ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ ಕರಾವಳಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ..!

ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ ಕರಾವಳಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ..!

School Holiday News; ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ, ಇಂದು ಗುರುವಾರ ಜುಲೈ 17 ರಂದು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಆದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

ಜು.21 ರವರೆಗೂ ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ..!

ಜು.21 ರವರೆಗೂ ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ..!

Heavy Rain Forecast; ಬೆಂಗಳೂರು :ಉತ್ತರ ಕನ್ನಡ ಜಿಲ್ಲೆ ಸೇರಿ ಕರ್ನಾಟಕದ ಕರಾವಳಿ, ಮಲೆನಾಡಿನ ಬಹುತೇಕ ಕಡೆಗಳಲ್ಲಿ ಜುಲೈ 21ರವರೆಗೂ ಭಾರಿ ಮಳೆ(Rain) ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ ವೇಗವಾಗಿ ಗಾಳಿಯೂ ಬೀಸಲಿದೆ ಅಂತಾ ಎಚ್ಚರಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಶಿವಮೊಗ್ಗ, ರಾಮನಗರ, ಮೈಸೂರು, ಕೋಲಾರ, ಕೊಡಗು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಬೆಳಗಾವಿ, ಬೀದರ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲೂ ಮಳೆಯಾಗಲಿದೆ. ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಜುಲೈ 15ರಂದು ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಜುಲೈ 16ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ. ಜುಲೈ 17 ರಿಂದ ಜುಲೈ 20...

ಯಲ್ಲಾಪುರದಲ್ಲಿ ರಾಮನಗರದ ರೌಡಿಶೀಟರ್ ಕಾಲಿಗೆ ಪೊಲೀಸರ ಗುಂಡು..! ತಪ್ಪಿಸಿಕೊಳ್ಳಲು ಯತ್ನಿಸಿದಾಗ ಫೈರಿಂಗ್..!

ಯಲ್ಲಾಪುರದಲ್ಲಿ ರಾಮನಗರದ ರೌಡಿಶೀಟರ್ ಕಾಲಿಗೆ ಪೊಲೀಸರ ಗುಂಡು..! ತಪ್ಪಿಸಿಕೊಳ್ಳಲು ಯತ್ನಿಸಿದಾಗ ಫೈರಿಂಗ್..!

 Police shoot News; ಯಲ್ಲಾಪುರದಲ್ಲಿ ಮತ್ತೊಂದು ಫೈರಿಂಗ್ ದಾಖಲಾಗಿದೆ. ಈ ಬಾರಿ ರಾಮನಗರದ ಕುಖ್ಯಾತ ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಹಲವು ಪ್ರಕರಣದಲ್ಲಿ ಬೇಕಾಗಿದ್ದು, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗಲು ಯತ್ನಿಸಿದವನ ಕಾಲಿಗೆ ಗುಂಡು ಹಾಕಲಾಗಿದೆ. ಈ‌ ಮೂಲಕ ಅಕ್ರಮ ಹಾಗೂ ಅಂದಾ ದರ್ಬಾರ್ ಮಾಡುವ ಅಡ್ನಾಡಿಗಳಿಗೆ ಜಿಲ್ಲೆಯಲ್ಲಿ ಜಾಗ ಇಲ್ಲಾ ಅಂತಾ ಪೊಲೀಸ್ರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಅಂದಹಾಗೆ, ರಾಮನಗರದ ತುಕಾರಾಮ್ @ ಪ್ರವೀಣ ಮನೋಹರ ಸುಧೀರ್( 37) ಅನ್ನೋ ರೌಡಿಶೀಟರ್ ಗೆ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಸಮೀಪದಲ್ಲಿ ಫೈರಿಂಗ್ ಮಾಡಲಾಗಿದೆ. ಪೊಲೀಸರ ಮೇಲೆಯೇ ಹಲ್ಲೆ‌ಮಾಡಿ, ಧಮ್ಕಿ ಹಾಕಿದ್ದ ಈ ರೌಡಿಶೀಟರ್ ಈಗ ಖಾಕಿ ಬಲೆಯಲ್ಲಿ ತಗಲಾಕ್ಕೊಂಡಿದ್ದಾನೆ. 2015 ರಿಂದಲೂ‌‌….! ಅಂದಹಾಗೆ, ಪ್ರವೀಣ ತಂದೆ ಮನೋಹರ ಸುಧೀರ ಎಂಬುವ 37 ವರ್ಷದ ವ್ಯಕ್ತಿ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಆ ಭಾಗದಲ್ಲಿ ಕುಖ್ಯಾತಿ ಪಡೆದಿದ್ದ. ಹೀಗಾಗಿ, 2015 ನೇ ಸಾಲಿನಿಂದ ಸತತವಾಗಿ ಪೊಲೀಸರು...

ಉತ್ತರ ಕನ್ನಡದ ಖಡಕ್ ಎಸ್ಪಿ ಎಂ.ನಾರಾಯಣ್ ಏಕಾಏಕಿ ವರ್ಗಾವಣೆ, ನೂತನ ಎಸ್ಪಿಯಾಗಿ ದೀಪನ್ ಎಂ.ಎನ್..!

ಉತ್ತರ ಕನ್ನಡದ ಖಡಕ್ ಎಸ್ಪಿ ಎಂ.ನಾರಾಯಣ್ ಏಕಾಏಕಿ ವರ್ಗಾವಣೆ, ನೂತನ ಎಸ್ಪಿಯಾಗಿ ದೀಪನ್ ಎಂ.ಎನ್..!

SP Suddenly Transferred;ಕಾರವಾರ : ಉತ್ತರ ಕನ್ನಡದಲ್ಲಿ ಅಕ್ರಮಿಗಳಿಗೆ ನಡುಕ‌ ಹುಟ್ಟಿಸಿದ್ದ ಎಸ್ಪಿ ಎಂ ನಾರಾಯಣ್ ವರ್ಗಾವಣೆ ಆಗಿದೆ. ಕಳೆದ ಒಂದು ವರ್ಷದಿಂದ ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ನಾರಾಯಣ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ಸರಕಾರ ಆದೇಶಿಸಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ನೂತನ ಎಸ್ಪಿಯಾಗಿ ದೀಪನ್ ಎಂಎನ್, ಐಪಿಎಸ್ (ಕೆಎನ್ 2019) ಅವರನ್ನ ನೇಮಕ ಮಾಡಲಾಗಿದೆ. ಎಂ ನಾರಾಯಣ ಅವರು ಉತ್ತರ ಕನ್ನಡಕ್ಕೆ ಎಸ್ಪಿ ಆಗಿ ನೇಮಕವಾಗಿ ಬಂದಾಗಿನಿಂದ ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದರು. ಜಿಲ್ಲೆಯಲ್ಲಿ ನಡೆಯುತ್ತಿದ್ದ ಹಲವು ಅಕ್ರಮಗಳಿಗೆ ಕಡಿವಾಣ ಹಾಕಿದ್ದರು. ಹೀಗಾಗಿ, ಕೆಲ ದಂಧೆಕೋರರು ಎಸ್ಪಿಯವರ ವರ್ಗಾವಣೆಗಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಕಡೆಗೂ ಸರ್ಕಾರ ಒಂದೇ ವರ್ಷದಲ್ಲಿ ಖಡಕ್ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ.

ಸಂಘಟನೆಯಿಂದ ಸಮಾಜ ಸದೃಡವಾಗುತ್ತದೆ- ಮಾಜಿ ಶಾಸಕ ವಿ.ಎಸ್.ಪಾಟೀಲ್

ಸಂಘಟನೆಯಿಂದ ಸಮಾಜ ಸದೃಡವಾಗುತ್ತದೆ- ಮಾಜಿ ಶಾಸಕ ವಿ.ಎಸ್.ಪಾಟೀಲ್

Lingayat News; ಮುಂಡಗೋಡ : ಯಾರಾದರೂ ಆಸಕ್ತಿಯಿಂದ ಸಂಘಟನೆಯಲ್ಲಿ ತೊಡಗಿಕೊಂಡಾಗ ರಾಜಕೀಯ ಲಾಭಕ್ಕಾಗಿ ಮಾಡುತ್ತಿದ್ದಾರೆ ಎಂದು ಭಾವಿಸದೆ ಸಂಘಟನೆಯಿಂದ ಸಮಾಜ ಸದೃಢ ವಾಗುತ್ತದೆ ಎನ್ನುವದನ್ನು ಅರಿತು ಎಲ್ಲರೂ ಒಗ್ಗಟ್ಟಾಗಿ ಸದಸ್ಯತ್ವ ಹೆಚ್ಚು ಮಾಡಿ ರಾಜ್ಯ ಸಂಘದ ಗಮನ ಸೆಳೆಯುವಂತೆ ಮಾಡಬೇಕು ಎಂದು ಮಾಜಿ ಶಾಸಕ ವಿ ಎಸ್ ಪಾಟೀಲ ಕರೆ ನೀಡಿದ್ರು. ಅವರು ಮುಂಡಗೋಡ ಟ್ರಿನಿಟಿ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಮಾಜ ಸಂಘಟನೆ ವಿಶೇಷ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮಂಚೂಣಿಯಲ್ಲಿದ್ದು ಸದಸ್ಯತ್ವ ಅಭಿಯಾನಕ್ಕೆ ಕೈಜೋಡಿಸಬೇಕು ಎಂದರಲ್ಲದೆ ಮಕ್ಕಳಿಗೆ ವಿಭೂತಿ ಧಾರಣೆ, ಲಿಂಗ ಪೂಜೆ ಯಂತಹ ನಮ್ಮ ಧಾರ್ಮಿಕ ಆಚರಣೆ ಪಾಲಿಸುವಂತೆ ಪ್ರೆರೇಪಿಸಬೇಕು ಎಂದರು. ಜಿಲ್ಲಾ ಮಾಜಿ ಕಾರ್ಯ ದರ್ಶಿ ಪ್ರವೀಣ ಪಾಟೀಲ ಮಾತನಾಡಿ ನಮ್ಮ ಸಮಾಜದಲ್ಲಿರುವ ತಳಮಟ್ಟದವರಿಂದ ಹಿಡಿದು ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದಾರೆ ಎಲ್ಲರೂ ಸಂಘಟನೆಯಲ್ಲಿ ಕೈಜೋಡಿಸಿ ನಮ್ಮ ಬಲ ಪ್ರದರ್ಶನ ಮಾಡಿದರೆ ಮತ್ತೊಮ್ಮೆ ವಿ...

ಮಳಗಿ ಧರ್ಮಾ ಜಲಾಶಯದಲ್ಲಿ ಹಾನಗಲ್ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?

ಮಳಗಿ ಧರ್ಮಾ ಜಲಾಶಯದಲ್ಲಿ ಹಾನಗಲ್ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?

Death News; ಮುಂಡಗೋಡ ತಾಲೂಕಿನ ಮಳಗಿಯ ಧರ್ಮಾ ಜಲಾಶಯದಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಜಲಾಶಯದಲ್ಲಿ ಶವ ತೇಲುತ್ತಿರೊ ದೃಷ್ಯ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ಸ್ಥಳಕ್ಕೆ ಬಂದ ಮುಂಡಗೋಡ ಪೊಲೀಸರು ಸ್ಥಳೀಯರ ಸಹಕಾರದಿಂದ ಶವ ಹೊರತೆಗೆದಿದ್ದಾರೆ. ಅಂದಹಾಗೆ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಣ್ಣ ಸಣ್ಣಪಾಳೆ ಎಂಬುವವರೇ ಇಲ್ಲಿ ಶವವಾಗಿ ಸಿಕ್ಕಿದ್ದು, ಕಳೆದ ಗುರುವಾರ ಇವ್ರು ಮನೆಯಿಂದ ತೆರಳಿದ್ದವರು, ಮನೆಗೆ ವಾಪಸ್ ಆಗಿರಲಿಲ್ಲವಂತೆ. ಇಂದು ಮಳಗಿ ಧರ್ಮಾ ಜಲಾಶಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮುಂಡಗೋಡ ಪೊಲೀಸರು ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.  

ನಮ್ಮ ಸರ್ಕಾರ ನುಡಿದಂತೆ ನಡೆದಿದೆ, ಪಂಚ ಗ್ಯಾರಂಟಿಗಳು ಅಬಲರನ್ನು ಸಬಲರನ್ನಾಗಿಸಿದೆ- ಶಾಸಕ ಭೀಮಣ್ಣ ನಾಯ್ಕ್

ನಮ್ಮ ಸರ್ಕಾರ ನುಡಿದಂತೆ ನಡೆದಿದೆ, ಪಂಚ ಗ್ಯಾರಂಟಿಗಳು ಅಬಲರನ್ನು ಸಬಲರನ್ನಾಗಿಸಿದೆ- ಶಾಸಕ ಭೀಮಣ್ಣ ನಾಯ್ಕ್

Congress News; ಶಿರಸಿ: ರಾಜ್ಯ ಸರ್ಕಾರವು ಚುನಾವಣಾ ಸಂದರ್ಭದಲ್ಲಿ ಘೋಷಣೆ ಮಾಡಿದ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಮತ್ತು ಎಲ್ಲಾ ಸಚಿವರು ಸೇರಿ ಯಶಸ್ವಿಯಾಗಿ ಅನುಷ್ಠಾನ ಮಾಡಿ ಕಾರ್ಯರೂಪಕ್ಕೆ ತರುವುದರ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ಟಿ ನಾಯ್ಕ ಹೇಳಿದರು. ಅವರು ಶುಕ್ರವಾರ ಶಿರಸಿ ಕೇಂದ್ರ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ, ಸರ್ಕಾರದ ಎರಡು ವರ್ಷಗಳ ಸಾಧನೆ, ಅಭಿವೃದ್ದಿ ಕಾರ್ಯಕ್ರಮಗಳು ಮತ್ತು ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಆರ್ಥಿಕ ಸಮಸ್ಯೆಯಿಂದ ಅನೇಕ ಮಹಿಳೆಯರು ಸಂಸಾರ ನಡೆಸಲು ಹರಸಾಹಸ ಪಡುತ್ತಿದ್ದು, ಅಂತಹವರಿಗೆ ನೆರವು ನೀಡಿ, ಆರ್ಥಿಕವಾಗಿ ಸಬಲರನ್ನಾಗಿಸಲು ಗೃಹಲಕ್ಷ್ಮೀ ಯೋಜನೆಯ ಮೂಲಕ ಮನೆಯ ಯಜಮಾನಿಯ ಖಾತೆಗೆ ನೇರವಾಗಿ 2000 ಹಣ ವರ್ಗಾವಣೆಯಾಗುತ್ತಿದ್ದು, ಇಡೀ ರಾಜ್ಯದಲ್ಲಿ 1.20 ಕೋಟಿಗೂ ಅಧಿಕ ಮಹಿಳೆಯರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು....

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೆನರಾ ಬ್ಯಾಂಕ್ ದರೋಡೆ ಕೇಸಿನಲ್ಲಿ, ಮತ್ತೇ 12 ಖದೀಮರ ಬಂಧನ..!

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೆನರಾ ಬ್ಯಾಂಕ್ ದರೋಡೆ ಕೇಸಿನಲ್ಲಿ, ಮತ್ತೇ 12 ಖದೀಮರ ಬಂಧನ..!

Robbery Case; ವಿಜಯಪುರ ಜಿಲ್ಲೆಯ ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ ದರೋಡೆ ಪ್ರಕರಣ ಬೇಧಿಸಲಾಗಿದೆ. ಮೇ 23 ರಂದು ನಡೆದಿದ್ದ ದರೋಡೆ ಕೇಸಿನಲ್ಲಿ ಜೂನ್ 26 ರಂದು ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು, ಇದೀಗ ಮತ್ತೇ 12 ಜನ ಖದೀಮರನ್ನು ಹೆಡೆಮುರಿಕಟ್ಟಿದ್ದು, 39 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಐಜಿಪಿ ಚೇತನ ಸಿಂಗ್ ರಾಥೋರ ಮಾದ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, 53.26 ಕೋಟಿ ಮೌಲ್ಯದ 58.97 ಕೆಜಿ ಬಂಗಾರದ ಆಭರಣ ಹಾಗೂ 5,20,450 ಹಣ ಕದ್ದಿದ್ದ ಖದೀಮರು, ಒಟ್ಟು 53,31,20,450 ಮೌಲ್ಯದ ಬಂಗಾರದ ಆಭರಣ ಹಾಗೂ ನಗದು ಕಳ್ಳತನ ಮಾಡಿಕೊಂಡು ಹೋಗಿದ್ದರು. ಬ್ಯಾಂಕಿನಲ್ಲಿನ ಸಿಸಿ ಕ್ಯಾಮೆರಾ, ಎನ್ ವಿ ಆರ್ ಸಹ ತಗೆದುಕೊಂಡು ಹೋಗಿದ್ದರು. ಈಗ ಇದೇ ತನಿಖೆ ಮುಂದುವರೆಸಿ 12 ಜನ ಆರೋಪಿಗಳನ್ನು ಬಂಧಿಸಲಾಗಿದೆ. 39.26 ಕೋಟಿ ಮೌಲ್ಯದ್ದು ವಶಕ್ಕೆ ಪಡೆಯಲಾಗಿದೆ. ಒಟ್ಟು 8 ತಂಡಗಳಿಂದ ಕಾರ್ಯಚಾರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ ಎಂದು ಐಜಿಪಿ ಚೇತನ ಸಿಂಗ್ ರಾಥೋರ್...

ಬಾಚಣಕಿ ಸರ್ಕಾರಿ “ಅಡಿಕೆ ಗಿಡಗಳ” ಮಾರಣ ಹೋಮ ಕೇಸ್..! ನಾಳೆಯೇ ಸ್ಥಳಕ್ಕೆ ಅಧಿಕಾರಿಗಳ ಟೀಂ ಭೇಟಿ,  ತಪ್ಪಿತಸ್ಥರ ವಿರುದ್ಧ ಕ್ರಮ ಗ್ಯಾರಂಟಿ ಅಂದ್ರು ಡಿಡಿ ಡಾ.ಬಿ.ಪಿ. ಸತೀಶ್..!

ಬಾಚಣಕಿ ಸರ್ಕಾರಿ “ಅಡಿಕೆ ಗಿಡಗಳ” ಮಾರಣ ಹೋಮ ಕೇಸ್..! ನಾಳೆಯೇ ಸ್ಥಳಕ್ಕೆ ಅಧಿಕಾರಿಗಳ ಟೀಂ ಭೇಟಿ, ತಪ್ಪಿತಸ್ಥರ ವಿರುದ್ಧ ಕ್ರಮ ಗ್ಯಾರಂಟಿ ಅಂದ್ರು ಡಿಡಿ ಡಾ.ಬಿ.ಪಿ. ಸತೀಶ್..!

Department of Horticulture;ಮುಂಡಗೋಡ ತಾಲೂಕಿನ ಬಾಚಣಕಿ ಬಳಿಯ ತೋಟಗಾರಿಕಾ ಇಲಾಖೆಯ “ಸರ್ಕಾರಿ ಅಡಿಕೆ ಗಿಡಗಳ ಮಾರಣ ಹೋಮ” ಘಟನೆಗೆ ಸಂಬಂಧಿಸಿದಂತೆ, ತೋಟಗಾರಿಕಾ ಇಲಾಖೆಯ ಡಿಡಿ ಡಾ. ಬಿ.ಪಿ.ಸತೀಶ್ ಪಬ್ಲಿಕ್ ಫಸ್ಟ್ ನ್ಯೂಸ್ ವರದಿಗೆ ಸ್ಪಂಧಿಸಿದ್ದಾರೆ. ತಕ್ಷಣವೇ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ನಾಳೆ (ಶುಕ್ರವಾರ) ಅಧಿಕಾರಿಗಳ‌ ವಿಸಿಟ್..! ಅಂದಹಾಗೆ, ಕಳೆದ 15 ದಿನಗಳ ಹಿಂದೆ ನಡೆದಿದ್ದ ಹೀನ ಕೃತ್ಯವನ್ನು, ಮುಂಡಗೋಡಿನ ತೋಟಗಾರಿಕಾ ಇಲಾಖೆಯ ಸನ್ಮಾನ್ಯ ತಾಲೂಕಾಧಿಕಾರಿಗಳು ಒಳಗೊಳಗೇ ಮುಚ್ಚಿ ಹಾಕುವ ಧಾವಂತದಲ್ಲಿದ್ದರೇನೋ..? ಆದ್ರೆ, ಪಬ್ಲಿಕ್ ಫಸ್ಟ್ ನ್ಯೂಸ್ ನೀಡಿದ ಪ್ರತ್ಯಕ್ಷ ವರದಿಯಿಂದ ಸನ್ಮಾನ್ಯ ತಾಲೂಕಾ ಅಧಿಕಾರಿಗಳ ಗುಟ್ಟು ರಟ್ಟಾಗಿದೆ. ಹೀಗಾಗಿ, ಮದ್ಯಾಹ್ನ ಸುದ್ದಿ ಪ್ರಸಾರವಾಗ್ತಿದ್ದಂತೆ, ಗಮನಸಿರೋ ಡಿಡಿ ಡಾ.ಬಿ.ಪಿ. ಸತೀಶ್ ರವರು ಮಮ್ಮಲ ಮರುಗಿದ್ದಾರೆ‌. ಪಬ್ಲಿಕ್ ಫಸ್ಟ್ ನೊಂದಿಗೆ ಮಾತನಾಡಿದ ಅವ್ರು, ಘಟನೆ ಬಗ್ಗೆ ವಿಷಾಧ ವ್ಯಕ್ತ ಪಡಿಸಿದ್ದಾರೆ. ನನ್ನ ಗಮನಕ್ಕೆ ನಿಮ್ಮ ವಾಹಿನಿಯ ಸುದ್ದಿಯಿಂದಲೇ ತಿಳಿದಿದೆ. ಹೀಗಾಗಿ, ತಕ್ಷಣವೇ ನಮ್ಮ ಅಧಿಕಾರಿಗಳ ಟೀಂ ಗೆ ನಾಳೆಯೇ ಭೇಟಿ ಕೊಟ್ಟು ವರದಿ...

ಬಾಚಣಕಿಯಲ್ಲಿ “ಸರ್ಕಾರಿ” ಅಡಿಕೆ ಸಸಿಗಳ ಮಾರಣ ಹೋಮ..! ತೋಟಗಾರಿಕಾ ಅಧಿಕಾರಿಗಳ ಕಣ್ಗಾವಲಲ್ಲೇ ನಡೀತಾ ದುಷ್ಕೃತ್ಯ..? ಅಯ್ಯೋ ಕೃಷ್ಣ, ಕೃಷ್ಣಾ..!!

ಬಾಚಣಕಿಯಲ್ಲಿ “ಸರ್ಕಾರಿ” ಅಡಿಕೆ ಸಸಿಗಳ ಮಾರಣ ಹೋಮ..! ತೋಟಗಾರಿಕಾ ಅಧಿಕಾರಿಗಳ ಕಣ್ಗಾವಲಲ್ಲೇ ನಡೀತಾ ದುಷ್ಕೃತ್ಯ..? ಅಯ್ಯೋ ಕೃಷ್ಣ, ಕೃಷ್ಣಾ..!!

 Department of Horticulture;  ಮುಂಡಗೋಡ ತೋಟಗಾರಿಕಾ ಇಲಾಖೆ ಅಧಿಕಾರಿಗಳು ನಿಜಕ್ಕೂ ಎಚ್ಚರವಾಗಿದ್ದಾರಾ..? ಅಥವಾ ಯಾರದ್ದೂ ಬಿಡೆಯೇ ಬೇಡ ಅಂತಾ ಗಡದ್ದಾಗಿ ಮಲಗಿದ್ದಾರಾ..? ಒಂದೂ ಅರ್ಥವಾಗ್ತಿಲ್ಲ. ಯಾಕಂದ್ರೆ, ಅವ್ರ ನೆರಳಲ್ಲೇ ಬೆಳೆದಿದ್ದ, ಅದೇ ಇಲಾಖೆಯ ಜತನದಲ್ಲೇ ಜೀವಪಡೆದಿದ್ದ ನೂರಾರು ಸರ್ಕಾರಿ ಅಡಿಕೆ ಸಸಿಗಳು ಉಸಿರು ಚೆಲ್ಲಿವೆ. ಅದ್ಯಾವ ಕಾರಣಕ್ಕೋ ಏನೋ ಕಳೆನಾಶಕ ಸಿಂಪಡಿಸಿ ಎರಡು ವರ್ಷದ ಅಡಿಕೆ ಸಸಿಗಳನ್ನು ಅಕ್ಷರಶಃ ಮುಗಿಸಿ ಬಿಟ್ಟಿದ್ದಾರೆ ದುಷ್ಕರ್ಮಿಗಳು. ದುರಂತ ಅಂದ್ರೆ ಘಟನೆ ನಡೆದು ಭರ್ತಿ ಎರಡು ವಾರ ಕಳೆದ್ರೂ ಮುಂಡಗೋಡಿನ ತೋಟಗಾರಿಕಾ ಅಧಿಕಾರಿಗಳು ಈ ಬಗ್ಗೆ ತುಟಿ ಬಿಚ್ಚಿಲ್ಲ. ಬದಲಾಗಿ ಸಂಪೂರ್ಣ ಮುಚ್ಚಿ ಹಾಕುವ ಯತ್ನ ಮಾಡ್ತಿದಾರೆ ಅಂತಾ ಅನುಮಾನ ಶುರುವಾಗಿದೆ. ಅದು ಎಮರ್ಜೆನ್ಸಿ ಕಳೆನಾಶಕ..! ಯಸ್, ಮುಂಡಗೋಡ ತಾಲೂಕಿನ ಬಾಚಣಕಿಯ ತೋಟಗಾರಿಕಾ ಇಲಾಖೆಯ ಅಧೀನದಲ್ಲಿ, ಸುಮಾರು 50 ಎಕರೆ ಜಮೀನಿನಲ್ಲಿ ಕರ್ನಾಟಕ ತೋಟಗಾರಿಕಾ ಅಭಿವೃದ್ಧಿ ಏಜೆನ್ಸಿ ನಡೆಸುತ್ತಿರೋ ಸರ್ಕಾರಿ ತೋಟದ ಹಣೆ ಬರಹ ಇದು. ಇಲ್ಲಿ ಕಳೆದ ಎರಡು ವಾರಗಳ ಹಿಂದೆ,...

error: Content is protected !!