Father And Son Death; ಸವದತ್ತಿ; ಕೃಷಿ ಹೊಂಡದಲ್ಲಿ ಮುಳುಗಿ ತಂದೆ ಮಗ ಸಾವು ಕಂಡ ಘಟನೆ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದಲ್ಲಿ ನಡೆದಿದೆ. ತಂದೆ ಬಸವರಾಜ್ ಕೆಂಗೇರಿ (40), ಮಗ ಧರೆಪ್ಪ ಕೆಂಗೇರಿ (14) ಮೃತ ದುರ್ದೈವಿಗಳಾಗಿದ್ದಾರೆ. ಬಸವರಾಜ್ ಕೆಂಗೇರಿ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ನಿವಾಸಿ. ಹೆಂಡತಿ ಊರಲ್ಲಿರುವ ಜಮೀನಿಗೆ ಕೀಟನಾಶಕ ಹೊಡೆಯಲು ಹೋಗಿದ್ದ ಬಸವರಾಜ್, ಈ ವೇಳೆ ಕೃಷಿ ಹೊಂಡದಲ್ಲಿ ನೀರು ತರಲು ಹೋಗಿ ಕಾಲು ಜಾರಿ ಬಿದ್ದ ಮಗ ಧರೆಪ್ಪ ಹಾಗೂ ಮತ್ತೋರ್ವ ಬಾಲಕ ಬಾಗಪ್ಪ ಸಣ್ಣಕ್ಕಿ, ಹೀಗಾಗಿ, ತಕ್ಷಣ ಇಬ್ಬರ ರಕ್ಷಣೆಗೆ ಧಾವಿಸಿದ್ದ ಬಸವರಾಜ್ ಕೆಂಗೇರಿ, ಈ ವೇಳೆ ತಾನೂ ಕೂಡ ಮುಳಗಿ ಬಸವರಾಜ್ ಮತ್ತು ಧರೆಪ್ಪ ಸಾವು. Father And Son Death; ಪಕ್ಕದ ಜಮೀನಿನಲ್ಲಿ ಕೆಲಸ ಮಾಡ್ತಿದ್ದವರಿಂದ ಮತ್ಯೊಬ್ಬ ಬಾಲಕ ಬಾಗಪ್ಪನ ರಕ್ಷಣೆ, ಗಂಭೀರ ಸ್ಥಿತಿಯಲ್ಲಿರುವ ಬಾಲಕ ಬಾಗಪ್ಪಗೆ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮುರಗೋಡ...
Top Stories
ಮನೆಯಲ್ಲಿ ಮಲಗಿದ್ದವನನ್ನು ಕರೆದು ರಾಡ್, ತಲ್ವಾರನಿಂದ ಹಲ್ಲೆ..!
ಶಿರಸಿ ಶೈಕ್ಷಣಿಕ ಜಿಲ್ಲೆಯ 18 ಶಿಕ್ಷಕರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ, ಮುಂಡಗೋಡಿನ ಈ ಮೂವರಿಗೂ “ಪ್ರಶಸ್ತಿಯ ಗರಿ”..!
ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು, ಮಹದೇವ ಸಾಹುಕಾರ್ ಪರಮಾಪ್ತನ ಭೀಕರ ಹತ್ಯೆ..!
ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ..! ಅಷ್ಟಕ್ಕೂ, ಪೊಲೀಸ್ ಅಧಿಕಾರಿಯ ಮಗಳಿಗೆ ಏನಾಯ್ತು..?
ಇದು “ಜಬರ್ದಸ್ತ್ ಜಮಖಂಡಿ”ಯ ಮರ್ಡರ್ ಮಿಸ್ಟರಿ..! “ಮಾಯಾಂಗನೆ”ಯ ನೆರಳಲ್ಲಿ ನಡೆದಿತ್ತು ಆ ಭೀಕರ ಹತ್ಯೆ..!
ಇಂದ್ರಾ ನಗರದ ಮೆಹೆಬೂಬ್ ಅಲಿ ಜಮಖಂಡಿ ಮರ್ಡರ್ ಕೇಸ್ ಆರೋಪಿಗಳಿಗೆ ಶಿಕ್ಷೆ ಪ್ರಕಟ..! ಓರ್ವನಿಗೆ ಜೀವಾವಧಿ ಶಿಕ್ಷೆ..!
ಶಿಗ್ಗಾವಿ BEO ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಮುಂಡಗೋಡ ಚಿಗಳ್ಳಿಯ ಪ್ರಸನ್ನ ಜಾಧವ್ ವಿಧಿವಶ, ಹಲವರ ಸಂತಾಪ..!
ಡ್ರಗ್ಸ್ ದಂಧೆ ಮಾಡುತಿದ್ದ 9 ದಂಧೆಕೋರರ ಬಂಧನ, 30 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶಕ್ಕೆ..!
ಮುಂಡಗೋಡ ತಾಲೂಕು ಸೇರಿ ಜಿಲ್ಲೆಯ ಹಲವು ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ರಜೆ..!
ನಾಳೆ ಮುಂಡಗೋಡ ತಾಲೂಕಿನಲ್ಲೂ ಶಾಲೆಗಳಿಗೆ ಮಳೆಯ ರಜೆ..!
ಮುಂಡಗೋಡ ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ “ಮಳೆಯ” ರಜೆ..!
School holiday News; ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ 10 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ ರಜೆ..!
ಯಲ್ಲಾಪುರ ಬಳಿ ಭೀಕರ ಅಪಘಾತ, ನಿಂತಿದ್ದ ಲಾರಿಗೆ ಬಸ್ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು, 7 ಜನರಿಗೆ ಗಂಭೀರ ಗಾಯ..!
ಶಿಗ್ಗಾವಿಯಲ್ಲಿ ಹಾಡಹಗಲೇ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ..!
ಹೆಂಡತಿಯ ಅಪ್ಪ, ತಮ್ಮನ ಕಾಟ, ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಮುಂಡಗೋಡ ಕಾಳಗನಕೊಪ್ಪದ ವ್ಯಕ್ತಿ..!
ಲೊಯೋಲಾ ಪ್ರೌಢಶಾಲೆಯ ಶಿಕ್ಷಕ ವಿನಾಯಕ್ ಶೇಟ್ ನಾಪತ್ತೆ, ಹುಡುಕಿ ಕೊಡುವಂತೆ ಪತ್ನಿಯಿಂದ ಮುಂಡಗೋಡ ಠಾಣೆಯಲ್ಲಿ ದೂರು..!
ಕಾರವಾರ ಶಾಸಕ ಸತೀಶ್ ಶೈಲ್ ಮನೆ ಮೇಲೆ ಇಡಿ ದಾಳಿ, ದಾಖಲೆ ಪರಿಶೀಲನೆ..!
ಮುಂಡಗೋಡ ಪೊಲೀಸರ ಭರ್ಜರಿ ದಾಳಿ, ಪಾಳಾ ಕ್ರಾಸ್ ಬಳಿ ಗಾಂಜಾ ಸಾಗಿಸ್ತಿದ್ದ ಹಾನಗಲ್ಲಿನ ಇಬ್ಬರ ಬಂಧನ..!
ಜನ-ಧನ್ ಅಕೌಂಟ್ಗೆ ಮರು ಕೆವೈಸಿ : ಸೆ.30ಕ್ಕೆ ಡೆಡ್ಲೈನ್ ಫಿಕ್ಸ್ ಮಾಡಿದೆ RBI, ಅಪ್ಡೇಟ್ ಮಾಡುವುದು ಹೇಗೆ..?
ಮುಂಡಗೋಡಿನಲ್ಲಿ ಕಾರ್ಯನಿರ್ವಹಿಸಿದ್ದ ಪೊಲೀಸ್ ಅಧಿಕಾರಿ ಆತ್ಮಹತ್ಯೆ..! PSI ಆಗಿದ್ದವರು ನೇಣಿಗೆ ಶರಣಾಗಿದ್ದೇಕೆ..?
PSI Commit Suicide; ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸಿ, ಬಡ್ತಿ ಪಡೆದು ವರ್ಗಾವಣೆಗೊಂಡಿದ್ದ ಪೊಲೀಸ್ ಅಧಿಕಾರಿಯೊಬ್ಬರು ಇಂದು ನೇಣಿಗೆ ಕೊರಳೊಡ್ಡಿದ್ದಾರೆ. ಸದ್ಯ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದ ಖೀರಪ್ಪ ಘಟಕಾಂಬಳೆ(50) ನೇಣು ಬಿಗಿದು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಮೂಲತಃ ಹಳಿಯಾಳದವರಾಗಿದ್ದ ಅವ್ರು, ಶಿರಸಿ ಠಾಣೆಯಲ್ಲಿ ಕಾರ್ಯ ನಿರ್ವಹಿಸಿದ್ದರು. PSI ಖೀರಪ್ಪ ಘಟಕಾಂಬಳೆ, ಶಿರಸಿಯಲ್ಲೇ ಸೆಟ್ಲ್ ಆಗಿದ್ದರು. ಆದ್ರೆ, ಕಳೆದ ಎರಡ್ಮೂರು ತಿಂಗಳ ಹಿಂದೆಯಷ್ಟೇ PSI ಆಗಿ ಬಡ್ತಿ ಪಡೆದಿದ್ದ ಅವ್ರು, ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸೇವೆಗೆ ತೆರಳಿದ್ದರು. ಅದ್ಯಾವ ಕಾರಣಕ್ಕೋ ಏನೋ ಇಂದು ತಮ್ಮ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸುದ್ದಿಗಳನ್ನೂ ಓದಿ👇 ಕಾರವಾರದಲ್ಲಿ ಕಾರಿನ ಮೇಲೆ ಉರುಳಿಬಿದ್ದ ಬೃಹತ್ ಮರ, ಕಾರಲ್ಲಿ ಕೂತಿದ್ದ ಮಹಿಳೆ ಸಾ*ವು..! ಶಿರಸಿ ಪೊಲೀಸರ ಕಾರ್ಯಾಚರಣೆ ಪಡಿತರ ಅಕ್ಕಿ ಅಕ್ರಮವಾಗಿ ಸಾಗಾಟ, ಇಬ್ಬರು ಆರೋಪಿಗಳು ಮಾಲು ಸಹಿತ ಅಂದರ್..! Heavy Rain...
ಕಾರವಾರದಲ್ಲಿ ಕಾರಿನ ಮೇಲೆ ಉರುಳಿಬಿದ್ದ ಬೃಹತ್ ಮರ, ಕಾರಲ್ಲಿ ಕೂತಿದ್ದ ಮಹಿಳೆ ಸಾ*ವು..!
Karwar Women Death News; ಕಾರವಾರ : ನಗರದ ಡಿಸಿ ಕಚೇರಿ ಸಮೀಪ ದುರಂತ ಸಂಭವಿಸಿದೆ. ಪಿಕಳೆ ಆಸ್ಪತ್ರೆಯ ಮುಂಭಾಗದಲ್ಲಿದ್ದ ಬೃಹತ್ ಮರ, ಮಳೆ ಗಾಳಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಕಾರವಾರದಲ್ಲಿ ಇಂದು ಸಂತೆಯ ದಿನವಾದ ಕಾರಣ ಪಿಕಳೆ ರಸ್ತೆಯಲ್ಲಿ ಜನ ಸಂಚಾರ ಹೆಚ್ಚಾಗಿತ್ತು. ಈ ವೇಳೆ ಮರದ ಕೆಳಗಿದ್ದ ಕಾರ್ ಮೇಲೆ ಉರುಳಿಬಿದ್ದ ಬೃಹತ್ ಮರದ ಬೃಹತ್ ಟೊಂಗೆ ಅನಾಹುತ ಸೃಷ್ಟಿಸಿದೆ. ಕಾರ್ ಮೇಲೆ ಮರದ ಬೈಹತ್ ಟೊಂಗೆ ಬಿದ್ದ ಪರಿಣಾಮ ಮಲ್ಲಾಪುರದ 60 ವರ್ಷದ ಮಹಿಳೆ ಸಾವನ್ನಪ್ಪಿದ್ದಾಳೆ. ಇಂದು ಅವ್ರು ತಮ್ಮ ಸೊಸೆಯನ್ನು ಆಸ್ಪತ್ರೆಗೆ ಕರೆತಂದಿದ್ದರು. ಮಗ ಸೊಸೆ ಆಸ್ಪತ್ರೆಯ ಒಳಗೆ ಚೆಕ್ ಅಪ್ ಮಾಡಿಸುವಾಗ ಅತ್ತೆ ಕಾರ್ ನಲ್ಲಿ ಕುಳಿತಿದ್ದರು. ಆಗ ಮರ ಉರುಳಿ ಬಿದ್ದಿದೆ.. ಮರದ ಕೆಳಗಿದ್ದ ಮೂರು ಜನ ವ್ಯಾಪಾರಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ತಕ್ಷಣವೇ, ಸಂಚಾರಿ ಪೊಲೀಸರು ಕ್ರೇನ್ ತರಿಸಿ, ಮರ...
ಶಿರಸಿ ಪೊಲೀಸರ ಕಾರ್ಯಾಚರಣೆ ಪಡಿತರ ಅಕ್ಕಿ ಅಕ್ರಮವಾಗಿ ಸಾಗಾಟ, ಇಬ್ಬರು ಆರೋಪಿಗಳು ಮಾಲು ಸಹಿತ ಅಂದರ್..!
Sirsi Police Operation; ಶಿರಸಿ ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಅನ್ನಭಾಗ್ಯದ ಪಡಿತರ ಅಕ್ಕಿ ಸಂಗ್ರಹಿಸಿ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಮಾಲು ಮತ್ತು ವಾಹನ ಸಮೇತ ಬಂಧಿಸಿದ್ದಾರೆ. ಶಿರಸಿಯ ಚಿಪಗಿ ನರೇಬೈಲಿನ ಉಬೇದ /ಸಲೀಂ ಜವಳಿ ಈತನು ಪಡಿತರ ಚೀಟಿದಾರರಿಂದ ಕಡಿಮೆ ಬೆಲೆಗೆ ಖರೀದಿಸಿದ ಅನ್ನಬಾಗ್ಯ ಯೋಜನೆಯ ಒಟ್ಟು 40 ಕ್ವಿಂಟಲ್ ಅಕ್ಕಿಯನ್ನು ತನ್ನ ಹಿಟ್ಟಿನ ಗಿರಣಿಯಲ್ಲಿ ಸಂಗ್ರಹಿಸಿಟ್ಟಿದ್ದ, ಹೀಗೆ ಸಂಗ್ರಹಿಸಿಟ್ಟ ಅನ್ನಭಾಗ್ಯದ ಅಕ್ಕಿಯನ್ನು ಈಸಳೂರಿನ ಸುನೀಲ್ ಮಹಾದೇವಪ್ಪ ನಡಗಿ ಎಂಬಾತ ಖರೀದಿಸಿದ್ದ. ಇನ್ನು, ಹಾಗೆ ಪಡಿತರ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು, ಶಿರಸಿಯಿಂದ ಹುಬ್ಬಳ್ಳಿ ಕಡೆಗೆ ಟಾಟಾ ಕಂಪನಿಯ 407 ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಹೊಗುತ್ತಿದ್ದ. ಈ ವೇಳೆ ಶಿರಸಿಯ ಮಂಗಳೂರ ಹೊಟೆಲ್ ಕ್ರಾಸ್ ಹತ್ತಿರ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. Sirsi Police Operation; ಈ ವೇಳೆ ಸುನೀಲ್ ಮಹಾದೇವಪ್ಪ ನಾಡಗಿ, ಅಲ್ತಾಫ್ ರೆಹಮತ್ ಉಲ್ಲಾ ಶೇಖ್ ಎಂಬುವವರನ್ನು ವಶಕ್ಕೆ...
Heavy Rain Warning; ಇಂದಿನಿಂದ 2 ದಿನ ಭಾರೀ ಮಳೆ ಎಚ್ಚರಿಕೆ; ಉತ್ತರ ಕನ್ನಡ ಸೇರಿ ಕೆಲ ಜಿಲ್ಲೆಗಳಿಗೆ ರೆಡ್ ಅಲರ್ಟ್..!
Heavy Rain Warning; ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಜುಲೈ 20ರಿಂದ ಎರಡು ದಿನ ಕೆಲ ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು, ರೆಡ್ ಅಲರ್ಟ್ ನೀಡಲಾಗಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಜುಲೈ ಜುಲೈ 20ರಂದು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಿಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು, ರೆಡ್ ಅಲರ್ಟ್ ನೀಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗಲಿದೆ ಎಂದು ಮನ್ಸೂಚನೆ ನೀಡಲಾಗಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬಿರುಗಾಳಿ ಸಹಿತ ಮಳೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಲಾಗಿದೆ. ಜುಲೈ 21ರಂದು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಿರಂತರ ಗಾಳಿಯೊಂದಿಗೆ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮನ್ಸೂಚನೆ...
ಉತ್ತರ ಕನ್ನಡದಲ್ಲಿ ಭಾರೀ ಮಳೆ ಸಂಭವ, ಎಚ್ಚರವಹಿಸಿ; ಜಿಲ್ಲಾಧಿಕಾರಿ
Heavy rain Alert; ಕಾರವಾರ; ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ರವರ ಮುನ್ಸೂಚನೆಯಂತೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲ್ಲೂಕುಗಳಲ್ಲಿ ಜು.20 ರ ಬೆಳಗ್ಗೆ 5.30 ವರೆಗೆ 24 ಗಂಟೆಗಳ ಹಠಾತ್ ಪ್ರವಾಹ ಅಪಾಯದ, ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆಗಳು..! ಸಂಪೂರ್ಣವಾಗಿ ನ್ಯಾಚುರೇಟೆಡ್ ಮಣ್ಣು ಮತ್ತು ಕಳವಳಕಾರಿ ಪ್ರದೇಶದ ತಗ್ಗು ಪ್ರದೇಶಗಳಲ್ಲಿ ಮೇಲ್ಮೆ ಹರಿವು /ಮುಳುಗಡೆ ಸಂಭವಿಸಬಹುದೆಂದು ಮುನ್ಸೂಚನೆ ನೀಡಲಾಗಿರುವುದರಿಂದ ಕೆಳಗಿನಂತೆ ಸೂಚನೆಗಳನ್ನು ಪಾಲಿಸುವುದು. ಸಾರ್ವಜನಿಕರು ಸಮುದ್ರ ಪ್ರದೇಶಗಳಿಗೆ ಹೋಗಬಾರದು, ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ, ನೀರಿನ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರವಹಿಸುವುದು. ಇದನ್ನೂ ಓದಿ👉ಯಲ್ಲಾಪುರದಲ್ಲಿ ಸರಣಿ ಮನೆ ಕಳ್ಳತನ..! ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಖದೀಮರ ಕೈಚಳಕ..! ಈ ಕ್ಷಣಕ್ಕೂ ಪೊಲೀಸರ “ದಿವ್ಯ ಮೌನ”..? ಅಯ್ಯೋ ಏನಿದೇಲ್ಲ..? ನದಿ ತೀರದಲ್ಲಿ ವಾಸಿಸುವವರು ಹಠಾತ್...
ಯಲ್ಲಾಪುರದಲ್ಲಿ ಸರಣಿ ಮನೆ ಕಳ್ಳತನ..! ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಖದೀಮರ ಕೈಚಳಕ..! ಈ ಕ್ಷಣಕ್ಕೂ ಪೊಲೀಸರ “ದಿವ್ಯ ಮೌನ”..? ಅಯ್ಯೋ ಏನಿದೇಲ್ಲ..?
Yellapur Police News; ಯಲ್ಲಾಪುರದಲ್ಲಿ ಗುರುವಾರ ಸರಣೀ ಕಳ್ಳತನವಾಗಿದೆ. ಪಟ್ಟಣದ ಹೃದಯ ಭಾಗದಲ್ಲೇ, ಅದೂ ಕೂಡ ಯಲ್ಲಾಪುರ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಇರೊ, ತಿಲಕ್ ಚೌಕಿನಲ್ಲಿ ಬರೋಬ್ಬರಿ ಐದು ಮನೆಗಳ ಕಳ್ಳತನ ಮಾಡಿದ್ದಾರೆ ಖದೀಮರು. ದುರಂತ ಅಂದ್ರೆ, ಘಟನೆ ನಡೆದು ಎರಡು ದಿನ ಆಗ್ತಾ ಬಂದ್ರೂ ಇಲ್ಲಿನ ಪೊಲೀಸರು ಮಾತ್ರ “ತುಟಿ ಪಿಟಕ್” ಅನ್ನದೇ ಮೌನಕ್ಕೆ ಶರಣಾಗಿದ್ದಾರೆ. ಬಿಟ್ರೆ, ಈ ಕ್ಷಣಕ್ಕೂ ಜಸ್ಟ್ ಏನಂದ್ರೇ ಏನೂ ಮಾಡಿಲ್ಲ, ಅನ್ನೋದು ಜನರಿಗೆ ಅರ್ಥವಾಗದ ಪ್ರಶ್ನೆ..! ಎರಡು ದಿನಾ ಆಯ್ತು ಕಣ್ರಿ..! ಅಸಲು, ಘಟನೆ ನಡೆದಿದ್ದು ಕಳೆದ ಗುರುವಾರ ರಾತ್ರಿ, ಶುಕ್ರವಾರ ಬೆಳಗಿನ ಜಾವದಲ್ಲಿ, ಲಕ್ಷಾಂತರ ಮೌಲ್ಯದ ಚಿನ್ನದ ಒಡವೆ ಸೇರಿದಂತೆ ಸಂಪತ್ತುಗಳು ಕಳ್ಳರ ಪಾಲಾಗಿದೆ. ಅದ್ಯಾವ ಕಾರಣಕ್ಕೋ ಗೊತ್ತಿಲ್ಲ, ಇಷ್ಟಾದ್ರೂ, ಯಲ್ಲಾಪುರದ “ಧೀ”ಮಂತ ಪೊಲೀಸರು ಈ ಕ್ಷಣಕ್ಕೂ ಒಂದು ಕೇಸು ದಾಖಲಿಸಿಕೊಂಡಿಲ್ಲ, ಈ ಬಗ್ಗೆ ತುಟಿ ಬಿಚ್ಚಿಲ್ಲವಲ್ಲ ಯಾಕೆ..? ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ. ಅದು ಠಾಣೆಯ ಕೂಗಳತೆ ದೂರ..! ಅಂದಹಾಗೆ, ಯಲ್ಲಾಪುರದ...
ಪಂಪಸೆಟ್ ಮೋಟಾರ್ ರಿಪೇರಿ ವೇಳೆ ವಿದ್ಯುತ್ ತಗುಲಿ ಮೂವರು ರೈತರ ದಾರುಣ ಸಾ*ವು..!
Three Farmers Death; ಯಾದಗಿರಿ;ಮೋಟಾರ್ ಪಂಪ್ ಸೆಟ್ ರಿಪೇರಿ ವೇಳೆ ವಿದ್ಯುತ್ ತಂತಿ ತಗುಲಿ ಮೂವರು ರೈತರು ಸಾವು ಕಂಡಿರೋ ಘಟನೆ, ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗತೀರ್ಥ ಗ್ರಾಮದಲ್ಲಿ ನಡೆದಿದೆ. ಈರಪ್ಪ(40) ದೇವು(30) ಸುರೇಶ್(22) ಎಂಬುವ ರೈತರು, ಮೋಟಾರ್ ಪಂಪ್ ಸೆಟ್ ರಿಪೇರಿ ವೇಳೆ ವಿದ್ಯುತ್ ತಗುಲಿ ಸಾವು ಕಂಡ ರೈತರಾಗಿದ್ದಾರೆ. ಮೂವರು ಸದಬ ಗ್ರಾಮದ ದುರ್ದೈವಿಗಳು ಎನ್ನಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೃತದೇಹ ರವಾನೆ ಮಾಡಲಾಗಿದೆ. ಕೆಂಭಾವಿ ಸಮುದಾಯ ಆಸ್ಪತ್ರೆ ಮುಂಭಾಗದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ👉ಇಂದಿನಿಂದ “ಮನೆ ಮನೆಗೆ ಪೊಲೀಸ್” ವಿನೂತನ ಕಾರ್ಯಕ್ರಮಕ್ಕೆ ಚಾಲನೆ..! ನಿಮ್ಮನೆಗೇ ಬಂದು ನಿಮ್ಮ ದೂರು ಆಲಿಸಲಿದ್ದಾರೆ ಪೊಲೀಸ್ರು..!
ಇಂದಿನಿಂದ “ಮನೆ ಮನೆಗೆ ಪೊಲೀಸ್” ವಿನೂತನ ಕಾರ್ಯಕ್ರಮಕ್ಕೆ ಚಾಲನೆ..! ನಿಮ್ಮನೆಗೇ ಬಂದು ನಿಮ್ಮ ದೂರು ಆಲಿಸಲಿದ್ದಾರೆ ಪೊಲೀಸ್ರು..!
Police Programme; ಬೆಂಗಳೂರು: ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸಲು ರಾಜ್ಯ ಪೊಲೀಸ್ ಇಲಾಖೆಯು ಮನೆ-ಮನೆಗೆ ಪೊಲೀಸ್ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಸಿ.ಲೇಔಟ್ನಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಗೃಹ ಸಚಿವ ಜಿ. ಪರಮೇಶ್ವರ್ ಇಂದು ಚಾಲನೆ ನೀಡಲಿದ್ದಾರೆ. ಅಪರಾಧ ನಿಯಂತ್ರಣದ ಜೊತೆಗೆ ನಾಗರೀಕರಲ್ಲಿ ಸುರಕ್ಷತೆ ಭಾವನೆ ಮೂಡಿಸುವುದೇ ಕಾರ್ಯಕ್ರಮ ಆಶಯವಾಗಿದೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಂಚಿಕೆ ಮಾಡಲಾಗಿರುವ ಪೊಲೀಸ್ ಗಸ್ತು ಪ್ರಕ್ರಿಯೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ನೂತನ ಅಭಿಯಾನಕ್ಕೆ ಇನ್ನು ಮುಂದೆ ಸಕ್ರಿಯವಾಗಿ ಮನೆ-ಮನೆಗೆ ಪೊಲೀಸರು ಬಂದು ಕಾನೂನು ಪರಿಧಿಯಲ್ಲಿ ಸಾರ್ವಜನಿಕರು ದೂರುಗಳನ್ನು ಆಲಿಸಲಿದ್ದಾರೆ. ಏನಿದು ಮನೆ-ಮನೆ ಪೊಲೀಸ್ ಅಭಿಯಾನ: ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯ ಸರಹದ್ದನ್ನು ಬೀಟ್‌ಗಳಾಗಿ ವಿಂಗಡಿಸಿ, ಬೀಟ್‌ಗಳನ್ನು ಸಬ್‌ಬೀಟ್‌ಗಳಾಗಿ ವಿಂಗಡಿಸಿದೆ. ಸಬ್‌ಬೀಟ್‌ಗಳಲ್ಲಿ 40-50 ಮನೆಗಳನ್ನೊಳಗೊಂಡ ಒಂದು ಕ್ಲಸ್ಟರ್ ಅಥವಾ ಸಮೂಹವನ್ನಾಗಿ ರಚಿಸಲಾಗುತ್ತದೆ. ಪ್ರತಿ ಕ್ಲಸ್ಟರ್‌ಗೆ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ಉಸ್ತುವಾರಿ ಅಧಿಕಾರಿಗಳಾಗಿ ಎಎಸ್‌ಐ ಮತ್ತು ಪಿಎಸ್‌ಐನ್ನು ನಿಯೋಜಿಸಲಾಗುತ್ತದೆ. ಪ್ರತಿ ಮನೆಗೆ...
ಸಿಎಂ ಸಿದ್ದರಾಮಯ್ಯರಿಂದ ಅವಮಾನಕ್ಕೆ ಈಡಾಗಿದ್ದ ಎಎಸ್ಪಿ ನಾರಾಯಣ ಬರಮನಿಗೆ ಪದೋನ್ನತಿ ನೀಡಿದ ರಾಜ್ಯ ಸರ್ಕಾರ..!
Promoted News; ಬೆಳಗಾವಿ: ಕೆಲ ತಿಂಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಂದ ಅವಮಾನಕ್ಕೀಡಾಗಿ ರಾಜೀನಾಮೆಗೆ ಮುಂದಾಗಿದ್ದ ಧಾರವಾಡ ಎಎಸ್‌ಪಿ ನಾರಾಯಣ ವಿ. ಭರಮನಿ ಅವರಿಗೆ ರಾಜ್ಯ ಸರ್ಕಾರ ಪದೋನ್ನತಿ ನೀಡಿದೆ. ಈಗ ಅವರನ್ನು ಬೆಳಗಾವಿ ಮಹಾನಗರ ಕಾನೂನು ಮತ್ತು ಸುವ್ಯವಸ್ಥೆಯ ನೂತನ ಡಿಸಿಪಿಯಾಗಿ ನೇಮಕ ಮಾಡಿದೆ. ಬೆಳಗಾವಿಯಲ್ಲಿ ಸಬ್ ಇನ್ಸ್ಪೆಕ್ಟರ್, ಎಸಿಪಿ ಅಗಿ ಅವರು ಕಾರ್ಯನಿರ್ವಹಿಸಿದ್ದರು. ಇದೀಗ ರಾಜ್ಯ ಸರ್ಕಾರ ಅವರಿಗೆ ಪದೋನ್ನತಿ ನೀಡಿ, ಬೆಳಗಾವಿ ಜಿಲ್ಲೆಗೆ ನಿಯುಕ್ತಿ ಮಾಡಿದೆ. ಏಪ್ರಿಲ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಅವರು ವೇದಿಕೆಯಲ್ಲಿ ಭಾಷಣ ಮಾಡಲು ಮುಂದಾದಾಗ ವೇದಿಕೆಯ ಮುಂಭಾಗದಲ್ಲಿ ಬಿಜೆಪಿ ಕಾಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದರು. ಇದರಿಂದ ಕೆರಳಿದ್ದ ಸಿದ್ದರಾಮಯ್ಯ ಅಲ್ಲೇ ಇದ್ದ ಧಾರವಾಡ ಎಎಸ್‌ಪಿಯಾಗಿದ್ದ ಭರಮನಿ ಅವರಿಗೆ ಹೊಡೆಯುವ ರೀತಿ ಕೈ ಎತ್ತಿದರು. ಬಳಿಕ ಸಿದ್ದರಾಮಯ್ಯ ಅವರ ವರ್ತನೆ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಈ ಘಟನೆಯಿಂದ...