಮಾಡುವುದು ಹೇಗೆ..?
ಕಾರ್ ಪಲ್ಟಿ ನಾಲ್ವರು ಸ್ಥಳದಲ್ಲೇ ಸಾವು, 6 ಜನರಿಗೆ ಗಾಯ..!
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಭೀಕರ ಆಪಘಾತವಾಗಿದೆ, ಕಾರು ಸೇತುವೆಯಿಂದ ಕೆಳಗೆ ಪಲ್ಟಿ ಹೊಡೆದು ಬಿದ್ದ ಪರಿಣಾಮ, 4 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು 6 ಜನರಿಗೆ ಗಾಯವಾಗಿದೆ. ಹಾವೇರಿಯಿಂದ ತಿರುಪತಿ ದೇವರ ದರ್ಶನಕ್ಕೆ ಹೋಗುತ್ತಿದ್ದಾಗ ರಾಣೆಬೇನ್ನೂರಿನ ಹಲಗೇರಿ ಬೈಪಾಸ್ ಬಳಿ ಘಟನೆ ನಡೆದಿದ್ದು, ಎನ್ ಎಚ್ 4 ಪಿಬಿ ರಸ್ತೆಯಿಂದ ಕೆಳಗೆ ಸರ್ವಿಸ್ ರಸ್ತೆಗೆ ಕಾರ್ ಬಿದ್ದಿದೆ. ಘಟನೆಯಲ್ಲಿ, ಸುರೇಶ ವೀರಪ್ಪ ಜಾಡಿ (45), ಐಶ್ವರ್ಯ ಈರಪ್ಪ ಬಾರ್ಕಿ (22), ಚೇತನಾ ಪ್ರಭುರಾಜ ಸಮಗಂಡಿ (7), ಪವಿತ್ರಾ ಪ್ರಭುರಾಜ ಸಮಗಂಡಿ 28 ಸಾವು ಕಂಡಿದ್ದಾರೆ. ಚನ್ನವೀರಪ್ಪ ಜಾಡಿ, ಸಾವಿತ್ರಾ ಜಾಡಿ, ವಿಕಾಶ ಹೊನ್ನಪ್ಪ ಬಾರ್ಕಿ, ಹೊನ್ನಪ್ಪ ನೀಲಪ್ಪ ಬಾರ್ಕಿ, ಪ್ರಭುರಾಜ ಈರಪ್ಪ ಸಮಗಂಡಿ, ಗೀತಾ ಹೊನ್ನಪ್ಪ ಬಾರ್ಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮುಂಡಗೋಡಿನಲ್ಲಿ IPL ಬೆಟ್ಟಿಂಗ್ ದಂಧೆ, ದೇಶಪಾಂಡೆ ನಗರದಲ್ಲಿ ಓರ್ವನನ್ನು ವಶಕ್ಕೆ ಪಡೆದ್ರಾ ಪೊಲೀಸ್ರು..?
ಮುಂಡಗೋಡಿನಲ್ಲಿ IPL ಬೆಟ್ಟಿಂಗ್ ಹಾವಳಿ ಜೋರಾಗಿದೆಯಾ..? ಸಂಜೆ ಮುಂಡಗೋಡ ಪೊಲೀಸರು ಪಟ್ಟಣದ ದೇಶಪಾಂಡೆ ನಗರದಲ್ಲಿ ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ ಅನ್ನೊ ಮಾಹಿತಿ ಬಂದಿದೆ. ಪೊಲೀಸರ ವಶದಲ್ಲಿರೋ ಆರೋಪಿಯಿಂದ ಎಷ್ಟು ಹಣ ವಶಕ್ಕೆ ಪಡೆಯಲಾಗಿದೆ..? ವಸ್ತುಗಳು ಏನೇನು..? ಎಲ್ಲ ಮಾಹಿತಿಗಳು ಇನ್ನಷ್ಟೆ ತಿಳಿದು ಬರಬೇಕಿದೆ. ಅಸಲು, ಈ ಕೇಸು ಪೊಲೀಸ್ ಠಾಣೆಯ ಟೇಬಲ್ಲಿನ ಮೇಲೆ ಖಡಕ್ಕಾದ ಪೈಲಾಗಿ ರೂಪಗೊಳ್ಳತ್ತೋ ಅಥವಾ ನಾಮಕೆವಾಸ್ತೆ ಚಕ್ಕಂಬಕ್ಕಳ ಹಾಕಿ ಕೂರೋ ವ್ಯವಸ್ಥೆನಾ ಕಾದು ನೋಡಬೇಕಿದೆ. ಗಣಪತಿ ಬಪ್ಪಾ ಮೊರಯಾ..!
ಇಸ್ಪೀಟು ಆಟದ ಅನುಮತಿಗೆ ಲಂಚ, ತಡಸ ಪೊಲೀಸ್ ಠಾಣೆ ಪಿಎಸ್ಐ ಲೋಕಾಯುಕ್ತ ಬಲೆಗೆ, ಜೊತೆಗೆ ಪೇದೆಯೂ ತಗಲಾಕ್ಕೊಂಡ..!
ಶಿಗ್ಗಾವಿ: ತಡಸಿನಲ್ಲಿ ಲೋಕಾಯುಕ್ತ ದಾಳಿಯಾಗಿದೆ. 2 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ತಡಸ ಪಿಎಸ್ ಐ ಹಾಗು ಪೇದೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡಾಗಿ ತಗಲಾಕೊಂಡಿದ್ದಾರೆ. ತಡಸ ಠಾಣೆ ಪಿಎಸ್ಐ ಶರಣ ಬಸಪ್ಪ, ಪೇದೆ ಸುರೇಶ್ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಂದಹಾಗೆ, ಗ್ಯಾಂಬಲಿಂಗ್ ಗೆ ಇಸ್ಪೀಟು ಆಟಕ್ಕೆ ಅನುಮತಿ ನೀಡಲು 2 ಲಕ್ಷ ರು ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇಸ್ಪೀಟ್ ಆಡಿಸಲು, ಪ್ರಭಾಕರ ಎನ್ನುವವರಿಂದ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಅದ್ರಲ್ಲಿ 2 ಲಕ್ಷ ರೂ ಲಂಚ ಪಡೆಯುವಾಗ ಬಲೆಗೆ ಕೆಡವಲಾಗಿದೆ.
ಅಗಡಿ ಪೆಟ್ರೊಲ್ ಬಂಕ್ ಬಳಿ ಬೈಕ್ ಅಪಘಾತ, ಇಬ್ಬರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ
ಮುಂಡಗೋಡ ತಾಲೂಕಿನ ಕಲಘಟಗಿ ರಸ್ತೆಯಲ್ಲಿ ಮತ್ತೊಂದು ಬೈಕ್ ಅಪಘಾತವಾಗಿದೆ. ಅಗಡಿ ಸಮೀಪದ ಪೆಟ್ರೊಲ್ ಬಂಕ್ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಇಬ್ಬರಿಗೆ ಗಾಯವಾಗಿದೆ. ಇದ್ರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಅನ್ನೊ ಮಾಹಿತಿ ಇದೆ. ಬಸಾಪುರ ಗ್ರಾಮದ ತಿಪ್ಪಯ್ಯ ಹಾಗೂ ಹುಲಿಹೊಂಡ ಗ್ರಾಮದ ಕುಮಾರ್ ಎಂಬುವವರಿಗೆ ಗಾಯವಾಗಿದೆ. ಇದ್ರಲ್ಲಿ ಓರ್ವನ ಸ್ಥಿತಿ ಗಂಭೀರ ಅಂತಾ ಹೇಳಲಾಗ್ತಿದೆ. ಸದ್ಯ 108 ಅಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಂಡಗೋಡ ಸಮೀಪ ಭೀಕರ ಅಪಘಾತ, ಗಾಯಗೊಂಡಿದ್ದ ಇಂದೂರಿನ ಮತ್ತೋರ್ವ ವ್ಯಕ್ತಿ ಸಾವು..! ಮೃತರ ಸಂಖ್ಯೆ ಎರಡಕ್ಕೆ ಏರಿಕೆ..!
ಮುಂಡಗೋಡ ಪಟ್ಟಣದ ಸಮೀಪ ಕಲಘಟಗಿ ರಸ್ತೆಯ ಖಬರಸ್ಥಾನ ಹತ್ತಿರ ಭೀಕರ ರಸ್ತೆ ಅಪಘಾತವಾಗಿದೆ. ಎರಡು ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಗಾಯಗೊಂಡಿದ್ದ ಮತ್ತೋರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇಂದೂರಿನ ಕುಮಾರ್ ಇಳಿಗೇರ್(44) ಸಾವನ್ನಪ್ಪಿದ ಮತ್ತೋರ್ವ ಬೈಕ್ ಸವಾರನಾಗಿದ್ದಾನೆ. ಇನ್ನು ಘಟನೆಯಲ್ಲಿ ಮುಂಡಗೋಡಿನ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಇಬ್ಬರಿಗೆ ಗಂಭೀರ ಗಾಯವಾಗಿತ್ತು. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಗ ದಾಖಲಿಸಲಾಗಿತ್ತು. ಈಗ ಚಿಕಿತ್ಸೆ ಫಲಿಸದೇ ಮತ್ತೋರ್ವ ಸಾವನ್ನಪ್ಪಿದ್ದಾನೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಮುಂಡಗೋಡ ಸಮೀಪ ಕಲಘಟಗಿ ರಸ್ತೆಯಲ್ಲಿ ಭೀಕರ ಅಪಘಾತ, ಬೈಕಗಳ ನಡುವೆ ಮುಖಾಮುಕಿ ಡಿಕ್ಕಿ ಓರ್ವ ಸ್ಥಳದಲ್ಲೇ ಸಾವು, ಇಬ್ಬರು ಗಂಭೀರ..!
ಮುಂಡಗೋಡ ಪಟ್ಟಣದ ಸಮೀಪ ಕಲಘಟಗಿ ರಸ್ತೆಯ ಖಬರಸ್ಥಾನ ಹತ್ತಿರ ಭೀಕರ ರಸ್ತೆ ಅಪಘಾತವಾಗಿದೆ. ಎರಡು ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಇಬ್ಬರಿಗೆ ಗಂಭೀರ ಗಾಯವಾಗಿದೆ. ಮತ್ತೋರ್ವ ಸಣ್ಣಪುಟ್ಟ ಗಾಯವಾಗಿದೆ. ಬೈಕ್ ಅಪಘಾತದಲ್ಲಿ ಮೃತಪಟ್ಟವನನ್ನು ಮುಂಡಗೋಡಿನ ಅರವಿಂದ್ ಬೆಲ್ದವರ್ ಅಂತಾ ಗುರುತಿಸಲಾಗಿದೆ. ಗಾಯಗೊಂಡವರ ಸಂಪೂರ್ಣ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದ್ರೆ, ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅರಶಿಣಗೇರಿ ವ್ಯಕ್ತಿ, ಹುಬ್ಬಳ್ಳಿ ತಾಲೂಕಿನ ಹಳ್ಯಾಳದಲ್ಲಿ ಭೀಕರ ಹತ್ಯೆ, ಮೊನ್ನೆಯಷ್ಟೆ ಮತದಾನಕ್ಕೆ ಬಂದಿದ್ದ ಶರೀಫಸಾಬ್ ಕೊಲೆಯಾಗಿದ್ದು ಯಾಕೆ..?
ಹುಬ್ಬಳ್ಳಿ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕಿನ ಅರಶಿಣಗೇರಿ ಗ್ರಾಮದ ವ್ಯಕ್ತಿಯನ್ನು ಹುಬ್ಬಳ್ಳಿ ಸಮೀಪದ ಹಳ್ಯಾಳ ಗ್ರಾಮದಲ್ಲಿ ಭೀಕರ ಕೊಲೆ ಮಾಡಲಾಗಿದೆ. ತಲೆ ಮೇಲೆ ಪಾಟಿ ಗಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದ್ದು, ಅರಶಿಣಗೇರಿಯ ಶರೀಫ್ ಸಾಬ್ ಮಾಬುಸಾಬ್ ಕಮಡೊಳ್ಳಿ ಎಂಬುವವನನ್ನು ಭೀಕರವಾಗಿ ಕೊಂದು ಹಾಕಲಾಗಿದೆ. ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಆರೋಪಿಯನ್ನು ಶಶಿಧರ ಚೆನ್ನೋಜಿ ಅಂತಾ ತಿಳಿದು ಬಂದಿದೆ. ಹಳ್ಯಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕೊಠಡಿಯಲ್ಲಿ ಕೊಲೆ ಮಾಡಲಾಗಿದೆ. ಅಂದಹಾಗೆ, ಶರೀಫ್ ಸಾಬ್ ಕಮಡೊಳ್ಳಿ ಮುಂಡಗೋಡ ತಾಲೂಕಿನ ಅರಷಣಗೇರಿ ಗ್ರಾಮದ ನಿವಾಸಿ, ಸದ್ಯ ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿಯೇ ನೆಲೆಸಿದ್ದ ಎನ್ನಲಾಗಿದೆ. ಮೊನ್ನೆಯಷ್ಟೆ ಚುನಾವಣೆಯ ಸಲುವಾಗಿ ಅರಶಿಣಗೇರಿ ಗ್ರಾಮಕ್ಕೆ ಬಂದು ಮತ ಚಲಾಯಿಸಿ ಹೋಗಿದ್ದ ಎನ್ನಲಾಗಿದೆ. ಹುಬ್ಬಳ್ಳಿ ಗ್ರಾಮಾಂತರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೊಪ್ಪ, ಹುನಗುಂದದಲ್ಲಿ ಸಂಭ್ರಮದ ಬಸವ ಜಯಂತಿ, ಕೊಪ್ಪದಲ್ಲಿ 12 ಅಡಿ ಬಸವೇಶ್ವರ ಪುತ್ಥಳಿ ಪ್ರತಿಷ್ಟಾಪನೆ..!
ಮುಂಡಗೋಡ ತಾಲೂಕಿನಲ್ಲಿ ಸಂಭ್ರಮದ ಬಸವ ಜಯಂತಿ ಆಚರಿಸಲಾಯಿತು. ತಾಲೂಕಿನ ಇಂದೂರು ಕೊಪ್ಪ ಗ್ರಾಮದಲ್ಲಿ ಬಸವೇಶ್ವರರ ನೂತನ ಪುತ್ಥಳಿ ಪ್ರತಿಷ್ಟಾಪಿಸಲಾಯಿತು. ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವೇಶ್ವರರ 12 ಅಡಿಯ ಪುತ್ಥಳಿ ಅನಾವರಣ ಮಾಡಲಾಯಿತು. ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಪ್ರಾರಂಭವಾದ ಬಸವ ಜಯಂತಿ ಹಾಗೂ ಪುತ್ಥಳಿ ಪ್ರತಿಷ್ಟಾಪನೆ ಕಾರ್ಯದಲ್ಲಿ ಗ್ರಾಮಸ್ಥರು ಭಾಗಿಯಾಗಿದ್ರು. ಹುನಗುಂದದಲ್ಲಿ..! ಇನ್ನು ತಾಲೂಕಿನ ಹುನಗುಂದದಲ್ಲಿ ಬಸವೇಶ್ವರ ಜಯಂತಿಯ ಅಂಗವಾಗಿ ಗ್ರಾಮದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಅಲಂಕೃತಗೊಂಡ ಚಕ್ಕಡಿಗಳಲ್ಲಿ ಬಸವೇಶ್ವರ ರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಈ ವೇಳೆ ಗ್ರಾಮದ ಮುಖಂಡರು ಭಾಗಿಯಾಗಿದ್ರು.
ರೈತರೇ ಗಮನಿಸಿ: ಬೆಳೆ ಹಾನಿ ಪರಿಹಾರ ಕುರಿತ ಸಮಸ್ಯೆಗಳ ಪರಿಹಾರಕ್ಕೆ ಸಂಪರ್ಕಿಸಿ: ಅಪರ ಜಿಲ್ಲಾಧಿಕಾರಿ
ಕಾರವಾರ: ಬೆಳೆ ಹಾನಿ ಕುರಿತು ಬಿಡುಗಡೆಯಾದ ಪರಿಹಾರದ ಅನುದಾನ ರೈತರ ಖಾತೆಗೆ ಜಮಾ ಆದ ಬಗ್ಗೆ ಪರಿಶೀಲಿಸುವ ಕುರಿತು, ಹಾಗೂ ಅನುದಾನ ಜಮಾ ಆಗದೇ ಇರುವ ತಾಂತ್ರಿಕ ತೊಂದರೆಗಳನ್ನು ಹಾಗೂ ಬ್ಯಾಂಕ್ ಖಾತೆಯ ಕೆಲವೊಂದು ನ್ಯೂನತೆಗಳನ್ನು ಪರಿಹರಿಸುವ ಬಗ್ಗೆ ಜಿಲ್ಲೆಯ ಬರ ಪೀಡಿತ 11 ತಾಲ್ಲೂಕುಗಳಲ್ಲಿಯ ತಹಶೀಲ್ದಾರ ಕಚೇರಿಗಳಲ್ಲಿ ರೈತರ ಸಲಹಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸಂಬಂದಿಸಿದ ತಹಶೀಲ್ದಾರ ಕಚೇರಿಯನ್ನು ಈ ಕೆಳಗಿನ ದೂರವಾಣಿಗಳಲ್ಲಿ ಕಚೇರಿ ಸಮಯದಲ್ಲಿ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದ್ದು,ತಾಲ್ಲೂಕಿನ ಹೆಸರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಇಲ್ಲಿದೆ. 1. ಕಾರವಾರ- 08382-223350 2 . ಅಂಕೋಲಾ- 08388-230243 3 . ಕುಮಟಾ- 08386-222054 4 . ಭಟ್ಕಳ – 08385-226422 5 . ಶಿರಸಿ- 08384-226383 6 . ಸಿದ್ದಾಪುರ- 08389-230127 7 . ಯಲ್ಲಾಪುರ – 9902571927 8 . ಮುಂಡಗೋಡ- 08301-222122 9. ಹಳಿಯಾಳ- 08284-220134 10. ಜೋಯಡಾ- 08284-282723 11. ದಾಂಡೇಲಿ- 08284-295959 ಈ ಕುರಿತು ಮಾದ್ಯಮ...